Personality Test : ಈ ಚಿತ್ರದಲ್ಲಿ ನೀವು ಆಯ್ಕೆ ಮಾಡಿಕೊಳ್ಳುವ ಕುರ್ಚಿ ನಿಮ್ಮ ವ್ಯಕ್ತಿತ್ವ ಹೇಳುತ್ತೆ
ಒಬ್ಬರಿಗಿಂತ ಇನ್ನೊಬ್ಬರ ವ್ಯಕ್ತಿತ್ವ, ಗುಣಸ್ವಭಾವವು ಭಿನ್ನ. ಹೀಗಾಗಿ ಎಲ್ಲರಿಗೂ ಕೂಡ ತಮ್ಮ ನಿಗೂಢ ಗುಣಸ್ವಭಾವ ತಿಳಿದುಕೊಳ್ಳಬೇಕೆನ್ನುವುದಿರುತ್ತದೆ. ಎಲ್ಲರಿಗೂ ತಿಳಿದಿರುವಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವ್ಯಕ್ತಿತ್ವ ಪರೀಕ್ಷೆಗೆ ಸಂಬಂಧಿಸಿದ ಫೋಟೊಗಳು ವ್ಯಕ್ತಿತ್ವವನ್ನು ರಿವೀಲ್ ಮಾಡುತ್ತದೆ. ಆದರೆ ಇದೀಗ ಇಂತಹದೊಂದು ವ್ಯಕ್ತಿತ್ವ ಪರೀಕ್ಷೆಯ ಚಿತ್ರವೊಂದು ವೈರಲ್ ಆಗಿದ್ದು, ಈ ಚಿತ್ರದಲ್ಲಿ ನಿಮ್ಮಿಷ್ಟದ ಕುರ್ಚಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿಮ್ಮ ನಿಗೂಢ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು.

ಎಲ್ಲರಿಗೂ ಕೂಡ ಅವರದ್ದೇ ಆದ ವ್ಯಕ್ತಿತ್ವ ಹಾಗೂ ಗುಣಸ್ವಭಾವವಿರುತ್ತದೆ. ಆದರೆ ನಿಮ್ಮ ಸುತ್ತಮುತ್ತಲಿನಲ್ಲಿರುವ ಕೆಲವು ವ್ಯಕ್ತಿಗಳು ತಮ್ಮ ವ್ಯಕ್ತಿತ್ವದಿಂದಲೇ (Personality) ಎಲ್ಲರನ್ನು ಆಯಸ್ಕಾಂತದಂತೆ ಸೆಳೆಯುತ್ತಾರೆ. ಇವರಲ್ಲಿ ಏನಿದೆ ಅಂತಹದ್ದು ಜಾದು ಎಂದು ನಿಮಗೆ ಅನಿಸಬಹುದು. ಆದರೆ ಒಬ್ಬರ ವ್ಯಕ್ತಿತ್ವ ಇನ್ನೊಬ್ಬರಿಗಿಂತ ಭಿನ್ನ. ಇನ್ನು ನಮ್ಮ ದೇಹದ ಅಂಗಗಳಾದ ಕಣ್ಣು, ಕಿವಿ, ಮೂಗು, ನಾಲಗೆ, ಹುಬ್ಬು, ಕೈ ಬೆರಳು, ಹಣೆಯ ಆಕಾರದಿಂದಲೂ ವ್ಯಕ್ತಿತ್ವವನ್ನು ಅರಿತುಕೊಳ್ಳಬಹುದು. ಅದಲ್ಲದೇ, ವ್ಯಕ್ತಿಯೂ ಆಯ್ಕೆ ಮಾಡಿಕೊಳ್ಳುವ ವಸ್ತುಗಳಿಂದಲೂ ವ್ಯಕ್ತಿತ್ವ ಬಹಿರಂಗವಾಗುತ್ತದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ (Personality Test) ಸಂಬಂಧ ಪಟ್ಟ ಫೋಟೋ ವೈರಲ್ ಆಗಿದ್ದು, ಈ ಚಿತ್ರದಲ್ಲಿ ನೀವು ಆಯ್ಕೆ ಮಾಡಿಕೊಳ್ಳುವ ಆಸನವು (Chair) ನಿಮ್ಮ ವ್ಯಕ್ತಿತ್ವವನ್ನು ರಿವೀಲ್ ಮಾಡುತ್ತದೆಯಂತೆ.
ಈ ಚಿತ್ರದಲ್ಲಿ ಯಾವ ಕುರ್ಚಿ ಆಯ್ಕೆಮಾಡಿಕೊಂಡ್ರೆ ವ್ಯಕ್ತಿತ್ವ ಹೇಗಿರುತ್ತೆ
- ನೀವು ಒಂದು ಸಂಖ್ಯೆಯ ಕುರ್ಚಿಯನ್ನು ಆಯ್ಕೆ ಮಾಡಿಕೊಂಡರೆ ಈ ವ್ಯಕ್ತಿಗಳು ನಿಯಂತ್ರಣದಲ್ಲಿರುತ್ತಾರೆ. ತಮಗೆ ಅನಿಸಿದ್ದನ್ನು ಹೇಳಲು ಹಿಂದೇಟು ಹಾಕುವ ವ್ಯಕ್ತಿತ್ವ ಇವರದ್ದು. ತನ್ನ ಸುತ್ತಮುತ್ತಲಿನ ವ್ಯಕ್ತಿಗಳ ಬಗ್ಗೆ ಹಾಗೂ ಸುತ್ತಲಿನ ಪ್ರದೇಶಗಳನ್ನು ಹೆಚ್ಚು ಗಮನಹರಿಸುತ್ತಾರೆ.
- ಎರಡನೇ ಸಂಖ್ಯೆಯ ಆಸನ ಇಷ್ಟ ಪಟ್ಟರೆ ಇವರು ಸರಳಜೀವನಕ್ಕೆ ಹೆಚ್ಚು ಆದ್ಯತೆ ಕೊಡ್ತಾರೆ. ಈ ವ್ಯಕ್ತಿಗಳು ಪ್ರಾಯೋಗಿಕವಾಗಿದ್ದು, ಎಲ್ಲಾ ಸಂದರ್ಭಗಳನ್ನು ಪ್ರಾಕ್ಟಿಕಲ್ ಆಗಿ ಯೋಚಿಸುತ್ತಾರೆ ಹಾಗೂ ನಿಭಾಯಿಸಿಕೊಂಡು ಹೋಗುತ್ತಾರೆ.
- ಮೂರನೇ ಸಂಖ್ಯೆಯ ಕುರ್ಚಿ ಆಯ್ಕೆ ಮಾಡಿಕೊಂಡ್ರೆ ಆರಾಮದಾಯಕವಾಗಿರಲು ಇಷ್ಟಪಡುವ ವ್ಯಕ್ತಿಗಳಿವರು. ನೇರಮಾತಿನಿಂದಲೇ ಕಠೋರವಾಗಿರುವಂತೆ ಕಾಣುತ್ತಾರೆ. ಏನೇ ಹೇಳುವುದಿದ್ದರೂ ನೇರವಾಗಿ ವಿಷಯವನ್ನು ಪ್ರಸ್ತುತ ಪಡಿಸುತ್ತಾರೆ. ಅನಗತ್ಯವಾದ ಮಾತುಕತೆ ಹಾಗೂ ಸುಳ್ಳು ಹೇಳುವ ಜನರಿಂದ ಇವರು ದೂರವಿರುತ್ತಾರೆ.
- ನಾಲ್ಕನೇ ಸಂಖ್ಯೆಯ ಸೀಟ್ ಆರಿಸಿಕೊಂಡರೆ ಈ ಜನರು ಸಂಪ್ರದಾಯಬದ್ಧ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ. ತಮ್ಮ ಮೂಲಬೇರು, ಸಂಪ್ರದಾಯವನ್ನು ಎಂದಿಗೂ ಬಿಟ್ಟು ಕೊಡುವುದಿಲ್ಲ.
- ಐದನೇ ಸಂಖ್ಯೆಯ ಕುರ್ಚಿ ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಗಳಿಗೆ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿ ಆಸಕ್ತಿ ಹೆಚ್ಚು. ಹೀಗಾಗಿ ಹೊಸ ಅನುಭವಗಳಿಗೆ ಹೆಚ್ಚು ತೆರೆದುಕೊಳ್ಳುತ್ತಾರೆ. ಏಕಾಂಗಿತನಕ್ಕೆ ಹೆಚ್ಚು ಆದ್ಯತೆ ಹಾಗೂ ಒಂಟಿಯಾಗಿ ಸಮಯ ಕಳೆಯುವುದೆಂದರೆ ಇವರಿಗೆ ತುಂಬಾನೇ ಇಷ್ಟ.
- ಆರನೇ ಸಂಖ್ಯೆಯ ಆಸನ ಇಷ್ಟ ಪಟ್ಟರೆ ಜೀವನದಲ್ಲಿ ಯಾವುದೇ ಸಂದರ್ಭವೇ ಇರಲಿ ಹೆಚ್ಚು ಸುರಕ್ಷಿತರಾಗಿರಲು ಬಯಸುತ್ತಾರೆ. ಸ್ಥಿರವಾದ ಮನಸ್ಥಿತಿಯನ್ನು ಹೊಂದಿರುತ್ತಾರೆ. ಸಣ್ಣ ಸಣ್ಣ ಸಮಸ್ಯೆಗಳು ಎದುರಾದಾಗ ಮುಂದೆ ಇದರಿಂದ ಸಮಸ್ಯೆಗಳು ಬರಬಹುದೇ ಎಂದು ಮೊದಲೇ ಯೋಚಿಸುತ್ತಾರೆ.
- ಏಳನೇ ಸಂಖ್ಯೆಯ ಸೀಟ್ ಇಷ್ಟಪಡುವವರು ಹೆಚ್ಚು ಸ್ವತಂತ್ರರಾಗಿದ್ದು, ಹಿರಿಯರಿಂದ ಹಿಡಿದು ಕಿರಿಯರನ್ನು ಕೂಡ ಗೌರವಿಸುವ ಗುಣ ಇವರದ್ದು. ಜೀವನದಲ್ಲಿ ಒಂಟಿಯಾಗಿರಲು ಹೆದರುವುದಿಲ್ಲ. ಏನೇ ಎದುರಾದರೂ ಒಂಟಿಯಾಗಿಯೇ ನಿಭಾಯಿಸಿಕೊಂಡು ಹೋಗುತ್ತಾರೆ.
- ಎಂಟನೇ ಸಂಖ್ಯೆಯ ಆಸನ ಆರಿಸಿಕೊಂಡರೆ, ಇವರು ಸವಾಲುಗಳಿಗೆ ಹೆದರುವುದಿಲ್ಲ. ತಮ್ಮ ಸಾಹಸಮಯ ವ್ಯಕ್ತಿತ್ವದಿಂದ ಗುರುತಿಸಿಕೊಳ್ಳುವ ಈ ಜನರಿಗೆ ಎಲ್ಲರದಲ್ಲೂ ಕುತೂಹಲ ಹೆಚ್ಚು. ಹೀಗಾಗಿ ಹೊಸ ಹೊಸ ವಿಷಯಗಳನ್ನು ಅನ್ವೇಷಿಸುವ ಗುಣ ಇವರಿಗಿರುತ್ತದೆ.
ಇದನ್ನೂ ಓದಿ: Personality Test: ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದ ಮೂಲಕ ತಿಳಿಯಿರಿ ನಿಮ್ಮ ವ್ಯಕ್ತಿತ್ವದ ರಹಸ್ಯ
- ಒಂಬತ್ತನೇ ಸಂಖ್ಯೆಯ ಕುರ್ಚಿ ಆಯ್ಕೆ ಮಾಡಿಕೊಂಡ್ರೆ ಈ ಜನರು ಪ್ರಕೃತಿಯನ್ನು ಹೆಚ್ಚು ಇಷ್ಟಪಡುತ್ತಾರೆ. ಹೀಗಾಗಿ ತಮ್ಮ ಹೆಚ್ಚಿನ ಸಮಯವನ್ನು ಪ್ರಕೃತಿಯೊಂದಿಗೆ ಕಳೆಯುತ್ತಾರೆ. ಈ ಗುಣವೇ ಇವರದ್ದು ಶಾಂತ ವ್ಯಕ್ತಿತ್ವ ಎನ್ನುವುದನ್ನು ಸೂಚಿಸುತ್ತದೆ.
- ಹತ್ತನೇ ಸಂಖ್ಯೆಯ ಆಸನ ಇಷ್ಟ ಪಡುವ ವ್ಯಕ್ತಿಗಳು ಸಾಮಾಜಿಕವಾಗಿ ಗುರುತಿಸಿಕೊಳ್ಳುತ್ತಾರೆ. ತನ್ನ ಸುತ್ತಮುತ್ತಲಿನ ಜನರೊಂದಿಗೆ ಬೆರೆಯುವುದು ಹಾಗೂ ಅವರ ಜೊತೆಗೆ ಸಮಯ ಕಳೆಯುತ್ತಾರೆ. ಹೀಗಾಗಿ ಈ ಜನರು ಹೆಚ್ಚು ಸ್ನೇಹಿತರನ್ನು ಸಂಪಾದಿಸುತ್ತಾರೆ.
- ಹನ್ನೊಂದನೇ ಸಂಖ್ಯೆಯ ಸೀಟ್ ಇಷ್ಟವಾಗಿದ್ರೆ ಇವರು ಕೂಡ ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸುತ್ತಾರೆ. ಸರಳತೆಗೆ ಹೆಚ್ಚು ಆದ್ಯತೆ ನೀಡುವ ಇವರು ಎಲ್ಲರೊಂದಿಗೆ ಬಹುಬೇಗನೆ ಒಳ್ಳೆಯ ಬಾಂಧವ್ಯ ಹೊಂದುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








