AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಕದಿನ ಕ್ರಿಕೆಟ್​ನಲ್ಲಿ ವಿಶೇಷ ಶತಕ ಪೂರೈಸಿದ ಕೆಎಲ್ ರಾಹುಲ್

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯವು ಕೆ.ಎಲ್. ರಾಹುಲ್ ಅವರ 100ನೇ ಏಕದಿನ ಪಂದ್ಯವಾಗಿದೆ. ಕನ್ನಡಿಗ ರಾಹುಲ್ 2016ರಲ್ಲಿ ಪದಾರ್ಪಣೆ ಮಾಡಿ ಇಲ್ಲಿಯವರೆಗೆ 3,412 ರನ್ ಗಳಿಸಿದ್ದಾರೆ. ಅವರು 10000 ಅಂತರರಾಷ್ಟ್ರೀಯ ರನ್ ಪೂರೈಸಲು ಕೇವಲ 35 ರನ್ ದೂರದಲ್ಲಿದ್ದಾರೆ, ಇದು ಅವರ ವೃತ್ತಿಜೀವನದ ಮತ್ತೊಂದು ಪ್ರಮುಖ ಮೈಲಿಗಲ್ಲು.

ಪೃಥ್ವಿಶಂಕರ
|

Updated on: Sep 30, 2026 | 3:13 PM

Share
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ಬುಧವಾರ ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಭಾರತ ತಂಡ ಮೊದಲ ಬೌಲಿಂಗ್ ಆಯ್ದುಕೊಂಡಿದೆ. ಇನ್ನು ಈ ಪಂದ್ಯ ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್​ಗೆ ವಿಶೇಷ ಪಂದ್ಯವಾಗಿದ್ದು, ಕಣಕ್ಕಿಳಿದ ಕೂಡಲೇ ಏಕದಿನ ಕ್ರಿಕೆಟ್​ನಲ್ಲಿ ವಿಶೇಷ ಶತಕ ಪೂರೈಸಿದ್ದಾರೆ(PC-PTI).

1 / 5
ವಾಸ್ತವವಾಗಿ ಇದು ಕನ್ನಡಿಗ ಕೆಎಲ್ ರಾಹುಲ್ ಅವರ 100 ನೇ ಏಕದಿನ ಪಂದ್ಯವಾಗಿದ್ದು, 10 ವರ್ಷಗಳ ನಂತರ ಈ ಮೈಲಿಗಲ್ಲು ತಲುಪಿದ್ದಾರೆ. ಜೂನ್ 2016 ರಲ್ಲಿ ಭಾರತ ಪರ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ರಾಹುಲ್ ತಮ್ಮ ಮೊದಲ ಏಕದಿನ ಪಂದ್ಯವನ್ನು ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಆಡಿದ್ದರು(PC-PTI).

2 / 5
34 ವರ್ಷದ ರಾಹುಲ್ ಇದುವರೆಗೆ 50 ಓವರ್‌ಗಳ ಸ್ವರೂಪದಲ್ಲಿ 49.44 ಸರಾಸರಿಯಲ್ಲಿ 3,412 ರನ್ ಗಳಿಸಿದ್ದಾರೆ, ಇದರಲ್ಲಿ ಎಂಟು ಶತಕಗಳು ಮತ್ತು 20 ಅರ್ಧಶತಕಗಳು ಸೇರಿವೆ. ಏಕದಿನ ಪಂದ್ಯಗಳಲ್ಲಿ ಅವರ ಅತ್ಯಧಿಕ ವೈಯಕ್ತಿಕ ಸ್ಕೋರ್ ಅಜೇಯ 112 ರನ್​ಗಳಾಗಿದೆ(PC-PTI).

3 / 5
ಕೆ.ಎಲ್. ರಾಹುಲ್ ತಮ್ಮ 100 ನೇ ಏಕದಿನ ಪಂದ್ಯದಲ್ಲಿ ಮತ್ತೊಂದು ಮೈಲಿಗಲ್ಲು ದಾಟುವ ಅವಕಾಶ ಹೊಂದಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್‌ಗಳನ್ನು ಪೂರ್ಣಗೊಳಿಸಲು ಕೇವಲ 35 ರನ್‌ಗಳ ದೂರದಲ್ಲಿದ್ದಾರೆ. ಪ್ರಸ್ತುತ 241 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ರಾಹುಲ್ 40.50 ರ ಸರಾಸರಿಯಲ್ಲಿ 9965 ರನ್ ಗಳಿಸಿದ್ದಾರೆ(PC-PTI).

4 / 5
ಡಿಸೆಂಬರ್ 2014 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ರಾಹುಲ್ ಇದುವರೆಗೆ 70 ಟೆಸ್ಟ್‌ಗಳಲ್ಲಿ 4288 ರನ್ ಗಳಿಸಿದ್ದಾರೆ. ರಾಹುಲ್ ಭಾರತ ಟೆಸ್ಟ್ ತಂಡದ ಉಪನಾಯಕರಾಗಿದ್ದು, ಇದೀಗ ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ವೆಸ್ಟ್ ಇಂಡೀಸ್ ಸರಣಿಯಲ್ಲಿ ಭಾರತೀಯ ಏಕದಿನ ತಂಡದ ಉಪನಾಯಕರನ್ನಾಗಿಯೂ ಆಯ್ಕೆಯಾಗಿದ್ದಾರೆ(PC-PTI).

5 / 5
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ

ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ

ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!

ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ

ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ

ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!

ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ

ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್

ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು

ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ