4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಚಾಹಲ್- ಧನಶ್ರೀ ವರ್ಮಾ
Yuzvendra Chahal-Dhanashree Verma Divorce: ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ತಮ್ಮ ಪತ್ನಿ ಧನಶ್ರೀ ವರ್ಮಾ ಅವರಿಂದ ಬೇರ್ಪಟ್ಟಿದ್ದಾರೆ. ವರದಿಗಳ ಪ್ರಕಾರ, ಇಬ್ಬರೂ ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆದಿದ್ದಾರೆ. ಆದರೆ ಇಬ್ಬರೂ ಬೇರೆಯಾಗಲು ಕಾರಣವೇನೆಂದು ಬಹಿರಂಗವಾಗಿಲ್ಲ. ಆದರೆ ಧನಶ್ರೀ ಮತ್ತು ಯುಜ್ವೇಂದ್ರ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಜೀವನದಲ್ಲಿ ಒಂದು ದೊಡ್ಡ ಘಟನೆ ನಡೆದಿರುವ ಬಗ್ಗೆ ಸುಳಿವು ನೀಡಿದ್ದಾರೆ.

ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನ ಪಡೆದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಮಾಧ್ಯಮ ವರದಿಗಳ ಪ್ರಕಾರ, ಇಬ್ಬರೂ ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನದ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಪರಸ್ಪರ ಬೇರೆಯಾಗಿದ್ದಾರೆ. ವಾಸ್ತವವಾಗಿ ಬಹಳ ದಿನಗಳಿಂದ ಇಬ್ಬರೂ ಬೇರೆಯಾಗಿ ಪ್ರತ್ಯೇಕವಾಗಿ ವಾಸಿಸಲಾರಂಭಿಸಿದ್ದರು. ಅಲ್ಲದೆ ಇಷ್ಟರಲ್ಲೇ ಈ ಇಬ್ಬರು ಅಧಿಕೃತವಾಗಿ ದೂರವಾಗಲಿದ್ದಾರೆ ಎಂಬ ವರದಿಗಳು ಆಗಾಗ್ಗೆ ಕೇಳಿ ಬರುತ್ತಿದ್ದವು. ಈಗ ಈ ಸುದ್ದಿ ದೃಢಪಟ್ಟಂತೆ ತೋರುತ್ತಿದ್ದು, ಚಾಹಲ್-ಧನಶ್ರೀ ನಡುವಿನ ದಾಂಪತ್ಯ ಜೀವನ ಕೇವಲ 4 ವರ್ಷಗಳಿಗೆ ಅಂತ್ಯಗೊಂಡಿದೆ.
ಚಾಹಲ್ ಪೋಸ್ಟ್
ಯುಜ್ವೇಂದ್ರ ಚಾಹಲ್ ಇಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಿಗೂಢ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್ ಅನ್ನು ನೋಡಿದರೆ ಚಾಹಲ್ ಅವರ ಜೀವನದಲ್ಲಿ ಏನೋ ದೊಡ್ಡ ಘಟನೆ ನಡೆದಿದೆ ಎಂಬುದನ್ನು ನಾವು ಊಹಿಸಬಹುದು. ಚಾಹಲ್ ತಮ್ಮ ಪೋಸ್ಟ್ನಲ್ಲಿ ‘ದೇವರು ನನ್ನನ್ನು ಎಷ್ಟೋ ಬಾರಿ ರಕ್ಷಿಸಿದ್ದಾನೆ, ನಾನು ಅವುಗಳನ್ನು ಸಂಖ್ಯೆಯಲ್ಲಿ ಎಣಿಸಲು ಸಹ ಸಾಧ್ಯವಿಲ್ಲ’. ಕೆಲವೊಮ್ಮೆ ದೇವರು ನನ್ನ ಅರಿವಿಗೆ ಬಾರದೆಯೋ ನನ್ನ ಜೊತೆ ನಿಂತಿದ್ದಾನೆ. ನನಗೆ ಗೊತ್ತಿಲ್ಲದಿದ್ದರೂ ನನ್ನನ್ನು ಬೆಂಬಲಿಸಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
Yuzi Chahal’s Instagram story. pic.twitter.com/mlEGpPOLLO
— Mufaddal Vohra (@mufaddal_vohra) February 20, 2025
ಧನಶ್ರೀ ವರ್ಮಾ ಪೋಸ್ಟ್
ಚಾಹಲ್ ಪೋಸ್ಟ್ ಮಾಡಿದ ಸುಮಾರು ಒಂದು ಗಂಟೆಯ ನಂತರ ಇತ್ತ ಧನಶ್ರೀ ವರ್ಮಾ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ದೇವರಿಗೆ ಸಂಬಂಧಿಸಿದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಧನಶ್ರೀ ತಮ್ಮ ಪೋಸ್ಟ್ನಲ್ಲಿ, ‘ಒತ್ತಡದಿಂದ ಅದೃಷ್ಟಶಾಲಿಯಾಗುವವರೆಗೆ. ದೇವರು ನಮ್ಮ ಒತ್ತಡವನ್ನು ಸಂತೋಷವಾಗಿ ಪರಿವರ್ತಿಸುವ ರೀತಿ ಎಷ್ಟು ಅದ್ಭುತವಾಗಿದೆ? ಇಂದು ನೀವು ಯಾವುದಾದರೂ ವಿಷಯದ ಬಗ್ಗೆ ಒತ್ತಡಕ್ಕೊಳಗಾಗಿದ್ದರೆ, ಹೆಚ್ಚು ಯೋಚಿಸುತ್ತಿದ್ದರೆ, ನಿಮಗೆ ಒಂದು ಆಯ್ಕೆ ಇದೆ ಎಂಬುದನ್ನು ನೆನಪಿಡಿ, ನೀವು ಆ ಉದ್ವೇಗವನ್ನು ತೆಗೆದುಕೊಳ್ಳಬಹುದು ಅಥವಾ ನಿಮ್ಮ ಎಲ್ಲಾ ಚಿಂತೆಗಳನ್ನು ದೇವರಿಗೆ ಅರ್ಪಿಸಿ ಎಲ್ಲದಕ್ಕೂ ಪ್ರಾರ್ಥಿಸಬಹುದು. “ದೇವರು ನಿಮ್ಮ ಒಳಿತಿಗಾಗಿ ಎಲ್ಲವನ್ನೂ ಮಾಡಬಹುದು ಎಂದು ನಂಬುವುದರಲ್ಲಿ ಬೇರೆಯದೇ ರೀತಿಯ ಶಕ್ತಿಯಿದೆ. ಎಂದು ಬರೆದುಕೊಂಡಿದ್ದಾರೆ.
ಮೂರನೇ ಜೋಡಿ
ಕಳೆದ 2 ವರ್ಷಗಳ ಬಗ್ಗೆ ಮಾತನಾಡಿದರೆ, ಟೀಂ ಇಂಡಿಯಾದ 3 ಆಟಗಾರರು ವಿಚ್ಛೇದನ ಪಡೆದಿದ್ದಾರೆ. ಮೊದಲು ಶಿಖರ್ ಧವನ್ ಮತ್ತು ಆಯೇಷಾ ಮುಖರ್ಜಿ ಬೇರ್ಪಟ್ಟರು. ಅದಾದ ನಂತರ ಹಾರ್ದಿಕ್ ಪಾಂಡ್ಯ ನತಾಶಾ ಸ್ಟಾಂಕೋವಿಕ್ಗೆ ವಿಚ್ಛೇದನ ನೀಡಿದರು. ಈಗ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ಕೂಡ ಬೇರೆಯಾಗಿದ್ದಾರೆ. ಇದರ ಜೊತೆಗೆ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ವೈಯಕ್ತಿಕ ಜೀವನದಲ್ಲೂ ಬಿರುಗಾಳಿ ಎದ್ದಿರುವ ಬಗ್ಗೆ ವರದಿಗಳಿವೆ. ಸೆಹ್ವಾಗ್ ಹಾಗೂ ಅವರ ಪತ್ನಿ ಆರತಿ ಅಹ್ಲಾವತ್ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ವರದಿಗಳಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:07 pm, Thu, 20 February 25