AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೆಸ್ಟ್ ಇಂಡೀಸ್ ವಿರುದ್ಧ ಸತತ 2ನೇ ಶತಕ ಬಾರಿಸಿದ ಶುಭ್​ಮನ್ ಗಿಲ್..!

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಸತತ ಎರಡನೇ ಶತಕ ಸಿಡಿಸಿದ್ದಾರೆ. ಇದು ಅವರ 11ನೇ ಏಕದಿನ ಶತಕವಾಗಿದೆ. ಮೊದಲ ಪಂದ್ಯದ ಬಳಿಕ ಎರಡನೇ ಪಂದ್ಯದಲ್ಲೂ ನೂರು ರನ್ ಗಳಿಸಿದ್ದಾರೆ. ಗುವಾಹಟಿಯಲ್ಲಿ 405 ರನ್ ಬೆನ್ನತ್ತಿದ ಭಾರತಕ್ಕೆ, ರೋಹಿತ್ ಶರ್ಮಾ ಜೊತೆ ಗಿಲ್ ಉತ್ತಮ ಆರಂಭ ನೀಡಿದರು.

ವೆಸ್ಟ್ ಇಂಡೀಸ್ ವಿರುದ್ಧ ಸತತ 2ನೇ ಶತಕ ಬಾರಿಸಿದ ಶುಭ್​ಮನ್ ಗಿಲ್..!
ಶುಭ್​ಮನ್ ಗಿಲ್Image Credit source: PTI
ಪೃಥ್ವಿಶಂಕರ
|

Updated on:Sep 30, 2026 | 8:42 PM

Share

ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಸತತ ಎರಡನೇ ಶತಕ ಸಿಡಿಸಿದ್ದಾರೆ. ತಿರುವನಂತಪುರಂನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಶತಕದ ಇನ್ನಿಂಗ್ಸ್ ಆಡಿದ್ದ ಗಿಲ್, ಇದೀಗ ಗುವಾಹಟಿಯಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲೂ ನೂರು ರನ್​ಗಳ ಗಡಿ ದಾಟಿದ್ದಾರೆ. ಇದು ಏಕದಿನ ವೃತ್ತಿಜೀವನದಲ್ಲಿ ಗಿಲ್ ಅವರ 11ನೇ ಏಕದಿನ ಶತಕವಾಗಿದೆ. ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ 405 ರನ್​ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕ ಶುಭ್​ಮನ್ ಗಿಲ್ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿಕೊಟ್ಟರು. ಇವರಿಬ್ಬರು 20 ಓವರ್​ಗಳಲ್ಲಿ ತಂಡವನ್ನು 200 ರನ್​ಗಳ ಸನಿಹಕ್ಕೆ ತಂದರು.

ಕೇವಲ 62 ಎಸೆತಗಳಲ್ಲಿ ಶತಕ ಪೂರೈಸಿದ ಶುಭ್​ಮನ್ ಗಿಲ್​ಗೆ ಇದು ಅವರ ಏಕದಿನ ವೃತ್ತಿಜೀವನದ ಅತ್ಯಂತ ವೇಗದ ಶತಕವಾಗಿದೆ. ಹಾಗೆಯೇ ಏಕದಿನ ಇತಿಹಾಸದಲ್ಲಿ ಭಾರತದ ಪರ ದಾಖಲಾದ ನಾಲ್ಕನೇ ವೇಗದ ಶತಕವೂ ಇದಾಗಿದೆ. ತಿರುವನಂತಪುರದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 110 ರನ್​ಗಳ ಇನ್ನಿಂಗ್ಸ್ ಆಡಿದ ಗಿಲ್​ಗೆ ಇದು ಭಾರತೀಯ ನೆಲದಲ್ಲಿ ಸತತ ಮೂರನೇ ಏಕದಿನ ಶತಕವಾಗಿದೆ.

ಅತಿ ವೇಗದ ಏಕದಿನ ಶತಕಗಳು

  • 52 ಎಸೆತಗಳು- ವಿರಾಟ್ ಕೊಹ್ಲಿ vs ಆಸ್ಟ್ರೇಲಿಯಾ (ಜೈಪುರ, 2013)
  • 60 ಎಸೆತಗಳು- ವೀರೇಂದ್ರ ಸೆಹ್ವಾಗ್ vs ನ್ಯೂಜಿಲೆಂಡ್ (ಹ್ಯಾಮಿಲ್ಟನ್, 2009)
  • 61 ಎಸೆತಗಳು- ವಿರಾಟ್ ಕೊಹ್ಲಿ vs ಆಸ್ಟ್ರೇಲಿಯಾ (ನಾಗ್ಪುರ, 2013)
  • 62 ಎಸೆತಗಳು- ಮೊಹಮ್ಮದ್ ಅಜರುದ್ದೀನ್ vs ನ್ಯೂಜಿಲೆಂಡ್ (ಬರೋಡಾ, 1988)
  • 62 ಎಸೆತಗಳು- ಶುಭ್​ಮನ್ ಗಿಲ್ vs ವೆಸ್ಟ್ ಇಂಡೀಸ್ (ಗುವಾಹಟಿ, 2026)*

Published On - 8:26 pm, Wed, 30 September 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More