Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ನ ಆ ಕುಕೃತ್ಯ ತಿಳಿದು ಹಿಂತಿರುಗಿ ನೋಡದೇ ಬಂದಿದ್ದರು ಕಮಲ್ ಹಾಸನ್

Kamal Haasan: ಕಮಲ್ ಹಾಸನ್ ದೇಶದ ಅದ್ಭುತ ನಟರಲ್ಲಿ ಮೊದಲಿಗರು. ಅವರಿಗೆ ಭಾಷೆಯ ಗಡಿಯೇ ಇಲ್ಲ. ತಮಿಳು ನಟರಾಗಿದ್ದರೂ ಸಹ ತೆಲುಗು, ಕನ್ನಡ, ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ನೋಡಲು ಕಪೂರ್ ಖಾಂದಾನ್​ನ ನಟನಂತೆ ಬೆಳ್ಳಗೆ, ತೆಳ್ಳಗೆ ಇದ್ದ ಕಮಲ್ ಹಾಸನ್ ಅವರು ಬಾಲಿವುಡ್​ ಸಿನಿಮಾಗಳಲ್ಲಿಯೂ ನಟಿಸಿ ದೊಡ್ಡ ಹಿಟ್​ಗಳನ್ನು ನೀಡಿದ್ದರು. ಆದರೆ ಬಾಲಿವುಡ್​ನ ಕರಾಳ ಮುಖ ಕಂಡು ಅಲ್ಲಿಂದ ಹಿಂತಿರುಗಿ ನೋಡದೆ ಬಂದು ಬಿಟ್ಟಿದ್ದರು.

ಬಾಲಿವುಡ್​ನ ಆ ಕುಕೃತ್ಯ ತಿಳಿದು ಹಿಂತಿರುಗಿ ನೋಡದೇ ಬಂದಿದ್ದರು ಕಮಲ್ ಹಾಸನ್
Kamal Haasan
Follow us
ಮಂಜುನಾಥ ಸಿ.
|

Updated on: Mar 20, 2025 | 9:57 PM

ತಮಿಳಿನ 70-80ರ ದಶಕದ ಬೇರೆ ನಟರನ್ನು ನೋಡಿ, ಕಮಲ್ ಹಾಸನ್ ಅವರನ್ನು ನೋಡಿದರೆ ದೊಡ್ಡ ಅಂತರ ಕಾಣುತ್ತದೆ. ಕಮಲ್ ಹಾಸನ್ ಆ ಸಮಯದಲ್ಲಿ ದಕ್ಷಿಣ ಭಾರತದ ನಟನಿಗಿಂತಲೂ ಹಿಂದಿ ನಟನ ರೀತಿ ಹೆಚ್ಚು ಕಾಣುತ್ತಿದ್ದರು. ದಕ್ಷಿಣ ಭಾರತದ ನಟರೆಲ್ಲ ಬಹುತೇಕ ಕಪ್ಪಗೆ, ದಪ್ಪ ಮೀಸೆಯವರಾಗಿದ್ದರು. ಆದರೆ ಕಮಲ್ ಹಾಸನ್ ಬಾಲಿವುಡ್​ನ ಕಪೂರ್ ಖಾಂದಾನ್ ನಾಯಕರಂತೆ ಬೆಳ್ಳಗೆ, ಮೀಸೆ ಇಲ್ಲದೆ ಹ್ಯಾಂಡ್ಸ್​ ಆಗಿದ್ದರು. ಅಭಿನಯಂದಂತಲ್ಲೂ ಅವರನ್ನು ಮೀರಿಸುವವರಿರಲಿಲ್ಲ. ಹಾಗಾಗಿ ಎಲ್ಲರೂ ಅವರನ್ನು ಬಾಲಿವುಡ್​ಗೆ ಹೋಗೆನ್ನುತ್ತಿದ್ದರಂತೆ ಆಗ. ಅದರಂತೆ ಕಮಲ್ ಹಾಸನ್​ ಬಾಲಿವುಡ್​ಗೆ ಕಾಲಿಟ್ಟು ಯಶಸ್ಸನ್ನೂ ಗಳಿಸಿದರು. ಆದರೆ ಬಾಲಿವುಡ್​ನ ಕರಾಳ ಮುಖ ಕಂಡು ಅಲ್ಲಿಂದ ಹಿಂತಿರುಗಿ ನೋಡದೆ ಬಂದು ಬಿಟ್ಟರು.

ಈ ಬಗ್ಗೆ 2017 ರ ಸಂದರ್ಶನವೊಂದರಲ್ಲಿ ಸ್ವತಃ ಕಮಲ್ ಹಾಸನ್ ಹೇಳಿಕೊಂಡಿದ್ದಾರೆ. ಕಮಲ್ ಹಾಸನ್ ನಾಯಕನಾಗಿ ನಟಿಸಿದ ಮೊದಲ ಹಿಂದಿ ಸಿನಿಮಾ ‘ಏಕ್ ದೂಜೆ ಕೇ ಲಿಯೆ’ ಆ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಈಗಲೂ ಸಹ ಅದೊಂದು ಕಲ್ಟ್ ಸಿನಿಮಾ. ಆ ಸಿನಿಮಾ ಯಶಸ್ಸಿನ ಬೆನ್ನಲ್ಲೆ ಸಾಲು ಸಾಲು ಸಿನಿಮಾಗಳು ಕಮಲ್ ಹಾಸನ್​ಗೆ ಸಿಕ್ಕವು. ಕಮಲ್ ನಟನೆಗೆ ಹಿಂದಿ ಸಿನಿಮಾ ಪ್ರಿಯರು ಮಾರು ಹೋದರು. ಒಂದರ ಮೇಲೊಂದು ಹಿಟ್ ಸಿನಿಮಾಗಳನ್ನು ಕಮಲ್ ಹಿಂದಿಯಲ್ಲಿ ಸಹ ನೀಡಿದರು. ಅಮಿತಾಬ್ ಬಚ್ಚನ್ ಸೇರಿದಂತೆ ಆಗಿನ ಹಲವು ಸ್ಟಾರ್ ನಟರೊಡನೆ ನಾಯಕನಾಗಿ ನಟಿಸಿದರು. ಆದರೆ ಒಂದು ಸಮಯದ ಬಳಿಕ ಹಠಾತ್ತನೆ ಕಮಲ್ ಹಾಸನ್ ಬಾಲಿವುಡ್​ನಿಂದ ದೂರಾಗಿಬಿಟ್ಟರು.

ಇದನ್ನೂ ಓದಿ:ಕಮಲ್ ಹಾಸನ್, ಅಜಿತ್ ಕುಮಾರ್ ಬಳಿಕ ದಿಟ್ಟ ನಿರ್ಧಾರ ಕೈಗೊಂಡ ನಟಿ ನಯನತಾರಾ

2017ರ ಸಂದರ್ಶನದಲ್ಲಿ ಅವರು ಹೇಳಿಕೊಂಡಿರುವಂತೆ, ಕಪ್ಪು ಹಣದಲ್ಲಿ ಮಾಡಲಾಗುವ ಸಿನಿಮಾದಲ್ಲಿ ನಟಿಸಲು ಇಷ್ಟವಿಲ್ಲದೆ ನಾನು ಬಾಲಿವುಡ್​ನಿಂದ ದೂರ ಬಂದೆ ಎಂದಿದ್ದರು. ಆ ವಿಷಯದ ಬಗ್ಗೆ ನಾನು ಪ್ರತಿಭಟಿಸುವುದು ಬೇಡ ಅಂದುಕೊಂಡೆ, ಏಕೆಂದರೆ ಅದು ಆಗ ಸಾಧ್ಯವೂ ಇರಲಿಲ್ಲ. ಆದರೆ ಇದರ ಭಾಗವಾಗುವುದು ಬೇಡ ಎಂದುಕೊಂಡು ಗಟ್ಟಿ ನಿರ್ಧಾರ ಮಾಡಿ ನಾನು ಬಾಲಿವುಡ್​ನಿಂದ ದೂರಾದೆ ಎಂದು ಅವರು ಹೇಳಿಕೊಂಡಿದ್ದರು. ನಿಯತ್ತಿನ ಹಣದಿಂದ ಸಿನಿಮಾ ರಂಗದಲ್ಲಿ ಉಳಿದುಕೊಳ್ಳಲು ಸಾಧ್ಯವೇ ಎಂಬ ನಿರೂಪಕರ ಪ್ರಶ್ನೆಗೆ, ಖಂಡಿತ ಸಾಧ್ಯ, ಅದಕ್ಕೆ ನಾನೇ ಜೀವಂತ ಉದಾಹರಣೆ ಎಂದಿದ್ದರು ಕಮಲ್ ಹಾಸನ್.

ಕಮಲ್ ಹಾಸನ್ ಹಣಕ್ಕಾಗಿ ಸಿನಿಮಾ ಮಾಡಿದವರಲ್ಲ. ಸದಾ ಹೊಸತನದ ತುಡಿತಕ್ಕಾಗಿ, ಸಿನಿಮಾ ಮೂಲಕ ಬದಲಾವಣೆ ತರಲಿಕ್ಕಾಗಿ, ಯಾರೂ ಹೇಳದ ವಿಷಯವನ್ನು ಸಿನಿಮಾ ಮೂಲಕ ಹೇಳುವುದಕ್ಕಾಗಿ ಸಿನಿಮಾ ಮಾಡಿದವರು ಕಮಲ್ ಹಾಸನ್. ಬಾಲಿವುಡ್ ಜನ ಸಿನಿಮಾ ಅನ್ನು ಕಪ್ಪು ಹಣದ ಬದಲಾವಣೆ ದಂದೆಯಾಗಿ ಬದಲಾಯಿಸಿದ್ದರು ಅದನ್ನು ಸಹಿಸಲಾಗದೆ ಕಮಲ್ ಹಾಸನ್ ಬಾಲಿವುಡ್​ನಿಂದ ದೂರಾದರು. ಆದರೆ ಈಗಲೂ ಅವರು ನಟಿಸಿರುವ ಹಲವು ಹಿಂದಿ ಸಿನಿಮಾಗಳು ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?
ಸ್ಪೀಕರ್ ರಕ್ಷಣೆಗೆ ಮಾರ್ಷಲ್ ಮತ್ತು ಸಿಎಂ ರಕ್ಷಣೆಗೆ ಕಾಂಗ್ರೆಸ್ ಶಾಸಕರು!
ಸ್ಪೀಕರ್ ರಕ್ಷಣೆಗೆ ಮಾರ್ಷಲ್ ಮತ್ತು ಸಿಎಂ ರಕ್ಷಣೆಗೆ ಕಾಂಗ್ರೆಸ್ ಶಾಸಕರು!
ಹನಿಟ್ರ್ಯಾಪ್​ಗಾಗಿ ಎಷ್ಟು ಹಣ ಮೀಸಲಿಟ್ಟಿದ್ದೀರಿ? ಪ್ರಶ್ನಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ಗಾಗಿ ಎಷ್ಟು ಹಣ ಮೀಸಲಿಟ್ಟಿದ್ದೀರಿ? ಪ್ರಶ್ನಿಸಿದ ಬಿಜೆಪಿ ಶಾಸಕ
ವಿಧಾನಸಭೆಯಲ್ಲಿ ಹೈಡ್ರಾಮಾ: ಸ್ಪೀಕರ್ ಮೇಲೆ ಕಾಗದ ಚೂರು ಎಸೆದ ಶಾಸಕರು!
ವಿಧಾನಸಭೆಯಲ್ಲಿ ಹೈಡ್ರಾಮಾ: ಸ್ಪೀಕರ್ ಮೇಲೆ ಕಾಗದ ಚೂರು ಎಸೆದ ಶಾಸಕರು!
ಹನಿ ಟ್ರ್ಯಾಪ್, ಸಿಡಿ ಫ್ಯಾಕ್ಟರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಲ್ಲ: ಶಾಸಕ
ಹನಿ ಟ್ರ್ಯಾಪ್, ಸಿಡಿ ಫ್ಯಾಕ್ಟರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಲ್ಲ: ಶಾಸಕ
ಮುನಿರತ್ನ ನಿನ್ನೆ ಮಾಡಿದ ಹಲವು ಅರೋಪಗಳಿಗೆ ಶಿವಕುಮಾರ್ ಪ್ರತಿಕ್ರಿಯೆ
ಮುನಿರತ್ನ ನಿನ್ನೆ ಮಾಡಿದ ಹಲವು ಅರೋಪಗಳಿಗೆ ಶಿವಕುಮಾರ್ ಪ್ರತಿಕ್ರಿಯೆ
ಬೆಂಗಳೂರು ಹೋಟೆಲ್​ನಲ್ಲಿ ಹಿಂದಿ ಹೇರಿಕೆ, ವಿಡಿಯೋ ವೈರಲ್
ಬೆಂಗಳೂರು ಹೋಟೆಲ್​ನಲ್ಲಿ ಹಿಂದಿ ಹೇರಿಕೆ, ವಿಡಿಯೋ ವೈರಲ್
ಪೌರ ಕಾರ್ಮಿಕರ ಜೊತೆ ಸೇರಿ ಕಸ ಆಯ್ದ ರಕ್ಷಕ್ ಬುಲೆಟ್
ಪೌರ ಕಾರ್ಮಿಕರ ಜೊತೆ ಸೇರಿ ಕಸ ಆಯ್ದ ರಕ್ಷಕ್ ಬುಲೆಟ್
ಔರಂಗಜೇಬನ ಸಮಾಧಿ ವಿವಾದ, ಸುತ್ತಲೂ ತಾತ್ಕಾಲಿಕ ಗೋಡೆ ನಿರ್ಮಾಣ
ಔರಂಗಜೇಬನ ಸಮಾಧಿ ವಿವಾದ, ಸುತ್ತಲೂ ತಾತ್ಕಾಲಿಕ ಗೋಡೆ ನಿರ್ಮಾಣ