AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗೋ ನದಿಯಲ್ಲಿ ಭೀಕರ ಬೋಟ್ ದುರಂತ; 30 ಜನರ ಸಾವು

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಎಕ್ವೇಟರ್ ಪ್ರಾಂತ್ಯದ ನ್ಗೊಂಬೆ-ಲುಕೋಲೆಲಾ ಬಳಿ ಭಾನುವಾರ ಸಂಜೆ 2 ಮೋಟಾರ್ ಬೋಟ್​​ಗಳು ದೋಣಿಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮವಾಗಿ 30 ಜನರು ಜಲಸಮಾಧಿಯಾಗಿದ್ದು, ಹತ್ತಾರು ಜನರು ನಾಪತ್ತೆಯಾಗಿದ್ದಾರೆ. ಉಬಾಂಗಿಯಿಂದ ರಾಜಧಾನಿ ಕಿನ್ಶಾಸಾಗೆ ತೆರಳುತ್ತಿದ್ದ ದೋಣಿ ಹಾಗೂ ಕಿನ್ಶಾಸಾದಿಂದ ಲುಕೋಲೆಲಾಗೆ ಪಯಣಿಸುತ್ತಿದ್ದ ಮತ್ತೊಂದು ದೋಣಿಯ ನಡುವೆ ಈ ಭೀಕರ ಡಿಕ್ಕಿ ಸಂಭವಿಸಿದೆ. ಕಣ್ಮರೆಯಾಗಿರುವ ಪ್ರಯಾಣಿಕರನ್ನು ಪತ್ತೆಹಚ್ಚಲು ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ಸಾಗಿದೆ.

ಕಾಂಗೋ ನದಿಯಲ್ಲಿ ಭೀಕರ ಬೋಟ್ ದುರಂತ; 30 ಜನರ ಸಾವು
ಕಾಂಗೋ ನದಿಯಲ್ಲಿ ಭೀಕರ ದೋಣಿ ಅಪಘಾತ Image Credit source: AP
ಸುಷ್ಮಾ ಚಕ್ರೆ
|

Updated on: Oct 05, 2026 | 7:29 PM

Share

ಕಾಂಗೋ, ಅಕ್ಟೋಬರ್ 5: ಕಾಂಗೋ ನದಿಯಲ್ಲಿ 2 ಬೋಟ್​​ಗಳ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ 30 ಜನರು ಜಲಸಮಾಧಿಯಾಗಿದ್ದು, ಹತ್ತಾರು ಜನರು ನಾಪತ್ತೆಯಾಗಿದ್ದಾರೆ ಎಂದು ಕಾಂಗೋ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಈ ದುರಂತವು ಭಾನುವಾರ ಎಕ್ವೇಟರ್ ಪ್ರಾಂತ್ಯದ ನ್ಗೊಂಬೆ-ಲುಕೋಲೆಲಾ ಪ್ರದೇಶದ ಬಳಿ ಸಂಭವಿಸಿದೆ.

ಅಪಘಾತಕ್ಕೊಳಗಾದ ಒಂದು ದೋಣಿಯು ದೇಶದ ವಾಯುವ್ಯ ಭಾಗದ ಉಬಾಂಗಿಯಿಂದ ಕಾಂಗೋ ರಾಜಧಾನಿ ಕಿನ್ಶಾಸಾಗೆ ಪ್ರಯಾಣಿಸುತ್ತಿತ್ತು. ಮತ್ತೊಂದು ದೋಣಿಯು ಕಿನ್ಶಾಸಾದಿಂದ ಲುಕೋಲೆಲಾಗೆ ತೆರಳುತ್ತಿತ್ತು. ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಸಂತ್ರಸ್ತರು ಮತ್ತು ಬದುಕುಳಿದವರ ಹುಡುಕಾಟಕ್ಕಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕುಮಟಾ ತದಡಿ ಬಂದರಿನಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ: ಎರಡೇ ದಿನಗಳಲ್ಲಿ 2ನೇ ಬೋಟ್ ದುರಂತ

ರಕ್ಷಣಾ ಪಡೆಯ ಪ್ರತ್ಯಕ್ಷದರ್ಶಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ಉಬಾಂಗಿಯಿಂದ ಬರುತ್ತಿದ್ದ ದೋಣಿಯಲ್ಲಿ ಅತಿಯಾದ ಸರಕುಗಳನ್ನು ಹೇರಲಾಗಿತ್ತು. ಡಿಕ್ಕಿಯಾದ ತಕ್ಷಣವೇ ಆ ದೋಣಿ ನೀರಿನಲ್ಲಿ ಮುಳುಗಿದ್ದು, ಅದರಲ್ಲಿದ್ದ ಪ್ರಯಾಣಿಕರು ನೀರಿನ ಅಡಿಯಲ್ಲಿ ಸಿಲುಕಿಕೊಂಡರು.

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಇಂತಹ ಮಾರಣಾಂತಿಕ ಬೋಟ್ ಅಪಘಾತಗಳು ಅತ್ಯಂತ ಸಾಮಾನ್ಯವಾಗುತ್ತಿವೆ. ಕೆಲವು ದಿನಗಳ ಹಿಂದೆಯಷ್ಟೇ ಪೂರ್ವ ಕಾಂಗೋದ ‘ಕಿವು ಸರೋವರ’ದಲ್ಲಿ ದೋಣಿಯೊಂದು ಮುಳುಗಿ 12 ಜನರು ಸಾವನ್ನಪ್ಪಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More