ಉದ್ಧಟತನ ಪ್ರದರ್ಶಿಸಿದಾಗ ಜಮೀರ್ ರಾಜೀನಾಮೆ ಅಂಗೀಕರಿಸಬೇಕೆಂದು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದೆ: ಕುಮಾರಸ್ವಾಮಿ
ಮಿನಿಸ್ಟ್ರು ಹೆಚ್ ಕೆ ಪಾಟೀಲರಿಗೆ ಕುಂಭಕರ್ಣ ನಿದ್ದೆಯಿಂದ ಈಗ ಎಚ್ಚರವಾದಂತಿದೆ. 2007 ರಿಂದ 2011 ರ ಅವಧಿಯಲ್ಲಿ ಅಕ್ರಮ ಗಣಿಗಾರಿಕೆಯಿಂದ ಒಂದೂವರೆ ಲಕ್ಷ ಕೋಟಿ ರೂ. ಗಳ ಅವ್ಯವಹಾರ ನಡೆದಿದೆ, ರಾಜಕಾರಣಿಗಳು ಮತ್ತು ಅಧಿಕಾರಿಗಳು ಒಂದು ಕೂಟವನ್ನು ರಚಿಸಿಕೊಂಡು ರಾಜ್ಯದ ಸಂಪತ್ತನ್ನು ಹಗಲು ದರೋಡೆ ಮಾಡಿದ್ದಾರೆ, ಎಂದು ಸಿಎಂಗೆ ಪತ್ರ ಬರೆದಿರುವ ಅವರು ಅದರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ದೆಹಲಿ, ಜೂನ್ 23: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಇಂದು ದೆಹಲಿಯಲ್ಲಿ ಸುದೀರ್ಘವಾದ ಮಾಧ್ಯಮ ಗೋಷ್ಠಿ ನಡೆಸಿ ಸಿದ್ದರಾಮಯ್ಯ ಸರಕಾರ ಮತ್ತು ಮಂತ್ರಿಗಳನ್ನು ಜಾಲಾಡಿದರು. ಕಂದಾಯ ಕಚೇರಿಯೊಂದಕ್ಕೆ ಅನಿರೀಕ್ಷಿತ ಭೇಟಿ ನೀಡುವ ಸಚಿವ ಕೃಷ್ಣ ಭೈರೇಗೌಡರು (revenue minister) ಲಂಚಗುಳಿತಕ್ಕಾಗಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಯಾವ್ಯಾವುದಕ್ಕೆ ಎಷ್ಟೆಷ್ಟು ರೇಟು ಅಂತ ಬೋರ್ಡ್ ಹಾಕಿಬಿಡಿ ಅನ್ನುತ್ತಾರೆ. ಭ್ರಷ್ಟಾಚಾರ ನಡೆದಿದೆಯೆಂದು ಗೊತ್ತಿದ್ದರೂ ಅವರು ಅಧಿಕಾರಿಗಳ ಮೇಲೆ ಕ್ರಮ ತಗೊಳ್ಳಲ್ಲ, ಅಧಿಕಾರಿಗಳು ಆ ಜಾಗಗಳಿಗೆ ಬರಲು ಎಷ್ಟೆಷ್ಟು ಕೊಟ್ಟಿದ್ದಾರೆ ಅನ್ನೋದು ಸಚಿವನಿಗೆ ಗೊತ್ತು ಎಂದು ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳುತ್ತಾರೆ. ತಾನು ಮುಖ್ಯಮಂತ್ರಿಯಾಗಿದಾಗ ತನ್ನನ್ನು ಉಪ ಮುಖ್ಯಮಂತ್ರಿ ಮಾಡಬೇಕೆಂದಿದ್ದರು ಎಂದು ಜಮೀರ್ ಅಹ್ಮದ್ ಹೇಳುತ್ತಾರೆ, ಅದರೆ ನಿಜಾಂಶವೇನೆಂದರೆ, ಅವರು ಉದ್ಧಟತನ ಪ್ರದರ್ಶಿಸಿದಾಗ ರಾಜೀನಾಮೆ ಅಂಗೀಕಾರ ಮಾಡಬೇಕೆಂದು ತಾನೇ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದು ಎಂದು ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ಕೇಂದ್ರ ಸಚಿವ ಕುಮಾರಸ್ವಾಮಿ ಯೋಚನೆ ಮಾಡೋದು ಬಿಟ್ಟು ಕೆಲಸ ಮಾಡಲಿ: ರವಿ ಗಣಿಗ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು

‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು

ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ

ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
