AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನೀವು ಈ ಚಿತ್ರದಲ್ಲಿ ಮೊದಲು ಗಮನಿಸುವ ಅಂಶ ನೀವು ನಿರ್ಧಾರಗಳನ್ನು ತೆಗೆದುಕೊಳ್ಳುವ ರೀತಿಯ ಬಗ್ಗೆ ಸಾಕಷ್ಟು ಹೇಳುತ್ತದೆ

ವ್ಯಕ್ತಿತ್ವ ಪರೀಕ್ಷೆಯ ಹಲವಾರು ವಿಧಾನಗಳಿವೆ. ಅವುಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಕೂಡಾ ಒಂದು. ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವ ಚಿತ್ರಗಳು ಮೆದುಳಿಗೆ ಕೆಲಸವನ್ನು ನೀಡುವುದರ ಜೊತೆಗೆ ನಮ್ಮ ವ್ಯಕ್ತಿತ್ವನ್ನು ಸಹ ಪರೀಕ್ಷಿಸುತ್ತವೆ. ಅಂತಹದ್ದೇ ವ್ಯಕ್ತಿತ್ವ ಪರೀಕ್ಷೆಯ ಚಿತ್ರವೊಂದು ಇದೀಗ ವೈರಲ್‌ ಆಗಿದ್ದು, ಆ ಚಿತ್ರದ ಸಹಾಯದಿಂದ ನೀವು ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುತ್ತೀರಿ, ನೀವು ಆಶಾವಾದಿ ದೃಷ್ಟಿಕೋನವನ್ನು ಹೊಂದಿರುವವರೇ ಎಂಬುದನ್ನು ಪರೀಕ್ಷಿಸಿ.

Personality Test: ನೀವು ಈ ಚಿತ್ರದಲ್ಲಿ ಮೊದಲು ಗಮನಿಸುವ ಅಂಶ ನೀವು ನಿರ್ಧಾರಗಳನ್ನು ತೆಗೆದುಕೊಳ್ಳುವ ರೀತಿಯ ಬಗ್ಗೆ ಸಾಕಷ್ಟು ಹೇಳುತ್ತದೆ
ವ್ಯಕ್ತಿತ್ವ ಪರೀಕ್ಷೆImage Credit source: okdario.com
ಮಾಲಾಶ್ರೀ ಅಂಚನ್​
|

Updated on:Jun 16, 2025 | 7:50 PM

Share

ಜನರು ಸಾಮಾನ್ಯವಾಗಿ ನಾವು ನಡೆದುಕೊಳ್ಳುವ ರೀತಿ, ನಮ್ಮ ಮಾತುಗಾರಿಕೆ, ನಡವಳಿಕೆಯ ಮೂಲಕ ನಮ್ಮ ವ್ಯಕ್ತಿತ್ವ (Personality)  ಹೇಗಿದೆಯೆಂದು ಅಳೆಯುತ್ತಾರೆ. ಇತರರು ನಮ್ಮ ವ್ಯಕ್ತಿತ್ವವನ್ನು ಅಳೆಯುವಂತೆ, ನಮ್ಮೊಳಗಿನ ನಿಗೂಢ ಗುಣ ಸ್ವಭಾವವನ್ನು ನಾವೇ ತಿಳಿಯಬಹುದು. ಹೌದು ವ್ಯಕ್ತಿತ್ವ ಪರೀಕ್ಷೆಯ (Personality Test) ಮೂಲಕ ನಮ್ಮ ಸ್ವಭಾವ ಹೇಗಿದೆ, ಕೋಷಿಷ್ಠರೇ, ತಾಳ್ಮೆಯನ್ನು ಹೊಂದಿರುವವರೇ, ದಯಾಳು ಗುಣದವರೇ ಹೀಗೆ ನಮ್ಮೊಳಗೆ ಅಡಗಿರುವ ನಿಗೂಢ ಗುಣ ಸ್ವಭಾವವನ್ನು ನಾವೇ ಅಳೆಯಬಹುದು. ವ್ಯಕ್ತಿತ್ವ ಪರೀಕ್ಷೆಯ ಇಂತಹ ಸಾಕಷ್ಟು ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಹರಿದಾಡುತ್ತಿರುತ್ತವೆ. ಅಂತಹದ್ದೊಂದು ಚಿತ್ರ ಇದೀಗ ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ನಿಮಗೆ ಮೊದಲು ಯಾವ ಅಂಶ ಕಾಣಿಸಿತು ಎಂಬ ಆಧಾರದ ಮೇಲೆ ನೀವು ಯಾವ ರೀತಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ, ನೀವು ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರುವವರೇ ಎಂಬುದನ್ನು ಪರೀಕ್ಷಿಸಿ.

ನೀವು ನಿರ್ಧಾರಗಳನ್ನು ಯಾವು ರೀತಿ ತೆಗೆದುಕೊಳ್ಳುತ್ತೀರಿ?

ಈ ನಿರ್ದಿಷ್ಟ ವ್ಯಕ್ತಿತ್ವ ಪರೀಕ್ಷೆಯ ಚಿತ್ರದಲ್ಲಿ ಚಂದ್ರ, ದಂಪತಿ ಮತ್ತು ತಲೆ ಬುರುಡೆ ಈ ಮೂರು ಅಂಶಗಳಿದ್ದು, ಇದರಲ್ಲಿ ನಿಮಗೆ ಯಾವ ಅಂಶ ಮೊದಲು ಕಾಣಿಸಿತು ಎಂಬುದರ ಮೇಲೆ ನೀವು ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುತ್ತೀರಿ ಎಂಬುದನ್ನು ಪರೀಕ್ಷಿಸಿ.

ಮೊದಲು ದಂಪತಿಯನ್ನು ನೋಡಿದರೆ: ಈ ಚಿತ್ರದಲ್ಲಿ ನೀವು ಮೊದಲು ದಂಪತಿಯನ್ನು ನೋಡಿದರೆ ನೀವು ತೆಗೆದುಕೊಳ್ಳುವ ನಿರ್ಧಾರವು ನಿಮ್ಮ ಸಂಬಂಧ, ಭಾವನೆಗಳು ಮತ್ತು ಸಾಮಾಜಿಕ ಚಲನಶೀಲತೆಯಿಂದ ಪ್ರಭಾವಿತವಾಗಿರುತ್ತದೆ ಎಂದರ್ಥ. ನೀವು ಪರಸ್ಪರ ಸಾರರಸ್ಯವನ್ನು ಗೌರವಿಸುವವರಾಗಿರುತ್ತೀರಿ. ನೀವು ನಿಮ್ಮ ಸುತ್ತಮುತ್ತಲಿನವರ ಭಾವನೆಗಳಿಗೆ ಆದ್ಯತೆ ನೀಡುತ್ತೀರಿ. ಈ ಸಹಾನುಭೂತಿಯ ಗುಣವು ಬಲವಾದ ಸಾಮಾಜಿಕ ಸಂಬಂಧವನ್ನು ಬೆಸೆಯಲು ಸಹಕಾರಿಯಾಗಿದೆ. ನೀವು ಯಾವುದೇ ಸಂದರ್ಭದಲ್ಲಿಯೂ ಸಂಘರ್ಷಗಳನ್ನು ತಪ್ಪಿಸಲು ಇಷ್ಟಪಡುತ್ತೀರಿ. ನೀವು ನಿಮ್ಮ ವೈಯಕ್ತಿಕ ಗುರಿಗಳನ್ನು ಸಾಧಿಸುವುದಕ್ಕಿಂತ  ನೀವು ನಿಮ್ಮ ಪ್ರೀತಿಪಾತ್ರರನ್ನು ಸಂತೋಷದಿಂದಿಡಲು ಬಯಸುವವರಾಗಿರುತ್ತೀರಿ.

ಇದನ್ನೂ ಓದಿ
Image
ಈ ಚಿತ್ರ ನೋಡಿ ನಿಮ್ಮ ನಿಗೂಢ ಗುಣ ಸ್ವಭಾವವನ್ನು ಪರೀಕ್ಷಿಸಿ
Image
ನೀವು ಹಠಮಾರಿ ಸ್ವಭಾವದವರೇ ಎಂಬುದನ್ನು ತಿಳಿಸುವ ಚಿತ್ರವಿದು
Image
ನೀವು ಹುಟ್ಟಿದ ತಿಂಗಳೇ ತಿಳಿಸುತ್ತೆ ನಿಮ್ಮ ಅದೃಷ್ಟದ ಬಣ್ಣ ಯಾವುದೆಂದು
Image
ಈ ಚಿತ್ರದ ಮೂಲಕ ನೀವು ಯಾವ ರೀತಿಯ ವ್ಯಕ್ತಿ ಎಂಬುದನ್ನು ಕಂಡುಕೊಳ್ಳಿ

ಮೊದಲು ತಲೆ ಬುರುಡೆ ನೋಡಿದರೆ: ಈ ಚಿತ್ರದಲ್ಲಿ ನೀವು ಮೊದಲು ತಲೆ ಬುರುಡೆಯನ್ನು ನೋಡಿದರೆ ನೀವು ಸಂಭಾವ್ಯ ಬೆದರಿಕೆಗಳು ಅಥವಾ ನಕಾರಾತ್ಮಕ ಫಲಿತಾಂಶಗಳಿಗೆ ಹೆಚ್ಚು ಆದ್ಯತೆ ನೀಡುವ ಪ್ರವೃತ್ತಿಯನ್ನು ಹೊಂದಿದ್ದೀರಿ ಎಂದು ಅರ್ಥ. ಇದು ಅತಿಯಾದ ಎಚ್ಚರಿಕೆ ಮತ್ತು ನಿರಾಶಾವಾದಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರಣವಾಗಬಹುದು. ಕೆಲವೊಮ್ಮೆ ನೀವು ಕಳಪೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದ ಮೂಲಕ ನೀವು ಭಾವನೆಗಳನ್ನು ಹೇಗೆ ನಿಭಾಯಿಸುತ್ತೀರಿ ಎಂಬುದನ್ನು ಪರೀಕ್ಷಿಸಿ

ಮೊದಲು ಚಂದ್ರನನ್ನು ನೋಡಿದರೆ: ಈ ಚಿತ್ರದಲ್ಲಿ ನಿಮಗೆ ಮೊದಲು ಚಂದ್ರ ಕಂಡರೆ, ನೀವು ಸ್ವಾಭಾವಿಕವಾಗಿ ಆಶಾವಾದಿ ದೃಷ್ಟಿಕೋನವನ್ನು ಹೊಂದಿರುವವರು ಎಂಬುದನ್ನು ಸೂಚಿಸುತ್ತದೆ. ನೀವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಕಾರಾತ್ಮಕ ಅಂಶಗಳನ್ನು ಎತ್ತಿ ಹಿಡಿಯುತ್ತೀರಿ. ಈ ಪ್ರಕಾಶಮಾನವಾದ ದೃಷ್ಟಿಕೋನವು ಮಹಾತ್ವಾಕಾಂಕ್ಷೆ ಮತ್ತು ಸೃಜನಶೀಲ ಚಿಂತನೆಯನ್ನು ಉತ್ತೇಜಿಸುತ್ತದೆ. ಆದರೆ ಇದು ಸವಾಲುಗಳು ಕ್ಷುಲ್ಲಕ ಎಂದು ನಿರ್ಲಕ್ಷ್ಯ ಮಾಡುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ನೀವು ಉತ್ಸಾಹದಿಂದ ತೆಗೆದುಕೊಳ್ಳುವ ನಿರ್ಧಾರಗಳು ಮುಂಬರುವ ಅಪಾಯಗಳನ್ನು ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:49 pm, Mon, 16 June 25

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ