ಮೈಶುಗರ್ ಶಾಲೆಯನ್ನು ಕಾಂಗ್ರೆಸ್ ಶಾಸಕರು ಯಾರಪ್ಪನ ಆಸ್ತಿ ಅಂದುಕೊಂಡಿದ್ದಾರೆ? ಹೆಚ್ ಡಿ ಕುಮಾರಸ್ವಾಮಿ
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನೇತೃತ್ವದಲ್ಲಿ ನಡೆಯುವ ಕೆಡಿಪಿ ಸಭೆ ಮತ್ತು ಸಂಸದನ ನೇತೃತ್ವದಲ್ಲಿ ನಡೆಯುವ ದಿಶಾ ಮೀಟಿಂಗ್ಗಳು ರಾಜಕೀಯ ನಾಯಕರಿಗೆ ಪ್ರತಿಷ್ಠೆಯ ವಿಷಯಗಳಾಗಿವೆ. ಮಂಡ್ಯದಲ್ಲಿ ಮಾತಾಡಿದ ಕುಮಾರಸ್ವಾಮಿ, ಪ್ರತಿಷ್ಠೆ ಏನೂ ಇಲ್ಲ, ಕಾಂಗ್ರೆಸ್ ನಾಯಕರ ಆಹ್ವಾನ ತನಗೇನೂ ಬೇಕಿಲ್ಲ, ಮಂಡ್ಯದ ಜನತೆ ತನಗೆ ಜವಾಬ್ದಾರಿಯನ್ನು ನೀಡಿದ್ದಾರೆ, ತನ್ನ ಡ್ಯೂಟಿಯನ್ನು ತಾನು ಮಾಡುತ್ತಿರುವುದಾಗಿ ಹೇಳಿದರು.
ಮಂಡ್ಯ, ಜುಲೈ 4: ಮೈಶುಗರ್ ಶಾಲೆಯ ಮೇಲೆ ಖಾಸಗಿ ಶಿಕ್ಷಣ ಸಂಸ್ಥೆಗಳ (private educational institutions) ಕಣ್ಣು ಬಿದ್ದಿರುವುದನ್ನು ನಾವು ವರದಿ ಮಾಡಿದ್ದೇವೆ. ಶಾಲೆಯ ಅಭಿವೃದ್ಧಿಗೆ ಮಂಡ್ಯ ಸಂಸದ ಹೆಚ್ ಡಿ ಕುಮಾರಸ್ವಾಮಿ ₹ 25 ಕೋಟಿ ಕೊಡುವುದಾಗಿ ಹೇಳಿದ್ದರು. ಅವರು ಕೊಟ್ಟರೆ ಇಸಿದುಕೊಳ್ಳುತ್ತೇವೆ ಅಂತ ಮಂಡ್ಯ ಶಾಸಕ ರವಿ ಗಣಿಗ ಹೇಳಿದ್ದು ಸಂಸದನಿಗೆ ಸಿಟ್ಟು ತರಿಸಿದೆ. ಹಣ ತೆಗೆದುಕೊಂಡು ಅವರು ಶಾಲೆಯನ್ನು ಖಾಸಗಿಯವರಿಗೆ ಕೊಡುತ್ತಾರೆ, ಯಾರಪ್ಪನ ಆಸ್ತಿ ಅದು? ಅಲ್ಲಿರುವ ಜಮೀನು ಎಷ್ಟು ಬೆಲೆಬಾಳುತ್ತದೆ ಅಂತ ಕಾಂಗ್ರೆಸ್ ನವರಿಗೆ ಏನಾದರೂ ಗೊತ್ತಿದೆಯಾ? ಎಂದು ಕುಮಾರಸ್ವಾಮಿ ಕೋಪದಲ್ಲಿ ಪ್ರಶ್ನಿಸಿದರು. ಶಾಲೆಯ ವ್ಯವಸ್ಥಾಪಕ ಮಂಡಳಿಯಲ್ಲಿ ತಾನೂ ಒಬ್ಬ ಸದಸ್ಯ, ಕಾಂಗ್ರೆಸ್ ಶಾಸಕರು ಯಾರೂ ತನ್ನಲ್ಲಿಗೆ ಬಂದು ಮಾತಾಡಿಲ್ಲ, ಶಾಲೆಯ ಪುನರುಜ್ಜೀವಕ್ಕಾಗಿ ಜಿಲ್ಲಾಧಿಕಾರಿಗಳ ಜೊತೆ ತಾನು ಮಾತಾಡುತ್ತಿರುವುದಾಗಿ ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ಕೇಂದ್ರ ಸಚಿವ ಕುಮಾರಸ್ವಾಮಿ ಯೋಚನೆ ಮಾಡೋದು ಬಿಟ್ಟು ಕೆಲಸ ಮಾಡಲಿ: ರವಿ ಗಣಿಗ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?

