ನಿನ್ನೆ ಬೆಳಗಾವಿಯಲ್ಲಿದ್ದ ಬಿಜೆಪಿ ರೆಬೆಲ್ ನಾಯಕರು ಇಂದು ದಾವಣಗೆರೆಯಲ್ಲಿ ಬೆಣ್ಣೆದೋಸೆ ಸವಿಯುತ್ತಿದ್ದರು
ರೆಬೆಲ್ ಬಿಜೆಪಿ ನಾಯಕ ಕುಮಾರ ಬಂಗಾರಪ್ಪ ದಾವಣಗೆರೆಯಲ್ಲಿ ಹೆಚ್ಚು ಜನಪ್ರಿಯರು ಅಂತ ಕಾಣುತ್ತೆ. ಹೋಟೆಲ್ಗೆ ಬಂದ ಜನ ಅವರೊಂದಿಗೆ ಕೈ ಕುಲುಕುವುದನ್ನು ಮಾತಾಡುವುದನ್ನು ಮಾಡಿದರು. ದಾವಣಗರೆರೆಯ ಮಾಜಿ ಕೇಂದ್ರ ಸಚಿವ ಜಿಎಂ ಸಿದ್ದೇಶ್ವರ ಅವರ ಮನೆಯಲ್ಲಿ ರೆಬೆಲ್ ನಾಯಕರು ಇಂದು ಸಭೆ ಸೇರಬಹುದು. ಹಿರಿಯರಾಗಿರುವ ಸಿದ್ದೇಶ್ವರ ಅವರೂ ರೆಬೆಲ್ ಗುಂಪಿನಲ್ಲಿ ಗುರುತಿಸಿಕೊಳ್ಳುತ್ತಾರೆ.
ಬೆಂಗಳೂರು, ಜುಲೈ 8: ದೇಶ ಸುತ್ತು, ಕೋಶ ಓದು ಅಂತ ನಮ್ಮ ಹಿರಿಯರು ಹೇಳಿದ್ದಾರೆ. ಬಿಜೆಪಿಯ ರೆಬೆಲ್ ಶಾಸಕರನ್ನು ನೋಡುತ್ತಿದ್ದರೆ ಈ ಮಾತು ನೆನಪಿಗೆ ಬರುತ್ತದೆ. ನಿನ್ನೆ ಬೆಳಗಾವಿಯ ಗೋಕಾಕ್ನಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ (Lakhan Jarkiholi) ಮನೆಯಲ್ಲಿ ಸಭೆ ನಡೆಸಿದ್ದ ಬಿಜೆಪಿ ರೆಬೆಲ್ ಶಾಸಕರು ಮತ್ತು ನಾಯಕರು ಇವತ್ತು ದಾವಣಗೆರೆಯ ಹೋಟೆಲೊಂದರಲ್ಲಿ ಬೆಣ್ಣೆದೋಸೆ ಸವಿಯುತ್ತ ಕುಳಿತಿದ್ದರು. ದೇಶವಂತೂ ಸುತ್ತುತ್ತಿದ್ದಾರೆ ಕೋಶ ಓದುವುದು ಗೊತ್ತಿಲ್ಲ ಮಾರಾಯ್ರೇ. ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಬಿವಿ ನಾಯಕ್, ಬಿಪಿ ಹರೀಶ್ ಮತ್ತು ಕೆಲ ಸ್ಥಳೀಯ ಬಿಜೆಪಿ ಮುಖಂಡರನ್ನು ಇಲ್ಲಿ ನೋಡಬಹುದು. ದೋಸೆ ತಿನ್ನಲು ಹೋಟೇಲ್ಗೆ ಬಂದವರು ರೆಬೆಲ್ ಬಿಜೆಪಿ ನಾಯಕರೊಂದಿಗೆ ತಮ್ಮ ಪರಿಚಯ ಹೇಳಿಕೊಂಡು ಖುಷಿಪಟ್ಟರು.
ಇದನ್ನು ಓದಿ: ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ: ಶಿಸ್ತು ಸಮಿತಿ ಖಡಕ್ ಸಂದೇಶ, ಕ್ರಮಕ್ಕೆ ಕೂಡಿಬಂತು ಕಾಲ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

