ರಾಜ್ಯದ ಹತ್ತು ಮಹಾನಗರ ಪಾಲಿಕೆ ನೌಕರರಿಂದ ವಿವಿಧ ಬೇಡಿಕೆ ಆಗ್ರಹಿಸಿ ಇವತ್ತು ಬೆಂಗಳೂರಲ್ಲಿ ಪ್ರತಿಭಟನೆ
ಬಿಬಿಎಂಪಿ ನೇತೃತ್ವದಲ್ಲಿ ನಡೆಯುವ ಧರಣಿಯಲ್ಲಿ ಮೈಸೂರು ಮಹಾನಗರ ಪಾಲಿಕೆಯಲ್ಲದೆ, ಹುಬ್ಬಳ್ಳಿ-ಧಾರವಾಡ, ತುಮಕೂರು, ಕಲಬುರಗಿ, ಬಳ್ಳಾರಿ, ಮಂಗಳೂರು, ಶಿವಮೊಗ್ಗ, ದಾವಣಗೆರೆ, ಬೆಳಗಾವಿ, ಮಂಗಳೂರು ಪಾಲಿಕೆಗಳು ಪಾಲ್ಗೊಳ್ಳುತ್ತಿವೆ. ಮೂಲಗಳ ಪ್ರಕಾರ ಬಿಬಿಎಂಪಿಯಲ್ಲಿ 6,000 ಹುದ್ದೆಗಳು ಖಾಲಿಯಿದ್ದು ಅವುಗಳ ಭರ್ತಿ ಮತ್ತು ಲಾಂಗ್ಸೇಫ್ ಹಾಜರಾತಿ ಪದ್ಧತಿ ಜಾರಿಗೊಳಿಸುವುದು ಸಹ ಪಾಲಿಕೆ ನೌಕರರ ಬೇಡಿಕೆಗಳಲ್ಲಿ ಸೇರಿವೆ.
ಮೈಸೂರು, ಜುಲೈ 8: ರಾಜ್ಯದ ಎಲ್ಲ ಹತ್ತು ಮಹಾನಗರ ಪಾಲಿಕೆಗಳ (Mahanagara Palike) ಅಧಿಕಾರಿಗಳು ಮತ್ತು ಸಿಬ್ಬಂದಿ ಇವತ್ತು ತಮ್ಮ ಹಲವಾರು ಬೇಡಿಕೆಗಳ ಜಾರಿಗೆ ಆಗ್ರಹಿಸಿ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಲು ಮೈಸೂರು ಪಾಲಿಕೆ ಅಧಿಕಾರಿವರ್ಗ ಮತ್ತು ಸಿಬ್ಬಂದಿ ನಗರದಿಂದ ಬೆಂಗಳೂರಿಗೆ ಹೊರಡಲಣಿಯಾಗಿದ್ದು ಒಂದಷ್ಟು ಅಧಿಕಾರಿಗಳು ನಮ್ಮ ಮೈಸೂರು ವರದಿಗಾರನೊಂದಿಗೆ ಮಾತಾಡಿ ಪ್ರತಿಭಟನೆಯ ಉದ್ದೇಶಗಳನ್ನು ಹೇಳಿದ್ದಾರೆ. ವೇತನ ಅನುದಾನದ ಬಗ್ಗೆ ನೌಕರರಲ್ಲಿ ತೀವ್ರ ಅಸಮಾಧಾನವಿದೆ. ವೇತನದ ಶೇಕಡ 20ರಷ್ಟನ್ನು ಪಾಲಿಕೆಯ ಆದಾಯದಲ್ಲಿ ಪಡೆದುಕೊಳ್ಳುವಂತೆ ಸರ್ಕಾರ ಹೇಳಿರುವುದು ಸರಿಯಲ್ಲ, ಪಾಲಿಕೆಗಳು ನಷ್ಟದಲ್ಲಿ ಸಾಗುತ್ತಿರುವುದರಿಂದ 1/5 ಭಾಗದಷ್ಟು ಸಂಬಳವನ್ನು ಹೊಂದಿಸಿಕೊಳ್ಳಲು ಸಾಧ್ಯವಾಗೋದಿಲ್ಲ, ಶತ ಪ್ರತಿಶತದಷ್ಟು ಸಂಬಳವನ್ನು ಸರ್ಕಾರವೇ ಭರಿಸಬೇಕು ಎಂದು ಅಧಿಕಾರಿ ಹೇಳುತ್ತಾರೆ.
ಇದನ್ನು ಓದಿ: ಮೈಶುಗರ್ ಶಾಲೆಯನ್ನು ಕಾಂಗ್ರೆಸ್ ಶಾಸಕರು ಯಾರಪ್ಪನ ಆಸ್ತಿ ಅಂದುಕೊಂಡಿದ್ದಾರೆ? ಹೆಚ್ ಡಿ ಕುಮಾರಸ್ವಾಮಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

