AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

13 ಪಂದ್ಯಗಳಲ್ಲಿ 39 ಕೀಪರ್ ಕ್ಯಾಚ್‌: ಕ್ರಿಕೆಟ್ ಅಂಗಳದ ಮಹಾ ಮೋಸ ಬಯಲು!

Clicky Ponting's Fake Edge: ಕ್ರಿಕೆಟ್ ಇತಿಹಾಸದಲ್ಲಿ ಬ್ಯಾಟರ್‌ಗಳನ್ನು ಔಟ್ ಮಾಡಲು ಬೌಲರ್‌ಗಳು ವಿಭಿನ್ನ ತಂತ್ರಗಳನ್ನು ಬಳಸುವುದು ಹೊಸದೇನಲ್ಲ. ಆದರೆ, ಅಂಪೈರ್ ಕಣ್ಣಿಗೆ ಮಣ್ಣೆರಚಲು ಆಟಗಾರನೊಬ್ಬ ತನ್ನ ಬೆರಳಿನ ಚಿಟಿಕೆಯನ್ನೇ ಅಸ್ತ್ರವಾಗಿಸಿಕೊಂಡಿದ್ದ ಮಹಾ ಮೋಸದ ಘಟನೆಯೊಂದು ಇಂಗ್ಲೆಂಡ್​ ನಲ್ಲಿ ಬೆಳಕಿಗೆ ಬಂದಿದೆ.

13 ಪಂದ್ಯಗಳಲ್ಲಿ 39 ಕೀಪರ್ ಕ್ಯಾಚ್‌: ಕ್ರಿಕೆಟ್ ಅಂಗಳದ ಮಹಾ ಮೋಸ ಬಯಲು!
Clicky PontingImage Credit source: x.com
ಝಾಹಿರ್ ಯೂಸುಫ್
|

Updated on:Jul 29, 2026 | 2:15 PM

Share

ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕೇಳರಿಯದ ವಿಚಿತ್ರ ಮತ್ತು ನಾಚಿಕೆಗೇಡಿನ ವಂಚನೆಯೊಂದು ಬ್ರಿಟನ್‌ನ ಹವ್ಯಾಸಿ ಕ್ರಿಕೆಟ್ ಅಂಗಳದಲ್ಲಿ ಬಯಲಾಗಿದೆ. ಫೀಲ್ಡಿಂಗ್ ಮಾಡುವಾಗ ಬ್ಯಾಟರ್‌ಗಳನ್ನು ಔಟ್ ಮಾಡಲು ಬೆರಳುಗಳಿಂದ ‘ಚಿಟಿಕಿ’ ಶಬ್ದ ಮಾಡುತ್ತಾ ಅಂಪೈರ್‌ಗಳನ್ನೇ ದಿಕ್ಕು ತಪ್ಪಿಸುತ್ತಿದ್ದ ಆಟಗಾರನೊಬ್ಬನ ಅಸಲಿ ಮುಖವಾಡ ಕಡೆಗೂ ಕಳಚಿ ಬಿದ್ದಿದೆ.

ಏನಿದು ‘ಕ್ಲಿಕ್ಕಿ ಪಾಂಟಿಂಗ್’ ವಿವಾದ?

ಬ್ರಿಟನ್‌ನ ಸಾಲ್ಟ್‌ಬರ್ನ್ ಕ್ರಿಕೆಟ್ ಕ್ಲಬ್‌ನ 38 ವರ್ಷದ ಹವ್ಯಾಸಿ ಆಟಗಾರ ಬ್ರಿಯಾನ್ ಡೆವೈನ್, ಫೀಲ್ಡಿಂಗ್ ಮಾಡುವಾಗ ಬ್ಯಾಟರ್‌ಗಳನ್ನು ಔಟ್ ಮಾಡಲು ಅಡ್ಡದಾರಿ ಹಿಡಿದಿದ್ದರು. ಇವರು ಫಸ್ಟ್ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುವಾಗ, ಚೆಂಡು ಬ್ಯಾಟ್‌ಗೆ ತಾಗಿ ಹೋದಂತೆ ಭ್ರಮೆ ಮೂಡಿಸಲು ತಮ್ಮ ಬೆರಳುಗಳಿಂದ ಜೋರಾಗಿ ಚಿಟಿಕಿ ಹೊಡೆಯುತ್ತಿದ್ದರು. ಈ ಶಬ್ದವನ್ನು ಕೇಳಿ ಚೆಂಡು ಬ್ಯಾಟ್‌ಗೆ ಎಡ್ಜ್ ಆಗಿದೆ ಎಂದು ಭಾವಿಸುತ್ತಿದ್ದ ಅಂಪೈರ್‌ಗಳು ಔಟ್ ನೀಡುತ್ತಿದ್ದರು.

ಇದು ಕ್ಲಬ್ ಕ್ರಿಕೆಟ್ ಪಂದ್ಯಾವಳಿ ಆಗಿದ್ದರಿಂದ, ಈ ಟೂರ್ನಿಯಲ್ಲಿ ಡಿಆರ್​ಎಸ್​  ವ್ಯವಸ್ಥೆ ಇರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಬ್ರಿಯಾನ್ ಡೆವೈನ್, ಚೆಂಡು ಬ್ಯಾಟ್ ಹತ್ತಿರ ಬರುತ್ತಿದ್ದಂತೆ ಚಿಟಿಕೆ ಹೊಡೆಯುತ್ತಿದ್ದರು. ಇತ್ತ ವಿಕೆಟ್ ಕೀಪರ್ ಕ್ಯಾಚ್ ಹಿಡಿದು ಮನವಿ ಮಾಡುತ್ತಿದ್ದಂತೆ ಅಂಪೈರ್ ಔಟ್ ನೀಡುತ್ತಿದ್ದರು.

ಇದನ್ನು ಗಮನಿಸಿದ ವ್ಯಕ್ತಿಯೋರ್ವ ಬ್ರಿಯಾನ್ ಡೆವೈನ್ ಚಿಟಿಕಿಯ ಕಳ್ಳಾಟದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಕಳ್ಳಾಟಕ್ಕೆ ಇದೀಗ ‘ಕ್ಲಿಕ್ಕಿ ಪಾಂಟಿಂಗ್’ ಹೆಸರಿಡಲಾಗಿದೆ.

ಆಸ್ಟ್ರೇಲಿಯಾದ ಆಕ್ರಮಣಕಾರಿ ಮಾಜಿ ನಾಯಕ ರಿಕಿ ಪಾಂಟಿಂಗ್ ಹೆಸರನ್ನು ಪ್ರಸ್ತಾಪಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಬ್ರಿಯಾನ್ ಡೆವೈನ್​ನನ್ನು ಈಗ ‘ಕ್ಲಿಕ್ಕಿ ಪಾಂಟಿಂಗ್’ ಎಂದು ಟ್ರೋಲ್ ಮಾಡಲಾಗುತ್ತಿದೆ.

ಅಂಕಿ ಅಂಶ ನೋಡಿ ಶಾಕ್!

ಬ್ರಿಯಾನ್ ಡೆವೈನ್ ಅವರ ಕಳ್ಳಾಟ ಬೆಳಕಿಗೆ ಬರುತ್ತಿದ್ದಂತೆ ಇಂಟರ್ನೆಟ್ ವಿಶ್ಲೇಷಕರು ಈತನ ಹಳೆಯ ಪಂದ್ಯಗಳ ದಾಖಲೆಗಳನ್ನು ಕೆದಕಿದಿದ್ದಾರೆ. ಈ ವೇಳೆ ಆಘಾತಕಾರಿ ಸತ್ಯ ಹೊರಬಿದ್ದಿದೆ…

  • ಬ್ರಿಯಾನ್ ಪಂದ್ಯದಲ್ಲಿದ್ದಾಗ ಸಾಲ್ಟ್‌ಬರ್ನ್ ತಂಡವು 13 ಪಂದ್ಯಗಳಲ್ಲಿ ಬರೋಬ್ಬರಿ 39 ವಿಕೆಟ್‌ಕೀಪರ್ ಕ್ಯಾಚ್‌ಗಳನ್ನು ಪಡೆದಿತ್ತು.
  • ಬ್ರಿಯಾನ್ ಡೆವೈನ್ ಇಲ್ಲದ 7 ಪಂದ್ಯಗಳಲ್ಲಿ ವಿಕೆಟ್ ಕೀಪರ್ ಪಡೆದಿದ್ದು ಕೇವಲ 5 ಕ್ಯಾಚ್‌ಗಳು ಮಾತ್ರ!

ಒಂದು ಪಂದ್ಯದಲ್ಲಂತೂ ವಿಕೆಟ್ ಕೀಪರ್ ಬರೋಬ್ಬರಿ 8 ಕ್ಯಾಚ್‌ಗಳನ್ನು ಹಿಡಿದು ದಾಖಲೆ ಬರೆದಿದ್ದರು. ಇದೆಲ್ಲವೂ ಈ ಚಿಟಿಕಿ ತಂತ್ರದ ಭಾಗವಾಗಿತ್ತು ಎಂಬುದು ಈಗ ಸಾಬೀತಾಗಿದೆ.

ಪ್ರಾಯೋಜಕತ್ವ ವಾಪಸ್!

ಈ ವಂಚನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತ ಸಾಲ್ಟ್‌ಬರ್ನ್ ತಂಡದ ಪ್ರಾಯೋಜಕರಾದ ‘ಸ್ಪೈಸಸ್’ (Spices) ಹೆಸರಿನ ಸ್ಥಳೀಯ ಭಾರತೀಯ ರೆಸ್ಟೋರೆಂಟ್, ಬ್ರಿಯಾನ್ ಡೆವೈನ್ ಹಾಗೂ ತಂಡಕ್ಕೆ ನೀಡಿದ್ದ ಪ್ರಾಯೋಜಕತ್ವವನ್ನು ತಕ್ಷಣವೇ ಹಿಂಪಡೆದಿದೆ. ಕ್ರೀಡಾ ಸ್ಫೂರ್ತಿಗೆ ಧಕ್ಕೆ ತರುವ ಇಂತಹ ನಡವಳಿಕೆಯನ್ನು ನಾವು ಬೆಂಬಲಿಸುವುದಿಲ್ಲ ಎಂದು ರೆಸ್ಟೋರೆಂಟ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಟೀಮ್ ಇಂಡಿಯಾಗೆ ಹೊಸ ಫೀಲ್ಡಿಂಗ್ ಕೋಚ್ ನೇಮಕ!

ತನಿಖೆ ಮತ್ತು ಜಾಗತಿಕ ಆಕ್ರೋಶ:

ಪ್ರಸ್ತುತ ನಾರ್ತ್ ಯಾರ್ಕ್‌ಶೈರ್ ಮತ್ತು ಸೌತ್ ಡರ್ಹಾಮ್ (NYSD) ಕ್ರಿಕೆಟ್ ಲೀಗ್ ಈ ಬಗ್ಗೆ ಅಧಿಕೃತ ದೂರನ್ನು ಸ್ವೀಕರಿಸಿದ್ದು, ಪೂರ್ಣ ಪ್ರಮಾಣದ ತನಿಖೆ ಆರಂಭಿಸಿದೆ. ನಿಯಮ ಉಲ್ಲಂಘನೆಗಾಗಿ ಬ್ರಿಯಾನ್ ಡೆವೈನ್​ಗೆ ದೀರ್ಘಾವಧಿಯ ನಿಷೇಧ ಹೇರುವ ಸಾಧ್ಯತೆಯಿದೆ.

Published On - 2:13 pm, Wed, 29 July 26

Follow Us
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ