Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚ್ಛೇದನ ಪಡೆದ ದಿನವೇ ಹಾಡಿನ ಮೂಲಕ ಪತಿಯ ಅನೈತಿಕ ಸಂಬಂಧದ ಬಗ್ಗೆ ಹೇಳಿದ ಧನಶ್ರೀ ವರ್ಮಾ

Chahal-Dhanashree Divorce: ಧನಶ್ರೀ ವರ್ಮಾ ಮತ್ತು ಯಜುವೇಂದ್ರ ಚಹಾಲ್ ಅವರ ವಿಚ್ಛೇದನದ ದಿನವೇ, ‘ದೇಖಾ ಜಿ ದೇಖಾ ಮೇನೆ..’ ಎಂಬ ಹಾಡು ಬಿಡುಗಡೆಯಾಗಿದೆ. ಈ ಹಾಡು ಪತಿಯ ಅನೈತಿಕ ಸಂಬಂಧದ ಬಗ್ಗೆ ಚರ್ಚಿಸುತ್ತದೆ. ವಿಚ್ಛೇದನದ ನಂತರ ಹಾಡು ಬಿಡುಗಡೆಯಾದ ಸಮಯೋಚಿತತೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ವಿಚ್ಛೇದನ ಪಡೆದ ದಿನವೇ ಹಾಡಿನ ಮೂಲಕ ಪತಿಯ ಅನೈತಿಕ ಸಂಬಂಧದ ಬಗ್ಗೆ ಹೇಳಿದ ಧನಶ್ರೀ ವರ್ಮಾ
ಧನಶ್ರೀ
Follow us
ರಾಜೇಶ್ ದುಗ್ಗುಮನೆ
|

Updated on:Mar 21, 2025 | 7:10 AM

ಧನಶ್ರೀ ವರ್ಮಾ ಹಾಗೂ ಕ್ರಿಕೆಟರ್ ಯಜುವೇಂದ್ರ ಚಾಹಾಲ್ (Yuzvendra Chahal) ವಿಚ್ಛೇದನ ಪಡೆದಿದ್ದಾರೆ. ಮಾರ್ಚ್​ 20ರಂದು ಇವರ ಸಂಬಂಧ ಅಧಿಕೃತವಾಗಿ ಕೊನೆ ಆಗಿದೆ. ನ್ಯಾಯಾಲಯದಿಂದ ಇವರ ವಿಚ್ಛೇದನಕ್ಕೆ ಮುದ್ರೆ ಬಿದ್ದಿದೆ. ಈ ದಿನವೇ ಧನಶ್ರೀ ವರ್ಮಾ (Dhanashree Varma) ಅವರು ನಟಿಸಿರೋ ಒಂದು ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಈ ವಿಡಿಯೋ ಸಾಂಗ್ ಸಂಪೂರ್ಣವಾಗಿ ಅನೈತಿಕ ಸಂಬಂಧದ ಬಗ್ಗೆ ಇದೆ. ವಿಚ್ಛೇದನ ದಿನವೇ ಈ ಹಾಡು ರಿಲೀಸ್ ಆಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.

ಧನಶ್ರೀ ಅವರು ಡ್ಯಾನ್ಸರ್. ಚಾಹಲ್ ಅವರು ಡ್ಯಾನ್ಸ್ ಕಲಿಯಲು ಹೋದಾಗ ಇವರ ಮಧ್ಯೆ ಪ್ರೀತಿ ಮೂಡಿತು. ಆ ಬಳಿಕ ಡೇಟಿಂಗ್ ಆರಂಭಿಸಿದ ಅವರು ಬಳಿಕ ಅದ್ದೂರಿಯಾಗಿ ಮದುವೆ ಆದರು. ಇವರು ಬೇರೆ ಆಗುತ್ತಾರೆ ಎಂಬ ಸುದ್ದಿ ಇತ್ತೀಚೆಗೆ ಜೋರಾಗಿತ್ತು. ಈಗ ಇವರ ವಿಚ್ಛೇದನಕ್ಕೆ ಕೋರ್ಟ್ ಕಡೆಯಿಂದ ಒಪ್ಪಿಗೆ ಸಿಕ್ಕಿದೆ. ಹೀಗಾಗಿ ಇವರು ಅಧಿಕೃತವಾಗಿ ಬೇರೆ ಆಗಿದ್ದಾರೆ. ಇವರು ಬೇರೆ ಆಗುತ್ತಿದ್ದಂತೆ ‘ಟಿ-ಸೀರಿಸ್’ ಯೂಟ್ಯೂಬ್ ಚಾನೆಲ್ ಮೂಲಕ ವಿಡಿಯೋ ಸಾಂಗ್ ಒಂದು ರಿಲೀಸ್ ಆಗಿದೆ.

ಇದನ್ನೂ ಓದಿ
Image
ಅಧಿಕೃತವಾಗಿ ವಿಚ್ಛೇದನ ಪಡೆದ ಚಾಹಲ್- ಧನಶ್ರೀ; ಸಿಕ್ಕ ಜೀವನಾಂಶವೆಷ್ಟು?
Image
ಚಾಹಲ್- ಧನಶ್ರೀ ವಿಚ್ಛೇದನ: ಮಾಜಿ ಮಡದಿಗೆ ಸಿಕ್ಕ ಜೀವನಾಂಶ ಎಷ್ಟು?
Image
ಚಹಲ್ ಲವ್ವಿ ಡವ್ವಿ: ಪತಿಯ ಫೋಟೋ ಮತ್ತೆ ಹಂಚಿಕೊಂಡ ಧನಶ್ರೀ ವರ್ಮಾ
Image
ಯುಜ್ವೇಂದ್ರ ಚಾಹಲ್-ಧನಶ್ರೀ ವರ್ಮಾ ವಿಚ್ಛೇದನ

‘ದೇಖಾ ಜಿ ದೇಖಾ ಮೇನೆ..’ ಅನ್ನೋದು ಹಾಡಿನ ಹೆಸರು. ಈ ವಿಡಿಯೋ ಸಾಂಗ್​ನಲ್ಲಿ ಧನಶ್ರೀ ವರ್ಮಾ, ಇಶ್ವಕ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧನಶ್ರೀ ಹಾಗೂ ಇಶ್ವಕ್ ಮದುವೆ ಆಗಿರುತ್ತಾರೆ. ಆದರೆ, ಇಶ್ವಕ್​ಗೆ ಅನೈತಿಕ ಸಂಬಂಧ ಇರೋದು ಧನಶ್ರೀ ಗಮನಕ್ಕೆ ಬರುತ್ತದೆ. ಸಾಕಷ್ಟು ಸಹಿಸಿಕೊಳ್ಳುವ ಅವರು ಕೊನೆಯಲ್ಲಿ ವಿಚ್ಛೇದನದ ನಿರ್ಧಾರ ಮಾಡುತ್ತಾರೆ. ಈ ರೀತಿಯಲ್ಲಿ ಹಾಡು ಇದೆ. ಜ್ಯೋತಿ ನೂರಾನ್ ಈ ಹಾಡನ್ನು ಹಾಡಿದ್ದು, ಜಾನಿ ಸಂಗೀತ ಸಂಯೋಜನೆ ಮಾಡಿ ಸಾಹಿತ್ಯ ಬರೆದಿದ್ದಾರೆ.

ಇದನ್ನೂ ಓದಿ: ಚಾಹಲ್- ಧನಶ್ರೀ ವೈವಾಹಿಕ ಜೀವನ ಅಂತ್ಯ; ಅಧಿಕೃತ ಮುದ್ರೆ ಒತ್ತಿದ ನ್ಯಾಯಾಲಯ

ಈ ವಿಡಿಯೋ ಬಿಡುಗಡೆ ಆದ ಬಳಿಕ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ವಿಚ್ಛೇದನ ದಿನವೇ ಪತಿ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅರ್ಥ ಇರುವ ವಿಡಿಯೋ ಸಾಂಗ್ ರಿಲೀಸ್ ಮಾಡೋದು ಏಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ‘ಎಂತಹ ದಿನವನ್ನು ಹುಡುಕಿ ಸಾಂಗ್ ರಿಲೀಸ್ ಮಾಡಿದ್ದೀರಿ. ಸರಿಯಾದ ಸಮಯ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ಯಜುವೇಂದ್ರ ಚಾಹಲನ್​ ಬೆಂಬಲಿಸಿ ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:59 am, Fri, 21 March 25