AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 19 ಕಿ.ಮೀ ಪ್ರಯಾಣಕ್ಕೆ 3 ಗಂಟೆ: ಬೆಂಗಳೂರಿನ ಟ್ರಾಫಿಕ್‌ನ ಮತ್ತೊಂದು ಚಿತ್ರಣ ಅನಾವರಣ

ಸಿಲಿಕಾನ್ ಸಿಟಿ ಬೆಂಗಳೂರು ಟ್ರಾಫಿಕ್ ಜಾಮ್‌ಗೆ ಹೆಸರು ವಾಸಿಯಾಗಿದೆ. ಭಾರತದಲ್ಲಿ ಬೆಂಗಳೂರು ಅತೀ ಹೆಚ್ಚು ಟ್ರಾಫಿಕ್ ಹೊಂದಿರುವ ಸಿಟಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದು, ಇದೀಗ ಮತ್ತೆ ಟ್ರಾಫಿಕ್ ವಿಚಾರವಾಗಿ ಬೆಂಗಳೂರು ಸುದ್ದಿಯಾಗಿದೆ. ಮಹಿಳೆಯೊಬ್ಬರು ಕೇವಲ 19 ಕಿ.ಮೀ ದೂರ ಕ್ರಮಿಸಲು ಮೂರು ಗಂಟೆ ಆಗಿಎದ. ಇದರೊಂದಿಗೆ ಬೆಂಗಳೂರಿನ ಟ್ರಾಫಿಕ್‌ನ ಮತ್ತೊಂದು ಚಿತ್ರಣ ಅನಾವರಣಗೊಂಡಿದೆ.

ಕೇವಲ 19 ಕಿ.ಮೀ ಪ್ರಯಾಣಕ್ಕೆ 3 ಗಂಟೆ: ಬೆಂಗಳೂರಿನ ಟ್ರಾಫಿಕ್‌ನ ಮತ್ತೊಂದು ಚಿತ್ರಣ ಅನಾವರಣ
Bengaluru Traffic
ರಮೇಶ್ ಬಿ. ಜವಳಗೇರಾ
|

Updated on: Oct 04, 2026 | 7:32 PM

Share

ಬೆಂಗಳೂರು, (ಅಕ್ಟೋಬರ್ 04): ಸಿಲಿಕಾನ್ ಸಿಟಿ ಬೆಂಗಳೂರು ಆಧುನಿಕ ಜೀವನ ಶೈಲಿಗೆ ಹೆಸರುವಾಸಿಯಾಗಿದ್ದರೂ ಇಲ್ಲಿನ ಟ್ರಾಫಿಕ್ ಸಮಸ್ಯೆಗೆ ಬೇಸೆತ್ತವರು ಅನೇಕರು. ಎಷ್ಟೇ ಬೇಗ ಮನೆಗೆ ತಲುಪಲು ಪ್ರಯತ್ನಿಸಿದರೂ ಟ್ರಾಫಿಕ್ ನಿಂದಾಗಿ ಗಂಟೆಗಟ್ಟಲ್ಲೇ ರಸ್ತೆಯಲ್ಲೇ ಕಾದ ಸಾಕಷ್ಟು ಉದಾಹರಣೆಗಳು ಇವೆ. ಇದೇ ಪರಿಸ್ಥಿತಿ ಇದೀಗ ಶಿಲ್ಪಾ ಎಂಬ ಮಹಿಯೊಬ್ಬರಿಗೆ ಬಂದಿದ್ದು, ಕೇವಲ 19 ಕಿ,ಮೀ ಕ್ರಮಿಸಲು ಬರೋಬ್ಬರಿಗೆ 3 ಗಂಟೆ ಹಿಡಿದಿದ್ದು, ತಮಗಾದ ಅನುಭವನ್ನು ಶಿಲ್ಪ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಬೆಂಗಳೂರು ಟ್ರಾಫಿಕ್‌ನ ಮತ್ತೊಂದು ಚಿತ್ರಣ ಅನಾವರಣಗೊಳಿಸಿದ್ದಾರೆ.

ಇತ್ತ ಟ್ರಾಫಿಕ್, ಅತ್ತ ಟ್ರೈನ್ ಲೇಟ್:

ಶಿಲ್ಪಾ ಅವರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಿಂದ ಕೆ.ಆರ್.ಪುರಂ ರೈಲ್ವೇ ನಿಲ್ದಾಣಕ್ಕೆ ತೆರಳಬೇಕಿತ್ತು. ಹೀಗಾಗಿ ಸಂಜೆ 7 ಗಂಟೆಗೆ ರೈಲು ಇದ್ದಿದ್ದರಿಂದ 5 ಗಂಟೆ ಸುಮಾರಿಗೆ ಮನೆಯಿಂದ ಹೊರಟಿದ್ದರು. ಆದ್ರೆ, ಅಂದು ಸುರಿಯುತ್ತಿದ್ದ ಭಾರಿ ಮಳೆ ಮತ್ತು ಪೀಕ್ ಅವರ್ ಟ್ರಾಫಿಕ್ ಅವರ ಪ್ರಯಾಣವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ಕಾಕತಾಳೀತ ಎಂಬಂತೆ ಅವತ್ತು ಅವರ ರೈಲು ಸಹ ಎರಡು ಗಂಟೆ ತಡವಾಗಿ ಬಂದಿದೆ. ಹೀಗಾಗಿ ಟ್ರಾಫಿಕ್​​ನಿಂದ ಎಲ್ಲಿ ರೈಲು ಮಿಸ್ ಆಗುತ್ತೋ ಎನ್ನುವ ಆತಂಕದಲ್ಲಿ ಶಿಲ್ಪಾ ನಿಟ್ಟುಸಿರು ಬಿಟ್ಟಿದ್ದಾರೆ.

19 ಕಿ.ಮೀ ಪ್ರಯಾಣಕ್ಕೆ ಬರೋಬ್ಬರಿ 3 ಗಂಟೆ!

ರೈಲ್ವೇ ನಿಲ್ದಾಣಕ್ಕೆ ಬರುವಾಗ ರಸ್ತೆಯಲ್ಲಿನ ವಾಹನಗಳ ಸಂಚಾರ ನಿಧಾನವಾಗುತ್ತಿದ್ದಂತೆ ಆತಂಕ ಮತ್ತಷ್ಟು ಹೆಚ್ಚಾಗಿತ್ತು. ಎಲ್ಲಿ ರೈಲು ಮಿಸ್ ಆಗುತ್ತೋ ಎನ್ನುವ ಆತಂಕದಲ್ಲೇ ಇದ್ದರು. ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹೇಳಿಕೆ ಹಂಚಿಕೊಂಡಿರುವ ಶಿಲ್ಪಾ, “ನನ್ನ ದುರಾದೃಷ್ಟಕ್ಕೆ ಬೆಂಗಳೂರಿನಲ್ಲಿ ಭಾರಿ ಮಳೆ ಸುರಿಯುತ್ತಿತ್ತು. ಹಾಗಾಗಿ ಟ್ರಾಫಿಕ್ ಇನ್ನೂ ಕೆಟ್ಟಿತ್ತು. ಎಲೆಕ್ಟ್ರಾನಿಕ್ ಸಿಟಿಯಿಂದ ಕೆ.ಆರ್.ಪುರಂ ನಿಲ್ದಾಣ ತಲುಪಲು ಮೂರು ಗಂಟೆಗೂ ಹೆಚ್ಚು ಸಮಯ ಬೇಕಾಯಿತು. ಕೇವಲ 19 ಕಿ.ಮೀ ಹಾದಿಯನ್ನು ಕ್ರಮಿಸಲು ಬರೋಬ್ಬರಿ 3 ಗಂಟೆ ಆಯ್ತು” ಎಂದು ಬೇಸರ ಹೊರಹಾಕಿದ್ದಾರೆ.

ಟ್ರಾಫಿಕ್​​ನಲ್ಲಿ ಸಿಲುಕೊಂಡಾಗ ರೈಲು ಸಿಗಲ್ಲ ಎಂದು ಶಿಲ್ಪಾ ಅಂದುಕೊಂಡಿದ್ದಂತೆ. ಆದ್ರೂ ಅವರು 3 ಗಂಟೆ ಬಳಿಕ ಕೆ.ಆರ್.ಪುರಂ ರೈಲು ನಿಲ್ದಾಣಕ್ಕೆ ತಲುಪಿದ್ದಾರೆ. ಆದ್ರೆ, ಕಾಕತಾಳೀಯ ಎಂಬಂತೆ ಶಿಲ್ಪಾ ಅವರು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ರೈಲು ಆಗಮನದ ಅನೌನ್ಸ್​​ ಮೆಂಟ್ ಆಗಲು ಶುರುವಾಗಿದೆ. ಕೂಡಲೇ ಅವರು ಲಗೇಜ್‌ಗಳನ್ನು ಹಿಡಿದು ರೈಲು ಹತ್ತಲು ಮಾಡಿದ ಸಹಾಸ ಬಗ್ಗೆ ಹೇಳಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More