Personality Test: ಮೊಲ, ಬಾತುಕೋಳಿ; ಈ ಚಿತ್ರವನ್ನು ಸೂಕ್ಷವಾಗಿ ಗಮನಿಸಿ, ನೀವು ಭಾವನಾತ್ಮಕ ಅಥವಾ ತಾರ್ಕಿಕ ಬುದ್ಧಿವಂತಿಕೆಯ ವ್ಯಕ್ತಿಯೇ ತಿಳಿಯಿರಿ
ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್‌ಗಳಿಗೆ ಸಂಬಂಧಿಸಿದ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹರಿದಾಡುತ್ತಿರುತ್ತವೆ. ಕಣ್ಣಿಗೆ ಭ್ರಮೆಯನ್ನು ಉಂಟುಮಾಡುವ ಇಂತಹ ಚಿತ್ರಗಳ ಮುಖಾಂತರ ನೀವು ನಿಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿರುತ್ತೀರಿ ಅಲ್ವಾ. ಅಂತಹದ್ದೇ ಚಿತ್ರವೊಂದು ಇದೀಗ ವೈರಲ್ ಆಗಿದ್ದು, ಮೊಲ ಅಥವಾ ಬಾತುಕೋಳಿ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು ಎಂಬುದರ ಮೇಲೆ ನೀವು ತಾರ್ಕಿಕ ವ್ಯಕ್ತಿಯೇ ಅಥವಾ ಭಾವನಾತ್ಮಕ ವ್ಯಕ್ತಿಯೇ ಎಂಬುದನ್ನು ಪರೀಕ್ಷಿಸಿ.

ಸಾಮಾನ್ಯವಾಗಿ ನಮ್ಮ ನಡವಳಿಕೆ, ನಾನು ಇತರರೊಂದಿಗೆ ಹೇಗೆ ವರ್ತಿಸುತ್ತೇವೆ, ಹೇಗೆ ಬಟ್ಟೆ ಧರಿಸುತ್ತೇವೆ ಎಂಬ ಆಧಾರದ ಮೇಲೆ ಜನ ನಮ್ಮ ವ್ಯಕ್ತಿತ್ವವನ್ನು (Personality Test) ಅಳೆಯುತ್ತಾರೆ. ಆದರೆ ನಮ್ಮ ವ್ಯಕ್ತಿತ್ವ ಎಂತಹದ್ದು ಎಂಬುದು ಸರಿಯಾಗಿ ನಮಗೆ ಮಾತ್ರ ಗೊತ್ತಿರುತ್ತದೆ. ಹೀಗಿದ್ದರೂ ಕೂಡಾ ಕೆಲವೊಮ್ಮೆ ನಮ್ಮೊಳಗಿನ ನಿಗೂಢ ಗುಣ ಸ್ವಭಾವಗಳ ಬಗ್ಗೆ ನಮಗೆಯೇ ಅರಿವಿರುವುದಿಲ್ಲ. ಇಂತಹ ರಹಸ್ಯ ಗುಣ ಸ್ವಭಾವಗಳನ್ನು ನಾವು ಸಾಮುದ್ರಿಕ ಶಾಸ್ತ್ರದಲ್ಲಿ ದೇಹಕಾರದ ಮೂಲಕ ಹಾಗೂ ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವ ಆಪ್ಟಿಕಲ್ ಇಲ್ಯೂಷನ್ (optical illusion) ಚಿತ್ರಗಳ ಮೂಲಕ ತಿಳಿಯಬಹುದು. ಇಂತಹದ್ದೊಂದು ವ್ಯಕ್ತಿತ್ವ ಪರೀಕ್ಷೆಯ ಫೋಟೋ ಹರಿದಾಡುತ್ತಿದ್ದು, ಆ ಚಿತ್ರದಲ್ಲಿ ಮೊಲ ಅಥವಾ ಬಾತುಕೋಳಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬುದರ ಮೇಲೆ ನೀವು ಭಾವನಾತ್ಮಕ ವ್ಯಕ್ತಿತ್ವದವರೇ ಅಥವಾ ತಾರ್ಕಿಕ ವ್ಯಕ್ತಿಯೇ ಎಂಬುದನ್ನು ಪರೀಕ್ಷಿಸಬಹುದಾಗಿದೆ.
ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ಪರೀಕ್ಷಿಸಿ:
ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು marina_neuralean ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ಚಿತ್ರದಲ್ಲಿ ನಿಮಗೇನು ಕಾಣಿಸಿತು ಎಂಬುದರ ಆಧಾರದ ಮೇಲೆ ನಿಮ್ಮಲ್ಲಿ IQ ಮಟ್ಟ ಹೆಚ್ಚಿದೆಯೇ ಅಥವಾ EQ ಮಟ್ಟ ಹೆಚ್ಚಿದೆಯೇ ಎಂಬುದನ್ನು ತಿಳಿಯಿರಿ. ಮೊಲ ಅಥವಾ ಬಾತುಕೋಳಿ ಇವೆರಡರಲ್ಲಿ ನಿಮಗೆ ಕಾಣಿಸಿದ್ದೇನು ಹೇಳಿ, ನೀವು ನೀವು ಭಾವನಾತ್ಮಕ ಅಥವಾ ತಾರ್ಕಿಕ ಬುದ್ಧಿವಂತಿಕೆಯ ವ್ಯಕ್ತಿಯೇ ತಿಳಿಯಿರಿ.
ಪೋಸ್ಟ್ ಇಲ್ಲಿದೆ ನೋಡಿ:
View this post on Instagram
ಬಾತುಕೋಳಿಯನ್ನು ನೋಡಿದರೆ: ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನೀವು ಮೊದಲು ಬಾತುಕೋಳಿ ಕಂಡರೆ ನಿಮಗೆ ಹೆಚ್ಚು ಇಕ್ಯೂ ಅಂದರೆ ಭಾವನಾತ್ಮಕ ಬುದ್ಧಿಮತ್ತೆ ಇದೆ ಎಂದು ಅರ್ಥ. ನೀವು ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ, ನಿಯಂತ್ರಿಸುವಲ್ಲಿ, ಮೌಲ್ಯಮಾಪನ ಮಾಡುವಲ್ಲಿ ಮತ್ತು ನಿಮ್ಮದೇ ಭಾವನೆಯನ್ನು ವ್ಯಕ್ತಪಡಿಸುವಲ್ಲಿ ನೀವು ಕೌಶಲ್ಯವನ್ನು ಹೊಂದಿದ್ದೀರಿ. ಪ್ರತಿ ವಿಷಯದಲ್ಲೂ ನಾವೀನ್ಯತೆ ಮತ್ತು ಹೊಸದನ್ನು ಕಲಿಯಲು ಇಷ್ಟಪಡುವ ನೀವು ಯಾವುದೇ ಸಮಸ್ಯೆಗಳನ್ನು ವಿವಿಧ ಕೋನಗಳಿಂದ ನೋಡಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವವರಾಗಿದ್ದೀರಿ. ಸ್ನೇಹ ಜೀವಿಯಾಗಿರುವ ಎಲ್ಲರೊಂದಿಗೆ ಬೆರೆತು ಸಾಮಾಜಿಕ ಜೀವನವನ್ನು ನಡೆಸಲು ಇಷ್ಟಪಡುತ್ತೀರಿ.
ಇದನ್ನೂ ಓದಿ: ನಿಮ್ಮ ದವಡೆ ರೇಖೆ ಹೇಗಿದೆ? ಇದುವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ
ಮೊಲವನ್ನು ನೋಡಿದರೆ: ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನೀವು ಮೊದಲು ಮೊಲವನ್ನು ನೋಡಿದರೆ ನೀವು ಹೆಚ್ಚಿನ ಐಕ್ಯೂ ಬುದ್ಧಿಮತ್ತೆಯನ್ನು ಹೊಂದಿರುವವರು ಎಂದರ್ಥ. ನೀವು ಹೆಚ್ಚಿನ ತಾರ್ಕಿಕ ಬುದ್ಧಿಮತ್ತೆಯನ್ನು ಹೊಂದಿರುವವರು. ನೀವು ಒಂದು ವಿಷಯವನ್ನು ಹಲವು ವಿಧಾನಗಳ ಮೂಲಕ ಕಲಿಯಲು ಅಥವಾ ಹೊಸ ವಿಧಾನವನ್ನು ಕರಗತ ಮಾಡಿಕೊಳ್ಳಲು ಸೋಮಾರಿತನವನ್ನು ತೋರಿಸುತ್ತೀರಿ. ನೀವು ಗಣಿತ, ಭಾಷಾ ಸಾಮರ್ಥ್ಯ, ಸ್ಮರಣಶಕ್ತಿ, ತಾರ್ಕಿಕತೆ, ವಿಶ್ಲೇಷಣಾತ್ಮಕ ಚಿಂತನೆಗಳಂತಹ ಕೌಶಲ್ಯವನ್ನು ಹೊಂದಿದವರಾಗಿದ್ದೀರಿ. ಪ್ರತಿಯೊಂದು ವಿಷಯದಲ್ಲೂ ತಾರ್ಕಿಕವಾಗಿ ಯೋಚಿಸುವ ನೀವು ಎಲ್ಲರೊಂದಿಗೆ ಬೆರೆತು ಸಾಮಾಜಿಕ ಜೀವನವನ್ನು ನಡೆಸಲು ಅಷ್ಟಾಗಿ ಇಷ್ಟಪಡುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ