Personality Test: ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸುವ ಅಂಶ ನೀವು ಶ್ರಮ ಜೀವಿಯೇ ಎಂಬುದನ್ನು ತಿಳಿಸುತ್ತೆ
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ದೃಷ್ಟಿ ತೀಕ್ಷ್ಣಣೆ ಹಾಗೂ ಬುದ್ಧಿವಂತಿಕೆಯನ್ನು ಪರೀಕ್ಷಿಸುವುದು ಮಾತ್ರವಲ್ಲದೆ, ನಮ್ಮ ವ್ಯಕ್ತಿತ್ವವನ್ನು ಸಹ ತಿಳಿಸುತ್ತದೆ. ಈ ಚಿತ್ರಗಳನ್ನು ಗ್ರಹಿಸುವ ವಿಧಾನವು ನಮ್ಮ ವ್ಯಕ್ತಿತ್ವದ ಬಗೆಗಿನ ಆಕರ್ಷಕ ಒಳ ನೋಟವನ್ನು ಬಹಿರಂಗಪಡಿಸುತ್ತದೆ. ಇಂತಹದ್ದೊಂದು ಚಿತ್ರ ಇದೀಗ ವೈರಲ್ ಆಗಿದ್ದು, ಆ ಫೋಟೋದಲ್ಲಿ ಇರುವ ಹದ್ದು ಮತ್ತು ಪರ್ವತದಲ್ಲಿ ನಿಮಗೆ ಯಾವ ಅಂಶ ಮೊದಲು ಕಾಣಿಸಿದ್ದು ಎಂಬುದರ ಮೇಲೆ ನೀವು ಶ್ರಮ ಜೀವಿಯೇ ಎಂಬುದನ್ನು ಪರೀಕ್ಷಿಸಿ.

ವ್ಯಕ್ತಿತ್ವ ಪರೀಕ್ಷೆ (Personality Test), ಗುಣಸ್ವಭಾವ, ಭವಿಷ್ಯವನ್ನು ತಿಳಿಯುವ ಹಲವು ವಿಧಾನಗಳಿವೆ. ನಮ್ಮ ವ್ಯಕ್ತಿತ್ವವನ್ನು ನಾವೇ ತಿಳಿದುಕೊಳ್ಳುವುದೆಂದರೆ ಒಂದು ರೀತಿಯ ಖುಷಿ. ಇದಕ್ಕಾಗಿ ಜನ ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಸಾಮುದ್ರಿಕ ಶಾಸ್ತ್ರದ ಮೊರೆ ಹೋಗ್ತಾರೆ. ಇದನ್ನು ಬಿಟ್ಟು ನಾವು ಆಪ್ಟಿಕಲ್ ಇಲ್ಯೂಷನ್‌ನಂತಹ (Optical illusion) ವ್ಯಕ್ತಿತ್ವ ಪರೀಕ್ಷೆಯ ವಿಧಾನಗಳ ಮೂಲಕವೂ ನಮ್ಮ ನಿಗೂಢ ಗುಣ ಸ್ವಭಾವವನ್ನು ನಾವೇ ತಿಳಿದುಕೊಳ್ಳಬಹುದು. ಇಂತಹ ಸಾಕಷ್ಟು ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಚಿತ್ರ ವೈರಲ್ ಆಗಿದ್ದು, ಆ ಚಿತ್ರದಲ್ಲಿ ಹದ್ದು ಅಥವಾ ಪರ್ವತ ನಿಮಗೆ ಕಾಣಿಸಿದ್ದೇನು ಎಂಬುದರ ಮೇಲೆ ನೀವು ಶ್ರಮ ಜೀವಿಯೇ ಎಂಬುದನ್ನು ಪರೀಕ್ಷಿಸಿ.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ:
ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಪರ್ವತ ಹಾಗೂ ಹದ್ದು ಈ ಎರಡು ಅಂಶಗಳಿದ್ದು, ಇದರಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬುದರ ಮೇಲೆ ನೀವು ವರ್ಚಸ್ಸನ್ನು ಹೊಂದಿದವರೇ ಅಥವಾ ಶ್ರಮ ಜೀವಿಯೇ ಎಂಬುದನ್ನು ಪರೀಕ್ಷಿಸಿ.
ಮೊದಲು ಹದ್ದನ್ನು ನೋಡಿದರೆ: ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನೀವು ಮೊದಲು ಹದ್ದನ್ನು ನೋಡಿದರೆ ನೀವು ಕಾಂತೀಯ ವರ್ಚಸ್ಸನ್ನು ಹೊಂದಿದವರೆಂದು ಅರ್ಥ. ನೀವು ನಿಮ್ಮ ಸ್ವಭಾವದಿಂದಲೇ ಎಲ್ಲರನ್ನು ಮೋಡಿ ಮಾಡುತ್ತೀರಿ ಮತ್ತು ಎಲ್ಲರೂ ನಿಮ್ಮತ್ತ ಬಹು ಬೇಗನೇ ಆಕರ್ಷಿತರಾಗುತ್ತಾರೆ. ಇನ್ನೊಂದು ಏನೆಂದರೆ ನೀವು ಯಾವಾಗಲೂ ಇತರರನ್ನು ಸಂತೋಷ ಪಡಿಸಲು ಹೆಚ್ಚಿನ ಆದ್ಯತೆಯನ್ನು ನೀಡುತ್ತೀರಿ. ನಿಮ್ಮ ಈ ಸ್ವಭಾವವೇ ಎಲ್ಲರಿಗೂ ಇಷ್ಟವಾಗುತ್ತೆ. ಹೀಗಿರುವಾಗ ನಿಮ್ಮ ಸ್ವಂತ ಅಗತ್ಯತೆಗಳಿಗೆ ಮತ್ತು ಭಾವನೆಗಳಿಗೆ ಬೆಲೆ ಕೊಡಲು ಮರೆಯದಿರಿ.
ಇದನ್ನೂ ಓದಿ: ಜಸ್ಟ್ 9 ಸೆಕೆಂಡುಗಳಲ್ಲಿ ʼ4502ʼ ರ ನಡುವೆ ಇರುವ ʼ4052ʼ ಸಂಖ್ಯೆಯನ್ನು ಪತ್ತೆ ಹಚ್ಚಿ
ಮೊದಲು ಪರ್ವತವನ್ನು ನೋಡಿದರೆ: ಈ ಚಿತ್ರದಲ್ಲಿ ನೀವು ಮೊದಲು ಪರ್ವತವನ್ನು ನೋಡಿದರೆ ನೀವು ಶ್ರಮ ಜೀವಿ ಎಂದರ್ಥ. ಹೆಚ್ಚು ಉತ್ಪಾದಕತೆಯನ್ನು ಹೊಂದಿರುವ ನೀವು ಯಂತ್ರದಂತೆಯೇ ಸಾಕಷ್ಟು ಶ್ರಮ ಪಡುತ್ತೀರಿ. ಹೀಗೆ ಯಶಸ್ಸನ್ನು ಸಾಧಿಸಬೇಕೆಂದು ನಿರಂತರ ಶ್ರಮ ವಹಿಸಿದಾಗ ಅದು ನಿಮ್ಮ ಆತಂಕ ಮತ್ತು ಒತ್ತಡವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಕಷ್ಟಪಟ್ಟು ಕೆಲಸ ಮಾಡುವ ನಡುವೆ ನೀವು ನಿಮಗಾಗಿ ಸ್ವಲ್ಪ ವಿಶ್ರಾಂತಿಯನ್ನು ಸಹ ತೆಗೆದುಕೊಳ್ಳಬೇಕು. ನಿಯಮಿತ ವಿಶ್ರಾಂತಿಯೊಂದಿಗೆ, ಸುಧಾರಿತ ಮನಸ್ಥಿತಿಯೊಂದಿಗೆ ನೀವು ನಿಮ್ಮ ಗುರಿಯನ್ನು ಸಾಧಿಸಲು ಕಾರ್ಯ ನಿರ್ವಹಿಸಬಹುದು. ಆದರೆ ಕೆಲಸದ ಬಗ್ಗೆ ಹೆಚ್ಚು ಒತ್ತಡ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ