AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ಈ ಚಿತ್ರದಲ್ಲಿ ಅಡಗಿರುವ 16 ವೃತ್ತಗಳನ್ನು ನೀವು ಪತ್ತೆ ಹಚ್ಚಬಲ್ಲಿರಾ?

ದೃಷ್ಟಿ ತೀಕ್ಷ್ಣತೆ ಹಾಗೂ ಬುದ್ಧಿವಂತಿಕೆಗೆ ಸವಾಲೊಡ್ಡುವಂತಹ ಆಪ್ಟಿಕಲ್‌ ಇಲ್ಯೂಷಲ್‌ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ. ಕಣ್ಣಿಗೆ ಭ್ರಮೆಯನ್ನು ಉಂಟುಮಾಡುವ ಈ ಚಿತ್ರಗಳ ಉತ್ತರವನ್ನು ಹುಡುಕುವುದು ಸವಾಲಿನ ಕೆಲಸವೇ ಸರಿ. ಇಲ್ಲೊಂದು ಅಂತಹದ್ದೇ ಚಿತ್ರವೊಂದು ವೈರಲ್‌ ಆಗಿದ್ದು, ಇದರಲ್ಲಿ ಆಯತಗಳ ನಡುವೆ ಅಡಗಿರುವ 16 ವೃತ್ತಗಳನ್ನು ಪತ್ತೆ ಹಚ್ಚಲು ಸವಾಲನ್ನು ನೀಡಲಾಗಿದೆ.

Optical Illusion: ಈ ಚಿತ್ರದಲ್ಲಿ ಅಡಗಿರುವ 16 ವೃತ್ತಗಳನ್ನು ನೀವು ಪತ್ತೆ ಹಚ್ಚಬಲ್ಲಿರಾ?
ಆಪ್ಟಿಕಲ್‌ ಇಲ್ಯೂಷನ್‌Image Credit source: Social Media
ಮಾಲಾಶ್ರೀ ಅಂಚನ್​
|

Updated on: Jul 08, 2025 | 3:52 PM

Share

ಆಪ್ಟಿಕಲ್‌ ಇಲ್ಯೂಷನ್‌ನಂತಹ  (Optical Illusion) ಮೋಜಿನ ಒಗಟಿನ ಆಟಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಒಂದು ರೀತಿ ಭ್ರಮೆಯನ್ನು ಉಂಟು ಮಾಡುವ ಈ ಚಿತ್ರಗಳು ನಮ್ಮ ಕಣ್ಣು ಮತ್ತು ಬುದ್ಧಿವಂತಿಗೆ  ಸವಾಲೋಡುತ್ತವೆ. ಇವು ಟೈಮ್‌ ಪಾಸ್‌ ಮತ್ತು ಮನೋರಂಜನೆಯ ಆಟ ಮಾತ್ರವಲ್ಲದೆ, ಮೆದುಳಿಗೆ ವ್ಯಾಯಾಮ ನೀಡುವ, ದೃಷ್ಟಿ ತೀಕ್ಷ್ಣತೆಯನ್ನು ಪರೀಕ್ಷಿಸುವ ಒಂದೊಳ್ಳೆ ಮಾರ್ಗವಾಗಿದೆ. ಇಲ್ಲೊಂದು ಇಂತಹದ್ದೇ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ವೈರಲ್‌ ಆಗಿದ್ದು, ಅದರಲ್ಲಿ ಆಯತಗಳ ನಡುವೆ ಅಡಗಿರುವ 16 ವೃತ್ತಗಳನ್ನು (find the circles hidden between  rectangles) ಹುಡುಕಲು ಸವಾಲನ್ನು ನೀಡಲಾಗಿದೆ.

ಆಯತ ಅಥವಾ ವೃತ್ತ ನಿಮಗೆ ಕಾಣಿಸಿದ್ದೇನು?

ಬಿಬಿಸಿ ವರದಿಯ ಪ್ರಕಾರ, ಈ ಆಪ್ಟಿಕಲ್ ಇಲ್ಯೂಷನ್‌ನ್ನು ಸ್ಟ್ಯಾನ್‌ಫೋರ್ಡ್ ದೃಷ್ಟಿ ವಿಜ್ಞಾನಿ ಆಂಥೋನಿ ನಾರ್ಸಿಯಾ ರಚಿಸಿದ್ದಾರೆ. ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ 2006 ರಲ್ಲಿ ವರ್ಷದ ಅತ್ಯುತ್ತಮ ಇಲ್ಯೂಷನ್‌ ಬಿರುದನ್ನು ಪಡೆದುಕೊಂಡಿದೆ. ಈ ನಿರ್ದಿಷ್ಟ ಚಿತ್ರದಲ್ಲಿ ಮೊದಲ ನೋಟದಲ್ಲಿ, ಟೈಲ್ಡ್ ಶೈಲಿಯಲ್ಲಿ ಜೋಡಿಸಿರುವ ಕಪ್ಪು ಬಿಳುಪಿನ ಆಯತಾಕಾರದ ಆಕಾರ ಮಾತ್ರ ಕಾಣಿಸುತ್ತವೆ. ಆದರೆ ಈ ಆಯತಗಳ ನಡುವೆ 16 ವೃತ್ತ ಅಡಗಿದೆ. ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ಗೇವಿನ್ ಬಕಿಂಗ್ಹ್ಯಾಮ್ (Gavin Buckingham) ಎಂಬವರು ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ
Image
ಈ ಚಿತ್ರ ತಿಳಿಸುತ್ತೆ ನಿಮ್ಮ ನಿಗೂಢ ವ್ಯಕ್ತಿತ್ವ
Image
ಕಾಡಿನಲ್ಲಿ ಅಡಗಿ ಕುಳಿತಿರುವ ನಾಯಿಯನ್ನು ಹುಡುಕಬಲ್ಲಿರಾ?
Image
ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯ ಏನೆಂಬುದನ್ನು ತಿಳಿಸುವ ಚಿತ್ರವಿದು
Image
ʼ4502ʼ ರ ನಡುವೆ ಇರುವ ʼ4052ʼ ಸಂಖ್ಯೆಯನ್ನು ಪತ್ತೆ ಹಚ್ಚಬಲ್ಲಿರಾ?

ಪೋಸ್ಟ್ ಇಲ್ಲಿದೆ ನೋಡಿ:

ಇವಾನ್ ಕ್ರೌಪಿನ್ ನೇತೃತ್ವದ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಸಂಶೋಧಕರು, ಇತ್ತೀಚಿಗೆ ನಡೆಸಿದ ಸಂಶೋಧನೆಯಲ್ಲಿ “ಈ ಸಂಶೋಧನೆಗೆ ಒಳಪಟ್ಟ ಯುಎಸ್ ಮತ್ತು ಯುಕೆಯ ನಗರ ಪ್ರದೇಶ ಜನರಿಗೆ ಹೋಲಿಸಿದರೆ, ಈ ಸಂಶೋಧನೆಗೆ ಒಳಪಟ್ಟ ನಮೀಬಿಯಾದ ಗ್ರಾಮೀಣ ಪ್ರದೇಶದ ಜನರು ವೃತ್ತವನ್ನು ಮೊದಲು ಗುರುತಿಸಿದ್ದಾರೆ. ಇದು ಪರಿಸರವು ನಾವು ನೋಡುವುದರ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಮೇಲೆ ಅವಲಂಬಿಸಿದೆ” ಎಂದಿದ್ದಾರೆ.

ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ನಾಯಿಯನ್ನು ಕೇವಲ 7 ಸೆಕೆಂಡುಗಳಲ್ಲಿ ಪತ್ತೆ ಹಚ್ಚಲು ನಿಮ್ಮಿಂದ ಸಾಧ್ಯವೇ?

ಕಾಫರ್ ಆಪ್ಟಿಕಲ್ ಇಲ್ಯೂಷನ್‌ ಒಗಟನ್ನು ಹೇಗೆ ಪರಿಹರಿಸುವುದು?

ನೀವು ಮೊದಲು ಚಿತ್ರವನ್ನು ನೋಡಿದಾಗ, ಆಯತಾಕಾರದ ಫಲಕಗಳು ಈ ಚಿತ್ರದಲ್ಲಿ ಪ್ರಮುಖವಾದ ವಿಷಯವಾಗಿ ಕಾಣಿಸಬಹುದು. ಬರೀ ಆಯಾತಗಳೇ ಕಾಣಿಸುತ್ತದೆ. ಆದರೆ ನೀವು ಸೂಕ್ಷ್ಮವಾಗಿ ಗಮನಿಸಿದರೆ, ಆಯತಗಳ ನಡುವೆ ಇರುವ ವೃತ್ತಗಳು ಕಾಣಿಸುತ್ತದೆ. ಈ ಚಿತ್ರದ ಮಧ್ಯ ಭಾಗವನ್ನು ದಿಟ್ಟಿಸಿ ನೋಡಿದಾಗ ನಿಮಗೆ ವೃತ್ತಾಕಾರ ಗೋಚರಿಸುತ್ತದೆ. ಈ ಚಿತ್ರದಲ್ಲಿ ಒಟ್ಟು 16 ವೃತ್ತಗಳಿವೆ.

Optical Illusion (1)

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಈ ರಾಶಿಯವರು ಅತಿಯಾದ ನಂಬಿಕೆಯಿಂದ ಮೋಸ ಹೋಗುವ ಸಾಧ್ಯತೆ ಇದೆ
ಈ ರಾಶಿಯವರು ಅತಿಯಾದ ನಂಬಿಕೆಯಿಂದ ಮೋಸ ಹೋಗುವ ಸಾಧ್ಯತೆ ಇದೆ
ಅಂಥ ಅಭಿಮಾನಿಗಳಿಗೆ ಸ್ಟಾರ್ ನಟರು ಬುದ್ಧಿ ಹೇಳಬೇಕು: ರಾಕ್​ಲೈನ್ ವೆಂಕಟೇಶ್
ಅಂಥ ಅಭಿಮಾನಿಗಳಿಗೆ ಸ್ಟಾರ್ ನಟರು ಬುದ್ಧಿ ಹೇಳಬೇಕು: ರಾಕ್​ಲೈನ್ ವೆಂಕಟೇಶ್
ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ
ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ