ವಿರಾಜಪೇಟೆ: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ಸೊಂಡಿಲಿನಿಂದ ಎತ್ತಿ ರಕ್ಷಿಸಿದ ಕಾಡಾನೆ ಹಿಂಡು
ಕಾಡಾನೆ ಹಿಂಡು ರಸ್ತೆ ದಾಟುತ್ತಿದ್ದಾಗ ವಿದ್ಯುತ್ ಶಾಕ್ ತಗುಲಿ ಮರಿಯಾನೆ ಒಂದು ಬಿದ್ದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಗ್ರಾಮದ ಅಮ್ಮತ್ತಿ ಬಳಿ ಸಂಭವಿಸಿದೆ. ವಿದ್ಯುತ್ ಶಾಕ್ನಿಂದ ಕುಸಿದು ಬಿದ್ದ ಮರಿ ಆನೆಯನ್ನು ಸೊಂಡಿಲಿನಿಂದ ಎತ್ತಿದ ಇತರ ಆನೆಗಳು ರಕ್ಷಣೆ ಮಾಡಿ ಕರೆದೊಯ್ದಿವೆ. ವಿಡಿಯೋ ಇಲ್ಲಿದೆ ನೋಡಿ.
ಕೊಡಗು, ಜುಲೈ 8: ರಸ್ತೆ ದಾಟುತ್ತಿದ್ದ ಕಾಡಾನೆ ಹಿಂಡಿಗೆ ವಿದ್ಯುತ್ ಶಾಕ್ ತಗುಲಿದ್ದು, ಕುಸಿದು ಬಿದ್ದ ಮರಿ ಆನೆಯೊಂದನ್ನು ಇತರ ಆನೆಗಳು ಸೊಂಡಿಲಿನಿಂದ ಎತ್ತಿ ರಕ್ಷಣೆ ಮಾಡಿವೆ. ಈ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಗ್ರಾಮದ ಅಮ್ಮತ್ತಿ -ಕೊಂಡಂಗೇರಿ ರಸ್ತೆಯಲ್ಲಿ ಸಂಭವಿಸಿದೆ. ಕಾಡಾನೆ ಹಿಂಡು ರಸ್ತೆ ದಾಟುತ್ತಿದ್ದಾಗ ಮರವೊಂದು ಬಿದ್ದಿದೆ. ಇದರಿಂದಾಗಿ ವಿದ್ಯುತ್ ತಂತಿ ಬಿದ್ದು ಮರಿಯಾನೆ ವಿದ್ಯುದಾಘಾತದಿಂದ ನೆಲಕ್ಕೆ ಬಿದ್ದಿದೆ. ತಕ್ಷಣವೇ ಅದನ್ನು ಸೊಂಡಿಲಿನಿಂದ ಎತ್ತಿದ ಇತರ ಆನೆಗಳು ರಸ್ತೆ ದಾಟಿ ಮುಂದೆ ಹೋಗಿವೆ. ಅದೃಷ್ಟವಶಾತ್ ಅನಾಹುತ ಸಂಭವಿಸಿಲ್ಲ. ಕಾಡಾನೆ ಹಿಂಡು ರಸ್ತೆ ದಾಟುತ್ತಿರುವ ದೃಶ್ಯ ವಾಹನ ಸವಾರರ ಮೊಬೈಲ್ನಲ್ಲಿ ಸೆರೆಯಾಗಿದೆ.
