Personality Test: ನೀವು ಹುಟ್ಟಿದ ತಿಂಗಳು ರಿವೀಲ್ ಮಾಡುತ್ತೆ ನಿಮ್ಮ ವ್ಯಕ್ತಿತ್ವ, ಲವ್ ಲೈಫ್
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳ ಮುಖಾಂತರ, ದೇಹಕಾರಗಳ ಮೂಲಕ ವ್ಯಕ್ತಿತ್ವ, ನಿಮ್ಮ ಗುಣ ಸ್ವಭಾವವನ್ನು ಪರೀಕ್ಷಿಸುವಂತೆ ನೀವು ಹುಟ್ಟಿದ ತಿಂಗಳ ಆಧಾರದ ಮೇಲೂ ನಿಮ್ಮ ವ್ಯಕ್ತಿತ್ವ ಹೇಗಿದೆ, ಗುಣ ಸ್ವಭಾವ, ಭಾವನಾತ್ಮಕ ಪ್ರವೃತ್ತಿ, ಲವ್ ಲೈಫ್ ಹೇಗಿರುತ್ತೆ ಎಂಬುದನ್ನೆಲ್ಲಾ ತಿಳಿಯಬಹುದು. ಹಾಗಿದ್ರೆ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮ ಹುಟ್ಟಿದ ತಿಂಗಳ ಆಧಾರದ ಮೇಲೆ ನಿಮ್ಮ ಗುಣ ಸ್ವಭಾವ ಎಂತಹದ್ದು, ನೀವು ಎಂತಹ ಲವ್ ಲೈಫ್ ಇಷ್ಟಪಡುತ್ತೀರಿ ಎಂಬುದನ್ನು ಪರೀಕ್ಷಿಸಿ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಹುಟ್ಟಿದ ಘಳಿಗೆ, ರಾಶಿ ನಕ್ಷತ್ರದ ಆಧಾರದ ಮೇಲೆ ಹಾಗೂ ಸಂಖ್ಯಾಶಾಸ್ತ್ರದ ಪ್ರಕಾರ ಹುಟ್ಟಿದ ದಿನಾಂಕದ ಆಧಾರದ ಮೇಲೆ ಒಬ್ಬ ವ್ಯಕ್ತಿ ಹೇಗೆ ಏಳಿಗೆ ಹೊಂದುತ್ತಾನೆ, ಅವನ ಗುಣ ಸ್ವಭಾವ ಎಂತಹದ್ದು, ಅವನಿಗೆ ಏನೆಲ್ಲಾ ಕಷ್ಟಗಳು ಎದುರಾಗುತ್ತವೆ, ಯಾವ ವಯಸ್ಸಿಗೆ ಮದುವೆಯಾಗುತ್ತಾನೆ, ಮುಂದಿನ ಜೀವನ ಚೆನ್ನಾಗಿರಲಿದೆಯೇ ಎಂಬುದನ್ನೆಲ್ಲಾ ತಿಳಿಯಬಹುದಾಗಿದೆ. ಅದೇ ರೀತಿ ಹುಟ್ಟಿದ ತಿಂಗಳ (Birth Month Personality Test) ಆಧಾರದ ಮೇಲೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಅಳೆಯಬಹುದು. ಹಾಗಿದ್ರೆ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮ ಹುಟ್ಟಿದ ತಿಂಗಳ ಆಧಾರದ ಮೇಲೆ ನಿಮ್ಮ ಗುಣ ಸ್ವಭಾವ ಹಾಗೂ ಲವ್ ಲೈಫ್ (Love Life) ಹೇಗಿರುತ್ತೆ ಎಂಬುದನ್ನು ಪರೀಕ್ಷಿಸಿ.
ನೀವು ಹುಟ್ಟಿದ ತಿಂಗಳು ರಿವೀಲ್ ಮಾಡುತ್ತೆ ನಿಮ್ಮ ವ್ಯಕ್ತಿತ್ವ, ಲವ್ ಲೈಫ್:
ಜನವರಿ:
ಜನವರಿ ತಿಂಗಳಲ್ಲಿ ಜನಿಸಿದವರು ಮಹತ್ವಾಕಾಂಕ್ಷೆಯುಳ್ಳವರಾಗಿರುತ್ತಾರೆ. ಸಣ್ಣ ವಯಸ್ಸಿನಲ್ಲಿಯೇ ವೃತ್ತಿ ಅಥವಾ ಜವಾಬ್ದಾರಿಗೆ ಆಕರ್ಷಿತರಾಗುವ ಇವರು ಶಿಸ್ತುಬದ್ಧ ಜೀವನವನ್ನು ನಡೆಸುತ್ತಾರೆ. ಜೊತೆಗೆ ಬಹಳ ಯೋಚಿಸಿ ಅಳೆದು ತೂಗಿ ಇನ್ನೊಬ್ಬರ ಮೇಲೆ ನಂಬಿಕೆಯನ್ನು ಇಡುತ್ತಾರೆ ಮತ್ತು ಯೋಚಿಸಿ ಪ್ರತಿಯೊಂದು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇನ್ನೂ ಇವರ ಲವ್ ಲೈಫ್ ಬಗ್ಗೆ ನೋಡುವುದಾದರೆ ಪ್ರೀತಿಯಲ್ಲಿ ಮೊದ ಮೊದಲು ಸಂಯಮದಿಂದ ಇರಬಹುದು ಆದರೆ ಅವರು ಭಾವನೆಗಳನ್ನು ವ್ಯಕ್ತಪಡಿಸಲು ಹೆಣಗಾಡುತ್ತಾರೆ. ವಿಸ್ವಾಸಾರ್ಹರಾಗಿರುವ ಇವರು ಸಂಬಂಧದಲ್ಲಿ ಬಹಳ ನಿಷ್ಠೆಯಿಂದ ಇರುತ್ತಾರೆ. ಹಾಗೂ ಪ್ರೀತಿಯ ವಿಚಾರದಲ್ಲಿ ಇವರು ನಂಬಿಕಸ್ಥ ವ್ಯಕ್ತಿಯೂ ಹೌದು.
ಫೆಬ್ರವರಿ:
ಈ ತಿಂಗಳಿನಲ್ಲಿ ಜನಿಸಿದವರು ದಾರ್ಶನಿಕರು ಮತ್ತು ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ಸ್ವಾಂತಂತ್ರ್ಯವನ್ನು ಇಷ್ಟಪಡುವ ಇವರಿಗೆ ಪ್ರಣಯ ಸಂಬಂಧದಲ್ಲಿಯೂ ಬಂಧನದಲ್ಲಿ ಇರಲು ಇಷ್ಟಪಡುವುದಿಲ್ಲ. ಇವರು ತಮ್ಮ ತಾತ್ವಿಕ ಸ್ವಭಾವವನ್ನು ಅರ್ಥಮಾಡಿಕೊಳ್ಳುವ ಜೊತೆಗಾರ ಸಿಕ್ಕರೆ ಅವರೊಂದಿಗೆ ಆಳವಾಗಿ ಸಂಪರ್ಕ ಸಾಧಿಸುತ್ತಾರೆ. ಇವರು ತಮ್ಮ ಸೃಜನಶೀಲ ಅಥವಾ ಮಾನವೀಯ ದೃಷ್ಟಿಕೋನವನ್ನು ಇಷ್ಟಪಡುವ ಜನರೊಂದಿಗೆ ಹೆಚ್ಚಾಗಿ ಪ್ರೀತಿಯಲ್ಲಿ ಬೀಳುತ್ತಾರೆ.
ಮಾರ್ಚ್:
ಮಾರ್ಚ್‌ನಲ್ಲಿ ಜನಿಸಿದ ವ್ಯಕ್ತಿಗಳು ಸಾಮಾನ್ಯವಾಗಿ ಅಂತಃಪ್ರಜ್ಞೆಯುಳ್ಳವರು, ದಯಾಳುಗಳು ಮತ್ತು ಕಲಾತ್ಮಕ ಗುಣವನ್ನು ಹೊಂದಿದವರಾಗಿದ್ದಾರೆ. ಇವರು ಭಾವನಾತ್ಮಕವಾಗಿ ಜಾಗೃತರಾಗಿರುತ್ತಾರೆ ಮತ್ತು ಅವರದ್ದೇ ಆಂತರಿಕ ಪ್ರಪಂಚದೊಂದಿಗೆ ಆಳವಾಗಿ ಸಂಪರ್ಕ ಹೊಂದಿರುತ್ತಾರೆ. ಪ್ರೇಮದ ವಿಚಾರದಲ್ಲಿ ಇವರು ಸೌಮ್ಯ ಮತ್ತು ಸಹಾನುಭೂತಿಯುಳ್ಳ ಪ್ರೇಮಿಗಳಾಗಿರುತ್ತಾರೆ. ಇವರು ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಅನ್ಯೋನ್ಯತೆಯನ್ನು ಗೌರವಿಸುತ್ತಾರೆ ಮತ್ತು ಇವರು ಸ್ವಭಾವತಃ ಹೆಚ್ಚು ರೊಮ್ಯಾಂಟಿಕ್ ಆಗಿರುತ್ತಾರೆ.
ಏಪ್ರಿಲ್:
ಏಪ್ರಿಲ್‌ನಲ್ಲಿ ಜನಿಸಿದವರು ಧೈರ್ಯಶಾಲಿಗಳು, ನಿರ್ಭೀತರು ಮತ್ತು ನಾಯಕತ್ವ ಗುಣವನ್ನು ಹೊಂದಿದವರಾಗಿದ್ದಾರೆ. ಈ ತಿಂಗಳಿನಲ್ಲಿ ಜನಿಸಿದವರು ಉಪಕ್ರಮವನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ ಮತ್ತು ಆಗಾಗ್ಗೆ ತಮ್ಮ ಪ್ರಣಯ ಸಂಬಂಧಗಳಲ್ಲಿ ಉತ್ಸಾಹವನ್ನು ತರುತ್ತಾರೆ. ಇವರು ತಮ್ಮ ಶಕ್ತಿಯಿಂದಲೇ ಸುಲಭವಾಗಿ ಎಲ್ಲರ ಗಮನವನ್ನು ಸೆಳೆಯುತ್ತಾರೆ. ಪ್ರೀತಿಯ ವಿಚಾರದಲ್ಲಿ ಇವರು ಭಾವೋದ್ರಿಕ್ತರು ಮತ್ತು ನೇರ ಮಾತುಗಾರರಾಗಿರುತ್ತಾರೆ. ಮತ್ತು ಆಗಾಗ್ಗೆ ಪ್ರೀತಿಯ ವಿಚಾರದಲ್ಲಿ ತಲೆಕೆಡಿಸಿಕೊಳ್ಳುತ್ತಾರೆ. ಇವರು ತಮ್ಮ ತಮ್ಮ ಸಂಗಾತಿಗೆ ಹೆಚ್ಚು ನಿಷ್ಠರು ಹಾಗೂ ಪ್ರಾಮಾಣಿಕರಾಗಿರುತ್ಥಾರೆ.
ಮೇ:
ಮೇ ತಿಂಗಳಲ್ಲಿ ಜನಿಸಿದವರು ಸೌಂದರ್ಯ, ಸ್ಥಿರತೆಯೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿರುತ್ತಾರೆ. ಅವರು ಸೌಕರ್ಯ ಮತ್ತು ಐಷಾರಾಮಿತನವನ್ನು ಇಷ್ಟಪಡುತ್ತಾರೆ. ಪ್ರೀತಿಯ ವಿಚಾರದಲ್ಲಿ ನಿಷ್ಠಾವಂತರಾಗಿರುವ ಇವರು ಬದ್ಧತೆಯ ವಿಷಯದಲ್ಲಿ ತುಂಬಾ ಗಂಭೀರವಾಗಿರುತ್ತಾರೆ. ಆದರೆ ಕೆಲವೊಮ್ಮೆ ಇವರ ಮೊಂಡುತನವು ಪ್ರೀತಿಯಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಬಹುದು. ಇವರು ಒಮ್ಮೆ ಪ್ರೀತಿಯಲ್ಲಿ ಬಿದ್ದ ನಂತರ, ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಾರೆ.
ಜೂನ್:
ಜೂನ್ ತಿಂಗಳಲ್ಲಿ ಜನಿಸಿದವರು ಬಲವಾದ ಸಂವಹನ ಕೌಶಲ್ಯ ಮತ್ತು ಭಾವನಾತ್ಮಕ ಅರಿವನ್ನು ಹೊಂದಿದವರಾಗಿದ್ದಾರೆ. ಇವರು ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ಇಷ್ಟಪಡುತ್ತಾರೆ. ಮತ್ತು ಪ್ರತಿಯಾಗಿ ಅದನ್ನೇ ರೀತಿ ನಿರೀಕ್ಷಿಸುತ್ತಾರೆ. ಪ್ರೀತಿಯಲ್ಲಿ ಇವರಿಗೆ ಭಾವನಾತ್ಮಕ ಸಂಪರ್ಕವು ಅತ್ಯಗತ್ಯ. ತಮ್ಮ ಸಂಗಾತಿಯನ್ನು ತುಂಬಾನೇ ಪ್ರೀತಿಸುವ ಇವರು ತುಂಬಾ ರೊಮ್ಯಾಂಟಿಕ್ ಕೂಡಾ ಹೌದು. ಆದರೆ ಇವರ ಅತಿಯಾಗಿ ಯೋಚನೆ ಸಂಬಂಧಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಜುಲೈ:
ಜುಲೈನಲ್ಲಿ ಜನಿಸಿದವರು ಭಾವನಾತ್ಮಕ ವ್ಯಕ್ತಿ ಮತ್ತು ಆಳವಾದ ಸಹಾನುಭೂತಿಯುಳ್ಳವರಾಗಿದ್ದಾರೆ. ಅವರು ಸುರಕ್ಷಿತ, ಸ್ಥಿರ ಸಂಬಂಧಗಳನ್ನು ಬಯಸುತ್ತಾರೆ ನಂಬಿಕೆ ಮತ್ತು ಭಾವನಾತ್ಮಕ ನಿಷ್ಠೆಯನ್ನು ಇವರು ಬಯಸುತ್ತಾರೆ. ಇವರು ಮೊದಲಿಗೆ ತಮ್ಮ ಭಾವನೆಗಳನ್ನು ಮರೆಮಾಡಿದರೂ, ಅರ್ಥಪೂರ್ಣ ಪ್ರೇಮ ಸಂಬಂಧ ಬೇಕೆಂದು ಬಯಸುತ್ತಾರೆ. ಭಾವನಾತ್ಮಕವಾಗಿರುವ ಇವರು ಸಂಬಂಧದಲ್ಲಿ ತುಂಬಾನೇ ನಿಷ್ಠರಾಗಿರುತ್ತಾರೆ.
ಇದನ್ನೂ ಓದಿ: ಮುಂಜಾನೆ, ಮಧ್ಯಾಹ್ನ, ಸಂಜೆ, ರಾತ್ರಿ: ನೀವು ಹುಟ್ಟಿದ ಸಮಯವೇ ಹೇಳುತ್ತೆ ವ್ಯಕ್ತಿತ್ವ
ಆಗಸ್ಟ್:
ಆಗಸ್ಟ್‌ನಲ್ಲಿ ಜನಿಸಿದ ವ್ಯಕ್ತಿಗಳು ನಾಯಕತ್ವ ಗುಣವನ್ನು ಹೊಂದಿರುತ್ತಾರೆ. ಇವರು ತಮ್ಮ ಸಂಬಂಧಗಳಲ್ಲಿ ಆತ್ಮವಿಶ್ವಾಸ, ಮೋಡಿಯನ್ನು ತರುವಂತಹ ವ್ಯಕ್ತಿಗಳಾಗಿರುತ್ತಾರೆ. ಅವರು ತಮ್ಮ ಸಂಗಾತಿಯನ್ನು ಪ್ರೀತಿಯಿಂದ ನೋಡಿಕೊಳ್ಳಲು ತುಂಬಾನೇ ಇಷ್ಟಪಡುತ್ತಾರೆ. ಇವರು ಯಾವಾಗಲೂ ತಮ್ಮ ಉತ್ಸಾಹ ಮತ್ತು ನಿಷ್ಠೆಗೆ ಹೊಂದಾಣಿಕೆಯಾಗುವ ಸಂಗಾತಿಯೇ ಬೇಕೆಂದು ಬಯಸುತ್ತಾರೆ.
ಸೆಪ್ಟೆಂಬರ್:
ಸೆಪ್ಟೆಂಬರ್‌ನಲ್ಲಿ ಜನಿಸಿದ ಜನರು ವಿವರಗಳಿಗೆ ಹೆಚ್ಚಿನ ಗಮನ ನೀಡುವವರು, ಚಿಂತನಶೀಲರು ಮತ್ತು ಪ್ರೀತಿಯಲ್ಲಿ ಪ್ರಾಯೋಗಿಕರಾಗಿರುತ್ತಾರೆ. ಇವರು ಉದಾರ ದಾನಿಗಳು ಮತ್ತು ಅತ್ಯುತ್ತಮ ಕೇಳುಗರೂ ಹೌದು. ಇವರು ತಮ್ಮ ಸಂಗಾತಿಗೆ ಬೆಂಬಲವಾಗಿ ನಿಲ್ಲುವ ಸ್ವಭಾವವನ್ನು ಹೊಂದಿದ್ದಾರೆ. ಮೊದಲಿಗೆ ನಾಚಿಕೆಪಟ್ಟರೂ ಕಾಲಾನಂತರದಲ್ಲಿ ಸಂಗಾತಿಯೊಂದಿಗೆ ಆಳವಾದ ಭಾವನಾತ್ಮಕ ಸಂಪರ್ಕಗಳನ್ನು ಬೆಳೆಸಿಕೊಳ್ಳುತ್ತಾರೆ. ಇವರ ವಿಶ್ಲೇಷಣಾತ್ಮಕ ಸ್ವಭಾವವು ಕೆಲವೊಮ್ಮೆ ಇವರು ಟೀಕೆಗೆ ಗುರಿಯಾಗುವಂತೆ ಮಾಡುವ ಸಾಧ್ಯತೆ ಇರುತ್ತದೆ.
ಅಕ್ಟೋಬರ್:
ಅಕ್ಟೋಬರ್‌ನಲ್ಲಿ ಜನಿಸಿದವರು ಸಾಮಾನ್ಯವಾಗಿ ಆಕರ್ಷಕ ವ್ಯಕ್ತಿತ್ವಗಳನ್ನು ಹೊಂದಿರುತ್ತಾರೆ ಮತ್ತು ಸಂಬಂಧಗಳಲ್ಲಿ ಸಾಮರಸ್ಯವನ್ನು ಬಯಸುತ್ತಾರೆ. ಅವರು ಸೌಂದರ್ಯ, ಕಲೆ ಮತ್ತು ಒಡನಾಟವನ್ನು ಹೆಚ್ಚಾಗಿ ಆನಂದಿಸುತ್ತಾರೆ. ಜೊತೆಗೆ ಪ್ರೀತಿಯಲ್ಲಿ ಇವರು ಸಂಘರ್ಷವನ್ನು ತಪ್ಪಿಸಲು ಬಯಸುತ್ತಾರೆ ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ಇಷ್ಟಪಡುತ್ತಾರೆ. ಈ ತಿಂಗಳಿನಲ್ಲಿ ಹುಟ್ಟಿದವರು ವಾತ್ಸಲ್ಯ, ಸೊಬಗು ಮತ್ತು ಭಾವನಾತ್ಮಕ ಸ್ಥಿರತೆಯಿಂದ ತುಂಬಿದ ದೀರ್ಘಕಾಲೀನ ಪ್ರೀತಿಯನ್ನು ಬಯಸುತ್ತಾರೆ.
ನವೆಂಬರ್:
ನವೆಂಬರ್‌ನಲ್ಲಿ ಜನಿಸಿದ ವ್ಯಕ್ತಿಗಳು ತೀವ್ರತೆ, ಉತ್ಸಾಹ ಮತ್ತು ಆಳವಾದ ಭಾವನಾತ್ಮಕ ಒಳನೋಟಗಳನ್ನು ಹೊಂದಿದವರಾಗಿದ್ದಾರೆ. ಇವರು ಅವರು ಯಾರನ್ನಾದರೂ ನಂಬಿ ಪ್ರೀತಿಸಿಲು ಶುರು ಮಾಡಿದರೆ, ಬಹಳ ನಿಷ್ಠೆಯಿಂದ, ಆಳ ಹೃದಯದಿಂದ ಪ್ರೀತಿಸುತ್ತಾರೆ. ಇವರು ಹೆಚ್ಚಾಗಿ ತಮ್ಮ ಪ್ರೀತಿಯನ್ನು ಖಾಸಗಿಯಾಗಿಡಲು ಇಷ್ಟಪಡುತ್ತಾರೆ. ನಿಷ್ಠೆ ಮತ್ತು ಭಾವನಾತ್ಮಕ ದೃಢೀಕರಣ ಇವರ ಲವ್ ಲೈಫ್‌ನ ಪ್ರಮುಖ ಅಂಶವಾಗಿದೆ.
ಡಿಸೆಂಬರ್:
ಡಿಸೆಂಬರ್‌ನಲ್ಲಿ ಜನಿಸಿದ ಜನರು ಸಾಹಸಮ, ಆಶಾವಾದಿ ಸ್ವಭಾವವನ್ನು ಹೊಂದಿದವರಾಗಿರುತ್ತಾರೆ. ಇವರು ಸಂಬಂಧಗಳಲ್ಲಿ ಸ್ವಾತಂತ್ರ್ಯವನ್ನು ಗೌರವಿಸುತ್ತಾರೆ ಮತ್ತು ಸ್ವಾಭಾವಿಕತೆಯನ್ನು ಬಯಸುತ್ತಾರೆ. ಇವರ ತಮಾಷೆಯ ಸ್ವಭಾವ ಮತ್ತು ಸಕಾರಾತ್ಮಕ ಮನೋಭಾವ ಎಲ್ಲರನ್ನೂ ಆಕರ್ಷಿಸುತ್ತದೆ. ಇವರು ಪ್ರೇಮ ಸಂಬಂಧವನ್ನು ಖುಷಿ ಖುಷಿಯಾಗಿ ಇಡಲು ಬಯಸುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








