AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Loin Day 2026: ನೀವು ತಿಳಿದಿರದ ಸಿಂಹಗಳ ಕುರಿತಾದ ಆಸಕ್ತಿದಾಯಕ ಸಂಗತಿಗಳು

ಸಿಂಹಗಳು ತಮ್ಮ ಗತ್ತು ಗಾಂಭೀರ್ಯಕ್ಕೆ ಹೆಸರುವಾಸಿಯಾದ ಪ್ರಾಣಿಗಳಾಗಿವೆ. ಆದರೆ ಇಂದು ಅಕ್ರಮ ಬೇಟೆ, ಅರಣ್ಯನಾಶ, ಹವಾಮಾನ ಬದಲಾವಣೆ ಇತ್ಯಾದಿ ಗಂಭೀರ ಕಾರಣಗಳಿಂದಾಗಿ ಸಿಂಹಗಳ ಸಂತತಿ ಕ್ಷೀಣಿಸುತ್ತಿದೆ. ಆಹಾರ ಸರಪಳಿ, ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಿಂಹಗಳು ಈ ಭೂಮಿಯ ಮೇಲೆ ಇರುವುದು ಬಹಳ ಮುಖ್ಯ. ಆದ್ದರಿಂದ ಸಿಂಹಗಳನ್ನು ರಕ್ಷಿಸುವ, ಅವುಗಳ ಅಸ್ತಿತ್ವವನ್ನು ಉಳಿಸುವ ಹಾಗೂ ಅಭಯಾರಣ್ಯಗಳನ್ನು ಸಂರಕ್ಷಿಸುವ ಉದ್ದೇಶದಿಂದ ಪ್ರತಿವರ್ಷ ಆಗಸ್ಟ್‌ 10 ರಂದು ವಿಶ್ವ ಸಿಂಹ ದಿನವನ್ನು ಆಚರಿಸಲಾಗುತ್ತದೆ.

World Loin Day 2026: ನೀವು ತಿಳಿದಿರದ ಸಿಂಹಗಳ ಕುರಿತಾದ ಆಸಕ್ತಿದಾಯಕ ಸಂಗತಿಗಳು
ವಿಶ್ವ ಸಿಂಹ ದಿನImage Credit source: Pexels
ಮಾಲಾಶ್ರೀ ಅಂಚನ್​
|

Updated on:Aug 09, 2026 | 10:26 PM

Share

ಕಾಡಿನ ರಾಜ ಸಿಂಹ (lion) ತನ್ನ ಗತ್ತು ಗಾಂಭೀರ್ಯಕ್ಕೆ ಹೆಸರುವಾಸಿಯಾದ ಪ್ರಾಣಿ. ಅದೇ ರೀತಿ ಈ ಸಿಂಹಗಳ ಸಂತತಿ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿಯೂ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಒಂದು ಕಾಲದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದ ಈ ಸಿಂಹಗಳು ಕ್ರಮೇಣ ವಿನಾಶದಂಚಿಗೆ ತಲುಪುತ್ತಿವೆ. ಆಧುನೀಕರಣ, ಅರಣ್ಯನಾಶ, ಆವಾಸಸ್ಥಾನದ ನಷ್ಟ, ಅಕ್ರಮ ಬೇಟೆ, ಹವಾಮಾನ ಬದಲಾವಣೆ ಇವೆಲ್ಲದರ ಕಾರಣದಿಂದ ಇಂದು ಕಾಡಿನ ರಾಜನ ಸಂತತಿ ಕ್ಷೀಣಿಸುತ್ತಿದೆ. ಈ ಗಂಭೀರತೆಯನ್ನು ಪರಿಗಣಿಸಿ, ಸಿಂಹಗಳು ಮತ್ತು ಅವುಗಳ ಆವಾಸಸ್ಥಾನವನ್ನು ರಕ್ಷಣೆ ಮಾಡುವ ಉದ್ದೇಶದಿಂದ ಪ್ರತಿವರ್ಷ ಆಗಸ್ಟ್‌ 10 ರಂದು ವಿಶ್ವ ಸಿಂಹ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಸಿಂಹ ದಿನದ ಇತಿಹಾಸವೇನು?

ವಿಶ್ವ ಸಿಂಹ ದಿನದ ಆಚರಣೆ 2013 ರಲ್ಲಿ ಪ್ರಾರಂಭವಾಯಿತು. ಸಿಂಹಗಳ ಉಳಿವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಅವುಗಳ ರಕ್ಷಣೆಗಾಗಿ ಸಿಂಹ ಮತ್ತು ಹುಲಿಗಳ ರಕ್ಷಣೆಗಾಗಿ ಕೆಲಸ ಮಾಡುವ ಸಂಸ್ಥೆಯಾದ ಬಿಗ್‌ ಕ್ಯಾಟ್ಸ್‌ ರೆಸ್ಕ್ಯೂ ಸಂಸ್ಥೆಯ ಸಂಸ್ಥಾಪಕರಾದ ಡೆರೆಕ್‌ ಮತ್ತು ಬೆವರ್ಲಿ ಜೌಬರ್ಟ್‌ ಅವರು ನ್ಯಾಷನಲ್‌ ಜಿಯೋಗ್ರಾಫಿಕ್‌ ಸಹಭಾಗಿತ್ವದಲ್ಲಿ ಸಿಂಹ ದಿನದ ಆಚರಣೆಯನ್ನು ಪ್ರಾರಂಭಿಸಿದರು. ಕ್ಷೀಣಿಸುತ್ತಿರುವ ಸಿಂಹಗಳ ಸಂಖ್ಯೆ ಮತ್ತು ಅವುಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಆಚರಣೆಯ ಮುಖು ಉದ್ದೇಶವಾಗಿದೆ.

ಸಿಂಹಗಳ ವಿಧಗಳು:

  • ಏಷ್ಯಾಟಿಕ್‌ ಸಿಂಹ: ಈ ಜಾತಿಯ ಸಿಂಹಗಳು ಈಗ ಗುಜರಾತ್‌ನಲ್ಲಿರುವ ಗಿರ್‌ ಅರಣ್ಯದಲ್ಲಿ ಮಾತ್ರ ಕಂಡುಬರುತ್ತವೆ, ಇದರ ತೂಕ ಸುಮಾರು 160 ಕೆಜಿಯಿಂದ 190 ಕೆಜಿ. ಇವು ಆಫ್ರಿಕನ್‌ ಸಿಂಹಗಳಿಗಿಂತ ಸ್ವಲ್ಪ ಚಿಕ್ಕದಾಗಿರುತ್ತವೆ.
  • ಆಫ್ರಿಕನ್‌ ಸಿಂಹ: ಆಫ್ರಿಕನ್‌ ಸಿಂಹಗಳನ್ನು ಧೈರ್ಯ ಮತ್ತು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತವೆ. ಅವುಗಳ ಘರ್ಜನೆ ಸುಮಾರು ಐದು ಮೈಲಿ ದೂರದವರೆಗೆ ಕೇಳಿಸುತ್ತದೆ.
  • ಬಾರ್ಬರಿ ಸಿಂಹ: ಬಾರ್ಬರಿ ಸಿಂಹಗಳು ಸಿಂಹಗಳ ಜಾತಿಯಲ್ಲೇ ದೊಡ್ಡದಾಗಿದ್ದು, 270 ರಿಂದ 300 ಕಿಲೋಗ್ರಾಂಗಳಷ್ಟು ತೂಕವಿರುತ್ತದೆ.
  • ದಕ್ಷಿಣಾ ಆಫ್ರಿಕಾದ ಸಿಂಹಗಳು: ಸೌತ್ ಆಫ್ರಿಕಾ ಸಿಂಹಗಳು ಹೆಚ್ಚಾಗಿ ಬಿಳಿ ಬಣ್ಣದಲ್ಲಿರುತ್ತವೆ. ಇವುಗಳನ್ನು ಟ್ರಾನ್ಸ್‌ವಾಲ್‌ ಸಿಂಹಗಳು ಎಂದೂ ಕರೆಯುತ್ತಾರೆ.
  • ಕಟಾಂಗ ಸಿಂಹ: ಕಟಾಂಗ ಸಿಂಹಗಳು ನೈಋತ್ಯ ಆಫ್ರಿಕಾದಲ್ಲಿ ಕಂಡುಬರುತ್ತವೆ. ಇವುಗಳು ಬಲು ಸುಂದರವಾದ ಕೂದಲನ್ನು ಹೊಂದಿರುತ್ತವೆ.
  • ಕಾಂಗೋ ಸಿಂಹ: ಕಾಂಗೋಲೀಸ್‌ ಸಿಂಹ, ಉಗಾಂಡನ್‌ ಸಿಂಹ ಎಂದೂ ಕರೆಯಲ್ಪಡುವ ಇವುಗಳು ಹೆಚ್ಚಾಗು ಮಧ್ಯ ಆಫ್ರಿಕಾದಲ್ಲಿ ಕಂಡುಬರುತ್ತವೆ.

ಇದನ್ನೂ ಓದಿ: ಮನೆಯಲ್ಲಿ ಬೆಕ್ಕು ಸಾಕುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

ಸಿಂಹಗಳ ಕುರಿತ ಕೆಲವು ಆಸಕ್ತಿದಾಯಕ ಸಂಗತಿಗಳು:

  • ಸಿಂಹದ ಘರ್ಜನೆಯನ್ನು 5 ಮೈಲಿ ಅಂದರೆ 8 ಕಿಲೋಮೀಟರ್ ದೂರದವರೆಗೂ ಕೇಳುತ್ತದೆ.
  • ಸಿಂಹಗಳು ಸಂಘಜೀವಿ. ಅವುಗಳ ಗುಂಪನ್ನು ಪ್ರೈಡ್‌ ಎಂದು ಕರೆಯಲಾಗುತ್ತದೆ. ಸಿಂಹಗಳು ತಮ್ಮ ಪ್ರದೇಶವನ್ನು ರಕ್ಷಿಸಲು ಗುಂಪುಗಳಲ್ಲಿ ವಾಸಿಸುತ್ತವೆ. ತಮ್ಮ ಗುಂಪು ದೊಡ್ಡದಿದ್ದಷ್ಟೂ ಅವು ಆಕ್ರಮಿಸಿಕೊಳ್ಳುವ ಪ್ರದೇಶವು ದೊಡ್ಡದಾಗಿರುತ್ತದೆ ಎಂದು ಅವು ನಂಬುತ್ತವೆ.
  • ಸಿಂಹವು 190 ಕೆಜಿ ವರೆಗೆ ತೂಗುತ್ತದೆ ಮತ್ತು ಸಿಂಹಿಣಿ 130 ಕೆಜಿ ವರೆಗೆ ತೂಗುತ್ತದೆ.
  • ಸಿಂಹಗಳ ಜೀವಿತಾವಧಿ ಸರಿಸುಮಾರು 16 ರಿಂದ 20 ವರ್ಷಗಳು.
  • ಹೆಚ್ಚು ಬೇಟೆಯಾಡೋದು ಗಂಡು ಸಿಂಹಗಳಲ್ಲ ಬದಲಾಗಿ ಸಿಂಹಿಣಿ ಅಂದರೆ ಹೆಣ್ಣು ಸಿಂಹಗಳು.
  • ಸಿಂಹಗಳು  ಗಂಟೆಗೆ 50 ಮೈಲುಗಳಷ್ಟು ವೇಗದಲ್ಲಿ ಓಡಬಲ್ಲದು ಮತ್ತು 36 ಅಡಿಗಳಷ್ಟು ಜಿಗಿಯಬಲ್ಲದು.
  • ಸಿಂಹಗಳು ನಡೆಯುವಾಗ ಅದರ ಹಿಮ್ಮಡಿಗಳು ನೆಲವನ್ನು ಮುಟ್ಟುವುದಿಲ್ಲ.
  • ಸಿಂಹಗಳನ್ನು ಬೆಕ್ಕು ಸಂತತಿಯ ಅತ್ಯಂತ ಸೋಮಾರಿ ಪ್ರಾಣಿ ಎಂದು ಕರೆಯಲಾಗುತ್ತದೆ. ಹಗಲಿನಲ್ಲಿ, ಅವು 21 ರಿಂದ 22 ಗಂಟೆಗಳ ಕಾಲ ನಿದ್ರೆ ಮಾಡುತ್ತವೆ. ಅವು ಪ್ರತಿದಿನ ಬೇಟೆಯಾಡಲು ಸುಮಾರು ಎರಡರಿಂದ ಮೂರು ಗಂಟೆಗಳ ಸಮಯವನ್ನು ವ್ಯಯಿಸುತ್ತವೆ.
  • ಸಿಂಹಗಳು ಹಸಿವಾದಾಗ ಮಾತ್ರ ಬೇಟೆಯಾಡುತ್ತವೆ.
  • ಗಂಡು ಸಿಂಹಗಳು 1.2 ಮೀಟರ್ ಎತ್ತರ ಮತ್ತು 3.3 ಮೀಟರ್ ಉದ್ದವಿದ್ದರೆ, ಹೆಣ್ಣು ಸಿಂಹಗಳು 1.1 ಮೀಟರ್ ಎತ್ತರ ಮತ್ತು 2.4 ಮೀಟರ್ ಉದ್ದವಿರುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:23 pm, Sun, 9 August 26

Follow Us
ಕಾಂಗ್ರೆಸ್​​ಗೆ ಹತ್ತಿರವಾಗುತ್ತಿದ್ದಾರಾ ಬಿಜೆಪಿಯ ಪ್ರೀತಂಗೌಡ?
ಕಾಂಗ್ರೆಸ್​​ಗೆ ಹತ್ತಿರವಾಗುತ್ತಿದ್ದಾರಾ ಬಿಜೆಪಿಯ ಪ್ರೀತಂಗೌಡ?
ಪ್ರತಿಯೊಬ್ಬ ವಿದ್ಯಾರ್ಥಿಯ ಆಕಾಂಕ್ಷೆ ಆಲಿಸಲು ಅಧಿಕಾರಿಗಳಿಗೆ ಜೋಶಿ ಸೂಚನೆ
ಪ್ರತಿಯೊಬ್ಬ ವಿದ್ಯಾರ್ಥಿಯ ಆಕಾಂಕ್ಷೆ ಆಲಿಸಲು ಅಧಿಕಾರಿಗಳಿಗೆ ಜೋಶಿ ಸೂಚನೆ
ಶಾಸಕರ ಅಸಮಾಧಾನದ ನಡುವೆ ದೆಹಲಿಗೆ ಹಾರಿದ ಸಿಎಂ ಡಿ.ಕೆ ಶಿವಕುಮಾರ್
ಶಾಸಕರ ಅಸಮಾಧಾನದ ನಡುವೆ ದೆಹಲಿಗೆ ಹಾರಿದ ಸಿಎಂ ಡಿ.ಕೆ ಶಿವಕುಮಾರ್
ಚಲಿಸುತ್ತಿದ್ದಾಗಲೇ ಟೈರ್ ಬ್ಲಾಸ್ಟ್: ಗದ್ದೆಗೆ ನುಗ್ಗಿದ KSRTC ಬಸ್​​
ಚಲಿಸುತ್ತಿದ್ದಾಗಲೇ ಟೈರ್ ಬ್ಲಾಸ್ಟ್: ಗದ್ದೆಗೆ ನುಗ್ಗಿದ KSRTC ಬಸ್​​
ಸಚಿವರ ಪಟ್ಟಿ ಬದಲಾಗಿದ್ದು ಕಾಂಗ್ರೆಸ್ ಇತಿಹಾಸದಲ್ಲಿ ಇದೇ ಮೊದಲು: ರಾಜಣ್ಣ
ಸಚಿವರ ಪಟ್ಟಿ ಬದಲಾಗಿದ್ದು ಕಾಂಗ್ರೆಸ್ ಇತಿಹಾಸದಲ್ಲಿ ಇದೇ ಮೊದಲು: ರಾಜಣ್ಣ
ಯತೀಂದ್ರಗೆ ಮತ್ತೊಂದು ಜಾಕ್​​ ಪಾಟ್, ಸಿದ್ದರಾಮಯ್ಯ ಮುನಿಸು ತಣಿಸುವ ಪ್ರಯತ್ನ
ಯತೀಂದ್ರಗೆ ಮತ್ತೊಂದು ಜಾಕ್​​ ಪಾಟ್, ಸಿದ್ದರಾಮಯ್ಯ ಮುನಿಸು ತಣಿಸುವ ಪ್ರಯತ್ನ
‘ಖಾಕಿ’ ಧರಿಸಿದರೆ ಜೋಶ್ ಬರುತ್ತೆ: ಪೊಲೀಸರ ಬಗ್ಗೆ ಡಾಲಿ ಧನಂಜಯ್ ಮಾತು
‘ಖಾಕಿ’ ಧರಿಸಿದರೆ ಜೋಶ್ ಬರುತ್ತೆ: ಪೊಲೀಸರ ಬಗ್ಗೆ ಡಾಲಿ ಧನಂಜಯ್ ಮಾತು
GBDA ಯೋಜನೆ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂದೇಶ
GBDA ಯೋಜನೆ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂದೇಶ
‘ನನ್ನ ಕನಸನ್ನು ಹೆಗಲ ಮೇಲೆ ಹೊತ್ತುಕೊಂಡ ಯಶ್: ಗೀತು ಮೋಹನ್​​ದಾಸ್ ಭಾವುಕ
‘ನನ್ನ ಕನಸನ್ನು ಹೆಗಲ ಮೇಲೆ ಹೊತ್ತುಕೊಂಡ ಯಶ್: ಗೀತು ಮೋಹನ್​​ದಾಸ್ ಭಾವುಕ
ಟೆಕ್ಕಿ ಅದ್ವೈತ್ ಶಿವಗಂಗೆ ಬೆಟ್ಟ ಏರುತ್ತಿರುವ ಸಿಸಿಟಿವಿ ದೃಶ್ಯಾವಳಿ ಪತ್ತೆ!
ಟೆಕ್ಕಿ ಅದ್ವೈತ್ ಶಿವಗಂಗೆ ಬೆಟ್ಟ ಏರುತ್ತಿರುವ ಸಿಸಿಟಿವಿ ದೃಶ್ಯಾವಳಿ ಪತ್ತೆ!