AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಿಂದ ಹೊರಹಾಕಿದ ತಂದೆ, ಜೇಬಲ್ಲಿ ಕೇವಲ 200-300 ರೂ.: ಕೆಲಸ ಮತ್ತು ಆಶ್ರಯಕ್ಕಾಗಿ ಕಣ್ಣೀರಿಟ್ಟ ಐಐಟಿ ಪದವೀಧರೆ

ಹೈದರಾಬಾದ್‌ನಲ್ಲಿ ಐಐಟಿ ಪದವೀಧರರೊಬ್ಬರು ಕೆಲಸ ಮತ್ತು ಆಶ್ರಯಕ್ಕಾಗಿ ಮಾಡಿದ ರೆಡ್ಡಿಟ್ ಪೋಸ್ಟ್ ವೈರಲ್ ಆಗಿದೆ. ಜೇಬಿನಲ್ಲಿ ಕೇವಲ 2-3 ದಿನಕ್ಕೆ ಸಾಕಾಗುವಷ್ಟು ಹಣವಿದ್ದು, ಉದ್ಯೋಗ ಮಾರುಕಟ್ಟೆಯ ಕಠಿಣ ವಾಸ್ತವ ಬಿಂಬಿಸಿದೆ. ಐಐಟಿ ಪದವಿ ಹೊಂದಿದ್ದರೂ ಉತ್ತಮ ಕೆಲಸ ಸಿಗದೆ ಯುವಕರು ತೀವ್ರ ಆತಂಕದಲ್ಲಿದ್ದಾರೆ. ಇದು ಉನ್ನತ ಶಿಕ್ಷಣ ಸಂಸ್ಥೆಗಳ ಪದವೀಧರರಲ್ಲೂ ಹೆಚ್ಚುತ್ತಿರುವ ಉದ್ಯೋಗಾಭಾವವನ್ನು ಎತ್ತಿ ತೋರಿಸುತ್ತದೆ.

ಮನೆಯಿಂದ ಹೊರಹಾಕಿದ ತಂದೆ, ಜೇಬಲ್ಲಿ ಕೇವಲ 200-300 ರೂ.: ಕೆಲಸ ಮತ್ತು ಆಶ್ರಯಕ್ಕಾಗಿ ಕಣ್ಣೀರಿಟ್ಟ ಐಐಟಿ ಪದವೀಧರೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Oct 05, 2026 | 10:21 AM

Share

ಹೈದರಾಬಾದ್, ಅ.5: ದೇಶದ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಯಾದ ಐಐಟಿ (IIT) ಪದವಿ ಪಡೆದರೆ ಸಾಕು, ಲಕ್ಷ ಲಕ್ಷ ರೂಪಾಯಿ ಸಂಬಳದ ಕೆಲಸ ಖಚಿತ ಎಂಬ ಭಾವನೆ ಅನೇಕರಲ್ಲಿ ಇರುತ್ತದೆ. ಆದರೆ, ಪ್ರಸ್ತುತ ಉದ್ಯೋಗ ಮಾರುಕಟ್ಟೆಯ ಕಹಿ ವಾಸ್ತವ ಮತ್ತು ಯುವಕರ ದುಸ್ಥಿತಿಯನ್ನು ಬಿಂಬಿಸುವ ಭಾವುಕ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣ ‘ರೆಡ್ಡಿಟ್’ನಲ್ಲಿ ಭಾರಿ ಸಂಚಲನ ಮೂಡಿಸಿದೆ. ಸ್ವಂತ ತಂದೆಯೇ ಮನೆಯಿಂದ ಹೊರಹಾಕಿದ್ದು, ಜೇಬಿನಲ್ಲಿ ಕೇವಲ 2 ರಿಂದ 3 ದಿನಕ್ಕೆ ಸಾಕಾಗುವಷ್ಟು ಮಾತ್ರ ಹಣವಿದೆ. ಉಳಿದುಕೊಳ್ಳಲು ಆಶ್ರಯ ಹಾಗೂ ತಕ್ಷಣದ ಕೆಲಸಕ್ಕಾಗಿ ಐಐಟಿ ಪದವೀಧರನೊಬ್ಬಳು ನೆರವು ಕೋರಿ ಬರೆದುಕೊಂಡಿರುವ ಪೋಸ್ಟ್ ನೆಟ್ಟಿಗರ ಕಣ್ಣೀರಿಗೆ ಕಾರಣವಾಗಿದೆ.

ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದೇನು?:

ರೆಡ್ಡಿಟ್‌ನ r/FresherTechJobsIndia ಎಂಬ ಸಬ್‌ರೆಡ್ಡಿಟ್‌ನಲ್ಲಿ “ಯಾರಿಗಾದರೂ ಕೆಲಸದಾಳು ಬೇಕೇ? ಹೈದರಾಬಾದ್‌ನಲ್ಲಿ ಕೆಲಸ ಮತ್ತು ತಾತ್ಕಾಲಿಕ ಆಶ್ರಯ ಹುಡುಕುತ್ತಿರುವ ಐಐಟಿ ಪದವೀಧರ” ಎಂಬ ಶೀರ್ಷಿಕೆಯಡಿಯಲ್ಲಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಐಐಟಿಯಲ್ಲಿ ಶಿಕ್ಷಣ ಮುಗಿಸಿದ ನಂತರ ತಾನು ಇಂತಹ ಸ್ಥಿತಿಯನ್ನು ಎಂದಿಗೂ ಊಹಿಸಿರಲಿಲ್ಲ. ಪ್ರಸ್ತುತ ಜೇಬಿನಲ್ಲಿ ಕೇವಲ 2-3 ದಿನಗಳ ಖರ್ಚಿಗಷ್ಟೇ ಹಣವಿದೆ. ತಕ್ಷಣವೇ ಅವಕಾಶ ಸಿಗದಿದ್ದರೆ ಹೈದರಾಬಾದ್‌ಗೆ ತೆರಳಿ ಮುಂದಿನ ದಾರಿ ಹುಡುಕಬೇಕಿದೆ ಎಂದು ಬರೆದುಕೊಂಡಿದ್ದಾಳೆ.

ಇಲ್ಲಿದೆ ನೋಡಿ ಪೋಸ್ಟ್:

Viral Post

“ಪದವಿ ಮುಗಿಸಿದ ತಕ್ಷಣವೇ ಬಸ್ ಸ್ಟ್ಯಾಂಡ್ ನನ್ನ ಮೊದಲ ಆಶ್ರಯ ತಾಣವಾಗಬಾರದು ಎಂದು ನಾನು ಬಯಸುತ್ತಿದ್ದೇನೆ. ದಯವಿಟ್ಟು ನನಗೆ ಉಳಿದುಕೊಳ್ಳಲು ಸುರಕ್ಷಿತ ಆಶ್ರಯ ಮತ್ತು ಸಣ್ಣ ಕೆಲಸ ನೀಡಿ” ಎಂದು ಮನವಿ ಮಾಡಿದ್ದಾಳೆ. ಐಐಟಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಹಾಗೂ ಮ್ಯಾನುಫ್ಯಾಕ್ಚರಿಂಗ್ ಸೈನ್ಸ್ ಆಂಡ್ ಎಂಜಿನಿಯರಿಂಗ್‌‌ನಲ್ಲಿ ಡ್ಯುಯಲ್ ಡಿಗ್ರಿ ಪದವಿ ಪಡೆದಿದ್ದಾಳೆ. ಮ್ಯಾನುಫ್ಯಾಕ್ಚರಿಂಗ್, ಆಪರೇಷನ್ಸ್, ಇಂಡಸ್ಟ್ರಿಯಲ್ ಎಂಜಿನಿಯರಿಂಗ್, ಕೆಡ್ (CAD), ಸಿಎಇ (CAE), ಎಫ್‌ಇಎ (FEA) ಮತ್ತು ಏರೋಸ್ಪೇಸ್ ಮ್ಯಾನುಫ್ಯಾಕ್ಚರಿಂಗ್‌ನಲ್ಲಿ ಇಂಟರ್ನ್‌ಶಿಪ್ ಮಾಡಿದ ಅನುಭವ ಹೊಂದಿದೆ. ಎಕ್ಸೆಲ್, ಪ್ರಾಜೆಕ್ಟ್ ಆಪ್ಟಿಮೈಸೇಶನ್ ಜೊತೆಗೆ ಪ್ರಸ್ತುತ ಡಾಟಾ ಅನಾಲಿಟಿಕ್ಸ್‌ಗಾಗಿ ಪೈಥಾನ್ (Python), ಪಾಂಡಾಸ್ (Pandas) ಹಾಗೂ ಎಸ್‌ಕ್ಯುಎಲ್ (SQL) ಕಲಿಯುತ್ತಿದ್ದಾಳೆ.

“ನಾನಿಲ್ಲಿ ಯಾವುದೇ ಕನಸಿನ ಉದ್ಯೋಗಕ್ಕಾಗಿ ಕಾಯುತ್ತಿಲ್ಲ. ಬದುಕಲು ತಕ್ಷಣದ ಆದಾಯ ಬೇಕಾಗಿದೆ. ಕಲಿಕೆಗೆ, ಕೆಲಸ ಮಾಡಲು ಹಾಗೂ ದೇಶದ ಯಾವುದೇ ನಗರಕ್ಕೆ ಸ್ಥಳಾಂತರಗೊಳ್ಳಲು ಸಿದ್ಧನಿದ್ದೇನೆ” ಎಂದು ಬರೆದಿದ್ದಾಳೆ. ಹೈದರಾಬಾದ್, ಬೆಂಗಳೂರು, ಪುಣೆ, ಚೆನ್ನೈ ಹಾಗೂ ವಿಶಾಖಪಟ್ಟಣಂನಲ್ಲಿ ಸಣ್ಣಪುಟ್ಟ ಉದ್ಯೋಗಾವಕಾಶಗಳಿಗಾಗಿ ಎದುರು ನೋಡುತ್ತಿದ್ದಾಳೆ.

ಈ ಪೋಸ್ಟ್ ನೋಡಿದ ನೆಟ್ಟಿಗರು ಐಐಟಿ ಪದವೀಧರರ ಪ್ರಸ್ತುತ ಉದ್ಯೋಗದ ಪರಿಸ್ಥಿತಿಯನ್ನು ಕಂಡು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಹಲವು ಬಳಕೆದಾರರು ಈಕೆಗೆ ಸಾಂತ್ವನ ಹೇಳಿದ್ದು, “ಇದು ತಮಾಷೆಯ ಪೋಸ್ಟ್ ಅಲ್ಲದಿದ್ದರೆ ತಕ್ಷಣವೇ ನಿಮ್ಮ ಸಿವಿ (CV) ಕಳುಹಿಸಿ, ನಾವು ಕೆಲಸ ಕೊಡಿಸಲು ಸಹಾಯ ಮಾಡುತ್ತೇವೆ” ಎಂದು ಭರವಸೆ ನೀಡಿದ್ದಾರೆ. ಇನ್ನು ಕೆಲವರು ಐಐಟಿ ಹಳೆಯ ವಿದ್ಯಾರ್ಥಿಗಳ ನೆಟ್‌ವರ್ಕ್ ಸಂಪರ್ಕಿಸಲು ಮತ್ತು ಟ್ಯೂಷನ್ ಅಥವಾ ಕೋಚಿಂಗ್ ಸೆಂಟರ್‌ಗಳಲ್ಲಿ ಬೋಧಕರಾಗಿ ಸೇರಿಕೊಳ್ಳಲು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಫ್ಲೈದುಬೈ ಪ್ರಕರಣ: ತಮ್ಮ ವಿರುದ್ಧದ ಆರೋಪ ತಳ್ಳಿಹಾಕಿದ ಇರಾನ್, ಕಟ್ಟುಕಥೆ ಎಂದ ವಿದೇಶಾಂಗ ಸಚಿವಾಲಯ

ಈ ಪೋಸ್ಟ್ ಕೆಳಗೆ ಕಮೆಂಟ್ ಮಾಡಿದ ಮತ್ತೊಬ್ಬ ಐಐಟಿ ಪದವೀಧರ, “ನಾನು ಕೂಡ ಐಐಟಿಯಿಂದ ಮೆಟಲರ್ಜಿಕಲ್ ಎಂಜಿನಿಯರಿಂಗ್ ಹಾಗೂ ಮೆಟೀರಿಯಲ್ ಸೈನ್ಸ್‌ನಲ್ಲಿ ಮಾಸ್ಟರ್ಸ್ ಮಾಡಿದ್ದೇನೆ. ಮೆಷಿನ್ ಲರ್ನಿಂಗ್ ರಿಸರ್ಚ್ ಮಾಡಿ ಪೇಪರ್ ಪ್ರಕಟಿಸಿದ್ದರೂ ಕೆಲಸ ಸಿಕ್ಕಿಲ್ಲ. ನನಗೂ ಹೋಮ್ ಹೆಲ್ಪರ್ ಅಥವಾ ಎಐ/ಎಂಎಲ್ (AI/ML) ಇಂಟರ್ನ್ ಕೆಲಸವಿದ್ದರೆ ರೆಫರ್ ಮಾಡಿ” ಎಂದು ಕಮೆಂಟ್ ಮಾಡಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಬಿಂಬಿಸಿದೆ. “ಅತ್ಯುನ್ನತ ಸಂಸ್ಥೆಗಳಲ್ಲಿ ಓದಿದ ಪದವೀಧರರೂ ಇಷ್ಟು ಉದ್ಯೋಗ ಅಭದ್ರತೆ ಎದುರಿಸುತ್ತಿರುವುದು ಮತ್ತು ಲೇಆಫ್‌ಗೆ ಒಳಗಾಗುತ್ತಿರುವುದು ಅತ್ಯಂತ ಕಳವಳಕಾರಿ ವಿಚಾರ” ಎಂದು ಕಮೆಂಟ್ ಮಾಡುವ ಮೂಲಕ ಕಳವಳ ವ್ಯಕ್ತಪಡಿಸಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ
ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ
ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಏಳು ಜನರ ವಿರುದ್ಧ FIR
ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಏಳು ಜನರ ವಿರುದ್ಧ FIR
ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ
ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು