Personality Test : ಕಪ್, ಗಿಟಾರ್, ಗಡಿಯಾರ : ನಿಮ್ಮ ಆಯ್ಕೆಯ ವಸ್ತುವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
ಸೋಶಿಯಲ್ ಮೀಡಿಯಾದಲ್ಲಿ ಮೆದುಳಿಗೆ ಹಾಗೂ ಬುದ್ಧಿಗೆ ಕೆಲಸ ಕೊಡುವ, ವ್ಯಕ್ತಿತ್ವವನ್ನು ಪರೀಕ್ಷಿಸಲು ಸಹಕಾರಿಯಾಗುವ ಆಫ್ಟಿಕಲ್ ಇಲ್ಯೂಷನ್ ಚಿತ್ರಗಳು ವೈರಲ್ ಆಗುತ್ತಿರುತ್ತದೆ. ಈ ಚಿತ್ರದಲ್ಲಿ ನೀವು ಯಾವುದನ್ನೂ ಮೊದಲು ಆಯ್ಕೆ ಮಾಡಿಕೊಳ್ಳುತ್ತೀರಿ ಎನ್ನುವುದು ಸಂಪೂರ್ಣ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ಆದರೆ ಇದೀಗ ವೈರಲ್ ಆಗಿರುವ ಫೋಟೋದಲ್ಲಿ ಕಪ್, ಗಿಟಾರ್ ಹಾಗೂ ಗಡಿಯಾರದ ಚಿತ್ರವಿದ್ದು, ನಿಮ್ಮ ಮೊದಲ ಆಯ್ಕೆಯ ವಸ್ತು ಯಾವುದು? ಈ ಮೂಲಕ ನಿಮ್ಮ ವ್ಯಕ್ತಿತ್ವ ಏನೆಂದು ತಿಳಿಯಿರಿ.

ಎಲ್ಲರೂ ಕೂಡ ತಮ್ಮತ್ತ ತಿರುಗಿ ನೋಡಲಿ, ತಮ್ಮತ್ತ ಆಕರ್ಷಿತರಾಗಲಿ ಎಂದು ಬಯಸುತ್ತಾರೆ. ಆದರೆ ನಮ್ಮ ವ್ಯಕ್ತಿತ್ವ ಹೇಗಿದೆ ಎನ್ನುವುದರ ಆಧಾರದ ಮೇಲೆ ಜನರು ನಮ್ಮ ಸ್ನೇಹ ಮಾಡುತ್ತಾರೆ. ಹೆಚ್ಚಿನವರಿಗೆ ತಮ್ಮ ವ್ಯಕ್ತಿತ್ವದ ಬಗ್ಗೆ ತಿಳಿಯಲು ಬಹಳ ಕುತೂಹಲವಿರುತ್ತದೆ. ಆದರೆ ಇದಕ್ಕೆ ಆಫ್ಟಿಕಲ್ ಇಲ್ಯೂಷನ್ (optical illusion) ಹಾಗೂ ವ್ಯಕ್ತಿತ್ವ ಪರೀಕ್ಷೆ (personality test) ಗಳು ಸಹಕಾರಿಯಾಗಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ನೀವು ಕಪ್, ಗಿಟಾರ್ ಹಾಗೂ ಗಡಿಯಾರವನ್ನು ನೀಡಲಾಗಿದೆ. ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬ ಆಧಾರದ ಮೇಲೆ ರಹಸ್ಯಮಯ ವ್ಯಕ್ತಿತ್ವವನ್ನು ಪರೀಕ್ಷಿಸಿಕೊಳ್ಳಿ.
ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡಿ, ನಿಮ್ಮ ರಹಸ್ಯ ವ್ಯಕ್ತಿತ್ವ ತಿಳಿಯಿರಿ
ಕಪ್ ಆಯ್ಕೆ ಮಾಡಿಕೊಂಡರೆ : ಈ ವ್ಯಕ್ತಿಗಳು ಎಲ್ಲರನ್ನು ಫೋಷಿಸುತ್ತಾರೆ. ಇವರು ತಮಗಾಗಿ ಮಾತ್ರವಲ್ಲ, ಇತರಿಗಾಗಿ ಬದುಕುತ್ತಾರೆ. ಇತರರ ಮಾತಿಗೆ ಎಷ್ಟು ಬೆಲೆ ಕೊಡಬೇಕು ಹಾಗೂ ಯಾರ ಜೊತೆಗೆ ಎಷ್ಟು ಅಂತರವನ್ನು ಕಾಯ್ದುಕೊಳ್ಳಬೇಕು ಎನ್ನುವುದು ಇವರಿಗೆ ಚೆನ್ನಾಗಿ ತಿಳಿದಿದೆ. ಈ ತಿಳುವಳಿಕೆಯೇ ಇವರ ಮೇಲೆ ಇತರರಿಗೆ ಗೌರವ ಹೆಚ್ಚಾಗುವಂತೆ ಮಾಡುತ್ತದೆ. ಅದಲ್ಲದೇ ಭಾವನಾತ್ಮಕ ಅನ್ಯೋನತೆಗೆ ಬೆಲೆಕೊಡುವ ಇವರು ಸಣ್ಣ ಸಣ್ಣ ವಿಷಯಗಳಲ್ಲಿ ಖುಷಿಯನ್ನು ಕಾಣುತ್ತಾರೆ. ಎಲ್ಲರೊಂದಿಗೆ ಬೆರೆಯುವ ಮೂಲಕ ತಮ್ಮ ಆತ್ಮೀಯರೊಂದಿಗೆ ಒಳ್ಳೆಯ ಬಾಂಧವ್ಯ ಕಾಪಾಡಿಕೊಳ್ಳುವ ಸ್ವಭಾವ ಇವರದ್ದು.
ಗಿಟಾರ್ ಆಯ್ಕೆ ಮಾಡಿಕೊಂಡರೆ : ಸೃಜನ ಶೀಲ ವ್ಯಕ್ತಿಗಳಾದ ಇವರು ಸ್ವಾತಂತ್ರ್ಯ ಮನೋಭಾವವನ್ನು ಹೊಂದಿರುತ್ತಾರೆ. ತಮ್ಮ ಇಷ್ಟದ ಅನುಸಾರವಾಗಿ ಕೆಲಸಕಾರ್ಯಗಳು ಮಾಡುತ್ತಾರೆ. ಈ ವ್ಯಕ್ತಿಗಳು ಭಾವನಾತ್ಮಕ ಜೀವಿಗಳಾಗಿದ್ದು, ಸುತ್ತಲಿನವರ ಭಾವನೆಗಳು ಇವರ ಮೇಲೆ ಸುಲಭವಾಗಿ ಪ್ರಭಾವ ಬೀರುತ್ತದೆ. ಭಾವನಾತ್ಮಕವಾಗಿರುವ ಕಾರಣ ಆಯ್ಕೆಗಳು ನಿರ್ಧಾರಗಳಲ್ಲಿ ಎಡವುದೇ ಹೆಚ್ಚು. ಜೀವನದಲ್ಲಿ ನಡೆದ ಕಹಿ ಘಟನೆ ಹಾಗೂ ನೋವಿನಿಂದ ಹೊರಬರಲು ಖುಷಿಯಾಗಿರಲು ಹೆಚ್ಚು ಸಮಯಾವಕಾಶ ತೆಗೆದುಕೊಳ್ಳುತ್ತಾರೆ.
ಗಡಿಯಾರ ಆಯ್ಕೆ ಮಾಡಿಕೊಂಡರೆ : ಶಾಂತಸ್ವಭಾವ ಹಾಗೂ ನಾಯಕಗುಣ ಇವರಲ್ಲಿ ಹೆಚ್ಚಿರುತ್ತದೆ. ಈ ವ್ಯಕ್ತಿಗಳು ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳುವ ಮುನ್ನ ಸಾವಿರ ಸಲ ಯೋಚಿಸುತ್ತಾರೆ. ಎಲ್ಲದರಲ್ಲೂ ಕ್ರಮಬದ್ಧತೆ ಬಯಸುತ್ತಾರೆ. ವಿಶ್ವಾಸಾರ್ಹತೆಗೆ ಮತ್ತೊಂದು ಹೆಸರೇ ಈ ವ್ಯಕ್ತಿಗಳು ಎನ್ನಬಹುದು. ಪ್ರಸ್ತುತ ಮಾಡುವ ಕೆಲಸದಿಂದ ಭವಿಷ್ಯಕ್ಕೇನು ಲಾಭ ಎಂದು ಯೋಚಿಸುತ್ತಾರೆ. ಯಾವುದೇ ಕಾರಣಕ್ಕೂ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಸುತ್ತಲಿನಲ್ಲಿ ಸಮಯದ ಮಹತ್ವ ತಿಳಿಯದ ವ್ಯಕ್ತಿಗಳಿದ್ದರೆ ಅಂತಹವರನ್ನು ಸಂಪೂರ್ಣವಾಗಿ ದ್ವೇಷಿಸುತ್ತಾರೆ. ಶಿಸ್ತು ಬದ್ಧ ಜೀವನವನ್ನು ನಡೆಸಲು ಇಷ್ಟ ಪಡುತ್ತಾರೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








