ಕೇಂದ್ರ ಸಚಿವ ಕುಮಾರಸ್ವಾಮಿ ಯೋಚನೆ ಮಾಡೋದು ಬಿಟ್ಟು ಕೆಲಸ ಮಾಡಲಿ: ರವಿ ಗಣಿಗ
ಕಾಂಗ್ರೆಸ್ ನವರು ಏನು ಕಿತ್ತಿ ಗುಡ್ಡೆಹಾಕಿದ್ದಾರೆ ಎಂದು ಕುಮರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ರವಿ ಗಣಿಗ, ಅವರು ಸರ್ಕಲ್ಗೆ ಬರಲಿ, ಏನು ಗುಡ್ಡೆ ಹಾಕಿದ್ದೀವಿ ಅನ್ನೋದನ್ನು ತೋರಿಸ್ತೇವೆ, ಗುಡ್ಡೆಗಳನ್ನು ಅವರು ಕೌಂಟ್ ಮಾಡ್ತಾ ಹೋಗಲಿ ಎಂದು ಹೇಳಿ, ತಮ್ಮ ಸರ್ಕಾರ ಸ್ಥಿರವಾಗಿದೆ, 2028ರಲ್ಲಿ ಮತ್ತು 2033ರಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಮಂಡ್ಯ, ಜೂನ್ 23: ಕೈಯಲ್ಲೇ ಅಸ್ತ್ರವನ್ನು ಹಿಡಿದು ಅದನ್ನು ಹುಡುಕುವ ರಾಜಕಾರಣಿ ದೇಶದಲ್ಲಿ ಯಾರಾದರೂ ಇದ್ದರೆ ಅದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಎಂದು ಮಂಡ್ಯದ ಕಾಂಗ್ರೆಸ್ ಶಾಸಕ ರವಿ ಗಣಿಗ ಹೇಳಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ತಾನು ಶಾಸಕನಾದ ಮೇಲೆ 2-3 ಸಾವಿರ ಉದ್ಯೋಗ ಸೃಷ್ಟಿ ಮಾಡಿದ್ದೇನೆ, ಹತ್ತಾರು ಮಾಲ್ಗಳು ಮಂಡ್ಯ ನಗರಕ್ಕೆ ಬಂದಿವೆ, ಉತ್ತಮ ಹೋಟೆಲ್ಗಳು ತಲೆಯೆತ್ತಿವೆ, ಇನ್ನೊಂದಾರು ತಿಂಗಳಲ್ಲಿ ಜವಳಿ ಪಾರ್ಕ್ಗೆ ಗುದ್ದಲಿ ಪೂಜೆ ಮಾಡಿಸುವವರಿದ್ದೇವೆ, ಅಮ್ಯೂಸ್ಮೆಂಟ್ ಪಾರ್ಕ್ ಮಾಡಿ ಅಲ್ಲೂ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ, ಇದನ್ನೆಲ್ಲ ಮಾಡೋದು ಬಿಟ್ಟು ಕುಮಾರಸ್ವಾಮಿ, ನಾನು ಯೋಚನೆ ಮಾಡುತ್ತಿದ್ದೇನೆ ಎನ್ನುತ್ತಾರೆ, ಅವರೊಬ್ಬ ಥಿಂಕಿಂಗ್ ಮಿನಿಸ್ಟರ್ ಎಂದು ಗಣಿಗ ಲೇವಡಿ ಮಾಡಿದರು.
ಇದನ್ನೂ ಓದಿ: ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲೇ ಅಸಮಾಧಾನದ ಹೊಗೆ: ಸತೀಶ್ ಜಾರಕಿಹೊಳಿ ವಿರುದ್ಧ ರವಿ ಗಣಿಗ ಆಕ್ಷೇಪ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ