AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಬೆಲ್ ಬಿಜೆಪಿ ಶಾಸಕರ ಗೋಕಾಕ್ ಮತ್ತು ದಾವಣಗೆರೆ ಭೇಟಿ ರಾಜಕೀಯ ಉದ್ದೇಶಗಳಿಗಲ್ಲ: ಬಿಪಿ ಹರೀಶ್

ರೆಬೆಲ್ ಬಿಜೆಪಿ ಶಾಸಕರ ಗೋಕಾಕ್ ಮತ್ತು ದಾವಣಗೆರೆ ಭೇಟಿ ರಾಜಕೀಯ ಉದ್ದೇಶಗಳಿಗಲ್ಲ: ಬಿಪಿ ಹರೀಶ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 08, 2025 | 12:50 PM

Share

ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಹರೀಶ್ ಇವತ್ತು ಮಾಜಿ ಕೇಂದ್ರ ಸಚಿವ ಜಿಎಂ ಸಿದ್ದೇಶ್ವರ ಅವರ ಹುಟ್ಟುಹಬ್ಬದ ಕಾರಣ ಅವರಿಗೆ ವಿಶ್ ಮಾಡಲು ದಾವಣಗೆರೆಗೆ ಬಂದಿರುವುದಾಗಿ ಹೇಳಿದರು. ನಿನ್ನೆ ಲಖನ್ ಜಾರಕಿಹೊಳಿ ಮನೆಯಲ್ಲಿ ಬಿಜೆಪಿ ನಾಯಕರು ರಾಜಕೀಯದ ಬಗ್ಗೆ ಮಾತಾಡಿಲ್ಲ ಮತ್ತು ಸಿದ್ದೇಶ್ವರ ಮನೆಯಲ್ಲೂ ರಾಜಕೀಯ ಚರ್ಚೆ ಮಾಡಲ್ಲ, ಅವರಿಗೆ ವಿಶ್ ಮಾಡಿ ಬರ್ತ್​ಡೇಯ ಇತರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇವೆ ಎಂದರು.

ದಾವಣಗೆರೆ, ಜುಲೈ 8: ಬಿಜೆಪಿ ರೆಬೆಲ್ ಶಾಸಕರು ಮತ್ತು ನಾಯಕರು ಗೋಕಾಕ ಮತ್ತು ದಾವಣಗೆರೆಗೆ ಭೇಟಿ ನೀಡಿರುವುದು ರಾಜಕೀಯ ಉದ್ದೇಶಗಳಿಗಲ್ಲವೇ? ಹರಿಹರದ ಶಾಸಕ ಬಿಪಿ ಹರೀಶ್ ಹೇಳುವ ಪ್ರಕಾರ ಬಿಜೆಪಿ ನಾಯಕರ ತಂಡ ಗೋಕಾಕ್​ಗೆ ಹೋಗಿದ್ದು ಅಲ್ಲಿ 5 ವರ್ಷಗಳಿಗೊಮ್ಮೆ ನಡೆಯುವ ಲಕ್ಷ್ಮಿ ದೇವತೆ ಅಥವಾ ಗೋಕಾಕ ಭಂಡಾರ ಜಾತ್ರೆಯಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆಯಲು. ಲಕ್ಷ್ಮಿ ದೇವಿ ಜಾತ್ರೆಯು ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುತ್ತದೆ, ಆದರೆ 2020ರಲ್ಲಿ ಕೋವಿಡ್ ಕಾರಣಗಳಿಂದಾಗಿ ಜಾತ್ರೆ ನಡೆದಿರಲಿಲ್ಲ. ಸ್ಥಳೀಯ ಶಾಸಕ ರಮೇಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಜಾತ್ರೆ ನಡೆಯುತ್ತದೆ ಎಂದು ಹೇಳುವ ಹರೀಶ್, ತಮ್ಮ ತಂಡ ಯಾವುದೇ ಕಾರಣಕ್ಕೆ ಗೋಕಾಕ್ ಅಥವಾ ದಾವಣಗೆರೆಗೆ ಬಂದರೂ ಮಾಧ್ಯಮಗಳಲ್ಲಿ ಪ್ರಚಾರ ಸಿಗುತ್ತಿದೆ, ನಮಗೆ ಅದರ ಅವಶ್ಯಕತೆಯಿದೆ ಎಂದರು.

ಇದನ್ನು ಓದಿ:    ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಪಕ್ಷ ಬಿಟ್ಟು ಹೋಗುವುದಾದರೆ ಹೋಗಿ, ಸಂಸದ ಸುಧಾಕರ್​ಗೆ ಇದೆಂಥಾ ಮಾತು..!

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ