AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chahal-Dhanashree Divorce: ಚಾಹಲ್- ಧನಶ್ರೀ ವೈವಾಹಿಕ ಜೀವನ ಅಂತ್ಯ; ಅಧಿಕೃತ ಮುದ್ರೆ ಒತ್ತಿದ ನ್ಯಾಯಾಲಯ

Chahal-Dhanashree Divorce: ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅವರ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಮುಂಬೈನ ಬಾಂದ್ರಾ ಕುಟುಂಬ ನ್ಯಾಯಾಲಯವು ವಿಚ್ಛೇದನಕ್ಕೆ ಅನುಮತಿ ನೀಡಿದೆ. ಚಾಹಲ್ ಅವರು ಧನಶ್ರೀ ಅವರಿಗೆ 4.75 ಕೋಟಿ ರೂಪಾಯಿಗಳ ಜೀವನಾಂಶವನ್ನು ನೀಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇಬ್ಬರೂ ಎರಡೂವರೆ ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಕಾರಣ ಹೈಕೋರ್ಟ್ ಅವರಿಬ್ಬರಿಗೂ ಕೂಲಿಂಗ್-ಆಫ್‌ನಿಂದ ವಿನಾಯಿತಿ ನೀಡಿತ್ತು.

Chahal-Dhanashree Divorce: ಚಾಹಲ್- ಧನಶ್ರೀ ವೈವಾಹಿಕ ಜೀವನ ಅಂತ್ಯ; ಅಧಿಕೃತ ಮುದ್ರೆ ಒತ್ತಿದ ನ್ಯಾಯಾಲಯ
ಯುಜ್ವೇಂದ್ರ ಚಾಹಲ್, ಧನಶ್ರೀ ವರ್ಮಾ
ಪೃಥ್ವಿಶಂಕರ
|

Updated on:Mar 20, 2025 | 5:44 PM

Share

ಸುಮಾರು ದಿನಗಳಿಂದ ಕೇಳಿಬರುತ್ತಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ (Yuzvendra Chahal) ಹಾಗೂ ಧನಶ್ರೀ ವರ್ಮಾ (Dhanashree Verma) ಅವರ ವಿಚ್ಛೇದನ ವದಂತಿಗೆ ಕೊನೆಗೂ ತೆರೆ ಬಿದ್ದಿದೆ. ದಂಪತಿಗಳಿಬ್ಬರಿಗೆ ಇಂದು ಅಧಿಕೃತವಾಗಿ ವಿಚ್ಛೇದನ ಸಿಕ್ಕಿದೆ. ಸುಮಾರು ಎರಡೂವರೆ ವರ್ಷಗಳಿಂದ ಬೇರೆ ಬೇರೆ ವಾಸುತ್ತಿದ್ದ ಈ ಜೋಡಿಯ ವಿಚ್ಛೇದನ ಮೇಲ್ಮನವಿಯನ್ನು ಬಾಂದ್ರಾದ ಕೌಟುಂಬಿಕ ನ್ಯಾಯಾಲಯ ಅಂಗೀಕರಿಸಿದೆ. ಇದರೊಂದಿಗೆ, ಪ್ರೀತಿಸಿ ವೈವಾಹಿಕ ಜೀವಕ್ಕೆ ಕಾಲಿಟ್ಟಿದ್ದ ಈ ಪ್ರಣಯ ಪಕ್ಷಿಗಳ ದಾಂಪತ್ಯ ಜೀವನ 4 ವರ್ಷ 3 ತಿಂಗಳಿಗೆ ಮುರಿದುಬಿದ್ದಿದೆ.

ಮಾರ್ಚ್ 20 ರ ಗುರುವಾರ, ಮುಂಬೈನ ಬಾಂದ್ರಾ ಕುಟುಂಬ ನ್ಯಾಯಾಲಯವು ವಿಚ್ಛೇದನದ ಕುರಿತು ಅಂತಿಮ ತೀರ್ಪು ನೀಡಿದೆ. ಈ ವಿಚಾರಣೆಗೆ ಚಾಹಲ್ ಮತ್ತು ಧನಶ್ರೀ ಪ್ರತ್ಯೇಕವಾಗಿ ಹಾಜರಿದ್ದರು. ಈ ಸಮಯದಲ್ಲಿ, ಇಬ್ಬರ ಪ್ರತಿಕ್ರಿಯೆಯನ್ನು ಪಡೆಯಲು ಮಾಧ್ಯಮದವರ ಗುಂಪು ಜಮಾಯಿಸಿತು. ಆದರೆ ಯಾರೂ ಯಾವುದೇ ಪ್ರತಿಕ್ರಿಯೆ ನೀಡದೆ ಅಲ್ಲಿಂದ ನಿರ್ಗಮಿಸಿದ್ದಾರೆ ಎಂದು ವರದಿಯಾಗಿದೆ.

4 ವರ್ಷಗಳ ಹಿಂದೆ ವಿವಾಹ

ಡಿಸೆಂಬರ್ 24, 2020 ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಚಾಹಲ್ ಮತ್ತು ಧನಶ್ರೀ ಮೂರು-ನಾಲ್ಕು ತಿಂಗಳ ಹಿಂದೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದರು. ಅಂದಿನಿಂದ ಈ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ವರದಿಗಳು ಕೇಳಿಬರಲಾರಂಭಿಸಿದ್ದವು. ಆದಾಗ್ಯೂ ಈ ಸಂಬಂಧ ಯಾರೂ ಏನನ್ನು ಹೇಳದಿರುವಾಗ ವಿಚ್ಛೇದನ ವದಂತಿಗೆ ಪುಷ್ಠಿ ಸಿಕ್ಕಿತು. ಕಳೆದ ತಿಂಗಳಷ್ಟೇ ಈ ಇಬ್ಬರೂ ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಮನವಿ ಸಲ್ಲಿಸಿದ್ದರು. ಇಬ್ಬರೂ 6 ತಿಂಗಳ ಕೂಲಿಂಗ್-ಆಫ್ ಅವಧಿಯಿಂದ ವಿನಾಯಿತಿ ನೀಡುವಂತೆ ಕೋರಿದ್ದರು, ಆದರೆ ನ್ಯಾಯಾಲಯ ಅದನ್ನು ತಿರಸ್ಕರಿಸಿತು.

ಇದನ್ನೂ ಓದಿ
Image
ಚಾಹಲ್- ಧನಶ್ರೀ ವಿಚ್ಛೇದನ: ಮಾಜಿ ಮಡದಿಗೆ ಸಿಕ್ಕ ಜೀವನಾಂಶ ಎಷ್ಟು?
Image
ಯುಜ್ವೇಂದ್ರ ಚಾಹಲ್-ಧನಶ್ರೀ ವರ್ಮಾ ವಿಚ್ಛೇದನ
Image
ಟಿವಿ9 ಜೊತೆ ಕನ್ನಡದಲ್ಲೇ ಮಾತು ಆರಂಭಿಸಿದ ಚಾಹಲ್; ವಿಡಿಯೋ ನೋಡಿ
Image
ಧನಶ್ರೀ ವರ್ಮಾ ದೂರ; ಬೇರೊಬ್ಬ ಯುವತಿ ಜೊತೆ ಚಹಾಲ್ ಸುತ್ತಾಟ

ಚಾಹಲ್- ಧನಶ್ರೀ ವಿಚ್ಛೇದನ: ಮಾಜಿ ಮಡದಿಗೆ ಸಿಕ್ಕ ಜೀವನಾಂಶ ಎಷ್ಟು?

4.75 ಕೋಟಿ ಜೀವನಾಂಶ

ಇದಾದ ನಂತರ ಇಬ್ಬರೂ ಬಾಂಬೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಸಂಬಂಧ ಮಾರ್ಚ್ 19 ರ ಬುಧವಾರದಂದು ವಿಚಾರಣೆ ನಡೆಸಿದ್ದ ಹೈಕೋರ್ಟ್​, ಮಾರ್ಚ್ 20 ರಂದು ಈ ವಿಷಯವನ್ನು ಇತ್ಯರ್ಥಪಡಿಸುವಂತೆ ಬಾಂದ್ರಾ ಕುಟುಂಬ ನ್ಯಾಯಾಲಯಕ್ಕೆ ಆದೇಶಿಸಿತ್ತು. ಅಲ್ಲದೆ ಕಳೆದ ಎರಡೂವರೆ ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ಎಂದು ಹೇಳಿದ್ದರಿಂದ ಹೈಕೋರ್ಟ್ ಅವರಿಬ್ಬರಿಗೂ ಕೂಲಿಂಗ್-ಆಫ್‌ನಿಂದ ವಿನಾಯಿತಿ ನೀಡಿತ್ತು. ಈ ವಿಚ್ಛೇದನಕ್ಕೆ ಪ್ರತಿಯಾಗಿ, ಚಹಾಲ್ ಧನಶ್ರೀಗೆ 4.75 ಕೋಟಿ ರೂಪಾಯಿಗಳನ್ನು ಜೀವನಾಂಶವಾಗಿ ನೀಡುವ ಒಪ್ಪಂದವೂ ಇತ್ತು. ಅದರಲ್ಲಿ 50 ಪ್ರತಿಶತದಷ್ಟು ಹಣವನ್ನು ಚಾಹಲ್ ಈಗಾಗಲೇ ಧನಶ್ರೀಗೆ ನೀಡಿದ್ದು, ಉಳಿದ ಹಣವನ್ನು ವಿಚ್ಛೇದನದ ಬಳಿಕ ನೀಡುವುದಾಗಿ ಒಡಂಬಡಿಕೆ ಆಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:38 pm, Thu, 20 March 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ