AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಂಬಾಬ್ವೆ ವಿರುದ್ಧ ಗೆದ್ದರೂ ಮೇಲೇಳದ ಟೀಂ ಇಂಡಿಯಾ ಸೆಮಿಫೈನಲ್‌ ತಲುಪುವುದು ಹೇಗೆ?

Team India's T20 World Cup Semis Path: ಜಿಂಬಾಬ್ವೆ ವಿರುದ್ಧ ಗೆದ್ದರೂ, 2026ರ ಟಿ20 ವಿಶ್ವಕಪ್ ಸೆಮಿಫೈನಲ್ ಸ್ಥಾನಕ್ಕಾಗಿ ಭಾರತ ಇನ್ನೂ ಹೋರಾಡುತ್ತಿದೆ. ದಕ್ಷಿಣ ಆಫ್ರಿಕಾ ಅರ್ಹತೆ ಪಡೆದಿದ್ದು, ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ವಿರುದ್ಧದ ಮುಂದಿನ ಪಂದ್ಯವನ್ನು ಗೆಲ್ಲಲೇಬೇಕು. ಇತಿಹಾಸದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಉತ್ತಮ ದಾಖಲೆ ಇಲ್ಲದಿದ್ದರೂ, ಈ ನಿರ್ಣಾಯಕ ಪಂದ್ಯ ಗೆದ್ದು ಸೆಮಿಫೈನಲ್‌ಗೆ ಪ್ರವೇಶಿಸಲು ಸಿದ್ಧವಾಗಿದೆ.

ಜಿಂಬಾಬ್ವೆ ವಿರುದ್ಧ ಗೆದ್ದರೂ ಮೇಲೇಳದ ಟೀಂ ಇಂಡಿಯಾ ಸೆಮಿಫೈನಲ್‌ ತಲುಪುವುದು ಹೇಗೆ?
Team India
ಪೃಥ್ವಿಶಂಕರ
|

Updated on:Feb 27, 2026 | 2:47 PM

Share

2026 ರ ಟಿ20 ವಿಶ್ವಕಪ್‌ನ (T20 World Cup 2026) ಸೂಪರ್ 8 ಸುತ್ತಿನಲ್ಲಿ ಜಿಂಬಾಬ್ವೆ ತಂಡವನ್ನು 72 ರನ್​ಗಳಿಂದ ಮಣಿಸಿದ ಟೀಂ ಇಂಡಿಯಾ ತನ್ನ ಸೆಮಿಫೈನಲ್‌ ಕನಸನ್ನು ಇನ್ನು ಜೀವಂತವಾಗಿರಿಸಿಕೊಂಡಿದೆ. ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 256 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಜಿಂಬಾಬ್ವೆ 184 ರನ್‌ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮಿಫೈನಲ್​ಗೇರುವ ಅವಕಾಶವನ್ನು ಹೊಂದಿದೆಯಾದರೂ, ಪಾಯಿಂಟ್ ಪಟ್ಟಿಯಲ್ಲಿ ಮಾತ್ರ ಮೂರನೇ ಸ್ಥಾನದಲ್ಲೇ ಉಳಿದಿದೆ. ಇದು ಟೀಂ ಇಂಡಿಯಾ ಅಭಿಮಾನಿಗಳನ್ನು ಆತಂಕಕ್ಕೀಡುಮಾಡಿದೆ. ಪಾಯಿಂಟ್ ಪಟ್ಟಿಯಲ್ಲಿ ಭಾರತ ತಂಡ 3ನೇ ಸ್ಥಾನದಲ್ಲಿದ್ದರೂ, ಸೆಮಿಫೈನಲ್​ಗೆ ಸುಲಭವಾಗಿ ಅರ್ಹತೆ ಪಡೆಯುವ ಅವಕಾಶ ಹೊಂದಿದೆ. ಹಾಗಿದ್ದರೆ, ಭಾರತ ಸೆಮಿಫೈನಲ್​ಗೇರಬೇಕೆಂದರೆ ಏನು ಮಾಡಬೇಕು? ವಿವರ ಇಲ್ಲಿದೆ.

ಭಾರತ ಸೆಮಿಫೈನಲ್ ತಲುಪುವುದು ಹೇಗೆ?

ದಕ್ಷಿಣ ಆಫ್ರಿಕಾ ಈಗಾಗಲೇ ಗುಂಪು 1 ರಿಂದ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡವನ್ನು ಮಾರ್ಚ್ 1 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯದಿಂದ ನಿರ್ಧರಿಸಲಾಗುತ್ತದೆ. ಟೀಂ ಇಂಡಿಯಾ ಈ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು. ಸೂರ್ಯಕುಮಾರ್ ಪಡೆ, ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದರೆ ದಾಕು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಈ ಗೆಲುವಿನೊಂದಿಗೆ ಭಾರತ 4 ಅಂಕ ಪಡೆಯುವ ಮೂಲಕ ಗುಂಪು 1 ರಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಸೆಮಿಫೈನಲ್‌ ಟಿಕೆಟ್ ಖಚಿತ ಪಡಿಸಿಕೊಳ್ಳುತ್ತದೆ.

IND vs ZIM: ಟಿ20 ವಿಶ್ವಕಪ್​ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ

ಟಿ20 ವಿಶ್ವಕಪ್‌ನಲ್ಲಿ ದಾಖಲೆ ಹೇಗಿದೆ?

ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಪಂದ್ಯಗಳ ದಾಖಲೆ ನಿಜಕ್ಕೂ ಅದ್ಭುತವಾಗಿದೆ. ವಾಸ್ತವವಾಗಿ, ಈ ಪಂದ್ಯಾವಳಿಯಲ್ಲಿ ಎರಡೂ ತಂಡಗಳು ನಾಲ್ಕು ಬಾರಿ ಮುಖಾಮುಖಿಯಾಗಿವೆ. ಈ ಅವಧಿಯಲ್ಲಿ, ವೆಸ್ಟ್ ಇಂಡೀಸ್ ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಭಾರತ ಕೇವಲ ಒಂದು ಪಂದ್ಯವನ್ನು ಗೆದ್ದಿದೆ. ಆದ್ದರಿಂದ, ಈ ಪಂದ್ಯವು ಟೀಂ ಇಂಡಿಯಾಕ್ಕೆ ಸುಲಭವಲ್ಲ. 2014 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಒಮ್ಮೆ ಮಾತ್ರ ಟೀಂ ಇಂಡಿಯಾ ಗೆಲುವು ಸಾಧಿಸಿದೆ. 2016 ರಲ್ಲಿ ನಡೆದಿದ್ದ ಕೊನೆಯ ಮುಖಾಮುಖಿಯಲ್ಲಿ ವೆಸ್ಟ್ ಇಂಡೀಸ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಸೋಲಿಸಿತ್ತು. ಆದ್ದರಿಂದ, ಈ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಭಾರತ ತಂಡಕ್ಕೆ ಇದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Fri, 27 February 26

Follow Us
ರೂಪಾಯಿಗೆ ಬಿಗ್ ಶಾಕ್, ಮೊದಲ ಬಾರಿಗೆ 93ರ ಗಡಿ ದಾಟಿದ ಭಾರತೀಯ ಕರೆನ್ಸಿ
ರೂಪಾಯಿಗೆ ಬಿಗ್ ಶಾಕ್, ಮೊದಲ ಬಾರಿಗೆ 93ರ ಗಡಿ ದಾಟಿದ ಭಾರತೀಯ ಕರೆನ್ಸಿ
‘ಡಿಕೆಡಿ 5’ ಕ್ವಾಟರ್​ ಫಿನಾಲೆ; ಫಿನಾಲೆ ಟಿಕೆಟ್​ ಸಿಗೋದು ಯಾರಿಗೆ?
‘ಡಿಕೆಡಿ 5’ ಕ್ವಾಟರ್​ ಫಿನಾಲೆ; ಫಿನಾಲೆ ಟಿಕೆಟ್​ ಸಿಗೋದು ಯಾರಿಗೆ?
ಕೈಲಾದೇವಿ ಯಾತ್ರೆ ಮುಗಿಸಿ ವಾಪಸಾಗುತ್ತಿದ್ದ ವಾಹನ ಅಪಘಾತ
ಕೈಲಾದೇವಿ ಯಾತ್ರೆ ಮುಗಿಸಿ ವಾಪಸಾಗುತ್ತಿದ್ದ ವಾಹನ ಅಪಘಾತ
ಮಂಡ್ಯ: ಬೋನಿಗೆ ಬಿದ್ದ ಚಿರತೆ ನೋಡಲು ಮುಗಿಬಿದ್ದ ಜನ
ಮಂಡ್ಯ: ಬೋನಿಗೆ ಬಿದ್ದ ಚಿರತೆ ನೋಡಲು ಮುಗಿಬಿದ್ದ ಜನ
ಕಾಲಿಗೆ ಬೀಳ್ತೀವಿ, ಸಾರಾಯಿ ಬಂದ್ ಮಾಡಿಸಿ: ಶಾಸಕರ ಮುಂದೆ ಮಹಿಳೆಯರು ಕಣ್ಣೀರು
ಕಾಲಿಗೆ ಬೀಳ್ತೀವಿ, ಸಾರಾಯಿ ಬಂದ್ ಮಾಡಿಸಿ: ಶಾಸಕರ ಮುಂದೆ ಮಹಿಳೆಯರು ಕಣ್ಣೀರು
ಇಸ್ರೇಲ್​​ನ ಹೈಫಾ ತೈಲ ಸಂಸ್ಕರಣಾಗಾರದ ಮೇಲೆ ಇರಾನ್ ಕ್ಷಿಪಣಿ ದಾಳಿ
ಇಸ್ರೇಲ್​​ನ ಹೈಫಾ ತೈಲ ಸಂಸ್ಕರಣಾಗಾರದ ಮೇಲೆ ಇರಾನ್ ಕ್ಷಿಪಣಿ ದಾಳಿ
ಟಿಕೆಟ್​​ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಕೆಗೆ ಮುಂದಾದ ಸಚಿವರ ಪುತ್ರ!
ಟಿಕೆಟ್​​ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಕೆಗೆ ಮುಂದಾದ ಸಚಿವರ ಪುತ್ರ!
‘ಧುರಂಧರ್ 2’ ನೋಡಲು ದುಬೈನಿಂದ ಭಾರತಕ್ಕೆ ಬಂದ ಖ್ಯಾತ ಇನ್​​ಫ್ಲುಯೆನ್ಸರ್
‘ಧುರಂಧರ್ 2’ ನೋಡಲು ದುಬೈನಿಂದ ಭಾರತಕ್ಕೆ ಬಂದ ಖ್ಯಾತ ಇನ್​​ಫ್ಲುಯೆನ್ಸರ್
ಮೆಡಿಕಲ್ ವಿದ್ಯಾರ್ಥಿಯ ಅಜಾಗರೂಕ ಚಾಲನೆಗೆ ಬೈಕ್ ಸವಾರ ಸ್ಥಳದಲ್ಲೇ ಸಾವು!
ಮೆಡಿಕಲ್ ವಿದ್ಯಾರ್ಥಿಯ ಅಜಾಗರೂಕ ಚಾಲನೆಗೆ ಬೈಕ್ ಸವಾರ ಸ್ಥಳದಲ್ಲೇ ಸಾವು!
ಸಂಚಾರ ನಿಯಂತ್ರಕರ ಕೊಠಡಿಗೇ ನುಗ್ಗಿದ BMTC ಬಸ್! ವಿಡಿಯೋ ನೋಡಿ
ಸಂಚಾರ ನಿಯಂತ್ರಕರ ಕೊಠಡಿಗೇ ನುಗ್ಗಿದ BMTC ಬಸ್! ವಿಡಿಯೋ ನೋಡಿ