Personality Test: ನೀವು ಸೇಡು ತೀರಿಸಿಕೊಳ್ಳುವವರೇ; ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವೇ ಹೇಳುತ್ತೆ ನಿಮ್ಮ ಗುಣ ಸ್ವಭಾವ
ಮೆದುಳಿಗೆ ಮತ್ತು ದೃಷ್ಟಿಗೆ ಸವಾಲೊಡ್ಡುವ ಆಪ್ಟಿಕಲ್ ಇಲ್ಯೂಷನ್‌ನಂತಹ ಒಗಟಿನ ಆಟಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹರಿದಾಡುತ್ತಿರುತ್ತವೆ. ಈ ಚಿತ್ರಗಳ ಮೂಲಕ ನಾವು ನಮ್ಮ ವ್ಯಕ್ತಿತ್ವ ಹೇಗಿದೆಯೆಂಬುದನ್ನು ಸಹ ತಿಳಿದುಕೊಳ್ಳಬಹುದು. ಅಂತಹದ್ದೊಂದು ಚಿತ್ರ ಇದೀಗ ವೈರಲ್ ಆಗಿದ್ದು, ಹಾವು ಅಥವಾ ಕೈ ಆ ಚಿತ್ರದಲ್ಲಿ ನಿಮಗೆ ಮೊದಲು ಯಾವ ಅಂಶ ಮೊದಲು ಕಾಣಿಸುತ್ತದೆ ಎಂಬ ಆಧಾರದ ಮೇಲೆ ನೀವು ದಯಾಳುಗಳೇ ಅಥವಾ ಸೇಡು ತೀರಿಸಿಕೊಳ್ಳುವ ಸ್ವಭಾವದವರೇ ಎಂಬುದನ್ನು ಪರೀಕ್ಷಿಸಿ.

ನಮಗೆ ತಿಳಿಯದ ಅದೆಷ್ಟೋ ಸೀಕ್ರೆಟ್ ಗುಣ ಸ್ವಭಾವಗಳು (Character) ನಮ್ಮೊಳಗೆಯೇ ಅಡಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿ ನಕ್ಷತ್ರದ ಮೂಲಕ, ಸಂಖ್ಯಾಶಾಸ್ತ್ರದಲ್ಲಿ ಹುಟ್ಟಿದ ದಿನಾಂಕದ ಮೂಲಕ ನಮ್ಮೊಳಗಿನ ಗುಣ ಸ್ವಭಾವವನ್ನು ನಾವು ಕೇಳಿ ತಿಳಿದುಕೊಳ್ಳಬಹುದು. ಅಷ್ಟೇ ಯಾಕೆ ವ್ಯಕ್ತಿತ್ವ ಪರೀಕ್ಷೆಯ ಮೂಲಕ ನಮ್ಮ ರಹಸ್ಯ ವ್ಯಕ್ತಿತ್ವವನ್ನು ನಾವೇ ತಿಳಿದುಕೊಳ್ಳಬಹುದು. ಇವುಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಟೆಸ್ಟ್ (Optical illusion test) ಕೂಡಾ ಒಂದು. ಇಂತಹ ಚಿತ್ರಗಳ ಸಹಾಯದಿಂದ ನೀವು ಸ್ವತಂತ್ರವಾಗಿರಲು ಬಯಸುವವರೇ, ತಾಳ್ಮೆಯನ್ನು ಹೊಂದಿರುವವರೇ ಅಥವಾ ಕೋಪಿಷ್ಠರೇ ಎಂಬುದನ್ನು ಪರೀಕ್ಷಿಸಿರುತ್ತೀರಿ ಅಲ್ವಾ. ಅದೇ ರೀತಿ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನೀವು ದಯಾಳುಗಳೇ ಅಥವಾ ಸೇಡು ತೀರಿಸಿಕೊಳ್ಳುವ ಗುಣವನ್ನು ಹೊಂದಿರುವವರೇ ಎಂಬುದನ್ನು ಪರೀಕ್ಷಿಸಿ.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವೇ ಹೇಳುತ್ತೆ ನಿಮ್ಮ ಗುಣ ಸ್ವಭಾವ:
ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟನ್ನು marina_nearalean ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ಕೆಲವರಿಗೆ ಹಾವು ಕಾಣಿಸಿದರೆ, ಇನ್ನೂ ಕೆಲವರಿಗೆ ಕೈ ಕಾಣಿಸಬಹುದು. ಇವೆರಡರಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತೆ ಎಂಬುದನ್ನು ಪರೀಕ್ಷಿಸಿ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಕೈ ನೋಡಿದರೆ: ಈ ಚಿತ್ರದಲ್ಲಿ ನಿಮಗೆ ಮೊದಲು ಕೈ ಕಾಣಿಸಿದರೆ, ನೀವು ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ನಿರಂತರವಾಗಿ ಹೊಸ ಸವಾಲುಗಳು ಮತ್ತು ಸಾಹಸಗಳನ್ನು ಹುಡುಕುವ ವ್ಯಕ್ತಿಯೆಂದರ್ಥ. ಸಂಘರ್ಷಗಳನ್ನು ತಪ್ಪಿಸಲು ಇಷ್ಟಪಡುವ ನೀವು ಏನಾದರೂ ಘಟನೆ ನಡೆದರೆ ಅದರ ಬಗ್ಗೆ ವಾದಿಸುವ ಬದಲು, ಅಲ್ಲಿಂದ ದೂರ ಸರಿಯಲು ಬಯಸುತ್ತೀರಿ. ಅಲ್ಲದೆ ದಯಾಳು ಮನಸ್ಥಿತಿಯನ್ನು ಹೊಂದಿರುವ ನೀವು ಯಾರ ಮೇಲೂ ಕೂಡಾ ದ್ವೇಷವನ್ನು ಇಟ್ಟುಕೊಂಡಿಲ್ಲ ಜೊತೆಗೆ ಯಾರ ಮೇಲೂ ನೀವು ಸೇಡು ತೀರಿಸಿಕೊಳ್ಳಲು ಬಯಸುವುದಿಲ್ಲ.
ಇದನ್ನೂ ಓದಿ: ನಿಮ್ಮ ಬೆರಳಿನ ಆಕಾರವೇ ಹೇಳುತ್ತೆ ನಿಮ್ಮ ರಹಸ್ಯ ವ್ಯಕ್ತಿತ್ವ ಹೇಗಿದೆಯೆಂದು
ಹಾವು ನೋಡಿದರೆ: ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನಿಮಗೆ ಮೊದಲು ಹಾವು ಕಂಡರೆ, ನೀವು ತುಂಬಾ ಗಮನಿಸುವವರು ಎಂದರ್ಥ. ನಿಮಗೆ ಯಾರಾದರೂ ಆ ಕೆಲಸ ಮಾಡು ಎಂದು ಆಜ್ಞೆ ಮಾಡುವುದನ್ನು ಹಾಗೂ ಯಾರಾದರೂ ನಿಮ್ಮನ್ನು ನಿಯಂತ್ರಿಸಲು ಯತ್ನಿಸಿದರೆ ಅದನ್ನು ನೀವು ಸಹಿಸುವುದಿಲ್ಲ. ಪ್ರಾಮಾಣಿಕತೆಯನ್ನು ನಂಬುವ ನೀವು ಬೂಟಾಟಿಕೆಯ ಜನರಿಗೆ ಎಂದಿಗೂ ಬೆಲೆ ಕೊಡುವುದಿಲ್ಲ. ಜನರ ಕಠಿಣ ವರ್ತನೆ ನಿಮಗೆ ಆಳವಾಗಿ ನೋವುಂಟು ಮಾಡುತ್ತದೆ. ಈ ಕಾರಣದಿಂದ ಕೆಲವೊಮ್ಮೆ ನೀವು ಅವರ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ಯೋಚಿಸುತ್ತೀರಿ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








