AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಈ ಚಿತ್ರ ನೋಡಿ, ನಿಮ್ಮ ರಹಸ್ಯ ಗುಣ ಸ್ವಭಾವ ಹೇಗಿದೆ ಎಂಬುದನ್ನು ತಿಳಿಯಿರಿ

ನಮ್ಮ ರಹಸ್ಯ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯುವ ಹಲವು ವಿಧಾನಗಳಿವೆ. ಅವುಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೂ ಒಂದು. ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವ, ಮೆದುಳಿಗೆ ವ್ಯಾಯಾಮ ನೀಡುವ ಈ ಚಿತ್ರಗಳು ನಮ್ಮ ಸೀಕ್ರೆಟ್‌ ವ್ಯಕ್ತಿತ್ವವನ್ನು ಸಹ ತಿಳಿಸುತ್ತದೆ. ಅಂತಹದ್ದೊಂದು ಚಿತ್ರ ಇದೀಗ ವೈರಲ್‌ ಆಗಿದ್ದು, ಹೂದಾನಿ ಅಥವಾ ಮುಖ ಆ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬುದರ ಮೇಲೆ ನೀವು ಸೃಜನಶೀಲ ವ್ಯಕ್ತಿಯೇ ಅಥವಾ ತಾರ್ಕಿಕ ಚಿಂತಕರೇ ಎಂಬುದನ್ನು ಪರೀಕ್ಷಿಸಿ.

Personality Test: ಈ ಚಿತ್ರ ನೋಡಿ, ನಿಮ್ಮ ರಹಸ್ಯ ಗುಣ ಸ್ವಭಾವ ಹೇಗಿದೆ ಎಂಬುದನ್ನು ತಿಳಿಯಿರಿ
ವ್ಯಕ್ತಿತ್ವ ಪರೀಕ್ಷೆImage Credit source: Times Of India
ಮಾಲಾಶ್ರೀ ಅಂಚನ್​
|

Updated on: Jun 25, 2025 | 4:16 PM

Share

ನಮ್ಮ ನಡವಳಿಕೆಯಿಂದಲೇ ಜನ ನಮ್ಮ ವ್ಯಕ್ತಿತ್ವವನ್ನು (Personality)  ಅಳೆಯುತ್ತಾರೆ. ಧರಿಸುವ ಬಟ್ಟೆಯಿಂದ ಹಿಡಿದು, ನಾವು ಮಾನಾಡುವ ರೀತಿ, ಇನ್ನೊಬ್ಬರೊಂದಿಗೆ ನಡೆದುಕೊಳ್ಳುವ ರೀತಿಯಿಂದಲೂ  ನಮ್ಮ ಸ್ವಭಾವವನ್ನು ಅಳೆಯುತ್ತಾರೆ. ಇದು ಮಾತ್ರವಲ್ಲದೆ ಬರವಣಿಗೆ ಶೈಲಿ, ಪೆನ್ನು ಹಿಡಿಯುವ ರೀತಿ, ಕೈ ಕಟ್ಟಿ ನಿಲ್ಲುವ ವಿಧಾನ, ಪಾದದ ಆಕಾರದಿಂದಲೂ ನಮ್ಮ ಸೀಕ್ರೆಟ್‌ ವ್ಯಕ್ತಿತ್ವವನ್ನು ನಾವೇ ಅಳೆಯಬಹುದು. ಈ ವ್ಯಕ್ತಿತ್ವ ಪರೀಕ್ಷೆಯ ವಿಧಾನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೂ (Optical illusion Picture) ಒಂದು. ಪರ್ಸನಾಲಿಟಿ ಟೆಸ್ಟ್‌ಗೆ ಸಂಬಂಧಿಸಿದ ಇಂತಹದ್ದೊಂದು ಫೋಟೋ ಇದೀಗ ವೈರಲ್‌ ಆಗಿದ್ದು, ಹೂದಾನಿ ಅಥವಾ ಮುಖ ಆ ಚಿತ್ರದಲ್ಲಿ ನಿಮಗೆ ಯಾವ ಅಂಶ ಕಾಣಿಸಿತು ಎಂಬ ಆಧಾರದ ಮೇಲೆ ನೀವು ಸೃಜನಶೀಲ ವ್ಯಕ್ತಿಯೇ ಎಂಬುದನ್ನು ಪರೀಕ್ಷಿಸಿ.

ನಿಮ್ಮ ರಹಸ್ಯ ಗುಣ ಸ್ವಭಾವ ಹೇಗಿದೆ ಎಂಬುದನ್ನು ತಿಳಿಯಿರಿ:

ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ ಚಿತ್ರದಲ್ಲಿ ಹೂದಾನಿ ಹಾಗೂ ಮನುಷ್ಯನ ಮುಖ ಇವೆರಡು ಅಂಶಗಳಿದ್ದು, ಇದರಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬುದರ ಮೇಲೆ ನೀವು ಸೃಜನಶೀಲ ವ್ಯಕ್ತಿಯೇ ಅಥವಾ ತಾರ್ಕಿಕ ವ್ಯಕ್ತಿಯೇ ಎಂಬುದನ್ನು ಪರೀಕ್ಷಿಸಿ.

ಹೂದಾನಿ ನೋಡಿದರೆ:

Personality Test (1)

ಇದನ್ನೂ ಓದಿ
Image
ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನಿಮ್ಮ ಲವ್‌ಲೈಫ್‌ ಬಗ್ಗೆ ಹೇಳುತ್ತೆ
Image
ಚಿತ್ರದಲ್ಲಿ ಮೊದಲು ಕಾಣಿಸುವ ಅಂಶವೇ ಬಹಿರಂಗ ಪಡಿಸುತ್ತೆ ನಿಮ್ಮ ವ್ಯಕ್ತಿತ್ವ
Image
ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೇ ಹೇಳುತ್ತೆ ನಿಮ್ಮ ಗುಣ ಸ್ವಭಾವ
Image
ಚಿತ್ರ ನೋಡಿ, ನೀವು ಹೇಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ ತಿಳಿಯಿರಿ

ಈ ಚಿತ್ರದಲ್ಲಿ ನೀವು ಮೊದಲು ಹೂದಾನಿ ನೋಡಿದರೆ, ನೀವು ಹೆಚ್ಚು ವಿಶ್ಲೇಷಣಾತ್ಮಕ ಮತ್ತು ತಾರ್ಕಿಕ ರೀತಿಯಲ್ಲಿ ಯೋಚಿಸುವ ವ್ಯಕ್ತಿಯೆಂದು ಅರ್ಥ. ನೀವು ಸತ್ಯಾಂಶಗಳ ಆಧಾರದ ಮೇಲೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಹೀಗೆ ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳುವ ಈ ನಿಮ್ಮ ಗುಣ ನಿಮಗೆ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಲು ಸಹಾಯ ಮಾಡುತ್ತದೆ. ನೀವು ಯಾವುದೇ ವಿಷಯಗಳಿಗೂ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ಬದಲು ಆ ಬಗ್ಗೆ ಪ್ರತಿಕ್ರಿಯಿಸುವಾಗ ಸತ್ಯ ಮತ್ತು ತಾರ್ಕಿಕ ಅಂಶವನ್ನು ಅವಲಂಬಿಸುತ್ತೀರಿ.

ಇದನ್ನೂ ಓದಿ: ನೀವು ಸಮಸ್ಯೆ ನಿವಾರಕರೇ? ಈ ಚಿತ್ರದ ಮೂಲಕ ನಿಮ್ಮ ವ್ಯಕ್ತಿತ್ವ ಹೇಗಿದೆ ತಿಳಿಯಿರಿ

ಮುಖಗಳನ್ನು ನೋಡಿದರೆ:

Personality Test (2)

ನೀವೇನಾದರೂ ಮೊದಲು ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಇಬ್ಬರು ಮನುಷ್ಯರ ಮುಖವನ್ನು ನೋಡಿದರೆ ನೀವು ಹೆಚ್ಚು ಅರ್ಥ ಗರ್ಭಿತ ಮತ್ತು ಸೃಜನಶೀಲ ವ್ಯಕ್ತಿಯೆಂದು ಅರ್ಥ. ಮತ್ತು ನೀವು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ವ್ಯಕ್ತಪಡಿಸದೆ  ಶಾಂತವಾಗಿ ಯೋಚಿಸುತ್ತೀರಿ. ಈ ಸ್ವಭಾವ ನೀವು ಸರಿಯಾದ ನಿರ್ಧಾರಗಳನ್ನೇ ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ