AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೇ ತಿಳಿಸುತ್ತೆ ನಿಮ್ಮ ಸಾಮರ್ಥ್ಯ, ದೌರ್ಬಲ್ಯ

ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ ಆಪ್ಟಿಕಲ್‌ ಇಲ್ಯೂಷನ್‌ನಂತಹ ಒಗಟಿನ ಆಟಗಳು ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಕೂಡ ತಿಳಿಸುತ್ತದೆ. ಇಂತಹ ಸಾಕಷ್ಟು ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಅಂತಹದೊಂದು ಚಿತ್ರ ಇದೀಗ ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ನಿಮಗೆ ಯಾವ ಅಂಶ ಕಾಣಿಸಿತು ಎಂಬುದರ ಮೇಲೆ ನಿಮ್ಮ ಸಾಮಾರ್ಥ್ಯ ಮತ್ತು ದೌರ್ಬಲ್ಯಗಳೇನು ಎಂಬುದನ್ನು ಪರೀಕ್ಷಿಸಿ.

Personality Test: ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೇ ತಿಳಿಸುತ್ತೆ ನಿಮ್ಮ ಸಾಮರ್ಥ್ಯ, ದೌರ್ಬಲ್ಯ
ವ್ಯಕ್ತಿತ್ವ ಪರೀಕ್ಷೆImage Credit source: Times Now
ಮಾಲಾಶ್ರೀ ಅಂಚನ್​
|

Updated on: Jul 02, 2025 | 5:46 PM

Share

ಒಬ್ಬ ವ್ಯಕ್ತಿಯ ನಡವಳಿಕೆಯಿಂದ ಆತನ ವ್ಯಕ್ತಿತ್ವವನ್ನು ಅಳೆಯುವಂತೆ ವ್ಯಕ್ತಿತ್ವ ಪರೀಕ್ಷೆಯ (Personality Test)  ವಿಧಾನಗಳ ಮೂಲಕ ನಮ್ಮ ನಿಗೂಢ ವ್ಯಕ್ತಿತ್ವವನ್ನು ನಾವೇ ಅಳೆಯಬಹುದು. ಈ ಪರೀಕ್ಷೆಯು ಒಬ್ಬ ವ್ಯಕ್ತಿಯ ಚಿಂತನೆ, ನಡವಳಿಕೆ ಮತ್ತು ಭಾವನಾತ್ಮಕ ನಿಲುವುಗಳನ್ನು ವಿಶ್ಲೇಷಿಸಲಿರುವ ಒಂದೊಳ್ಳೆ ಮಾರ್ಗವಾಗಿದೆ. ಹೀಗೆ ಆಪ್ಟಿಕಲ್‌ ಇಲ್ಯೂಷನ್‌ನಂತಹ ವ್ಯಕ್ತಿತ್ವ ಪರೀಕ್ಷೆಗಳ ಮೂಲಕ ನೀವು ಅಂತರ್ಮುಖಿಯೋ, ಬಹಿರ್ಮುಖಿಯೋ, ಶಾಂತ ಸ್ವಭಾವವನ್ನು ಹೊಂದಿರುವವವರೇ ಎಂಬುದನ್ನೆಲ್ಲಾ ಪರೀಕ್ಷೆ ಮಾಡಿರುತ್ತೀರಿ ಅಲ್ವಾ. ಅಂತಹದ್ದೊಂದು ಚಿತ್ರ ಇದೀಗ ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ನಿಮಗ್ಯಾವ ಅಂಶ ಕಾಣಿಸಿತು ಎಂಬುದರ ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳು (strengths and weaknesses) ಯಾವುವು ಎಂಬುದನ್ನು ಪರೀಕ್ಷಿಸಿ.

ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯ ಏನೆಂಬುದನ್ನು ತಿಳಿಸುವ ಚಿತ್ರವಿದು:

ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ ಚಿತ್ರದಲ್ಲಿ ಮರ, ಗೊರಿಲ್ಲಾ, ಸಿಂಹ, ಮೀನು ಈ ನಾಲ್ಕು ಅಂಶಗಳಿದ್ದು, ಇವುಗಳಲ್ಲಿ ನೀವು ಯಾವುದನ್ನು ಮೊದಲು ಗಮನಿಸುತ್ತೀರಿ ಎಂಬುದರ ಮೇಲೆ ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳು ಯಾವುವು ಎಂಬುದನ್ನು ತಿಳಿಯಿರಿ.

ಮೊದಲು ಮರವನ್ನು ನೋಡಿದರೆ: ನೀವು ಮೊದಲು ಮರವನ್ನು ನೋಡಿದರೆ ವಿಶ್ಲೇಷಣಾತ್ಮಕ, ತಾರ್ಕಿಕ ಸ್ವಭಾವವನ್ನು ಹೊಂದಿರುವ ನೀವು  ವಸ್ತುನಿಷ್ಠವಾಗಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದೀರಿ. ನೀವು ಅತಿಯಾಗಿ ತರ್ಕಬದ್ಧವಾಗಿ ಯೋಚಿಸುವುದರಿಂದ ಭಾವನೆಗಳಿಗೆ ಹೆಚ್ಚು ಬೆಲೆ ಕೊಡುವುದಿಲ್ಲ ಮತ್ತು ನೀವು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು  ಕೂಡ ಹಿಂಜರಿಯುತ್ತೀರಿ ಇದು ನಿಮ್ಮ ದೌರ್ಬಲ್ಯವಾಗಿದೆ.

ಇದನ್ನೂ ಓದಿ
Image
ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ
Image
ನಿಮ್ಮ ಪ್ರೀತಿಯ ಜೀವನ ಹೇಗಿರುತ್ತೆ ಎಂದು ತಿಳಿಸುವ ಚಿತ್ರವಿದು
Image
ಈ ಚಿತ್ರದ ಮೂಲಕ ನಿಮ್ಮ ಸ್ವಭಾವ ಹೇಗಿದೆ ತಿಳಿಯಿರಿ
Image
ಈ ಚಿತ್ರದಲ್ಲಿ ನೀವು ಆಯ್ಕೆ ಮಾಡಿಕೊಳ್ಳುವ ಕುರ್ಚಿ ವ್ಯಕ್ತಿತ್ವ ಹೇಳುತ್ತೆ

ಮೊದಲು ಗೊರಿಲ್ಲಾವನ್ನು ನೋಡಿದರೆ: ನೀವು ಮೊದಲು ಗೊರಿಲ್ಲಾವನ್ನು ನೋಡಿದರೆ, ಜ್ಞಾನದ ಹಸಿವನ್ನು ಹೊಂದಿರುವುದು, ನಿಮ್ಮ ಆಸಕ್ತಿಯನ್ನು ಸೆಳೆಯುವ ವಿಷಯಗಳತ್ತ ಹೆಚ್ಚು ಆಕರ್ಷಿತರಾಗುವುದು ನಿಮ್ಮ ಸಾಮರ್ಥ್ಯವಾಗಿದೆ.  ನಿಮ್ಮ ದೌರ್ಬಲ್ಯ ಏನೆಂದರೆ,  ಕೆಲವೊಮ್ಮೆನಿಮ್ಮ  ಹೆಮ್ಮೆಯ ಅಂಶ ದುರಹಂಕಾರವಾಗಿ ರೂಪಾಂತರಗೊಳ್ಳುತ್ತದೆ. ಈ ದುರಹಂಕಾರದ ಭಾವನೆ ಅಷ್ಟು ಒಳ್ಳೆಯದಲ್ಲ.

ಮೊದಲು ಸಿಂಹವನ್ನು ನೋಡಿದರೆ: ನೀವು ಸಿಂಹವನ್ನು ಮೊದಲು ನೋಡಿದರೆ, ಧೈರ್ಯ, ಸಾಹಸ, ಜೀವನದ ಮೇಲಿನ ಉತ್ಸಾಹ ಇವೆಲ್ಲವೂ ನಿಮ್ಮ ಸಾಮರ್ಥ್ಯಗಳಾಗಿವೆ. ನಿಮ್ಮ ಅತಿಯಾದ ಸ್ವಾತಂತ್ರ್ಯದ ಕಾರಣದಿಂದ ನೀವು ಇತರರ ಭಾವನೆಗಳನ್ನು ಕಡೆಗಣಿಸುತ್ತೀರಿ, ಇದು ನಿಮ್ಮ ದೌರ್ಬಲ್ಯ ಅಂತಾನೇ ಹೇಳಬಹುದು.

ಇದನ್ನೂ ಓದಿ: ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸುವ ಅಂಶ ನೀವು ಶ್ರಮ ಜೀವಿಯೇ ಎಂಬುದನ್ನು ತಿಳಿಸುತ್ತೆ

ಮೊದಲು ಮೀನು ನೋಡಿದರೆ: ನೀವು ಮೊದಲು ಮೀನು ನೋಡಿದರೆ ನೀವು ಎಲ್ಲರೊಂದಿಗೆ ಬಹು ಬೇಗನೆ ಹೊಂದಿಕೊಳ್ಳುವವರಾಗಿರುತ್ತೀರಿ. ಈ ಹೊಂದಿಕೊಳ್ಳುವ ಹಾಗೂ ಇತರರರೊಂದಿಗೆ ಬೆರೆಯುವ ಗುಣ ನಿಮ್ಮ ಬಹು ದೊಡ್ಡ ಸಾಮರ್ಥ್ಯವಾಗಿದೆ.  ಎಲ್ಲರನ್ನೂ ಮೆಚ್ಚಿಸಬೇಕೆಂಬ ನಿಮ್ಮ ಬಯಕೆಯು ನಿಮ್ಮನ್ನು ಭಾವನಾತ್ಮಕವಾಗಿ ಕುಗ್ಗಿಸುತ್ತದೆ ಮತ್ತು ಕೆಲವರು ನಿಮ್ಮ ದಯಾ ಗುಣವನ್ನು ಹಗುರವಾಗಿ ಕಾಣುತ್ತಾರೆ. ಈ ಎರಡು ಅಂಶ ನಿಮ್ಮ ದೌರ್ಬಲ್ಯವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ