AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AI ಆಧಾರಿತ ಆಲ್ಗರಿದಂ ಬಳಸಿ ಸಂಗಾತಿ ಆಯ್ಕೆ, ರಾಜಕೀಯ ನಾಯಕರಿಗೆ ವೋಟು; ಏನ್ ಸ್ವಾಮಿ ಇದೆಲ್ಲಾ?

ಆರ್ಟಿಫಿಷಿಯಲ್ ಆಧಾರಿತವಾದ ಆಲ್ಗರಿದಂಗಳು ನಮ್ಮ ತೀರ್ಮಾನದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬ ಬಗ್ಗೆ ಸಂಶೋಧನೆಯೊಂದು ಮಹತ್ತರವಾದ ಸಂಗತಿಯನ್ನು ಹೊರಹಾಕಿದೆ.

AI ಆಧಾರಿತ ಆಲ್ಗರಿದಂ ಬಳಸಿ ಸಂಗಾತಿ ಆಯ್ಕೆ, ರಾಜಕೀಯ ನಾಯಕರಿಗೆ ವೋಟು; ಏನ್ ಸ್ವಾಮಿ ಇದೆಲ್ಲಾ?
ಪ್ರಾತಿನಿಧಿಕ ಚಿತ್ರ
Srinivas Mata
|

Updated on: Apr 27, 2021 | 10:12 PM

Share

ಆರ್ಟಿಫಿಷಿಯಲ್ ಇಂಟೆಲಿಜಿನ್ಸ್ (ಕೃತಕ ಬುದ್ಧಿಮತ್ತೆ) ಆಧಾರಿತವಾದ ಆಲ್ಗರಿದಂಗಳು ಏನೇನು ಮಾಡಬಹುದು ಎಂಬ ಅಂದಾಜು ಮಾಡಲು ನಿಮಗೇನಾದರೂ ಸಾಧ್ಯವಾ? ಹಾಗೇ ಒಂದು ಸಲ ಟ್ರೈ ಕೊಟ್ಟು ನೋಡಿ, ಪರವಾಗಿಲ್ಲ. ಓಕೆ, ನಿಮಗೆ ಗೊತ್ತಾಗ್ತಿಲ್ಲ ಅಥವಾ ಸ್ವಲ್ಪ ಸ್ವಲ್ಪ ಅಂದಾಜು ಮಾಡುತ್ತಿದ್ದೀರಿ ಅಂದುಕೊಳ್ಳೋಣ. ನಿಮಗೆ ಖಂಡಿತಾ ಅಚ್ಚರಿ ಎನಿಸುತ್ತದೆ: ಯಾವುದೋ ಒಂದು ರಾಜಕೀಯ ಪಕ್ಷದ ಅಭ್ಯರ್ಥಿಯನ್ನು ನೀವು ಆಯ್ಕೆ ಮಾಡಿಕೊಳ್ಳುವಂತೆ ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಧಾರಿತ ಆಲ್ಗರಿದಂ ಮಾಡಬಹುದು ಅಥವಾ ನಿಮ್ಮ ಈಗಿನ ಸಂಗಾತಿಯನ್ನು ಬಿಟ್ಟು, ಮತ್ತೊಬ್ಬರನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಡಬಲ್ಲದು ಎಂದಿದ್ದಾರೆ ಸಂಶೋಧಕರು.

ಆಲ್ಗರಿದಂಗಳು ಅಂದರೆ, ಕಂಪ್ಯೂಟರ್​ಗಳಲ್ಲಿ ಅದಾಗಲೇ ಪ್ರೋಗ್ರಾಂ ಮಾಡಿಟ್ಟಿರುವಂಥದ್ದು. ಇದನ್ನು ಬೇಕಾದರೆ ನೀವು ಊಟದ ರೆಸಿಪಿಗೆ ಹೋಲಿಸಬಹುದು. ಇಬ್ಬರಿಗೆ ಬೇಕಾಗುವಷ್ಟು ಫ್ರೈಡ್​ರೈಸ್ ಬೇಕು ಎಂದು ಕೊಟ್ಟ ತಕ್ಷಣ, ಇಂಥಿಂಥ ಪದಾರ್ಥಗಳು ಎಂದು ಕಂಪ್ಯೂಟರ್​ನಲ್ಲಿ ತೋರಿಸುವಂತೆ ಮುಂಚೆಯೇ ಮಾಡಿಟ್ಟುಬಿಟ್ಟಿದ್ದರೆ ಅದು ಆಲ್ಗರಿದಂ. ಬೇಕಾದಷ್ಟು ಡೇಟಾಗಳನ್ನು ಒಟ್ಟುಹಾಕಿಕೊಂಡು, ಆಲ್ಗರಿದಂ ಸಿದ್ಧ ಮಾಡಲಾಗುತ್ತದೆ. ​ಇಬ್ಬರಿಗೆ ಅಂತ ಕೊಟ್ಟಂತೆಯೇ ನಾಲ್ಕು, ಹತ್ತು, ಇಪ್ಪತ್ತು, ಐವತ್ತು… ಹೀಗೆ ಸಂಖ್ಯೆ ಹೆಚ್ಚಿದಂತೆ ಅದಕ್ಕೆ ತಕ್ಕಂತೆ ಪದಾರ್ಥಗಳ ಮಾಹಿತಿಯಲ್ಲೂ ಬದಲಾವಣೆ ಮಾಡಿ, ತೋರಿಸುತ್ತದೆ.

ಆತಂಕಕಾರಿ ಬೆಳವಣಿಗೆ ಶಿಫಾರಸು ಆಲ್ಗರಿದಂಗಳನ್ನು ಎಲ್ಲರೂ ಎಲ್ಲಕ್ಕೂ ಬಳಸುತ್ತಿರುವುದು ನಮಗೆ ಚಿಂತೆಯಾಗಿದೆ. ಆದರೆ ಈ ಶಿಫಾರಸಿನ ಆಲ್ಗರಿದಂಗಳು ಎಷ್ಟು ಪರಿಣಾಮಕಾರಿ ಎಂಬುದು ನಮಗೆ ಮಾಹಿತಿ ಇಲ್ಲ ಎಂದು ಸ್ಪೇನ್ ವಿ.ವಿ.ಯ ಹೆಲೆನಾ ಮಟ್ಯುಟೆ ಹೇಳಿದ್ದಾರೆ. ಆಕೆ ತಮ್ಮ ಸಹೋದ್ಯೋಗಿ ಜತೆಗೂಡಿ ಈ ಬಗ್ಗೆ ತನಿಖೆ ಕೈಗೊಂಡಿದ್ದರು. ಈ ಸಂಶೋಧಕರು ಸರಣಿಯಾಗಿ ನಾಲ್ಕು ಪ್ರಯೋಗಗಳನ್ನು ಮಾಡಿದ್ದರು. ಈ ಪ್ರಯೋಗದಲ್ಲಿ ಭಾಗಿ ಆಗಿದ್ದವರು ಹೇಳಿದ ಪ್ರಕಾರ, ಆಲ್ಗರಿದಂ ಜತೆ ಸಂವಾದ ಮಾಡುತ್ತಿದ್ದು, ತಮ್ಮ ವ್ಯಕ್ತಿತ್ವದ ಬಗ್ಗೆ ಅದು ತೀರ್ಮಾನ ಕೈಗೊಳ್ಳುತ್ತದೆ ಎಂದಿದ್ದಾರೆ.

ವಾಸ್ತವದಲ್ಲಿ ಆಲ್ಗರಿದಂಗಳು ಅದನ್ನು ಮಾಡಿಲ್ಲ: ಜನರು ನೀಡುವ ಮಾಹಿತಿಯನ್ನು ಗಣನೆಗೆ ತೆಗೆದುಕೊಳ್ಳದೆ ತನ್ನಷ್ಟಕ್ಕೆ ತಾನು ಅಣಕು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದೆ. ಈ ಪ್ರಯೋಗದಲ್ಲಿ ಭಾಗಿಯಾದವರು ಅಣಕು ಆಲ್ಗರಿದಂ ಪ್ರಶ್ನೆಗಳಿಗೆ ಉತ್ತರಿಸಿದ ಮೇಲೆ ಅವರಿಗೆ ಸೂಕ್ತವಾದ ಸಂಗಾತಿಯ ಫೋಟೋವನ್ನು ಮುಂದಿಟ್ಟಿದೆ. ಅವರ ಜತೆಗೆ ಡೇಟ್ ಮಾಡಬಹುದು ಅಥವಾ ಇಂಥ ನಾಯಕ ಅಥವಾ ನಾಯಕಿಗೆ ನೀವು ಮತ ಹಾಕಬಹುದು ಎಂಬ ಆಯ್ಕೆಯನ್ನು ಮುಂದಿಟ್ಟಿದೆ. ಆ “ರಾಜಕಾರಣಿಗಳ” ಫೋಟೋವಂತೂ ಈ ಪ್ರಯೋಗದಲ್ಲಿ ಭಾಗಿಯಾಗಿದ್ದವರಿಗೆ ಪರಿಚಯವೇ ಇಲ್ಲದ್ದಾಗಿತ್ತು ಎಂದು ಮಾಹಿತಿ ನೀಡಲಾಗಿದೆ.

218ರಿಂದ 441 ಮಂದಿ ತನಕ ಆಯಾ ಪ್ರಯೋಗಕ್ಕೆ ತಕ್ಕಂತೆ ಆಯ್ಕೆ ಕೆಲವು ಸಲ ಸಂಶೋಧಕರು, ಅಣಕು ಆಲ್ಗರಿದಂ ಬಳಸಿಕೊಂಡು, ನಿರ್ದಿಷ್ಟ ಬಳಕೆದಾರರು ಅದೇ ಫೋಟೋಗ್ರಾಫ್ ಆರಿಸಿಕೊಳ್ಳುವಂತೆ ಪ್ರಭಾವಿಸಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳುವುದಾದರೆ, ಉದಾಹರಣೆಗೆ, ಬಳಕೆದಾರರು ಮತ್ತು ಸಂಗಾತಿ ಅಥವಾ ರಾಜಕೀಯ ನಾಯಕರನ್ನು ಶೇ 90ರಷ್ಟು ಹೊಂದಾಣಿಕೆ ಆಗುವಂತೆ ಕಂಡುಹಿಡಿದಿದೆ. ಇತರ ಪ್ರಕರಣಗಳಲ್ಲಿ ಆಲ್ಗರಿದಂ ಒಂದೇ ಫೊಟೋವನ್ನು ಪದೇಪದೇ ತೋರಿಸಿದೆ. ಅಧ್ಯಯನದಲ್ಲಿ ಪಾಲ್ಗೊಂಡಿದ್ದವರನ್ನು ಸ್ಪ್ಯಾನಿಷ್ ಭಾಷೆ ಟ್ವಿಟ್ಟರ್ ಮತ್ತು ಆನ್​ಲೈನ್ ಪ್ಲಾಟ್​ಫಾರ್ಮ್ Prolificನಿಂದ ಹೆಕ್ಕಲಾಗಿದೆ. 218ರಿಂದ 441 ಮಂದಿ ತನಕ ಆಯಾ ಪ್ರಯೋಗಕ್ಕೆ ತಕ್ಕಂತೆ ಆರಿಸಿಕೊಳ್ಳಲಾಗಿದೆ.

ನೀವು ಯಾವ ರಾಜಕೀಯ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬ ಪ್ರಶ್ನೆಯನ್ನು ಕೇಳಿದಾಗ, ಅಣಕು ಆಲ್ಗರಿದಂನಲ್ಲಿ ಅವರಿಗೆ ತೋರಿಸಲಾದ ಫೋಟೋಗಳನ್ನೇ ಆರಿಸಿಕೊಂಡಿದ್ದಾರೆ. ಇನ್ನು ಸೂಚ್ಯವಾಗಿ ತಿಳಿಸಿದ ಸಂಗಾತಿ ಜತೆಗೇ ಡೇಟ್ ಮಾಡಲು ಬಯಸುವುದಾಗಿ ಹೇಳಿದ್ದಾರೆ. ರಾಜಕಾರಣಿಗಳ ವಿಚಾರಕ್ಕೆ ಬಂದಾಗ ಸ್ಪಷ್ಟವಾದ ಆಲ್ಗರಿದಂ ಬಳಸಿದೆವು. ಏಕೆಂದರೆ, ಅಲ್ಲಿ ಭಾವನಾತ್ಮಕ ಸಂಗತಿಗಳು ಕೆಲಸ ಮಾಡುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಇನ್ನು ಡೇಟಿಂಗ್ ಎಂಬ ಹೃದಯದ ವಿಷಯಕ್ಕೆ ಬಂದಾಗ, ನಾವು ಆಲ್ಗರಿದಮಿಕ್ ಶಿಫಾರಸುಗಳನ್ನು ಹೆಚ್ಚೆಚ್ಚು ಪ್ರಶ್ನೆ ಮಾಡುತ್ತೇವೆ ಎಂದಿದ್ದಾರೆ.

ಈ ಹಿಂದೆಂದೂ ಕಾಣದಂಥ ಅವಕಾಶ ದೊಡ್ಡ ಮಟ್ಟದ ಡೇಟಾ ಹಾಗೂ ಬಳಕೆದಾರರ ಪ್ರಮಾಣವು ಈ ಹಿಂದೆಂದೂ ಕಾಣದಂಥ ಅವಕಾಶವನ್ನು ಖಾಸಗಿ ಕಾರ್ಪೊರೇಷನ್​ಗಳಿಗೆ ನೀಡುತ್ತಿವೆ. ಆ ಮೂಲಕವಾಗಿ ಮನವೊಲಿಸುವ ಸಾಮರ್ಥ್ಯದ ಪರೀಕ್ಷೆ ಮತ್ತು ಅದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿದೆ ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಎಲ್ಲಾ ಮೆಕ್​ಫೆರ್ಸನ್ ಹೇಳಿದ್ದಾರೆ.

ಫೇಸ್​ಬುಕ್ ಮತ್ತು ಗೂಗಲ್​ನಂಥ ಪ್ಲಾಟ್​ಫಾರ್ಮ್​ಗಳು ಅದರ ಸ್ವಂತ ಆಲ್ಗರಿದಂನಲ್ಲಿ ಹೆಚ್ಚು ಪಾರದರ್ಶಕ ಆಗಿರಬೇಕು ಎಂದು ಕರೆ ನೀಡುತ್ತಿರುವುದಕ್ಕೆ ಈ ಅಧ್ಯಯನವು ಇನ್ನಷ್ಟು ಪುಷ್ಟಿ ನೀಡುತ್ತದೆ ಎಂದು ಪಶ್ಚಿಮ ಇಂಗ್ಲೆಂಡ್​ ವಿ.ವಿ.ಯ ಸ್ಟೀವನ್ ಬಕ್ಲೆ ಹೇಳಿದ್ದಾರೆ. ಒಂದು ವೇಳೆ ಸಾರ್ವಜನಿಕರ ಮುಂದೆ ಪಾರದರ್ಶಕವಾಗಿ ಇರುವುದಕ್ಕೆ ಸಾಧ್ಯವಿರದಿದ್ದಲ್ಲಿ ಯಾರು ಈ ಬಗ್ಗೆ ಸಂಶೋಧನೆಯಲ್ಲಿ ತೊಡಗಿದ್ದಾರೋ, ಅಂಥವರಿಗೆ ಆಲ್ಗರಿದಂ ಪ್ರತಿ ದಿನ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯಲು ಗೂಗಲ್, ಫೇಸ್​ಬುಕ್​ನಂಥ ಪ್ಲಾಟ್​ಫಾರ್ಮ್​ಗಳು ಪಾರದರ್ಶಕವಾಗಿ ಇರಬೇಕು ಎಂದಿದ್ದಾರೆ.

ಇದನ್ನೂ ಓದಿ: 13 ವರ್ಷದ ಒಳಗಿನ ಮಕ್ಕಳು ಕೂಡ ಇನ್​ಸ್ಟಾಗ್ರಾಂ ಖಾತೆ ತೆರೆಯಬಹುದು.. ಫೇಸ್​ಬುಕ್​ನಿಂದ ಹೊಸ ಆ್ಯಪ್ ಲಾಂಚ್ ಸಾಧ್ಯತೆ

(Study revealed how AI based algorithms influence on selection of dating partner and political leaders)

ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ