19 ವರ್ಷಗಳ ವೃತ್ತಿ ಬದುಕಲ್ಲಿ ಸಾಕಷ್ಟು ಏಳು-ಬೀಳು; ಕಂಗನಾ ಒಟ್ಟು ಆಸ್ತಿ ಎಷ್ಟು?
Kangana Ranaut: ಸಿನಿಮಾ ನಟಿ, ನಿರ್ದೇಶಕಿ, ನಿರ್ಮಾಪಕಿ, ರಾಜಕಾರಣಿಯೂ ಆಗಿರುವ ಕಂಗನಾ ರನೌತ್ ಅವರ ಹುಟ್ಟುಹಬ್ಬ ಇಂದು (ಮಾರ್ಚ್ 23) ದಶಕಕ್ಕೂ ಹೆಚ್ಚು ಸಮಯದಿಂದ ಚಿತ್ರರಂಗದಲ್ಲಿರುವ, ನಿರ್ದೇಶನದ ಜೊತೆಗೆ ಕೆಲ ಹಿಟ್ ಸಿನಿಮಾಗಳ ನಿರ್ಮಾಣವನ್ನೂ ಮಾಡಿರುವ ಕಂಗನಾ ರನೌತ್ ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು? ಇಲ್ಲಿದೆ ನೋಡಿ ಮಾಹಿತಿ...

ಬಾಲಿವುಡ್ (Bollywood) ನಟಿ ಕಂಗನಾ ರಣಾವತ್ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ಸಿಕ್ಕಿದೆ. ಅವರಿಗೆ ಇಂದು (ಮಾರ್ಚ್ 23) ಜನ್ಮದಿನ. ಅವರು ಈಗ ಕೇವಲ ನಟಿ ಅಲ್ಲ. ಹಿಮಾಚಲ ಪ್ರದೇಶದ ಮಂಡಿಯ ಸಂಸದೆ ಕೂಡ ಹೌದು. ಕಂಗನಾ ರಣಾವತ್ ಅವರ ನೆಟ್ ವರ್ತ್ ಎಷ್ಟು? ಇಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಕಳೆದ ಅವರ ಒಟ್ಟೂ ಆಸ್ತಿ ಎಷ್ಟು? ಆ ಬಗ್ಗೆ ಈ ಸ್ಟೋರಿಯಲ್ಲಿ ಮಾಹಿತಿ ಇದೆ. ಅದನ್ನು ತಿಳಿದುಕೊಳ್ಳೋಣ.
ಕಂಗನಾ ಚಿತ್ರರಂಗಕ್ಕೆ ಬಂದು 20 ವರ್ಷಗಳು ಕಳೆಯುತ್ತಾ ಬಂದಿವೆ. ಅವರು 2006ರಲ್ಲಿ ರಿಲೀಸ್ ಆದ ‘ಗ್ಯಾಂಗ್ಸ್ಟರ್’ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಸಿನಿಮಾದಲ್ಲಿ ಸಿಮ್ರನ್ ಹೆಸರಿನ ಪಾತ್ರವನ್ನು ಅವರು ಮಾಡಿದರು. ಆ ಬಳಿಕ ‘ಫ್ಯಾಷನ್’ ಸಿನಿಮಾ ಮಾಡಿ ಅವರು ಮತ್ತಷ್ಟು ಗಮನ ಸೆಳೆದರು.
ನಂತರ ಕಂಗನಾ ಅವರು ಸಾಲು ಸಾಲು ಚಿತ್ರಗಳನ್ನು ಮಾಡಿದರು. ದಿನ ಕಳೆದಂತೆ ಅವರ ಆಲೋಚನೆ ಬದಲಾಯಿತು. ಚಿತ್ರರಂಗದಲ್ಲಿ ನೆಪೋಟಿಸಂ ಇದೆ, ನನ್ನನ್ನು ತುಳಿಯುತ್ತಿದ್ದಾರೆ ಎಂದೆಲ್ಲ ಹೇಳುತ್ತಾ ಬಂದರು. ಕಂಗನಾ 19 ವರ್ಷಗಳ ವೃತ್ತಿ ಜೀವನದಿಂದ ಸಾಕಷ್ಟು ಗಳಿಸಿದ್ದಾರೆ. ಅವರ ಆಸ್ತಿ 91 ಕೋಟಿ ರೂಪಾಯಿ ಅಷ್ಟಿದೆ.
ಅವರು 2022-23ನೇ ಅವಧಿಯಲ್ಲಿ ಕೇವಲ 4 ಕೋಟಿ ರೂಪಾಯಿ ಗಳಿಕೆ ಮಾಡಿದ್ದಾರೆ. 2021-22ರಲ್ಲಿ 12 ಕೋಟಿ ರೂಪಾಯಿ, 2020-21ರಲ್ಲಿ 12 ಕೋಟಿ ರೂಪಾಯಿ, 2019-20ರಲ್ಲಿ ಅವರು 10 ಕೋಟಿ ರೂಪಾಯಿ ಗಳಿಕೆ ಮಾಡಿದ್ದಾರೆ. ಅವರ ಇನ್ಕಮ್ ಇತ್ತೀಚಿಗಿನ ವರ್ಷಗಳಲ್ಲಿ ಕಡಿಮೆ ಆಗಿದೆ.
ಇದನ್ನೂ ಓದಿ:ಹೋಟೆಲ್ ಉದ್ಯಮಕ್ಕೆ ಕಾಲಿಟ್ಟಿದ ಕಂಗನಾ ರನೌತ್, ಸಿನಿಮಾದಲ್ಲಿ ಲಾಸ್ ಕಾರಣವೇ?
ಕಂಗನಾ ಅವರಿಗೆ ಕಾರುಗಳ ಬಗ್ಗೆ ಹೆಚ್ಚು ಆಸಕ್ತಿ ಇಲ್ಲ. ಹೀಗಾಗಿ, ಅವರು ಕೇವಲ ಓಡಾಟಕ್ಕೆ ಮಾತ್ರ ಐಷಾರಾಮಿ ಕಾರನ್ನು ಬಳಕೆ ಮಾಡಿಕೊಳ್ಳುತ್ತಾರೆ. ಕಂಗನಾ ಅವರು ಸಂಸದೆ ಆಗಿರುವುದರಿಂದ ಜನ ಸಾಮಾನ್ಯರಿಗೂ ರೀಚ್ ಆಗುತ್ತಾ ಇದ್ದಾರೆ.
ತಾವು ರಾಜಕೀಯದಲ್ಲಿ ಗೆಲುವು ಕಂಡರೆ ಸಿನಿಮಾದಿಂದ ದೂರವೇ ಇರೋದಾಗಿ ಅವರು ಹೇಳಿದ್ದರು. ಹೀಗಿರುವಾಗಲೇ ಅವರು ಹೊಸ ಸಿನಿಮಾ ಮಾಡಿಲ್ಲ. ಇದು ಸಾಕಷ್ಟು ಅನುಮಾನ ಮೂಡಿಸಿದೆ. ಅವರು ಸಿನಿಮಾದಿಂದ ದೂರವೇ ಆದರೆ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಅಲ್ಲದೆ, ಅವರ ವಿವಾಹದ ಬಗ್ಗೆಯೂ ಅಧಿಕೃತ ಘೋಷಣೆ ಆಗಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ