AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನೋಡಿ ನಿಮ್ಮ ಸಾಮರ್ಥ್ಯ, ದೌರ್ಬಲ್ಯ ಏನೆಂಬುದನ್ನು ಪರೀಕ್ಷಿಸಿ

ವ್ಯಕ್ತಿತ್ವ ವಿಧಾನಗಳ ಮೂಲಕ ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನಾವೇ ಪರೀಕ್ಷಿಸಿಕೊಳ್ಳಬಹುದು. ಅದರಲ್ಲಿ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೂ ಒಂದು. ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವ ಈ ಚಿತ್ರ ಸ್ವಾಭಿಮಾನಿಯೇ, ದೃಢ ನಿಶ್ಚಯವನ್ನು ಹೊಂದಿರುವವರೇ, ಗುರಿ ಆಧಾರಿತ ವ್ಯಕ್ತಿಯೇ ಹೀಗೆ ನಮ್ಮ ರಹಸ್ಯ ಗುಣ ಸ್ವಭಾವ ಹೇಗಿದೆ ಎಂಬುದನ್ನು ತಿಳಿಸುತ್ತದೆ. ಅದೇ ರೀತಿ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮ ರಹಸ್ಯ ಸಾಮರ್ಥ್ಯ ಏನು, ನಿಮ್ಮ ದೌರ್ಬಲ್ಯ ಏನೆಂಬುದನ್ನು ಪರೀಕ್ಷಿಸಿ.

Personality Test: ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನೋಡಿ ನಿಮ್ಮ ಸಾಮರ್ಥ್ಯ, ದೌರ್ಬಲ್ಯ ಏನೆಂಬುದನ್ನು ಪರೀಕ್ಷಿಸಿ
ವ್ಯಕ್ತಿತ್ವ ಪರೀಕ್ಷೆImage Credit source: Google
ಮಾಲಾಶ್ರೀ ಅಂಚನ್​
|

Updated on:May 25, 2025 | 3:25 PM

Share

ನಮ್ಮಲ್ಲಿ ಅಡಗಿರುವ ನಮ್ಮ ರಹಸ್ಯ ವ್ಯಕ್ತಿತ್ವವನ್ನು  ನಾವೇ ಪರೀಕ್ಷಿಸಿಕೊಳ್ಳುವುದು ಒಂಥರಾ ಚೆಂದ ಅಲ್ವಾ. ಆಪ್ಟಿಕಲ್‌ ಇಲ್ಯೂಷನ್‌ (optical illusion) ಚಿತ್ರಗಳ ಮೂಲಕ, ಕೈಗಳ ಆಕಾರ, ಪಾದದ ಆಕಾರ ಸೇರಿದಂತೆ ದೇಹಕಾರದ ಮೂಲಕವೂ ನಾವು ನಮ್ಮ ವ್ಯಕ್ತಿತ್ವವನ್ನು ತಿಳಿಯಬಹುದು. ಪರ್ಸನಾಲಿಟಿ ಟೆಸ್ಟ್‌ಗೆ (Personality Test) ಸಂಬಂಧಿಸಿದ ಇಂತಹ ಸಾಕಷ್ಟು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಣಸಿಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಫೋಟೋ ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬ ಆಧಾರದ ಮೇಲೆ ನೀವು ನಿಮ್ಮ ರಹಸ್ಯ ಸಾಮರ್ಥ್ಯ ಮತ್ತು ದೌರ್ಬಲ್ಯ ಏನೆಂಬುದನ್ನು ತಿಳಿಯಿರಿ.

ನಿಮ್ಮ ರಹಸ್ಯ ಸಾಮರ್ಥ್ಯವನ್ನು ತಿಳಿಸುತ್ತೆ ಈ ಚಿತ್ರ:

ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ಹಲವು ಅಂಶಗಳನ್ನು ಒಳಗೊಂಡಿದ್ದು, ಪುರುಷನ ಮುಖ, ಪುಸ್ತಕ ಓದುತ್ತಿರುವ ಹುಡುಗಿ, ಹೂದಾನಿ, ಕುರ್ಚಿ ಹೀಗೆ ಈ ಚಿತ್ರದಲ್ಲಿ ನಿಮಗೆ ಮೊದಲು ಕಂಡ ಅಂಶದ ಆಧಾರದ ಮೇಲೆ ನಿಮ್ಮ ಸಾಮಾರ್ಥ್ಯ ಮತ್ತು ದೌರ್ಬಲ್ಯ ಏನೆಂಬುದನ್ನು ತಿಳಿಯಿರಿ

ಪುರುಷನ ಮುಖ: ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನೀವೇನಾದರೂ ಮೊದಲು ಪುರುಷನ ಮುಖವನ್ನು ಗಮನಿಸಿದರೆ ನೀವು ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಸಮತೋಲನದಲ್ಲಿರುವ ವ್ಯಕ್ತಿಯೆಂದು ಅರ್ಥ. ಜೀವನದಲ್ಲಿ ಸವಾಲುಗಳು ಬಂದರೂ ಅವುಗಳನ್ನು ಶಾಂತವಾಗಿ ಮತ್ತು ಸಂಯಮದಿಂದ ನಿಭಾಯಿಸುವವರಾಗಿರುತ್ತೀರಿ. ಸ್ಥಿರ ಹಾಗೂ ಬಲವಾದ ಮನಸ್ಥಿತಿಯನ್ನು ಹೊಂದಿರುವ ನೀವು ಭಾವನೆಗಳಿಗೆ ಒಳಗಾವುದನ್ನು ತಪ್ಪಿಸುತ್ತೀರಿ.

ಇದನ್ನೂ ಓದಿ
Image
ನಿಮ್ಮ ವ್ಯಕ್ತಿತ್ವ ತಿಳಿಸುತ್ತೆ ನೀವು ಕೈ ಕಟ್ಟಿ ನಿಲ್ಲುವ ಸ್ಟೈಲ್
Image
ಹಾವು ಕಚ್ಚಿದ್ರೆ ದೇಹದಲ್ಲಿ ಈ ಬದಲಾವಣೆ ಆಗುವುದು
Image
ನಿಮ್ಮ ಅಂಗೈ ಬಣ್ಣವು ನಿಗೂಢ ವ್ಯಕ್ತಿತ್ವ ರಿವೀಲ್ ಮಾಡುತ್ತೆ
Image
ಈ ಚಿತ್ರ ನೋಡಿ, ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತೀರಿ ಎಂದು ಪರೀಕ್ಷಿಸಿ

ಪುಸ್ತಕ ಓದುತ್ತಿರುವ ಹುಡುಗಿ: ನೀವೇನಾದರೂ ಈ ಚಿತ್ರದಲ್ಲಿ ಮೊದಲು ಪುಸ್ತಕ ಓದುತ್ತಿರುವ ಹುಡುಗಿಯನ್ನು ಗಮನಿಸಿದರೆ ನೀವು ಹೊಸ ವಿಷಯಗಳನ್ನು ಅನ್ವೇಷಿಸಲು, ಆಳವಾದ ಜ್ಞಾನವನ್ನು ಪಡೆಯಲು ಉತ್ಸುಹಕರಾಗಿರುವ ಚಿಂತನಶೀಲ ವ್ಯಕ್ತಿಯೆಂದು ಅರ್ಥ. ನಿಮಗೆ ಆಸಕ್ತಿದಾಯಕವೆನಿಸುವ ವಿಷಯವನ್ನು ಕಲಿಯಲು ತುಂಬಾನೇ ಇಷ್ಟಪಡುತ್ತೀರಿ.  ಅದಾಗ್ಯೂ ನಿಮ್ಮ ಈ ಉತ್ಸಾಹವು ಬೇರೆಲ್ಲವನ್ನು ಮರೆತುಬಿಡುವಂತೆ ಮಾಡುತ್ತದೆ. ಇದು ನೀವು ಜನರಿಂದ ದೂರ ಇರುವಂತೆ ಮಾಡಬಹುದು.

ಕುರ್ಚಿ: ಈ ಚಿತ್ರದಲ್ಲಿ ನೀವೇನಾದರೂ ಮೊದಲು ಕುರ್ಚಿಯನ್ನು ಗಮನಿಸಿದರೆ, ನೀವು ಜೀವನವನ್ನು ವಿಶಿಷ್ಟ ಮತ್ತು ಸೃಜನಶೀಲವಾಗಿ ನೋಡುವ ವ್ಯಕ್ತಿಯೆಂದು ಅರ್ಥ. ನೀವು ಪ್ರತಿಯೊಂದು ವಿಷಯಗಳನ್ನು ಭಿನ್ನ ದೃಷ್ಟಿಕೋನದಿಂದ ನೋಡುತ್ತೀರಿ. ಜೊತೆಗೆ ನಿಮ್ಮ ಮನಸ್ಸು ಚಂಚಲವಾಗಿರುವುದರಿಂದ ನೀವು ಒಂದೇ ಕೆಲಸದ ಮೇಲೆ ಗಮನ ಹರಿಸಲು ಕಷ್ಟಸಾಧ್ಯವಾಗುತ್ತದೆ. ಕೆಲವು ಗೊಂದಲಗಳು ನಿಮ್ಮನ್ನು ನಿಮ್ಮ ಗುರಿಗಳಿಂದ ದೂರ ಉಳಿಯುವಂತೆ ಮಾಡುತ್ತದೆ.

ಇದನ್ನೂ ಓದಿ: ನೀವು ಸ್ವಾರ್ಥಿಯೇ, ವಿನಮ್ರರೇ ಎಂಬುದನ್ನು ಹೇಳುತ್ತೆ ನೀವು ಕೈ ಕಟ್ಟಿ ನಿಲ್ಲುವ ಭಂಗಿ

ಕಪ್‌ ಹಿಡಿದಿರುವ ಮಹಿಳೆ: ಈ ಚಿತ್ರದಲ್ಲಿ ನೀವೇನಾದರೂ ಮೊದಲು ಕಪ್‌ ಹಿಡಿದಿರುವ ಮಹಿಳೆಯನ್ನು ನೋಡಿದರೆ ನೀವು ಸಹಾನುಭೂತಿಯುಳ್ಳ ಮತ್ತು ಉತ್ತಮ ಕೇಳುಗರು ಎಂದರ್ಥ. ತುಂಬಾನೇ ಕಾಳಜಿ ವಹಿಸುವ ಸ್ವಭಾವದವರಾದ ನೀವು ಇತರರ ಮಾತನ್ನು ಕೇಳುತ್ತೀರಿ. ಉತ್ತಮ ಮಾರ್ಗದರ್ಶನವನ್ನೂ ನೀಡುತ್ತೀರಿ. ಆದರೆ ನಿಮ್ಮ ಸ್ವಂತ ಜೀವನದ ವಿಷಯಕ್ಕೆ ಬಂದಾಗ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹಿಂಜರಿಯುತ್ತೀರಿ. ಮತ್ತು ಮುಂದೇನಾಗುತ್ತೋ ಎಂದು ಫಲಿತಾಂಶಗಳ ಬಗ್ಗೆ ವಿಪರೀತವಾಗಿ ಯೋಚಿಸುತ್ತೀರಿ.

ಹೂದಾನಿ: ನೀವೇನಾದರೂ ಈ ಚಿತ್ರದಲ್ಲಿ ಮೊದಲು ಹೂದಾನಿಯನ್ನು ನೋಡಿದರೆ ನೀವು ಪ್ರೀತಿ ಮತ್ತು ಕರುಣೆಯನ್ನು ಹೊಂದಿರುವ ಸ್ವಭಾವದವರೆಂದು ಅರ್ಥ. ನೀವು ಹೆಚ್ಚಾಗಿ ಜನರ ಸೌಂದರ್ಯ ಮತ್ತು ಒಳ್ಳೆಯತನದ ಕಡೆಗೆ ಆಕರ್ಷಿತರಾಗುತ್ತೀರಿ. ಜೊತೆಗೆ ನೀವು ಗಾಸಿಪ್‌ ಮಾಡುವುದನ್ನು ಮತ್ತು ನಕಾರಾತ್ಮಕತೆಯನ್ನು ಇಷ್ಟಪಡುವುದಿಲ್ಲ. ಬದಲಿಗೆ ಸಾಮರಸ್ಯವನ್ನು ಹರಡಲು ಎಲ್ಲರೊಂದಿಗೂ ದಯೆಯಿಂದ ಇರಲು ಇಷ್ಟಪಡುತ್ತೀರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:25 pm, Sun, 25 May 25

ಗವಿಸಿದ್ದಪ್ಪ ಕೊಲೆಗೆ ಮತ್ತೊಂದು ಟ್ವಿಸ್ಟ್: ಸ್ಫೋಟಕ ಅಂಶ ಬಿಚ್ಚಿಟ್ಟ ತಾಯಿ
ಗವಿಸಿದ್ದಪ್ಪ ಕೊಲೆಗೆ ಮತ್ತೊಂದು ಟ್ವಿಸ್ಟ್: ಸ್ಫೋಟಕ ಅಂಶ ಬಿಚ್ಚಿಟ್ಟ ತಾಯಿ
ಆತ್ಮಹತ್ಯೆಗೆ ಯತ್ನಿಸಿದವನಿಗೆ ಕೊನೆ ಕ್ಷಣದಲ್ಲಿ ಹುಟ್ಟಿತು ಬದುಕಬೇಕೆಂಬ ಆಸೆ
ಆತ್ಮಹತ್ಯೆಗೆ ಯತ್ನಿಸಿದವನಿಗೆ ಕೊನೆ ಕ್ಷಣದಲ್ಲಿ ಹುಟ್ಟಿತು ಬದುಕಬೇಕೆಂಬ ಆಸೆ
ಪ್ರವಾಹದಲ್ಲಿ ಸಿಲುಕಿದ್ದ ಶಾಲಾ ಮಕ್ಕಳನ್ನು ಕಾಪಾಡಿದ ಮುಂಬೈ ಪೊಲೀಸರು
ಪ್ರವಾಹದಲ್ಲಿ ಸಿಲುಕಿದ್ದ ಶಾಲಾ ಮಕ್ಕಳನ್ನು ಕಾಪಾಡಿದ ಮುಂಬೈ ಪೊಲೀಸರು
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ