ಐಷಾರಾಮಿ ಹೋಟೆಲ್‌ಗಳಲ್ಲಿ ಗಾಜಿನ ಬಾತ್ ರೂಮ್ ಇರುವುದರ ಹಿಂದಿದೆ ಈ ಕಾರಣ
ಐಷಾರಾಮಿ ಅಥವಾ ಹೈ ಫೈವ್ ಹೋಟೆಲ್ ಗೆ ಹೋದಾಗ ಅಲ್ಲಿ ಗಾಜಿನಿಂದ ಮಾಡಲ್ಪಟ್ಟ ಬಾತ್ ರೂಮ್‌ನ್ನು ನೀವು ಗಮನಿಸಿರುತ್ತೀರಿ. ಈ ರೀತಿ ವಿನ್ಯಾಸವಿರಲು ಕಾರಣವಿದೆ. ಹೌದು, ರೂಮ್ ದೊಡ್ಡದಾಗಿ ಕಾಣಿಸಲು ಹಾಗೂ ನೈಸರ್ಗಿಕ ಬೆಳಕು ಕೊಠಡಿಯೊಳಗೆ ಬರಲು ಐಷಾರಾಮಿ ಹೋಟೆಲ್ ಕೊಠಡಿಗಳಲ್ಲಿ ಬಾತ್‌ರೂಮ್‌ಗೆ ಗಾಜನ್ನು ಬಳಸಲಾಗುತ್ತದೆ. ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ಮುಖ್ಯಾಂಶಗಳು
- ಐಷಾರಾಮಿ, ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಗಾಜಿನ ಬಾತ್ ರೂಮ್ ಇರುತ್ತದೆ
- ಸ್ನಾನಗೃಹಕ್ಕೆ ಗಾಜನ್ನು ಅಳವಡಿಸಿಕೊಂಡಿರುವುದರ ಹಿಂದೆ ಈ ಕಾರಣಗಳು ಇವೆ
- ಸ್ಟೈಲಿಶ್ ಲುಕ್ ಜತೆಗೆ ನೈಸರ್ಗಿಕ ಬೆಳಕು ಕೊಠಡಿಯೊಳಗೆ ಬರಲು ಗಾಜಿನ ಬಳಕೆ ಸಹಕಾರಿಯಾಗಿದೆ
ನೀವು ರೆಸಾರ್ಟ್, ಫೈವ್ ಸ್ಟಾರ್ ಹಾಗೂ ಐಷಾರಾಮಿ ಹೋಟೆಲ್‌ಗೆ (Luxury hotel) ಹೋಗಿದ್ದರೆ ಅಲ್ಲಿ ಗಾಜಿನ ಬಾತ್ ರೂಮ್ ಇರುವುದನ್ನು ನೋಡಿರಬಹುದು. ರೂಮ್‌ನ ಅಂದ ಹೆಚ್ಚಿಸಲು ಸ್ನಾನಗೃಹವನ್ನು ಗಾಜಿನಿಂದ ಮಾಡಿರುತ್ತಾರೆ ಎಂದು ಕೊಳ್ಳುತ್ತೇವೆ. ಆದರೆ ಸ್ಟೈಲಿಶ್ ಲುಕ್‌ಗೆ ಮಾತ್ರವಲ್ಲ ಸ್ನಾನಗೃಹಕ್ಕೆ ಗಾಜನ್ನು ಅಳವಡಿಸಿಕೊಂಡಿರುವುದರ ಹಿಂದೆ ಕೆಲವು ಕಾರಣಗಳು ಇವೆ. ಗಾಜಿನ ಬಳಕೆಯಿಂದ ನೈಸರ್ಗಿಕ ಬೆಳಕು ಕೊಠಡಿಯೊಳಗೆ ಬರಲು ಸಹಕಾರಿಯಾಗಿದೆ.
ಹೋಟೆಲ್‌ಗಳಲ್ಲಿ ಗಾಜಿನ ಬಾತ್ ರೂಮ್ ಇರುವುದು ಏಕೆ?
ಆಧುನಿಕ ಒಳಾಂಗಣ ವಿನ್ಯಾಸದಲ್ಲಿ ಸ್ವಚ್ಛವಾದ ಗಾಜಿನ ವಿಭಾಗಗಳು ಫ್ರೇಮ್‌ಲೆಸ್ ವಿನ್ಯಾಸಗಳು, ಗೌಪ್ಯತೆಗಾಗಿ ಫ್ರಾಸ್ಟೆಡ್ ಅಥವಾ ಟಿಂಟೆಡ್ ಗ್ಲಾಸ್ ಗಳನ್ನು ಬಳಸಲಾಗುತ್ತದೆ. ಐಷಾರಾಮಿ ಹೋಟೆಲ್‌ಗಳಲ್ಲಿ ಗಾಜಿನ ಬಾತ್ ರೂಮ್ ಇರುವುದರಿಂದ ರೂಮ್ ದೊಡ್ಡದಾಗಿ ಹಾಗೂ ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತದೆ.
ಇದನ್ನೂ ಓದಿ: ಇರುವೆಗಳು ಸಾಲಾಗಿ ಚಲಿಸುವುದರ ಹಿಂದಿದೆ ಈ ಕಾರಣ
ಮಲಗುವ ಕೋಣೆ ಹಾಗೂ ಬಾತ್‌ರೂಮ್ ದೊಡ್ಡದಾಗಿ ಕಾಣಿಸುವುದರ ಜತೆಗೆ ಈ ಕಿಟಕಿಯಿಂದ ಬರುವ ನೈಸರ್ಗಿಕ ಬೆಳಕು ನೇರವಾಗಿ ಬಾತ್‌ರೂಮ್‌ಗೆ ಪ್ರವೇಶಿಸುತ್ತದೆ. ಹೀಗಾಗಿ ವಿದ್ಯುತ್ ಉಳಿತಾಯವಾಗುತ್ತದೆ. ಅದಲ್ಲದೇ ಈ ಸಾಮಾನ್ಯವಾಗಿ ಗೋಡೆಗಳಿಗೆ ಹೋಲಿಸಿದರೆ ಗಾಜುಗಳನ್ನು ಸ್ವಚ್ಛಗೊಳಿಸುವುದು ಸುಲಭ ಹಾಗೂ ಇವುಗಳಲ್ಲಿ ತೇವಾಂಶ ಬೇಗ ಒಣಗುತ್ತವೆ. ಇನ್ನು ಹೈಜೀನ್ ಮಟ್ಟವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದಾಗಿರುವುದರಿಂದ ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಗಾಜಿನ ಬಾತ್ ರೂಮ್ ಇರುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




