Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವರ ಮಧ್ಯೆ ಹೀಗೆಲ್ಲ ಆಗಿತ್ತಾ.. ಧನಶ್ರೀ-ಚಾಹಲ್ ವಿಚ್ಛೇದನ ಅರ್ಜಿಯಲ್ಲಿದೆ ಶಾಕಿಂಗ್ ವಿಷಯ

ಧನಶ್ರೀ ವರ್ಮ ಮತ್ತು ಯುವೇಂದ್ರ ಚಾಹಲ್ ಅವರು ಇತ್ತೀಚೆಗೆ ವಿಚ್ಛೇದನ ಪಡೆದಿದ್ದಾರೆ. 2020 ರ ಡಿಸೆಂಬರ್‌ನಲ್ಲಿ ಮದುವೆಯಾದ ಈ ಜೋಡಿ ಕೆಲವೇ ವರ್ಷ ಸಂಸಾರ ನಡೆಸಿತು. ವಿವಾಹ ಕಾಯ್ದೆಯ ಪ್ರಕಾರ ಆರು ತಿಂಗಳ ಕಾಯುವಿಕೆಯ ಅವಧಿ ಇದ್ದರೂ, ಅವರು ತಕ್ಷಣದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಕೆಲವು ವಿಚಾರಗಳು ರಿವೀಲ್ ಆಗಿವೆ.

ಇವರ ಮಧ್ಯೆ ಹೀಗೆಲ್ಲ ಆಗಿತ್ತಾ.. ಧನಶ್ರೀ-ಚಾಹಲ್ ವಿಚ್ಛೇದನ ಅರ್ಜಿಯಲ್ಲಿದೆ ಶಾಕಿಂಗ್ ವಿಷಯ
ಇವರ ಮಧ್ಯೆ ಹೀಗೆಲ್ಲ ಆಗಿತ್ತಾ.. ಧನಶ್ರೀ-ಚಾಹಲ್ ವಿಚ್ಛೇದನ ಅರ್ಜಿಯಲ್ಲಿದೆ ಶಾಕಿಂಗ್ ವಿಷಯಗಳು
Follow us
ರಾಜೇಶ್ ದುಗ್ಗುಮನೆ
|

Updated on: Mar 22, 2025 | 12:58 PM

ಧನಶ್ರೀ ವರ್ಮ (Dhanashree Verma) ಹಾಗೂ ಯಜುವೇಂದ್ರ ಚಾಹಲ್ ಅವರು ಪತಿ-ಪತ್ನಿ ಆಗಿ ಉಳಿದಿಲ್ಲ. ಅವರು ಮಾರ್ಚ್ 20ರಂದು ಅಧಿಕೃತವಾಗಿ ವಿಚ್ಛೇದನ ಪಡೆದರು. ಬಾಂದ್ರಾ ಕೌಟುಂಬಿಕ ನ್ಯಾಯಾಲಯ ಈ ದಂಪತಿಗೆ ವಿಚ್ಛೇದನ ನೀಡಿದೆ. ಇವರ ದಾಂಪತ್ಯ ಕೊನೆ ಆದ ಕೆಲವೇ ದಿನಗಳಲ್ಲಿ ಧನಶ್ರೀ ಹಾಗೂ ಚಾಹಲ್ ಅವರ ವಿಚ್ಛೇದನ ಅರ್ಜಿ ವೈರಲ್ ಆಗಿದೆ. ಇದರಲ್ಲಿ ಕೆಲವು ಶಾಕಿಂಗ್ ವಿಚಾರಗಳು ರಿವೀಲ್ ಆಗಿವೆ. ಇದನ್ನು ನೋಡಿ ಅನೇಕರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಇವರ ಮಧ್ಯೆ ಇಷ್ಟೆಲ್ಲ ಆಗಿತ್ತೇ ಎಂದು ಅಚ್ಚರಿ ಹೊರಹಾಕಿದ್ದಾರೆ.

ಹಿಂದೂ ವಿವಾಹ ಕಾಯ್ದೆ ಪ್ರಕಾರ ಅರ್ಜಿ ಸಲ್ಲಿದ ತಕ್ಷಣ ವಿಚ್ಛೇದನ ಸಿಗೋದಿಲ್ಲ. ಪತಿ-ಪತ್ನಿ ಮಧ್ಯೆ ಸರಿ ಹೋಗುವ ಸಾಧ್ಯತೆ ಇರುತ್ತದೆ ಎಂಬ ಕಾರಣಕ್ಕೆ ಆರು ತಿಂಗಳು ಸಮಯಾವಕಾಶವನ್ನು ದಂಪತಿಗೆ ಕೌಟುಂಬಿಕ ನ್ಯಾಯಾಲಯ ನೀಡುತ್ತದೆ. ಆದರೆ, ಧನಶ್ರೀ ಹಾಗೂ ಚಾಹಲ್ ತಕ್ಷಣವೇ ವಿಚ್ಛೇದನ ಬೇಕು ಎಂದು ಕೂತಿದ್ದರು. ಆ ಬಳಿಕ ದಂಪತಿ ಬಾಂಬೆ ಹೈಕೋರ್ಟ್​ಗೆ ತೆರಳಿ ‘ನಾವಿಬ್ಬರೂ ಒಪ್ಪಿಯೇ ವಿಚ್ಛೇದನ ಪಡೆಯುತ್ತಿದ್ದೇವೆ. ಆರು ತಿಂಗಳ ಕಾಯುವಿಕೆ ನಮಗೆ ಅಗತ್ಯವಿಲ್ಲ’ ಎಂದು ಅರ್ಜಿಯಲ್ಲಿ ಕೋರಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ಕೌಟುಂಬಿಕ ನ್ಯಾಯಾಲಯಕ್ಕೆ ತಕ್ಷಣವೇ ಈ ದಂಪತಿಗೆ ವಿಚ್ಛೇದನ ನೀಡಲು ಸೂಚಿಸಿತ್ತು

ಈಗ ಅರ್ಜಿಯಲ್ಲಿ ಒಂದು ಶಾಕಿಂಗ್ ವಿಚಾರ ರಿವೀಲ್ ಆಗಿದೆ. ಈ ದಂಪತಿ 2020ರ ಡಿಸೆಂಬರ್​ನಲ್ಲಿ ವಿವಾಹ ಆಯಿತು. ಜೂನ್ 2022ರಂದು ಇವರು ಬೇರೆ ಆದರು! ಹೌದು, ಚಾಹಲ್ ಹಾಗೂ ಧನಶ್ರೀ ಈ ಮದುವೆ ನಡೆದ ಕೇವಲ 19 ತಿಂಗಳಿಗೆ ದೂರ ಆದರು. ಈ ಬಗ್ಗೆ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇದು ಶಾಕಿಂಗ್ ಎನಿಸಿದೆ.

ಇದನ್ನೂ ಓದಿ
Image
ಕಮೆಂಟೇಟರ್ ಜಾನಿ ನಿಜವಾದ ಹೆಸರೇನು? ಈ ಹೆಸರು ಬಂದಿದ್ದು ಹೇಗೆ?
Image
ಸಲ್ಮಾನ್ ಸಿಕಂದರ್​ಗೆ ಮುಗಿಯಿತು ಸೆನ್ಸಾರ್ ಪ್ರಕ್ರಿಯೆ; ಚಿತ್ರದ ಅವಧಿ ಎಷ್ಟು
Image
ರಾಜಮೌಳಿ ಸಿನಿಮಾ ಲೀಕ್ ವಿಡಿಯೋ ನೋಡುವವರಿಗೆ ಎಚ್ಚರಿಕೆ ಕೊಟ್ಟ ಪೃಥ್ವಿರಾಜ್
Image
ಬಂದ್ ವೇಳೆ ಥಿಯೇಟರ್​ನಲ್ಲಿ ಸಿನಿಮಾ ನೋಡೋ ಪ್ಲ್ಯಾನ್ ಬೇಡ; ಪ್ರದರ್ಶನ ಸಮಯ?

ಇದನ್ನೂ ಓದಿ: ಟಿ ಶರ್ಟ್ ಮೇಲಿನ ಸಾಲುಗಳ ಮೂಲಕ ಧನಶ್ರೀಗೆ ಟಾಂಗ್ ಕೊಟ್ಟ ಚಾಹಲ್; ಕೌಂಟರ್ ಕೊಟ್ಟ ವರ್ಮಾ

ಏಕೆಂದರೆ 2022ರ ಜೂನ್ ಬಳಿಕ ಅನೇಕ ಬಾರಿ ಧನಶ್ರೀ ಹಾಗೂ ಚಾಹಲ್ ಅವರು ಒಟ್ಟಿಗೆ ಕಾಣಿಸಿಕೊಂಡರು. ಬೇರೆ ಆದ ಬಳಿಕವೂ ಇವರು ಒಟ್ಟಿಗೆ ಕಾಣಿಸಿಕೊಂಡು ಪೋಸ್​ ಕೊಟ್ಟಿದ್ದು ತುಂಬಾನೇ ನಾಟಕೀಯವಾಗಿತ್ತು.  ಈ ಮೊದಲು ಧನಶ್ರೀ ಅವರು ತಮ್ಮ ಹೆಸರಿನ ಮುಂದೆ ಚಾಹಲ್ ಎಂದು ಸೇರಿಸಿಕೊಂಡಿದ್ದರು. ಆದರೆ, 2023ರಲ್ಲಿ ಇವರು ಇದನ್ನು ತೆಗೆದೇ ಬಿಟ್ಟರು. ಇದರಿಂದ ಅವರು ಬೇರೆ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.