Personality Test: ಈ ಚಿತ್ರದಲ್ಲಿ ಒಂದು ಸೂರ್ಯನನ್ನು ಆರಿಸಿ, ನಿಮ್ಮ ವ್ಯಕ್ತಿತ್ವ ಹೇಗಿದೆಯೆಂದು ಪರೀಕ್ಷಿಸಿಕೊಳ್ಳಿ
ವ್ಯಕ್ತಿತ್ವ ಪರೀಕ್ಷೆಗೆ ಸಂಬಂಧಿಸಿದ ಸಾಕಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತವೆ. ಅವುಗಳ ಮೂಲಕ ನೀವು ಕೂಡಾ ನಿಮ್ಮ ರಹಸ್ಯ ವ್ಯಕ್ತಿತ್ವ ಹೇಗಿದೆಯೆಂಬುದನ್ನು ಪರೀಕ್ಷಿಸಿರುತ್ತೀರಿ ಅಲ್ವಾ. ಅಂತಹದ್ದೇ ಫೋಟೋವೊಂದು ಇದೀಗ ವೈರಲ್ ಆಗಿದ್ದು, ಆ ಚಿತ್ರದ ಸಹಾಯದಿಂದ ನೀವು ಎಂತಹ ವ್ಯಕ್ತಿ, ನಿಮ್ಮ ಸ್ವಭಾವ ಎಂತಹದ್ದು ಎಂಬುದನ್ನು ಕಂಡುಕೊಳ್ಳಿ.

ನಮ್ಮೊಳಗೆ ಅಡಗಿ ಕುಳಿತಿರುವ ರಹಸ್ಯ ವ್ಯಕ್ತಿತ್ವವನ್ನು (secret personality) ನಾವೇ ತಿಳಿದುಕೊಳ್ಳುವುದು ಒಂದು ರೀತಿ ಚೆಂದ ಅಲ್ವಾ. ನೀವು ಕೂಡಾ ಇದೇ ರೀತಿ ಜ್ಯೋತಿಷ್ಯಶಾಸ್ತ್ರಗಳ ಮೂಲಕ, ಸಾಮುದ್ರಿಕ ಶಾಸ್ತ್ರದ ಸಹಾಯದಿಂದ ದೇಹಕಾರದ ಮೂಲಕ ನಿಮ್ಮ ಗುಣ ಸ್ವಭಾವ, ನಿಮ್ಮ ಭವಿಷ್ಯ ಹೇಗಿದೆ ಎಂದು ಪರೀಕ್ಷಿಸಿರುತ್ತೀರಿ ಅಲ್ವಾ. ಹೀಗೆ ಹಲವು ವಿಧಾನಗಳ ಮೂಲಕ ನಮ್ಮ ವ್ಯಕ್ತಿತ್ವವನ್ನು ನಾವೇ ಪರೀಕ್ಷೆ ಮಾಡಿಕೊಳ್ಳಬಹುದು. ಅದೇ ರೀತಿ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ (Personality Test) ಮೇಲೆ ಕಾಣಿಸುವ ಚಿತ್ರದಲ್ಲಿ ನೀವು ನಿಮ್ಮಿಷ್ಟದ ಒಂದು ಸೂರ್ಯನನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ನಿಗೂಢ ವ್ಯಕ್ತಿತ್ವ, ಗುಣ ಸ್ವಭಾವ ಹೇಗಿದೆಯೆಂದು ಪರೀಕ್ಷೆ ಮಾಡಿಕೊಳ್ಳಬಹುದು.
ಈ ಚಿತ್ರದಲ್ಲಿ ಒಂದು ಸೂರ್ಯನನ್ನು ಆರಿಸಿ, ನಿಮ್ಮ ವ್ಯಕ್ತಿತ್ವ ಹೇಗಿದೆಯೆಂದು ಪರೀಕ್ಷಿಸಿಕೊಳ್ಳಿ:
ಈ ನಿರ್ದಿಷ್ಟ ವ್ಯಕ್ತಿತ್ವ ಪರೀಕ್ಷೆಯ ಆಟವನ್ನು marina__neuralean ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ಚಿತ್ರದಲ್ಲಿ ಒಟ್ಟು ಎಂಟು ಪ್ರಕಾರದ ಸೂರ್ಯನಿದ್ದು, ಅದರಲ್ಲಿ ನೀವು ಒಂದು ಸೂರ್ಯನನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಗುಣ ಸ್ವಭಾವ ಹೇಗಿದೆಯೆಂದು ಪರೀಕ್ಷಿಸಿಕೊಳ್ಳಬಹುದು.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಒಂದನೇ ಸೂರ್ಯ: ಈ ಸೂರ್ಯ ಶಕ್ತಿ ಮತ್ತು ನವೀಕರಣದ ಸಂಕೇತವಾಗಿದ್ದು, ಮೊದಲನೇ ಸೂರ್ಯನನ್ನು ಆಯ್ಕೆ ಮಾಡಿಕೊಂಡರೆ ನೀವು ಶಾಂತಿ ಮತ್ತು ಸಾರರಸ್ಯವನ್ನು ಇಷ್ಟಪಡುವವರು ಎಂದರ್ಥ. ಅಷ್ಟೇ ಅಲ್ಲದೆ ನೀವು ಕುಟುಂಬಕ್ಕೆ ಹೆಚ್ಚಿನ ಮೌಲ್ಯವನ್ನು ನೀಡುವವರಾಗಿರುತ್ತೀರಿ.
ಎರಡನೇ ಸೂರ್ಯ: ಎರಡನೇ ಸೂರ್ಯನನ್ನು ಆಯ್ಕೆ ಮಾಡಿಕೊಂಡರೆ ನೀವು ಇತರರಿಗಿಂತ ಭಿನ್ನವಾಗಿ ನಿಲ್ಲುವವರು ಎಂದರ್ಥ. ನೀವು ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯಕ್ಕೆ ಹಚ್ಚಿನ ಮಹತ್ವವನ್ನು ನೀಡುವವರಾಗಿರುತ್ತೀರಿ.
ಮೂರನೇ ಸೂರ್ಯ: ಮೇಲಿನ ಚಿತ್ರದಲ್ಲಿ ನೀವು ಮೂರನೇ ಸೂರ್ಯನನ್ನು ಆಯ್ಕೆ ಮಾಡಿಕೊಂಡರೆ ನೀವು ತೀರಾ ಖಾಸಗಿಯಾಗಿರುವ ವ್ಯಕ್ತಿಯೆಂದು ಅರ್ಥ. ನಿಮ್ಮ ಆಪ್ತರೊಂದಿಗೆ ಪ್ರಾಮಾಣಿಕವಾಗಿ ಮತ್ತು ದಯೆಯಿಂದ ಇರುವ ನೀವು, ಸತ್ಯಕ್ಕೆ ಯಾವಾಗಲೂ ಬೆಂಬಲವಾಗಿ ಇರುವವರಾಗಿರುತ್ತೀರಿ.
ನಾಲ್ಕನೇ ಸೂರ್ಯ: ಈ ಮೇಲಿನ ಚಿತ್ರದಲ್ಲಿ ನೀವು ನಾಲ್ಕನೇ ಸೂರ್ಯನನ್ನು ಆಯ್ಕೆ ಮಾಡಿದರೆ ನೀವು ಪ್ರಯಾಣವನ್ನು ಇಷ್ಟಪಡುವವರು ಎಂದರ್ಥ. ಪ್ರಯಾಣ ಎಂದರೆ ಅದು ಆಂತರಿಕ ಪ್ರಯಾಣ, ಅಂದ್ರೆ ನೀವು ಸಂತೋಷವನ್ನು ಹುಡುಕುವ ಪ್ರಯಾಣವನ್ನು ಇಷ್ಟಪಡುವವರು ಎಂದರ್ಥ. ನೀವು ಯಾವಾಗಲೂ ಸಂತೋಷವಾಗಿರಲು ಹುಟ್ಟಿದವರಾಗಿದ್ದು, ಅದನ್ನು ಎಂದಿಗೂ ಮರೆಯಬೇಡಿ.
ಐದನೇ ಸೂರ್ಯ: ನೀವು ಈ ಚಿತ್ರದಲ್ಲಿ ಏನಾದರೂ ಐದನೇ ಸೂರ್ಯನನ್ನು ಆಯ್ಕೆ ಮಾಡಿಕೊಂಡರೆ ನೀವು ಆಳವಾದ ಚಿಂತಕರು ಎಂದರ್ಥ. ನಿಮ್ಮ ಮನಸ್ಸಿನಲ್ಲಿ ಯಾವಾಗಲೂ ಪ್ರಬಲವಾದ ವಿಷಯಗಳು ಅಡಗಿರುತ್ತವೆ.
ಆರನೇ ಸೂರ್ಯ: ಮೇಲಿನ ಚಿತ್ರದಲ್ಲಿ ನೀವು ಆರನೇ ಸೂರ್ಯನನ್ನು ಆಯ್ಕೆ ಮಾಡಿಕೊಂಡರೆ ನೀವು ಸರಳತೆ ಮತ್ತು ಸೌಕರ್ಯವನ್ನು ಗೌರವಿಸುವವರು ಎಂದರ್ಥ. ದಯಾಳು ಮತ್ತು ಪ್ರಾಮಾಣಿಕರಾಗಿರುವ ನಿಮ್ಮನ್ನು ನಿಮ್ಮ ಸ್ನೇಹಿತರು ಬಹಳ ಇಷ್ಟಪಡುತ್ತಾರೆ.
ಇದನ್ನೂ ಓದಿ: ನೀವು ಸಂಘಟಿತ ವ್ಯಕ್ತಿಗಳೇ; ಈ ಆಪ್ಟಿಕಲ್ ಇಲ್ಯೂಷನ್ ಚಿತ್ರ ನೋಡಿ ನಿಮ್ಮ ಸ್ವಭಾವ ಹೇಗಿದೆ ತಿಳಿಯಿರಿ
ಏಳನೇ ಸೂರ್ಯ: ಈ ಸೂರ್ಯನನ್ನು ಆಯ್ಕೆ ಮಾಡಿಕೊಂಡರೆ ನೀವು ಒಂದು ರೀತಿಯ ಸುಳಿಯಲ್ಲಿ ಸಿಲುಕಿರುವವರು ಎಂದರ್ಥ. ನಿಮಗೆ ಒಂದು ಬದಲಾವಣೆಯ ಅಗತ್ಯವಿದ್ದು, ನೀವು ಹಿಂದಿನ ನೆನಪುಗಳಿಂದ ವರ್ತಮಾನದ ಕಡೆಗೆ ಮರಳಿ ಬರುವ ಅವಶ್ಯಕತೆ ತುಂಬಾನೇ ಇದೆ.
ಎಂಟನೇ ಸೂರ್ಯ: ಎಂಟನೇ ಸೂರ್ಯನನ್ನು ಆಯ್ಕೆ ಮಾಡಿಕೊಂಡರೆ ನೀವು ಸರಿಯಾದ ಹಾದಿಯಲ್ಲಿ ನಡೆಯುವವರು ಎಂದರ್ಥ. ಆತ್ಮವಿಶ್ವಾನ ಹೊಂದಿರುವ, ಸ್ವಯಂ ಅರಿವುಳ್ಳವರಾಗಿರುವ ಹಾಗೂ ಚಿಂತನಶೀಲರಾಗಿರುವ ನೀವು ಅಚ್ಚುಕಟ್ಟಾಗಿ ಎಲ್ಲಾ ಕೆಲಸವನ್ನು ಮಾಡಿ ಮುಗಿಸುತ್ತೀರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ