AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Bicycle Day 2025: ಪರಿಸರ, ಆರೋಗ್ಯ ಎರಡಕ್ಕೂ ಪ್ರಯೋಜನಕಾರಿ ಸೈಕಲ್‌ ಸವಾರಿ; ವಿಶ್ವ ಬೈಸಿಕಲ್‌ ದಿನದ ಮಹತ್ವ ತಿಳಿಯಿರಿ

ಸೈಕಲನ್ನು ಪರಿಸರ ಸ್ನೇಹಿ ಸಾರಿಗೆ ವಿಧಾನವೆಂದು ಪರಿಗಣಿಸಲಾಗಿದೆ. ಅಷ್ಟೇ ಯಾಕೆ ಇದು ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ. ಹೌದು ಸೈಕಲ್‌ ಸವಾರಿ ನಮ್ಮ ದೇಹ ಮತ್ತು ಪರಿಸರವನ್ನು ಆರೋಗ್ಯಕರವಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗೆ ಸೈಕಲ್‌ನ ಪ್ರಯೋಜನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಜೂನ್‌ 03 ರಂದು ವಿಶ್ವ ಬೈಸಿಕಲ್‌ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

World Bicycle Day 2025: ಪರಿಸರ, ಆರೋಗ್ಯ ಎರಡಕ್ಕೂ ಪ್ರಯೋಜನಕಾರಿ ಸೈಕಲ್‌ ಸವಾರಿ; ವಿಶ್ವ ಬೈಸಿಕಲ್‌ ದಿನದ ಮಹತ್ವ ತಿಳಿಯಿರಿ
ವಿಶ್ವ ಬೈಸಿಕಲ್‌ ದಿನImage Credit source: Getty Images
ಮಾಲಾಶ್ರೀ ಅಂಚನ್​
|

Updated on: Jun 02, 2025 | 9:03 PM

Share

ಹಿಂದೆಲ್ಲಾ ಜನ ಓಡಾಟಕ್ಕೆ ಸೈಕಲ್‌ಗಳನ್ನೇ ಬಳಕೆ ಮಾಡುತ್ತಿದ್ದರು. ಆದರೆ ಇಂದು ಆಧುನಿಕತೆ ಭರದಿಂದಾಗಿ ಸೈಕಲ್‌ ಬಳಕೆ ಕಡಿಮೆಯಾಗುತ್ತಾ ಹೋಗಿದೆ. ಈಗೆಲ್ಲಾ ಜನ ಬೈಕು, ಕಾರುಗಳಲ್ಲಿಯೇ ಓಡಾಟ ಮಾಡ್ತಿದ್ದಾರೆ. ಇದರಿಂದಾಗಿ ಪರಿಸರ ಮಾಲಿನ್ಯ ಕೂಡಾ ಹೆಚ್ಚಾಗುತ್ತಿದೆ. ಆದರೆ ಸೈಕಲ್‌ (Bicycle) ಸವಾರಿ ಹಾಗಲ್ಲ, ಇದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ ಮಾತ್ರವಲ್ಲದೆ ಇದೊಂದು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯಾಗಿದೆ. ಹೀಗೆ ಸೈಕಲ್‌ ಸವಾರಿ ನಮ್ಮ ಆರೋಗ್ಯ ಮತ್ತು ಪರಿಸರಕ್ಕೂ ಪ್ರಯೋಜನಕಾರಿಯಾಗಿದೆ.  ಬೈಸಿಕಲ್‌ನ ಈ ಮಹತ್ವವನ್ನು ಸಾರಲು, ಸೈಕಲ್‌ ಸವಾರಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಜೂನ್‌ 3 ರಂದು ವಿಶ್ವ ಬೈಸಿಕಲ್‌ (World Bicycle Day) ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಬೈಸಿಕಲ್ ದಿನದ ಇತಿಹಾಸ:

ದ್ವಿಚಕ್ರ ವಾಹನ ಹಾಗೂ ಕಾರುಗಳ ಬಳಕೆಯಿಂದಾಗಿ, ಸೈಕಲ್‌ಗಳ ಬಳಕೆ ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸಿತು. ಅಂತಹ ಪರಿಸ್ಥಿತಿಯಲ್ಲಿ, ಬೈಸಿಕಲ್ ಬಗ್ಗೆ ಜನರಿಗೆ ಅರಿವು ಮೂಡಿಸಲು, ಅಮೆರಿಕದ ಪ್ರಾಧ್ಯಾಪಕರೊಬ್ಬರು ವಿಶ್ವ ಬೈಸಿಕಲ್ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ಮುಂದಿಟ್ಟರು. ಅಮೆರಿಕದ ಮಾಂಟ್ಗೊಮೆರಿ ಕಾಲೇಜಿನ ಪ್ರಾಧ್ಯಾಪಕ ಲೆಸ್ಜೆಕ್ ಸಿಬಿಲ್ಸ್ ಅವರು ಒಂದು  ಅರ್ಜಿಯನ್ನು ಸಲ್ಲಿಸುವ ಮೂಲಕ ವಿಶ್ವ ಬೈಸಿಕಲ್ ದಿನವನ್ನು ಆಚರಿಸಲು ಪ್ರಸ್ತಾಪಿಸಿದ್ದರು. ನಂತರ ವಿಶ್ವ ಸಂಸ್ಥೆಯ  ಸಾಮಾನ್ಯ ಸಭೆಯು ಈ ದಿನದ ಆಚರಣೆಗೆ ಗ್ರೀನ್‌ ಸಿಗ್ನಲ್‌ ನೀಡಿತು. ಬಳಿಕ ಜೂನ್ 3, 2018 ರಂದು ಮೊದಲ ಬಾರಿಗೆ ವಿಶ್ವ ಸೈಕಲ್ ದಿನವನ್ನು ಆಚರಿಸಲಾಯಿತು.

ವಿಶ್ವ ಬೈಸಿಕಲ್ ದಿನದ ಮಹತ್ವ:

ಸೈಕಲ್‌ನ ಆರೋಗ್ಯ ಪ್ರಯೋಜನಗಳು ಹಾಗೂ ಸೈಕಲ್‌ ಬಳಕೆಯಿಂದ ಪರಿಸರಕ್ಕಾಗುವ ಲಾಭಗಳ ಬಗ್ಗೆ ತಿಳಿಸಲೆಂದೇ ಜಗತ್ತಿನಾದ್ಯಂತ ವಿಶ್ವ ಬೈಸಿಕಲ್‌ ದಿನವನ್ನು ಆಚರಿಸಲಾಗುತ್ತದೆ. ಜಗತ್ತು ಅಭಿವೃದ್ಧಿ ಹೊಂದುತ್ತಾ ಹೋದಂತೆ ವಾಹನಗಳ ಬಳಕೆಯೂ ಹೆಚ್ಚಾಗಿದೆ. ಸಮಯ ಉಳಿಸಲು ಜನರು ಸೈಕಲ್ ಬಳಸುವುದನ್ನು ಬಿಟ್ಟು ಸ್ಕೂಟರ್, ಬೈಕ್ ಮತ್ತು ಕಾರುಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ವಾಹನಗಳ ಅತಿಯಾದ ಬಳಕೆಯಿಂದ ಮಾಲಿನ್ಯ ನಿರಂತರವಾಗಿ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಪರಿಸರ ಹಾಗೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸೈಕಲ್‌ ವಹಿಸುವ ಪ್ರಮುಖ ಪಾತ್ರದ ಬಗ್ಗೆ ಈ ದಿನ ಜನರಿಗೆ ಅರಿವು ಮೂಡಿಸಲಾಗುತ್ತದೆ.

ಇದನ್ನೂ ಓದಿ
Image
ಅಂತಾರಾಷ್ಟ್ರೀಯ ಲೈಂಗಿಕ ಕಾರ್ಯಕರ್ತೆಯರ ದಿನವನ್ನು ಏಕೆ ಆಚರಿಸಲಾಗುತ್ತದೆ?
Image
ಪೋಷಕರ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲಾಗದು
Image
ವಿಶ್ವ ಹಾಲು ದಿನವನ್ನು ಏಕೆ ಆಚರಿಸಲಾಗುತ್ತದೆ ಗೊತ್ತಾ?
Image
ಅಂತಾರಾಷ್ಟ್ರೀಯ ಆಲೂಗಡ್ಡೆ ದಿನವನ್ನು ಏಕೆ ಆಚರಿಸಲಾಗುತ್ತದೆ ಗೊತ್ತಾ?

ಇದನ್ನೂ ಓದಿ: ಪೋಷಕರ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲಾಗದು; ಜಾಗತಿಕ ಪೋಷಕರ ದಿನದ ಇತಿಹಾಸ, ಮಹತ್ವ ತಿಳಿಯಿರಿ

ಸೈಕಲ್‌ ಸವಾರಿಯ  ಪ್ರಯೋಜನಗಳು:

  • ಸೈಕ್ಲಿಂಗ್ ಒಂದು ಉತ್ತಮ ದೈಹಿಕ ಚಟುವಟಿಕೆಯಾಗಿದ್ದು, ಇದು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ, ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಬೊಜ್ಜು ಕಡಿಮೆ ಮಾಡುತ್ತದೆ.
  • ಸೈಕ್ಲಿಂಗ್‌ನ ಮತ್ತೊಂದು ಪ್ರಯೋಜನವೆಂದರೆ ಅದು ಸಂಧಿವಾತದಿಂದ ಬಳಲುತ್ತಿರುವ ಮಧ್ಯವಯಸ್ಕ ಮತ್ತು ವೃದ್ಧರಲ್ಲಿ ಕೀಲು ನೋವನ್ನು ಕಡಿಮೆ ಮಾಡುತ್ತದೆ.
  • ಸೈಕ್ಲಿಂಗ್ ಒತ್ತಡವನ್ನು ನಿವಾರಿಸಲು ನಿಮಗೆ ಸಹಾಯ ಮಾಡುತ್ತದೆ. ಸೈಕ್ಲಿಂಗ್ ಮಾಡುವಾಗ ಎಂಡಾರ್ಫಿನ್‌ಗಳು ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇದರಿಂದ ಮನಸ್ಸನ್ನು ಶಾಂತಗೊಳಿಸುತ್ತದೆ.
  • ಕ್ಯಾಲೊರಿಗಳನ್ನು ಸುಡಲು ಸೈಕ್ಲಿಂಗ್ ಉತ್ತಮ ಮಾರ್ಗವಾಗಿದೆ, ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
  • ಸೈಕ್ಲಿಂಗ್ ಮಾಡುವ ಮೂಲಕ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಬಹುದು. ಇದರಿಂದಾಗಿ ಚಯಾಪಚಯ ಕ್ರಿಯೆಯೂ ಸುಧಾರಿಸುತ್ತದೆ.
  • ಸೈಕಲ್‌ ಸವಾರಿ ಹಸಿರು ಸಾರಿಗೆ ವಿಧಾನವಾಗಿದ್ದು, ಇದು ಮಾಲಿನ್ಯ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಸೈಕ್ಲಿಂಗ್ ಇಂಧನ ಮತ್ತು ಸಾರಿಗೆ ವೆಚ್ಚವನ್ನು ಉಳಿಸುತ್ತದೆ. ಹೀಗೆ ಸೈಕಲ್‌ ಸವಾರಿ ನಿಮ್ಮ ಹಣ ಉಳಿತಾಯಕ್ಕೂ ಸಹಕಾರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ