Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ ಶರ್ಟ್ ಮೇಲಿನ ಸಾಲುಗಳ ಮೂಲಕ ಧನಶ್ರೀಗೆ ಟಾಂಗ್ ಕೊಟ್ಟ ಚಾಹಲ್; ಕೌಂಟರ್ ಕೊಟ್ಟ ವರ್ಮಾ

ಯಜುವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮ ಅವರ ವಿಚ್ಛೇದನಕ್ಕೆ ಕೋರ್ಟ್ ಅನುಮತಿ ನೀಡಿದೆ. ವಿಚ್ಛೇದನದ ನಂತರ ಚಾಹಲ್ ಅವರು ಧರಿಸಿದ್ದ ‘ಬಿ ಯುವರ್ ಓನ್ ಶುಗರ್ ಡ್ಯಾಡಿ’ ಎಂಬ ಸಂದೇಶವಿರುವ ಟೀ ಶರ್ಟ್ ಚರ್ಚೆಗೆ ಕಾರಣವಾಗಿದೆ. ಧನಶ್ರೀ ಅವರಿಗೆ 4.35 ಕೋಟಿ ರೂಪಾಯಿ ಜೀವನಾಂಶ ನೀಡಲಾಗಿದೆ ಎಂಬುದು ವರದಿಯಾಗಿದೆ.

ಟಿ ಶರ್ಟ್ ಮೇಲಿನ ಸಾಲುಗಳ ಮೂಲಕ ಧನಶ್ರೀಗೆ ಟಾಂಗ್ ಕೊಟ್ಟ ಚಾಹಲ್; ಕೌಂಟರ್ ಕೊಟ್ಟ ವರ್ಮಾ
ಟಿ ಶರ್ಟ್ ಮೇಲಿನ ಸಾಲುಗಳ ಮೂಲಕ ಧನಶ್ರೀಗೆ ಟಾಂಗ್ ಕೊಟ್ಟ ಚಾಹಲ್; ಕೌಂಟರ್ ಕೊಟ್ಟ ವರ್ಮಾ
Follow us
ರಾಜೇಶ್ ದುಗ್ಗುಮನೆ
|

Updated on: Mar 21, 2025 | 8:44 AM

ಕ್ರಿಕೆಟರ್ ಯಜುವೇಂದ್ರ ಚಾಹಲ್ (Yuzvendra Chahal) ಹಾಗೂ ಡ್ಯಾನ್ಸರ್ ಧನಶ್ರೀ ವರ್ಮ (Dhanashree Verma) ಅವರಿಗೆ ಕೋರ್ಟ್ ವಿಚ್ಛೇದನ ನೀಡಿದೆ. ವಿಚ್ಛೇದನ ಪಡೆಯಬೇಕು ಎಂದು ಇವರು ಹಲವು ದಿನಗಳಿಂದ ಪ್ರಯತ್ನಿಸುತ್ತಲೇ ಇದ್ದರು. ಕೊನೆಗೂ ಕೋರ್ಟ್ ಕಡೆಯಿಂದ ಇವರು ಬೇರೆ ಆಗುವುದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹೀಗಿರುವಾಗಲೇ ಕೋರ್ಟ್​ಗೆ ಬರುವ ವೇಳೆ ಚಾಹಲ್ ಅವರು ಹಾಕಿ ಬಂದ ಶರ್ಟ್​ ಮೇಲಿನ ಸಾಲುಗಳು ಗಮನ ಸೆಳೆದಿವೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಚಾಹಲ್ ಹಾಗೂ ಧನಶ್ರೀ ಡ್ಯಾನ್ಸ್ ಕ್ಲಾಸ್​ನಲ್ಲಿ ಪರಿಚಯ ಆದರು. ಧನಶ್ರೀ ಟೀಚರ್ ಆಗಿದ್ದರೆ ಚಾಹಲ್ ಅವರು ಸ್ಟೂಡೆಂಟ್ ಆಗಿದ್ದರು. ಇಬ್ಬರ ಮಧ್ಯೆ ಪ್ರೀತಿ ಮೂಡಿತು. ಆ ಬಳಿಕ ಡೇಟ್ ಮಾಡಿ ಇವರು ವಿವಾಹ ಆದರು. ಈಗ ವಿಚ್ಛೇದನ ಪಡೆದು ದೂರ ಆಗಿದ್ದಾರೆ. ಕೆಲವೇ ವರ್ಷಗಳ ಸಂಸಾರ ಕೊನೆಗೊಂಡಿದೆ. ಈಗ ಚಾಹಲ್ ಅವರು ಟಿ ಶರ್ಟ್ ಗಮನ ಸೆಳೆದಿದೆ.

ಇದನ್ನೂ ಓದಿ
Image
ವಿಚ್ಛೇದನ ಪಡೆದ ದಿನ ಹಾಡಿನ ಮೂಲಕ ಅನೈತಿಕ ಸಂಬಂಧದ ಬಗ್ಗೆ ಮಾತನಾಡಿದ ಧನಶ್ರೀ
Image
ಬೆಟ್ಟಿಂಗ್​ಗೆ ಪ್ರಚಾರ: ಪ್ರಕಾಶ್ ರೈ, ವಿಜಯ್ ಸೇರಿ ಹಲವು ನಟರ ಮೇಲೆ ಪ್ರಕರಣ
Image
ಬರ್ತಿದೆ ‘ಚಿ: ಸೌಜನ್ಯ’ ಸಿನಿಮಾ; ನೈಜ ಘಟನೆ ಹೇಳ ಹೊರಟ ಹರ್ಷಿಕಾ
Image
ಒಟಿಟಿಯಲ್ಲಿ ಕಾಲೇಜ್ ಕಹಾನಿ ಕಥೆ; ಫನ್​ ಇರೋ ಸಿನಿಮಾನ ಮಿಸ್ ಮಾಡಬೇಡಿ

‘ಬಿ ಯುವರ್ ಓನ್ ಶುಗರ್ ಡ್ಯಾಡಿ’ (Be your own Sugar Daddy) ಎಂಬ ಸಾಲು ಟಿ ಶರ್ಟ್ ಮೇಲೆ ಬರೆದುಕೊಂಡಿದೆ. ‘ನಿಮ್ಮ ಅಗತ್ಯತೆಗಳು ಮತ್ತು ಆಸೆಗಳಿಗಾಗಿ ಶ್ರೀಮಂತ ವ್ಯಕ್ತಿಯನ್ನು ಅವಲಂಬಿಸುವ ಬದಲು ಆರ್ಥಿಕವಾಗಿ ಸ್ವತಂತ್ರರಾಗಿ ಮತ್ತು ಸ್ವಾವಲಂಬಿಯಲಾಗಿ’ ಎಂಬ ಅರ್ಥವನ್ನು ಈ ಸಾಲುಗಳು ನೀಡುತ್ತವೆ. ಈ ಸಾಲುಗಳ ಮೂಲಕ ಅವರು ಏನನ್ನು ಹೇಳ ಹೊರಟಿದ್ದಾರೆ ಎಂಬ ಪ್ರಶ್ನೆ ಮೂಡಿದೆ.

ಧನಶ್ರೀ ಅವರಿಗೆ ಚಾಹಲ್ ಅವರು 4.35 ಕೋಟಿ ರೂಪಾಯಿ ಜೀವನಾಂಶ ನೀಡಿದ್ದಾರೆ ಎನ್ನಲಾಗಿದೆ. ಈ ಹಣ ಪಡೆಯಲು ಧನಶ್ರೀ ಇಷ್ಟೆಲ್ಲ ಪ್ಲ್ಯಾನ್ ಮಾಡಿದರು ಎಂಬ ಆರೋಪಗಳನ್ನು ಕೆಲವರು ಮಾಡಿದ್ದಾರೆ. ಜೀವನಾಂಶದ ವಿಚಾರದ ಕಾರಣಕ್ಕೆ ಚಾಹಲ್ ಈ ರೀತಿಯ ಶರ್ಟ್ ಧರಿಸಿ ಬಂದರೆ ಎನ್ನುವ ಪ್ರಶ್ನೆ ಅನೇಕರಿಗೆ ಹುಟ್ಟಿದೆ.

ಇತ್ತ ಧನಶ್ರೀ ಅವರ ವಿಡಿಯೋ ಸಾಂಗ್ ಕೂಡ ರಿಲೀಸ್ ಆಗಿದೆ. ಇದರಲ್ಲಿ ವಿವಾಹೇತರ ಸಂಬಂಧದ ಬಗ್ಗೆ ಹೇಳಲಾಗಿದೆ. ಪತಿ ಬೇರೆ ಹುಡುಗಿ ಜೊತೆ ಸಂಬಂಧ ಇರೋದಕ್ಕೆ ಪತ್ನಿ ವಿಚ್ಛೇದನ ಕೊಡೋ ರೀತಿಯಲ್ಲಿ ವಿಡಿಯೋ ಸಾಂಗ್ ಮೂಡಿ ಬಂದಿದೆ. ಇದರಲ್ಲಿ ಧನಶ್ರೀ ನಟಿಸಿದ್ದಾರೆ. ಚಾಹಲ್ ಶರ್ಟ್​ಗೆ ಧನಶ್ರೀ ಕೌಂಟರ್ ಎಂಬ ಮಾತುಗಳು ಕೇಳಿ ಬಂದಿವೆ.

ಇದನ್ನೂ ಓದಿ: ವಿಚ್ಛೇದನ ಪಡೆದ ದಿನವೇ ಹಾಡಿನ ಮೂಲಕ ಪತಿಯ ಅನೈತಿಕ ಸಂಬಂಧದ ಬಗ್ಗೆ ಹೇಳಿದ ಧನಶ್ರೀ ವರ್ಮಾ

ಚಾಹಲ್ ಹಾಗೂ ಧನಶ್ರೀ ಅವರು ಬಾಂಬೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದರು. ಇಬ್ಬರ ಮಧ್ಯೆ ವಿಚ್ಛೇದನಕ್ಕೆ ಒಪ್ಪಿದ್ದರಿಂದ ಆರು ತಿಂಗಳ ಕಾಯುವಿಕೆಯ ಅವಧಿಯನ್ನು ತೆಗೆಯುವಂತೆ ಕೋರಿದ್ದರು. ಇದಕ್ಕೆ ಕೋರ್ಟ್ ಅನುಮತಿಸಿದ್ದು, ಕೌಟುಂಬಿಕ ನ್ಯಾಯಾಲಯಕ್ಕೆ ಈ ಬಗ್ಗೆ ಆದೇಶ ಕೊಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಎಲ್ಲರೂ ಬಂದ್ ಮಾಡ್ತಾ ಹೋದ್ರೆ ಸಾರ್ವಜನಿಕರ ಪಾಡೇನು? ಬಸ್ ಚಾಲಕ
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಪೊಲೀಸರ ಗೂಂಡಾಗಿರಿಯನ್ನು ಸಹಿಸಲ್ಲ ಎಂದ ವಾಟಾಳ್ ನಾಗರಾಜ್
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು
ಆಡಳಿತ ಮತ್ತು ವಿರೋಧ ಪಕ್ಷದ ನಾಯಕರಿಗೆ ಕೇವಲ ಅಧಿಕಾರದ ತೆವಲು: ಗೋವಿಂದು