Personality Test : ನಿಮ್ಮ ಅಂಗೈ ಬಣ್ಣ ಕೆಂಪಾಗಿದ್ದರೆ ನಿಮ್ಮ ವ್ಯಕ್ತಿತ್ವ ಹೀಗಿರುತ್ತೆ
ಸಾಮಾನ್ಯವಾಗಿ ನಮ್ಮ ನಡವಳಿಕೆ ನೋಡಿ ನಾವು ಎಂತಹ ವ್ಯಕ್ತಿಗಳೆಂದು ನಿರ್ಣಯಿಸಬಹುದು. ಹೌದು ಸಮಯ ಸಂದರ್ಭಕ್ಕೆ ಹೇಗೆ ವರ್ತಿಸುತ್ತೇವೆ ಎನ್ನುವುದರ ಆಧಾರದ ಮೇಲೆ ನಮ್ಮ ಗುಣಸ್ವಭಾವವು ನಿರ್ಧಾರವಾಗುತ್ತದೆ. ಅದೇ ರೀತಿ ದೇಹ ಆಕಾರದಿಂದಲೂ ಗುಣಸ್ವಭಾವ ಬಹಿರಂಗಗೊಳ್ಳುತ್ತದೆ. ಅದಲ್ಲದೇ, ನಿಮ್ಮ ಅಂಗೈ ಕೆಂಪು, ಬಿಳಿ, ಹಳದಿ ಹಾಗೂ ಗುಲಾಬಿ ಬಣ್ಣದ್ದಾಗಿದ್ದರೆ ಇದು ನಿಮಗೆ ಗೊತ್ತಿಲ್ಲದ್ದಂತೆ ವ್ಯಕ್ತಿತ್ವವನ್ನು ತಿಳಿಸುತ್ತದೆಯಂತೆ, ಹಾಗಾದ್ರೆ ಈ ಕುರಿತಾದ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರImage Credit source: Social Media
ಪ್ರತಿಯೊಬ್ಬ ವ್ಯಕ್ತಿಯೂ ನೋಡುವುದಕ್ಕೆ ಮಾತ್ರ ಭಿನ್ನವಾಗಿರುವುದಲ್ಲ, ಅವರ ವ್ಯಕ್ತಿತ್ವ (personality) ದಲ್ಲಿ ಸಾಕಷ್ಟು ಭಿನ್ನತೆಗಳಿರುತ್ತದೆ. ಆದರೆ ನಮ್ಮ ಸುತ್ತಮುತ್ತಲಿನ ವ್ಯಕ್ತಿಗಳು ಹೇಗೆ ಎಂದು ಅರ್ಥ ಮಾಡಿಕೊಳ್ಳಲು ವ್ಯಕ್ತಿತ್ವ ಪರೀಕ್ಷೆ (personality test) ಗಳು ಸಹಾಯ ಮಾಡುತ್ತದೆ. ಅದಲ್ಲದೇ ದೇಹದಲ್ಲಿನ ಅಂಗ ಗಳಾದ ಕಣ್ಣು, ಕಿವಿ, ಮೂಗು, ಹಣೆ, ಬಾಯಿ, ನಾಲಗೆ, ಕೈ, ಉಗುರು, ಬೆರಳಿನ ಆಕಾರವೂ ಗುಣ ಸ್ವಭಾವವನ್ನು ರಿವೀಲ್ ಮಾಡುತ್ತದೆ ಎಂದು ತಿಳಿದಿದೆ. ಆದರೆ ಅಂಗೈಯ ಬಣ್ಣ (palm colour) ದ ಆಧಾರದಲ್ಲಿಯೂ ನಿಗೂಢ ವ್ಯಕ್ತಿವನ್ನು ತಿಳಿಯಬಹುದಂತೆ.
ನಿಮ್ಮ ಅಂಗೈ ಈ ಬಣ್ಣದಲ್ಲಿದ್ದರೆ ನಿಮ್ಮ ವ್ಯಕ್ತಿತ್ವ ಹೀಗಿರುತ್ತೆ
- ಗುಲಾಬಿ ಬಣ್ಣದ ಅಂಗೈಗಳು: ಕೆಲವರ ಅಂಗೈಯನ್ನು ನೋಡಿರಬಹುದು, ಗುಲಾಬಿ ಬಣ್ಣದಿಂದ ಆಕರ್ಷಕವಾಗಿರುತ್ತದೆ. ಅಂಗೈ ಈ ಬಣ್ಣವನ್ನು ಹೊಂದಿದ್ದರೆ ಈ ವ್ಯಕ್ತಿಗಳು ಖುಷಿಯಿಂದ ಜೀವನ ನಡೆಸುತ್ತಾರೆ. ಹಾಗೂ ಇತರರಿಗೂ ಕೂಡ ಖುಷಿಯನ್ನು ಹಂಚುವ ವ್ಯಕ್ತಿಗಳಾಗಿರುತ್ತದೆ. ಜೀವನದುದ್ದಕ್ಕೂ ನಂಬಿಕೆಗೆ ಪಾತ್ರರಾಗುವ ಈ ವ್ಯಕ್ತಿಗಳು ಬಹುಬೇಗನೇ ಯಶಸ್ಸು ಗಳಿಸುತ್ತಾರೆ. ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಇವರಾಗಿದ್ದು, ಸ್ನೇಹಿತರ ಗುಂಪಿನಲ್ಲಿ ಇವರು ಎಲ್ಲರಿಗೂ ಆತ್ಮೀಯರು ಆಗಿರುತ್ತಾರೆ.
- ಹಳದಿ ಬಣ್ಣದ ಅಂಗೈಗಳು : ಕೆಲವರ ಅಂಗೈ ತಿಳಿ ಹಳದಿ ಬಣ್ಣವನ್ನು ಹೊಂದಿರುತ್ತದೆ. ಈ ವ್ಯಕ್ತಿಗಳು ಕಿರಿಕಿರಿ ಸ್ವಭಾವದವರು. ಸಣ್ಣ ಪುಟ್ಟ ವಿಷಯದಲ್ಲಿ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಾರೆ. ಜೀವನದ ಬಗ್ಗೆ ಸಾಕಷ್ಟು ಕನಸು ಕಾಣುತ್ತಾರೆ, ಅದಕ್ಕಾಗಿ ಶ್ರಮವಹಿಸಿ ದುಡಿಯುವ ಗುಣ ಇವರದ್ದು. ಆದರೆ, ಜೀವನದಲ್ಲಿ ಏಳಿಗೆ ಕಾಣಲು ಸಮಯ ತೆಗೆದುಕೊಳ್ಳುವ ಕಾರಣ ಹೋರಾಟದ ಬದುಕು ಇವರದ್ದು ಎನ್ನಬಹುದು. ಈ ವ್ಯಕ್ತಿಗಳಿಗೆ ಅದೃಷ್ಟ ಕೈ ಹಿಡಿಯುವುದಿಲ್ಲ, ಹೆಚ್ಚಿನ ಸಲ ನಿರಾಸೆಯನ್ನೇ ಅನುಭವಿಸುತ್ತಾರೆ.
- ಕೆಂಪು ಬಣ್ಣದ ಅಂಗೈಗಳು : ಅಂಗೈ ಬಣ್ಣವು ಕೆಂಪಾಗಿದ್ದರೆ ಈ ಜನರು ಜೀವನದ ಪ್ರಮುಖ ನಿರ್ಧಾರಗಳ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಆತುರ ಪಟ್ಟು ಯಾವುದೇ ಕೆಲಸ ಮಾಡುವುದಿಲ್ಲ. ಅತಿಯಾದ ಆತ್ಮವಿಶ್ವಾಸ ಹಾಗೂ ಬುದ್ಧಿವಂತಿಕೆಯಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ. ತಾವು ಮಾಡುವ ಕೆಲಸಗಳ ಬಗ್ಗೆ ಹೆಚ್ಚು ಉತ್ಸಾಹವನ್ನು ಹೊಂದಿರುತ್ತಾರೆ.
ಇದನ್ನೂ ಓದಿ :ಪುರುಷರು ಬಿಗಿಯಾದ ಬೆಲ್ಟ್ ಧರಿಸುವುದರಿಂದ ಬಂಜೆತನ ಕಾಡುವುದು ಖಂಡಿತ: ತಜ್ಞರು ಹೇಳೋದೇನು?
ಇದನ್ನೂ ಓದಿ
- ಬಿಳಿ ಬಣ್ಣದ ಅಂಗೈ : ಕೆಲವರ ಅಂಗೈಯೂ ಹಾಲಿನಂತೆ ಬಿಳುಪಾಗಿರುತ್ತದೆ. ನೋಡುವುದಕ್ಕೆ ಆಕರ್ಷಕವಾಗಿರುವ ಅಂಗೈಯಾದರೂ ಈ ವ್ಯಕ್ತಿಗಳು ಭಾವಜೀವಿಗಳು. ಮಾನಸಿಕವಾಗಿ ದುರ್ಬಲ ಸ್ವಭಾವ ಹೊಂದಿರುತ್ತಾರೆ. ಬೇರೆಯವರ ಮಾತಿಗೆ ಬಹುಬೇಗನೇ ಕರಗಿ ಹೋಗುತ್ತಾರೆ. ಹೀಗಾಗಿ ಎಲ್ಲರನ್ನು ಬೇಗನೇ ನಂಬಿ ಮೋಸ ಹೋಗುತ್ತಾರೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








