ಅಡುಗೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್ ಬಳಸೋದಕ್ಕೆ ಹೋಗ್ಬೇಡಿ
ಈಗಂತೂ ಮೊಬೈಲ್ ನಮ್ಮ ದೈನಂದಿನ ಜೀವನದ ಭಾಗವಾಗಿ ಹೋಗಿದೆ. ಮಲಗುವಾಗ್ಲೂ ಮೊಬೈಲ್, ಶೌಚಾಲಯಕ್ಕೆ ಹೋಗುವಾಗ್ಲೂ ಮೊಬೈಲ್. ಹೀಗೆ ಜನರ ಕೈಯಿಂದ ಮೊಬೈಲ್ ತಪ್ಪೋದೇ ಇಲ್ಲ. ಇನ್ನೂ ಹೆಚ್ಚಿನ ಮಹಿಳೆಯರು ರೆಸಿಪಿ ನೋಡೋದಕ್ಕೆ ಹೆಲ್ಪ್ ಆಗುತ್ತೆ ಹಾಗೂ ಟೈಮ್ ಪಾಸ್ ಆಗುತ್ತೆ ಅಂತ ಅಡುಗೆ ಮನೆಯಲ್ಲಿ ಅಡುಗೆ ಮಾಡುವ ಸಂದರ್ಭದಲ್ಲಿಯೂ ಮೊಬೈಲ್ ಬಳಕೆ ಮಾಡುತ್ತಾರೆ. ಮೊಬೈಲ್ ಒಂದು ಎಲೆಕ್ಟ್ರಾನಿಕ್ ಸಾಧನವಾಗಿರುವುದರಿಂದ, ಇದು ನಮ್ಮನ್ನು ಅಪಾಯಕ್ಕೆ ಸಿಲುಕಿಸುವ ಸಾಧ್ಯತೆ ಇರುತ್ತದೆ. ಜೊತೆಗೆ ಇದು ನಮ್ಮ ಗಮನವನ್ನೇ ಬೇರೆಡೆಗೆ ತಿರುಗಿಸುತ್ತದೆ. ಆದ್ದರಿಂದ ಈ ಕೆಲವೊಂದು ಕಾರಣಗಳಿಂದ ನೀವು ಅಪ್ಪಿತಪ್ಪಿಯೂ ಅಡುಗೆ ಕೋಣೆಯಲ್ಲಿ ಮೊಬೈಲ್ ಫೋನ್ ನೋಡ್ಬೇಡಿ.
Updated on: May 22, 2025 | 4:57 PM

ಶೌಚಾಲಯದಲ್ಲಿ ಗಂಟೆಗಟ್ಟಲೆ ಕುಳಿತು ಮೊಬೈಲ್ ಬಳಕೆ ಮಾಡ್ಬಾರ್ದು ಎಂದು ಹೇಳ್ತಾರೆ ಅಲ್ವಾ. ಅದೇ ರೀತಿ ಅಡುಗೆ ಮನೆಯಲ್ಲೂ ಕೂಡಾ ಈ ಕೆಲವು ಕಾರಣಗಳಿಂದ ಮೊಬೈಲ್ ಯೂಸ್ ಮಾಡ್ಬಾರ್ದು. ಹೌದು ಇದು ನೀವು ಮಾಡುವ ಅಡುಗೆಯನ್ನು ಹಾಳು ಮಾಡುವುದರ ಜೊತೆ ಇದರಿಂದ ಕೆಲವೊಂದು ಬಾರಿ ಅಪಾಯಗಳು ಸಂಭವಿಸುವ ಸಾಧ್ಯತೆ ಇರುತ್ತದೆ.

ನೀವು ಮೊಬೈಲ್ ನೋಡುತ್ತಾ ಅಡುಗೆ ಮಾಡಲು ಹೋದ್ರೆ, ಮೊಬೈಲ್ ನೋಡುವ ಭರದಲ್ಲಿ ನಿಮ್ಮ ಗಮನ ಬೇರೆಡೆ ಹೋಗುತ್ತದೆ. ಆಗ ನೀವು ಮಾಡಿದ ಅಡುಗೆ ಕೆಡುವಂತಹ, ಉಪ್ಪು-ಖಾರ ರುಚಿ ಹೆಚ್ಚು ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೊಬೈಲ್ ಪಕ್ಕಕ್ಕಿಟ್ಟು ಗಮನ ನೀವು ಮಾಡುವ ಕೆಲಸದ ಕಡೆ ಇರಬೇಕು.

ಮೊಬೈಲ್ ಹುಚ್ಚು ಎಷ್ಟಿದೆ ಎಂದ್ರೆ ಕೆಲವರು ಮೊಬೈಲ್ ನೋಡ್ತಾನೆ ತರಕಾರಿ ಕಟ್ ಮಾಡುವುದಾಗಿರಲಿ, ಅಥವಾ ಅಡುಗೆ ಮಾಡುವುದಾಗಲಿ ಮಾಡುತ್ತಿರುತ್ತಾರೆ. ಹೀಗೆ ನಿಮ್ಮ ಗಮನ ಮೊಬೈಲ್ ಕಡೆಗೆಯೇ ಹೋದಾಗ ಕೈಗೆ ಚಾಕು ತಾಕುವಂತಹ, ಅಡುಗೆ ಮಾಡುವಾಗ ಬಿಸಿ ತಾಕುವಂತಹ ಸಂಭವ ಇರುತ್ತದೆ. ಹಾಗಾಗಿ ನಿಮ್ಮ ಸುರಕ್ಷತೆಯ ದೃಷ್ಟಿಯಿಂದ ಅಡುಗೆ ಕೋಣೆಯಲ್ಲಿ ಮೊಬೈಲ್ ಯೂಸ್ ಮಾಡ್ಬೇಡಿ.

ಇಷ್ಟೇ ಅಲ್ಲದೆ ಅಡುಗೆ ಮಾಡುವಾಗ ಫೋನ್ ನೋಡಿದ್ರೆ ಕೆಲವೊಮ್ಮೆ ಕೈತಪ್ಪಿ ಮೊಬೈಲ್ ನೀರಿಗೆ, ಬಿಸಿ ಅಡುಗೆಗೆ ಬೀಳುವ ಸಾಧ್ಯತೆ ಇರುತ್ತದೆ. ಅಲ್ಲದೆ ಎಣ್ಣೆ, ಇತರೆ ವಸ್ತುಗಳು ಮೊಬೈಲ್ ಮೇಲೆ ಬೀಳಬಹುದು. ಇದರಿಂದ ನಿಮ್ಮ ಮೊಬೈಲ್ ಹಾಳಾಗುವುದರ ಜೊತೆಗೆ ಇದು ನಿಮ್ಮ ಖರ್ಚನ್ನು ಕೂಡಾ ಹೆಚ್ಚಿಸುತ್ತದೆ.

ಅಡುಗೆ ಮಾಡುವಾಗ ಸ್ವಚ್ಛತೆ ಮತ್ತು ನೈರ್ಮಲ್ಯದ ಕಡೆಗೆ ಹೆಚ್ಚಿನ ಗಮನವನ್ನು ಕೊಡಬೇಕು. ಒಂದು ವೇಳೆ ಅಡುಗೆ ಮಾಡುವಾಗ, ತರಕಾರಿ ಕಟ್ ಮಾಡುವಾಗ ಮೊಬೈಲ್ ಮುಟ್ಟಿದ್ರೆ, ಅದರಲ್ಲಿರುವ ಬ್ಯಾಕ್ಟೀರಿಯಾಗಳು ಅಡುಗೆಗೂ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ.

ಮೊಬೈಲ್ ಫೋನ್‌ನಿಂದ ಹೊರಸೂಸುವ ವಿಕಿರಣ ಎಷ್ಟು ಅಪಾಯಕಾರಿ ಎಂದರೆ ಇದು ಭಾರಿ ಸ್ಫೋಟಕ್ಕೆ ಕಾರಣವಾಗಬಹುದು. ಗ್ಯಾಸ್‌ನಿಂದ ಸೋರಿಕೆಯಾಗುವ ಅನಿಲವು ಫೋನ್‌ನಿಂದ ಹೊರಸೂಸುವ ವಿಕಿರಣದ ಸಂಪರ್ಕಕ್ಕೆ ಬಂದರೆ ಸ್ಫೋಟ ಅಥವಾ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅವಘಡಗಳನ್ನು ತಪ್ಪಿಸಲು ಸುರಕ್ಷತೆಯ ದೃಷ್ಟಿಯಿಂದ ಅಡುಗೆಮನೆಯಲ್ಲಿ ಮೊಬೈಲ್ ಬಳಕೆ ಮಾಡದಿರುವುದು ಉತ್ತಮ. ಅಗತ್ಯವಿದ್ದಾಗ ಮಾತ್ರ ಅಡುಗೆ ಸಮಯದಲ್ಲಿ ಮೊಬೈಲ್ ಬಳಸಿ.




