ಕರ್ನಾಟಕ ಬಂದ್; ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ: ಸಾರಾ ಗೋವಿಂದು
ಹನಿ ಟ್ರ್ಯಾಪ್ ಪ್ರಕರಣವನ್ನೂ ಪ್ರಸ್ತಾಪಿಸಿದ ಸಾರಾ ಗೋವಿಂದು ಅದನ್ನು ಮಾಡುವವರಿಗೆ ಮತ್ತು ಅದನ್ನೇ ಮುಂದಿಟ್ಟುಕೊಂಡು ಸದನದಲ್ಲಿ ಗಲಾಟೆ ಮಾಡುವವರಿಗೆ ನಾಚಿಕೆ ಇಲ್ಲ, ಎಲ್ಲರಿಗೂ ಅಧಿಕಾರದ ತೆವಲಿನ ಚಿಂತೆ, ಎಂಇಎಸ್ಅನ್ನು ನಿಷೇಧಿಸುತ್ತೇವೆ ಮತ್ತು ಮಹಾದಾಯಿ ಯೋಜನೆ ಜಾರಿಗೆ ತರಲು ಸರ್ಕಾರ ಗಡುವು ನೀಡಲಿ, ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಲಿ, ನಾಲ್ಕು ಜಿಲ್ಲೆಗಳ ಜನ ಕುಡಿಯುವ ನೀರಿಗಾಗಿ ಒದ್ದಾಡುತ್ತಿದ್ದಾರೆ ಎಂದು ಹೇಳಿದರು.
ಬೆಂಗಳೂರು, 22 ಮಾರ್ಚ್: ಕನ್ನಡ ಭಾಷೆ, ನೆಲ ಮತ್ತು ಜಲದ ಪರವಾಗಿ ನಾವು ನಿನ್ನೆ ಮೊನ್ನೆಯಿಂದ ಹೋರಾಟ ಮಾಡುತ್ತಿಲ್ಲ, ನಮ್ಮ ನಾಯಕರಾದ ವಾಟಾಳ್ ನಾಗರಾಜ್ (Vatal Nagaraj) ಅವರು 60 ವರ್ಷಗಳಿಂದ ಹೋರಾಡುತ್ತಿದ್ದರೆ ತಾನು 40 ವರ್ಷಗಳಿಂದ ಹೋರಾಟ ಮಾಡುತ್ತಿರುವುದಾಗಿ ಕನ್ನಡ ಪರ ಹೋರಾಟಗಾರ ಸಾರಾ ಗೋವಿಂದು ಹೇಳಿದರು. ಆದರೆ ಕರ್ನಾಟಕ ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ, ಇಂಥ ಪರಿಸ್ಥಿತಿ ಹಿಂದೆ ಯಾವತ್ತೂ ಉದ್ಭವಿಸಿರಲಿಲ್ಲ, ನಮ್ಮ ನಾಯಕರನ್ನು ಪೊಲೀಸರು ಬಂಧಿಸುತ್ತಿದ್ದಾರೆ, ಪಾಪ ಅವರಾದರೂ ಏನು ಮಾಡಿಯಾರು? ಸರ್ಕಾರದ ಆದೇಶವನ್ನು ಪಾಲಿಸುತ್ತಿದ್ದಾರೆ ಎಂದು ಗೋವಿಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಡಿಕೆಶಿ ಹೇಳಿಕೆಗೆ ಸಾರಾ ಗೋವಿಂದು ಉತ್ತರ