Personality Test: ಮುಖ, ಸೇಬು; ಈ ಚಿತ್ರದಲ್ಲಿ ನಿಮಗೇನು ಕಾಣಿಸಿತು ಎಂಬುದರ ಮೇಲೆ ನಿಮ್ಮ ನಿಗೂಢ ವ್ಯಕ್ತಿತ್ವ ತಿಳಿಯಿರಿ
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಮೋಜಿನ ಆಟ ಮಾತ್ರವಲ್ಲದೆ, ಇವುಗಳ ಮೂಲಕ ನಾವು ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಸಹ ಪರೀಕ್ಷಿಸಿಕೊಳ್ಳಬಹುದು. ವಾಸ್ತವಕ್ಕಿಂತ ಭಿನ್ನವಾಗಿರುವ ಈ ಚಿತ್ರಗಳು ಕಣ್ಣಿಗೆ ಭ್ರಮೆಯನ್ನುಂಟುಮಾಡುವುದರ ಜೊತೆಗೆ ನಮ್ಮ ನಿಗೂಢ ವ್ಯಕ್ತಿತ್ವವನ್ನು ಸಹ ತಿಳಿಸುತ್ತದೆ. ಸದ್ಯ ಅಂತಹದ್ದೊಂದು ಚಿತ್ರ ಇದೀಗ ವೈರಲ್ ಆಗಿದ್ದು, ಮನುಷ್ಯನ ಮುಖ ಅಥವಾ ಸೇಬು ಇದರಲ್ಲಿ ನಿಮಗೇನು ಕಾಣಿಸಿತು ಎಂಬುದ ಮೇಲೆ ನೀವು ಭಾವನಾತ್ಮಕ ವ್ಯಕ್ತಿಯೇ ಎಂಬುದನ್ನು ತಿಳಿಯಿರಿ.

ಸಾಮುದ್ರಿಕ ಶಾಸ್ತ್ರದ ಪ್ರಕಾರ ಕೈ ಬೆರಳಿನ ಆಕಾರ, ಪಾದದ ಆಕಾರ, ಮೂಗಿನ ಆಕಾರ ಸೇರಿದಂತೆ ದೇಹಕಾರಗಳ ಮೂಲಕವೇ ವ್ಯಕ್ತಿಯ ವ್ಯಕ್ತಿತ್ವ, ಗುಣ ಸ್ವಭಾವವನ್ನು ತಿಳಿದುಕೊಳ್ಳಬಹುದು. ನೀವು ಕೂಡಾ ಇವುಗಳ ಮುಖಾಂತರ ನಿಮ್ಮ ವ್ಯಕ್ತಿತ್ವವನ್ನು (Personality) ಪರೀಕ್ಷಿಸಿರುತ್ತೀರಿ ಅಲ್ವಾ. ವ್ಯಕ್ತಿತ್ವ ಪರೀಕ್ಷೆಯ ಇನ್ನೊಂದು ಬೆಸ್ಟ್ ದಾರಿ ಎಂದ್ರೆ ಅದು ಆಪ್ಟಿಕಲ್ ಇಲ್ಯೂಷನ್ (Optical Illusion) ಪರ್ಸನಾಲಿಟಿ ಟೆಸ್ಟ್‌ಗಳು. ಕಣ್ಣಿಗೆ ಭ್ರಮೆಯನ್ನು ಉಂಟುಮಾಡುವ ಈ ಚಿತ್ರಗಳ ಮೂಲಕ ನಮ್ಮ ಗುಣ ಸ್ವಭಾವವನ್ನು ನಾವೇ ತಿಳಿದುಕೊಳ್ಳಬಹುದು. ಹಾಗಿದ್ರೆ ಇಂದಿನ ಪರ್ಸನಾಲಿಟಿ ಟೆಸ್ಟ್ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬುದರ ಆಧಾರದ ಮೇಲೆ ನೀವು ತಾರ್ಕಿಕ ಚಿಂತಕರೇ ಅಥವಾ ಭಾವನಾತ್ಮಕ ವ್ಯಕ್ತಿಯೇ ಎಂಬುದನ್ನು ಪರೀಕ್ಷಿಸಿ.
ಈ ಚಿತ್ರವೇ ತಿಳಿಸುತ್ತೆ ನಿಮ್ಮ ನಿಗೂಢ ವ್ಯಕ್ತಿತ್ವ:
ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು marina__neuralean ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಕೆಲವರಿಗೆ ಸೇಬು ಕಾಣಿಸಿದರೆ, ಇನ್ನೂ ಕೆಲವರಿಗೆ ಇಬ್ಬರು ಮನುಷ್ಯರ ಮುಖ ಕಾಣಿಸಬಹುದು. ಇದರಲ್ಲಿ ನಿಮಗೆ ಮೊದಲು ಕಂಡಿದ್ದೇನು ಹೇಳಿ, ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಮನುಷ್ಯರ ಮುಖ: ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನಿಮಗೆ ಮೊದಲು ಮನುಷ್ಯರ ಮುಖ ಕಾಣಿಸಿದರೆ ನೀವು ಬಲವಾದ ನೈತಿಕತೆಯನ್ನು ಹೊಂದಿರುವ ತಾರ್ಕಿಕ ಚಿಂತಕರು ಎಂದರ್ಥ. ನೀವು ಯಾವುದೇ ಕಾರ್ಯಗಳನ್ನು ಮಾಡುವ ಮೊದಲು ಅದು ಸರಿಯೋ ಅಥವಾ ತಪ್ಪೋ ಎಂಬುದನ್ನು ಯೋಚಿಸುತ್ತೀರಿ. ಇನ್ನೂ ಸ್ಥಿರತೆಯನ್ನು ಗೌರವಿಸುವ ನೀವು ಯಾವುದೇ ಸಮಸ್ಯೆಗಳನ್ನು ಸೃಜನಾತ್ಮಕವಾಗಿ ಪರಿಹರಿಸುತ್ತೀರಿ. ಒಟ್ಟಾರೆಯಾಗಿ ನೀವು ತರ್ಕಬದ್ಧವಾಗಿ ಯೋಚಿಸಿ ಜೀವನ ನಡೆಸುವವರು ಎಂದರ್ಥ.
ಇದನ್ನೂ ಓದಿ: ಸ್ನೇಹ, ಹಣ, ನಿಷ್ಠೆ; ನೀವು ಯಾವುದಕ್ಕೆ ಹೆಚ್ಚು ಗೌರವ ನೀಡುತ್ತೀರಿ ಎಂಬುದನ್ನು ಈ ಚಿತ್ರ ನೋಡಿ ಪರೀಕ್ಷಿಸಿ
ಸೇಬು ನೋಡಿದರೆ: ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನಿಮಗೆ ಮೊದಲು ಸೇಬು ಕಾಣಿಸಿದರೆ, ನೀವು ಭಾವನಾತ್ಮಕ ವ್ಯಕ್ತಿಯೆಂದು ಅರ್ಥ. ಅರ್ಥಗರ್ಭಿತ ವ್ಯಕ್ತಿತ್ವವನ್ನು ಹೊಂದಿರುವ ನೀವು ಸೂಕ್ಷ್ಮ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿಯೂ ನಿಪುಣರು. ಇನ್ನೊಂದು ಏನಂದ್ರೆ ನಿಮಗೆ ಏನು ಹೇಳಬೇಕು ಎಂಬುದು ಸರಿಯಾಗಿ ತಿಳಿದಿದೆ, ಆದ್ರೆ ಈ ವಿಚಾರದಲ್ಲಿ ಆಗಾಗ್ಗೆ ಮೌನವನ್ನು ವಹಿಸುತ್ತೀರಿ. ಒಟ್ಟಾರೆಯಾಗಿ ನೀವು ಭಾವನಾತ್ಮಕರಾಗಿರುತ್ತೀರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








