ಹಿಂದೆ ಸರಿದ ಸಲ್ಮಾನ್ ಖಾನ್, ‘ಸಿಂಖಂಧರ್’ ಸಿನಿಮಾ ಪ್ರಚಾರದ ಚುಕ್ಕಾಣಿ ರಶ್ಮಿಕಾಗೆ
Rashmika Mandanna: ರಶ್ಮಿಕಾ ಮಂದಣ್ಣ ಅದೃಷ್ಟ ಸಾಮಾನ್ಯವಾದುದಲ್ಲ. ಸೂಪರ್ ಸ್ಟಾರ್ ನಟನೆಯ ಸಿನಿಮಾದ ಪ್ರಚಾರದ ಜವಾಬ್ದಾರಿ ಈಗ ರಶ್ಮಿಕಾ ಹೆಗಲ ಮೇಲೆ ಬಿದ್ದಿದೆ. ರಶ್ಮಿಕಾ ಮಂದಣ್ಣ, ಸಲ್ಮಾನ್ ಖಾನ್ ಜೊತೆಗೆ ‘ಸಿಖಂಧರ್’ ಸಿನಿಮಾದಲ್ಲಿ ನಟಿಸಿದ್ದು ಈ ಸಿನಿಮಾದ ಪ್ರಚಾರದಲ್ಲಿ ಸಲ್ಮಾನ್ ಸಕ್ರಿಯವಾಗಿ ಭಾಗಿ ಆಗುವುದಿಲ್ಲ. ಅವರ ಅನುಪಸ್ಥಿತಿಯಲ್ಲಿ ರಶ್ಮಿಕಾ ಸಿನಿಮಾದ ಪ್ರಚಾರ ಮಾಡಲಿದ್ದಾರೆ.

ಕನ್ನಡ ಸಿನಿಮಾದಿಂದ ನಟನೆ ಆರಂಭಿಸಿ ತೆಲುಗಿಗೆ ಹೋಗಿ ಅಲ್ಲಿ ನಂಬರ್ 1 ನಟಿಯಾಗಿ ಬಳಿಕ ಬಾಲಿವುಡ್ಗೆ ಹಾರಿ ಅಲ್ಲಿಯೂ ತನ್ನ ಹವಾ ಎಬ್ಬಿಸಿರುವ ನಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ಅದೃಷ್ಟದ ಮೇಲೆ ಅದೃಷ್ಟ ಕೈಗೂಡುತ್ತಿದೆ. ರಶ್ಮಿಕಾ ನಟಿಸಿದ ಮೂರು ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿದ್ದು, ದಾಖಲೆಯ ಮೊತ್ತದ ಹಣ ಗಳಿಕೆ ಮಾಡಿವೆ. ಇದೀಗ ರಶ್ಮಿಕಾರ ಮತ್ತೊಂದು ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿದ್ದು, ಈ ಸಿನಿಮಾದ ಪ್ರಚಾರದ ಜವಾಬ್ದಾರಿ ರಶ್ಮಿಕಾ ಮಂದಣ್ಣರ ಹೆಗಲಿಗೆ ಬಿದ್ದಿದೆ.
ರಶ್ಮಿಕಾ ಮಂದಣ್ಣ, ಸಲ್ಮಾನ್ ಖಾನ್ ಜೊತೆಗೆ ನಟಿಸಿರುವ ‘ಸಿಖಂಧರ್’ ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಈ ಸಿನಿಮಾದ ಪ್ರಚಾರ ಇನ್ನೇನು ಆರಂಭವಾಗಲಿದೆ. ಆದರೆ ಇಂಥಹಾ ಸಮಯದಲ್ಲಿಯೇ ಸಲ್ಮಾನ್ ಖಾನ್ ಪ್ರಚಾರದಿಂದ ತುಸು ಹಿಂದೆ ಸರಿದಿದ್ದಾರೆ. ಆ ಮೂಲಕ ಪ್ರಚಾರದ ನೇತೃತ್ವ ರಶ್ಮಿಕಾರ ಹೆಗಲಿಗೆ ಬಂದಿದೆ. ಸಲ್ಮಾನ್ ಖಾನ್ಗೆ ಜೀವ ಬೆದರಿಕೆ ಇರುವ ಕಾರಣದಿಂದಾಗಿ ಸಲ್ಲು ‘ಸಿಖಂಧರ್’ ಸಿನಿಮಾದ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗಿ ಆಗುವುದಿಲ್ಲ. ಹಾಗಾಗಿ ಸಲ್ಮಾನ್ ಗೈರು ಹಾಜರಿಯಲ್ಲಿ ರಶ್ಮಿಕಾ ಅವರೇ ಸಿನಿಮಾದ ಪ್ರಚಾರ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಎಲ್ಲೇ ಇದ್ದರು, ಹೇಗೆ ಇದ್ದರು ಇದೊಂದು ವಿಷಯ ಮರೆಯೊಲ್ಲ ರಶ್ಮಿಕಾ ಮಂದಣ್ಣ
ರಶ್ಮಿಕಾ ನಟಿಸಿರುವ ನಾಲ್ಕು ಹಿಂದಿ ಸಿನಿಮಾಗಳು ಈಗಾಗಲೇ ಬಿಡುಗಡೆ ಆಗಿದ್ದು, ರಶ್ಮಿಕಾಗೆ ಬಾಲಿವುಡ್ ಮೀಡಿಯಾ ಹೊಸದೇನೂ ಅಲ್ಲ. ಈ ಹಿಂದಿನ ಸಿನಿಮಾ ‘ಛಾವಾ’ಕ್ಕೆ ರಶ್ಮಿಕಾ ಭರ್ಜರಿಯಾಗಿಯೇ ಪ್ರಚಾರ ಮಾಡಿದ್ದರು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಚಿತ್ರತಂಡ ರಶ್ಮಿಕಾರ ಅವರಿಗೆ ‘ಸಿಖಂಧರ್’ನ ಪ್ರಚಾರದ ನೃತೃತ್ವ ನೀಡಿದೆ ಎನ್ನಲಾಗುತ್ತಿದೆ. ‘ಛಾವಾ’ ಸಿನಿಮಾದ ಪ್ರಚಾರದ ಸಮಯದಲ್ಲಿ ಕಾಲು ಮುರಿದುಕೊಂಡು ಗಾಯಗೊಂಡಿದ್ದ ರಶ್ಮಿಕಾ, ಈಗ ಗುಣಮುಖರಾಗಿದ್ದು, ‘ಸಿಖಂಧರ್’ ಸಿನಿಮಾದ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.
‘ಸಿಖಂಧರ್’ ಸಿನಿಮಾವನ್ನು ತಮಿಳಿನ ಯಶಸ್ವಿ ನಿರ್ದೇಶಕ ಮುರುಗದಾಸ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಅವರು ‘ಘಜಿನಿ’, ‘ಕತ್ತಿ’, ‘7 ಸೆನ್ಸ್’, ‘ತುಪ್ಪಾಕಿ’, ‘ಸ್ಪೈಡರ್’ ಅಂಥಹಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸಲ್ಮಾನ್ ಖಾನ್ ಜೊತೆಗೆ ಕೆಲಸ ಮಾಡಿದ್ದಾರೆ. ‘ಸಿಖಂಧರ್’ ಸಿನಿಮಾವನ್ನು ಸಲ್ಮಾನ್ರ ಆತ್ಮೀಯ ಗೆಳೆಯ ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಮಾರ್ಚ್ 30 ರಂದು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ