AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಕಾರ್ಪೊರೇಟ್ ಆಫೀಸಿನ ಹೊರಗಡೆ ಕಾಫಿ ಸ್ಟಾಲ್‌ ತೆರೆದು ದಿನಕ್ಕೆ18,000 ರೂ ಸಂಪಾದಿಸಿದ ವ್ಯಕ್ತಿ

ಖಾಸಗಿ ಹಾಗೂ ಕಾರ್ಪೊರೇಟ್ ಜಗತ್ತಿನ ಜಂಜಾಟದಿಂದ ದೂರ ಸರಿದು ಯುವಕ ಯುವತಿಯರು ಉದ್ಯಮದತ್ತ ಮುಖ ಮಾಡುತ್ತಾರೆ. ಆದ್ರೆ ಇಲ್ಲೊಬ್ಬರು ವ್ಯಕ್ತಿ ಸಣ್ಣದೊಂದು ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ . ಹೌದು, ಕಾರ್ಪೊರೇಟ್ ಆಫೀಸಿನ ಹೊರಗಡೆ ಸಣ್ಣದೊಂದು ಕಾಫಿ ಸ್ಟಾಲ್ ತೆರೆದು ಕೈ ತುಂಬಾ ಸಂಪಾದನೆ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಕಾರ್ಪೊರೇಟ್ ಆಫೀಸಿನ ಹೊರಗಡೆ ಕಾಫಿ ಸ್ಟಾಲ್‌ ತೆರೆದು ದಿನಕ್ಕೆ18,000 ರೂ ಸಂಪಾದಿಸಿದ ವ್ಯಕ್ತಿ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on: Oct 05, 2026 | 3:09 PM

Share

ಯಾರ ಕೈ ಕೆಳಗೆ ಕೆಲಸ ಮಾಡಲು ಇಷ್ಟ ಪಡದೇ ಕೆಲವರು ಸ್ವಂತ ಉದ್ಯಮದತ್ತ ಮನಸ್ಸು ಮಾಡುತ್ತಾರೆ. ಆದರೆ ಇಲ್ಲೊಬ್ಬರು ಕಂಟೆಂಟ್ ಕ್ರಿಯೇಟರ್ ಮಾಡಿದ ಪ್ರಯೋಗ ಎಲ್ಲರ ಗಮನ ಸೆಳೆದಿದೆ. ಕಾರ್ಪೊರೇಟ್ (Corporate) ಆಫೀಸಿನ ಹೊರಗಡೆ ಕಾಫಿ ಸ್ಟಾಲ್ ಇಟ್ಟುಕೊಂಡು ಒಂದೇ ದಿನಕ್ಕೆ ಬರೋಬ್ಬರಿ 450 ಕಪ್ ಕಾಫಿ ಮಾರಾಟ ಮಾಡಿದ್ದಾರೆ. ಅಂದರೆ ಒಂದೇ ದಿನದಲ್ಲಿ 18,000 ರೂ ಸಂಪಾದಿಸಿದ್ದಾರೆ. ಒಂದೇ ದಿನದ ಆದಾಯವು ಕಾರ್ಪೊರೇಟ್ ಉದ್ಯೋಗಿಗಳ ಆದಾಯವನ್ನು ಮೀರಿಸುವಂತಿದೆ. ಈ ಪ್ರಯೋಗವು ಆನ್ಲೈನ್ ನಲ್ಲಿ ಚರ್ಚೆಗೆ ಕಾರಣವಾಗಿದೆ.

ಒಂದೇ ದಿನಕ್ಕೆ 450 ಕಪ್ ಕಾಫಿ ಮಾರಾಟ ಮಾಡಿದ ವ್ಯಕ್ತಿ

ದೇವಂಶ್ತ್ಯಾಗಿ (devanshtyagi) ಎಂಬ ಕಂಟೆಂಟ್ ಕ್ರಿಯೇಟರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ವಿಭಿನ್ನ ಪ್ರಯೋಗದ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ಕಾರ್ಪೊರೇಟ್ ಆಫೀಸ್‌ನ ಹೊರಗಡೆ ಸಣ್ಣದಾದ ಕಾಫಿ ಸ್ಟಾಲ್ ತೆರೆದಿರುವುದನ್ನು ಕಾಣಬಹುದು. ಕಾಫಿ ಸ್ಟಾಲ್ ನಲ್ಲಿ ಟೇಬಲ್, ಗ್ಯಾಸ್ ಸ್ಟೌ, ಇನ್‌ಸ್ಟಂಟ್ ಕಾಫಿ, ಕಪ್‌ಗಳು ಇರುವುದನ್ನು ನೋಡಬಹುದು. ಈ ಕಾಫಿ ಸ್ಟಾಲ್ ನಲ್ಲಿ ಫ್ಲೇವರ್ ಕಾಫಿ ಮಾರಾಟ ಮಾಡುತ್ತಿದ್ದು, ಪ್ರತಿ ಕಪ್‌ಗೆ 40 ರೂಪಾಯಿಯಾಗಿದೆ.10 ಗಂಟೆಗೆ ತೆರೆದ ಸಣ್ಣದಾದ ಕಾಫಿ ಸ್ಟಾಲ್ ನಲ್ಲಿ ಸಂಜೆ ವೇಳೆಗೆ ಒಟ್ಟು 450 ಕಪ್‌ಗಳನ್ನು ಮಾರಾಟವಾಗಿದೆ. ಸಂಜೆ ವೇಳೆ 18,000 ರೂಪಾಯಿ ಆದಾಯ ಗಳಿಸಿರುವುದಾಗಿ ಹೇಳಿದ್ದಾರೆ. ಕಾರ್ಪೊರೇಟ್‌ ಉದ್ಯೋಗಿಗಳು ಈ ಕಾಫಿ ಸ್ಟಾಲ್‌ಗೆ ಬಂದು ಕಾಫಿ ರುಚಿ ಸವಿಯುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಸಣ್ಣ ಪುಟ್ಟ ಕೆಲಸಕ್ಕೂ ಟೈಮ್‌ ಇಲ್ಲ; ಕೆಲಸ ಸಿಕ್ಕ ಮೇಲೆ ಬದಲಾದ ಬದುಕಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ಯುವತಿ

ಈ ವಿಡಿಯೋ ಅಧಿಕ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಒಂದೇ ದಿನದಲ್ಲಿ ಅಷ್ಟು ಕಫ್ ಕಾಫಿ ಮಾರಾಟವಾಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ಕಾರ್ಪೊರೇಟ್ ಉದ್ಯೋಗಕ್ಕಿಂತ ಇದುವೇ ಬೆಸ್ಟ್ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ಈ ಉದ್ಯಮದಲ್ಲಿ ಯಾವುದೇ ಕಿರಿಕಿರಿ ಇರಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More