ಶಿವಕುಮಾರ್ ಲೂಟಿ ಹೊಡೆದ ಹಣದಿಂದ ಬಟ್ಟೆ ಹೊಲಿಸಿಕೊಳ್ಳುವ ದಾರಿದ್ರ್ಯ ನನಗೆ ಬಂದಿಲ್ಲ: ಕುಮಾರಸ್ವಾಮಿ
ಕುಮಾರಸ್ವಾಮಿ ಮತ್ತು ಶಿವಕುಮಾರ್ ನಡುವೆ ಜಗಳ ನಡೆಯುತ್ತಿರುತ್ತದೆ, ಜಗಳ ನಿಂತರೆ ಮಾತ್ರ ಜನಕ್ಕೆ ಆಶ್ಚರ್ಯವಾದೀತು! ಡಿಕೆ ಸುರೇಶ್ ಬಮುಲ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಗ್ಗೆ ಕೇಳಿದಾಗ ಕುಮಾರಸ್ವಾಮಿ, ಅವರಲ್ಲಿ ಈಗ ಅಧಿಕಾರ ಇದೆ, ಯಾವ ಅಧ್ಯಕ್ಷಗಿರಿಯನ್ನು ಬೇಕಾದರೂ ಪಡೆದುಕೊಳ್ಳಬಲ್ಲರು, ಅದರ ವಿಷಯದಲ್ಲಿ ಮಾತಾಡಲು ಇದು ಸಮಯವಲ್ಲ, ಸೂಕ್ತ ಸಮಯದಲ್ಲಿ ಮಾತಾಡುವೆ ಎಂದರು.
ಬೆಂಗಳೂರು, ಜೂನ್ 20: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ 2028ರಲ್ಲಿ ಅಧಿಕಾರಕ್ಕೆ ಬರಲ್ಲ ಹಾಗೇನಾದರೂ ಆದರೆ ನಾನೇ ಅವರಿಗೆ ಬಟ್ಟೆ ಹೊಲಿಸಿ ಕೊಡ್ತೀನಿ ಅಂತ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಹೇಳಿರುವುದಕ್ಕೆ ಇಂದು ನಗರದಲ್ಲಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಅವರ ಪಾಪದ ಹಣದಿಂದ ಯಾರಿಗೆ ಬೇಕಿದೆ ಬಟ್ಟೆ? ನಾಡಿನ ಜನತೆ ತಮಗೆ ಬಟ್ಟೆ ಕೊಡುತ್ತಾರೆ ಎಂದರು. ಅವರಿಂದ ಬಟ್ಟೆ ಹೊಲಿಸಿಕೊಳ್ಳುವ ದಾರದ್ರ್ಯ ತನಗೆ ಬಂದಿಲ್ಲ, ಅವರಿಗೆ ದಾರಿದ್ರ್ಯ ಬಂದೊದಗಿದೆ, ಅವರಲ್ಲಿರೋದು ಪಾಪದ ಹಣ, ಅದರಿಂದ ಬಟ್ಟೆ ಹೊಲಿಸಿಕೊಳ್ಳುವ ಸ್ಥಿತಿ ರಾಜ್ಯದ ಜನ ತನಗೆ ನೀಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ನನ್ನ ಬಗ್ಗೆ ಅಸೂಯೆ ಪಡೋದ್ರಿಂದ ಕುಮಾರಸ್ವಾಮಿಗೆ ಖುಷಿ ಸಿಗೋದಾದರೆ ಬಹಳ ಸಂತೋಷ: ಡಿಕೆ ಶಿವಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ