Sign In

By signing in or creating an account, you agree with Associated Broadcasting Company's Terms & Conditions and Privacy Policy.

'RCB ಹೊಗಳಿದ್ರೆ ಪಂಜಾಬ್ ಟೀಂ ನನ್ನ ಕೊಲ್ತಾರೆ'; ಟಿವಿ9 ಜೊತೆ ಚಾಹಲ್ ಮಾತು; ವಿಡಿಯೋ ನೋಡಿ

‘RCB ಹೊಗಳಿದ್ರೆ ಪಂಜಾಬ್ ಟೀಂ ನನ್ನ ಕೊಲ್ತಾರೆ’; ಟಿವಿ9 ಜೊತೆ ಚಾಹಲ್ ಮಾತು; ವಿಡಿಯೋ ನೋಡಿ

ಪೃಥ್ವಿಶಂಕರ
|

Updated on:Feb 09, 2025 | 1:06 PM

Yuzvendra Chahal React on RCB: ಖಾಸಗಿ ಕಾರ್ಯಕ್ರಮವೊಂದಕ್ಕೆ ಬೆಂಗಳೂರಿಗೆ ಆಗಮಿಸಿದ್ದ ಟೀಂ ಇಂಡಿಯಾದ ಗೂಗ್ಲಿ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಟಿವಿ9 ಕನ್ನಡದೊಂದಿಗೆ ಮಾತಿಗೆ ಸಿಕ್ಕಿದ್ದಾರೆ. ವಾಹಿನಿಯ ಆ್ಯಂಕರ್ ಅವಿನಾಶ್ ಯುವನ್ ಅವರೊಂದಿಗೆ ಮಾತನಾಡಿರುವ ಚಾಹಲ್, ಆರ್​ಸಿಬಿಯೊಂದಿಗೆ ಅವರ ಒಡನಾಟ, ಬೆಂಗಳೂರು ಹಾಗೂ ಬೆಂಗಳೂರಿನ ಜನರ ಬಗ್ಗೆ ಅವರಿಗಿರುವ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಟೀಂ ಇಂಡಿಯಾ ಅಭಿಮಾನಿಗಳಿಗೆ ಗೂಗ್ಲಿ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅದರಲ್ಲೂ ಆರ್​ಸಿಬಿ ಅಭಿಮಾನಿಗಳಿಗೆ ಚಾಹಲ್ ಚಿರಪರಿಚಿತರು. 2014 ರಿಂದ 2021 ರವರೆಗೆ ಆರ್​ಸಿಬಿ ಪರ ಹಲವು ಸ್ಮರಣೀಯ ಪಂದ್ಯಗಳನ್ನಾಡಿದ್ದ ಚಾಹಲ್​ಗೆ ಬೆಂಗಳೂರು ಹಾಗೂ ಇಲ್ಲಿಯ ಜನರೊಂದಿಗೆ ಅವಿನಾಭಾವ ನಂಟಿದೆ. ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದೂರ ಉಳಿದಿರುವ ಚಾಹಲ್ ದೇಶೀ ಕ್ರಿಕೆಟ್​ ಜೊತೆಗೆ ಐಪಿಎಲ್​ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಕ್ರಿಕೆಟ್​ನ ಹೊರತಾಗಿ ಬೇರೆ ಕ್ಷೇತ್ರಗಳಲ್ಲಿಯೂ ತೊಡಗಿಕೊಂಡಿರುವ ಚಾಹಲ್, ಪ್ರಾಯೋಗಿಕ ಕಲಿಕೆ ಹಾಗೂ ಸಮಗ್ರ ಶಿಕ್ಷಣದಲ್ಲಿ ಮುಂದಿರುವ ಹಾಯ್- ಕಲ್ಪಾ ಗ್ರೂಪ್ ಆಫ್ ಸ್ಕೂಲ್​ನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದರ ಜೊತೆಗೆ ಪಾಲುದಾರ ಕೂಡ ಆಗಿದ್ದಾರೆ. ಹೀಗಾಗಿ ಶಾಲೆಯ ಸಮಾರಂಭದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಆಗಮಿಸಿದ್ದ ಟೀಂ ಇಂಡಿಯಾದ ಗೂಗ್ಲಿ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಟಿವಿ9 ಕನ್ನಡ ವಾಹಿನಿಯೊಂದಿಗೆ ಮಾತಿಗೆ ಸಿಕ್ಕಿದ್ದಾರೆ. ವಾಹಿನಿಯ ಆ್ಯಂಕರ್ ಅವಿನಾಶ್ ಯುವನ್ ಅವರೊಂದಿಗೆ ಮಾತನಾಡಿರುವ ಚಾಹಲ್, ಆರ್​ಸಿಬಿಯೊಂದಿಗೆ ಅವರ ಒಡನಾಟ, ಬೆಂಗಳೂರು ಹಾಗೂ ಬೆಂಗಳೂರಿನ ಜನರ ಬಗ್ಗೆ ಅವರಿಗಿರುವ ಅಭಿಪ್ರಾಯ ಹಾಗೂ ಮುಂಬರುವ ಐಪಿಎಲ್​ಗೆ ಅವರ ತಯಾರಿ ಹೇಗಿದೆ ಎಂಬುದನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಚಾಹಲ್ ಕನ್ನಡದಲ್ಲೇ ಮಾತು ಆರಂಭಿಸಿದ್ದು, ಕನ್ನಡದ ಮೇಲೆ ಹಾಗೂ ಕನ್ನಡಿಗರ ಮೇಲೆ ಅವರಿಗಿರುವ ಪ್ರೀತಿಯನ್ನು ಮತ್ತೊಮ್ಮೆ ಸಾಭೀತುಪಡಿಸಿದೆ.

Published on: Feb 08, 2025 09:35 PM