ಹಾವು ಕಚ್ಚಿದ್ರೆ ದೇಹದಲ್ಲಿ ಈ ಬದಲಾವಣೆ ಆಗುವುದು, ಮೊದಲು ವಿಷ ಹರಡುವುದು ಈ ಭಾಗಕ್ಕೆ
ಹಾವು ಕಡಿತದ ನಂತರ ನಮ್ಮ ದೇಹದಲ್ಲಿ ಏನಾಗುತ್ತದೆ? ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಸಾಯುವ ಸಾಧ್ಯತೆಗಳು ಕೂಡ ಇದೆ. ಪ್ರತಿ ವರ್ಷ ಭಾರತದಲ್ಲಿ ಹತ್ತಾರು ಸಾವಿರ ಜನ ಹಾವು ಕಡಿತದಿಂದ ಸಾವನ್ನಪ್ಪುತ್ತಾರೆ. ಅವುಗಳಲ್ಲಿ ಕೆಲವೊಂದು ಸಾವು ಸರಿಯಾದ ಸಮಯಕ್ಕೆ ವೈದ್ಯಕೀಯ ಚಿಕಿತ್ಸೆ ಸಿಗದ ಸಮಯದಲ್ಲಿ. ಇದೀಗ ಹಾವು ಕಡಿತದಿಂದ ದೇಹದಲ್ಲಿ ಯಾವೆಲ್ಲ ಬದಲಾವಣೆಗಳು ಆಗುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ

ಹಾವು ಕಡಿತದಿಂದ (snake bite) ಅನೇಕರು ಸಾವನ್ನಪ್ಪಿರುವುದನ್ನು ನೋಡಿರಬಹುದು. ಅದರಲ್ಲೂ ಗ್ರಾಮೀಣ, ಅರಣ್ಯ ಪ್ರದೇಶದಲ್ಲಿ ಹಾವು ಕಡಿತದಿಂದ ಸಾವನ್ನಪ್ಪಿರುವುದನ್ನು ಹೆಚ್ಚು, ನಗರ ಪ್ರದೇಶದಲ್ಲೂ ಅಪರೂಪಕ್ಕೆ ಇಂತಹ ಪ್ರಕರಣಗಳು ಕಂಡು ಬರುತ್ತದೆ. ಈ ಹಾವು ಕಡಿತದ ನಂತರ ನಮ್ಮ ದೇಹದಲ್ಲಿ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎಂದು ಅಧ್ಯಯನ ಹಾಗೂ ತಜ್ಞರು (symptoms of cobra bite) ಹೇಳಿದ್ದಾರೆ. ಈ ಬಗ್ಗೆ ವರದಿಯೊಂದನ್ನು ಇಂಡಿಯನ್ ಎಕ್ಸ್ಪ್ರೆಸ್ ಮಾಡಿದೆ. ಪ್ರತಿ ವರ್ಷ ಭಾರತದಲ್ಲಿ ಹತ್ತಾರು ಸಾವಿರ ಜನ ಹಾವು ಕಡಿತದಿಂದ ಸಾವನ್ನಪ್ಪುತ್ತಾರೆ. ಅವುಗಳಲ್ಲಿ ಕೆಲವೊಂದು ಸಾವು ಸರಿಯಾದ ಸಮಯಕ್ಕೆ ವೈದ್ಯಕೀಯ ಚಿಕಿತ್ಸೆ ಸಿಗದ ಸಮಯದಲ್ಲಿ. ಇದೀಗ ಹಾವು ಕಡಿತದಿಂದ ದೇಹದಲ್ಲಿ ಯಾವೆಲ್ಲ ಬದಲಾವಣೆಗಳು ಆಗುತ್ತದೆ. ಇದೆಲ್ಲದಕ್ಕಿಂತ ಹಾವು ಕಡಿತದಾಗ ಏನ್ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ಕ್ರಿಟಿಕಲ್ ಕೇರ್ ಸಲಹೆಗಾರರಾದ ಡಾ. ಖುಷ್ಬೂ ಕಟಾರಿಯಾ ಅವರು ಮಾತನಾಡಿದ್ದಾರೆ. ವಿಷಪೂರಿತ ಹಾವು ಕಡಿತದಿಂದ ದೇಹದಲ್ಲಿ ಪೂರ್ಣ ಪ್ರಮಾಣದ ಬದಲಾವಣೆಗಳು ಆಗುತ್ತದೆ.
ಕೋಬ್ರಾಗಳು ಮತ್ತು ಇತರ ವಿಷಭರಿತ ಹಾವುಗಳು, ಮೊದಲಾಗಿ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲಿಂದ ಇದು ಸ್ನಾಯು ದೌರ್ಬಲ್ಯದಿಂದ ಪ್ರಾರಂಭವಾಗಿ, ನಂತರ ಪಾರ್ಶ್ವವಾಯು ಉಂಟಾಗುತ್ತದೆ. ಉಸಿರಾಟದ ತೊಂದರೆ, ಕೈಕಾಲುಗಳಲ್ಲಿ ದೌರ್ಬಲ್ಯ, ಅಸ್ಥಿರ ನಡಿಗೆ ಮತ್ತು ಮಸುಕಾದ ದೃಷ್ಟಿ ಸಮಸ್ಯೆಗಳನ್ನು ಅನುಭವಿಸಬಹುದು. ಹೀಗೆ ಹಾವಿನ ವಿಷವು ನರಗಳು ಮತ್ತು ಸ್ನಾಯುಗಳ ನಡುವಿನ ಸಂಕೇತಗಳ ಪ್ರಸರಣವನ್ನು ಅಡ್ಡಿಪಡಿಸುತ್ತದೆ. ಹಾವು ಕಡಿತದಿಂದ ಕಣ್ಣು ಕೂಡ ಬಿಡಲು ಸಾಧ್ಯವಾಗುವುದಿಲ್ಲ. ಇದನ್ನು ರಸೆಲ್ಸ್ ವೈಪರ್ ಮತ್ತು ಸ್ಕೇಲ್ಡ್ ವೈಪರ್‌ನಂತಹ ಹಾವುಗಳಲ್ಲಿ ಕಂಡುಬರುವ ಹೆಮೋಟಾಕ್ಸಿಕ್ ವಿಷವು ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು.
ಇದರ ಜತೆಗೆ ಆಂತರಿಕ ಮತ್ತು ಬಾಹ್ಯ ರಕ್ತಸ್ರಾವ, ಅಂಗಾಂಶ ಮತ್ತು ಮೂತ್ರಪಿಂಡದ ಹಾನಿ, ಕಡಿಮೆ ರಕ್ತದೊತ್ತಡ ಮತ್ತು ಹೆಚ್ಚಿದ ಹೃದಯ ಬಡಿತಕ್ಕೆ ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ, ಇದು ಮಾರಕ ರಕ್ತಸ್ರಾವ ಅಥವಾ ಬಹು-ಅಂಗಗಳ ವೈಫಲ್ಯಕ್ಕೆ ಕಾರಣವಾಗಬಹುದು. ಇನ್ನು ಸಮುದ್ರ ಹಾವುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮಯೋಟಾಕ್ಸಿಕ್ ವಿಷವು ಸ್ನಾಯು ಅಂಗಾಂಶದ ಮೇಲೆ ನೇರ ಪರಿಣಾಮವನ್ನು ಉಂಟು ಮಾಡುತ್ತದೆ. ಜತೆಗೆ ಇದು ಸ್ನಾಯು ನೋವಿಗೂ ಕಾರಣವಾಗಬಹುದು ಹಾಗೂ ಮೂತ್ರಪಿಂಡಕ್ಕೂ ಹಾನಿ ಉಂಟು ಮಾಡಬಹುದು. ಹಾವು ಕಚ್ಚಿದ ತಕ್ಷಣ ಮನುಷ್ಯ ಸಾಯುವುದಿಲ್ಲ. ಆದರೆ ಈ ಪ್ರಕ್ರಿಯೆಗಳು ನಡೆದ ನಂತರ ಸಾವು ಸಂಭವಿಸುವುದು. ಅದು ಕೂಡ ಪ್ರಕ್ರಿಯೆಗಳು ನಡೆಯಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ ಅವರಿಗೆ ಚಿಕಿತ್ಸೆ ಅಥವಾ ಉಳಿಸುವ ಪ್ರಯತ್ನ ಮಾಡಬಹುದು. ಇದನ್ನು ಮೀರಿ ಸಾವು ಸಂಭವಿಸಿದರೆ, ಅದಕ್ಕೆ ವಿಳಂಬ ಅಥವಾ ಅಸಮರ್ಪಕ ಚಿಕಿತ್ಸೆ ಕಾರಣ ಎಂದು ಹೇಳಬಹುದು. ಭಾರತದಲ್ಲಿ ವಿಷವನ್ನು ತೆಗೆಯುವ ಅಥವಾ ನಡೆಯುವ ಔಷಧಿಗಳು ಇದೆ. ಆದರೆ ಈ ಔಷಧಿ ನೀಡಲು ಸಮಯವು ನಿರ್ಣಾಯಕವಾಗಿದೆ. ಅದನ್ನು ಎಷ್ಟು ಬೇಗ ನೀಡಲಾಗುತ್ತದೆಯೋ ಅಷ್ಟು ಪರಿಣಾಮಕಾರಿಯಾಗಿರುತ್ತದೆ.
ಇದನ್ನೂ ಓದಿ: ಪುರುಷರು ಬಿಗಿಯಾದ ಬೆಲ್ಟ್ ಧರಿಸುವುದರಿಂದ ಬಂಜೆತನ ಕಾಡುವುದು ಖಂಡಿತ: ತಜ್ಞರು ಹೇಳೋದೇನು?
ಸಾವುಗಳು ಹೆಚ್ಚಾಗಲು ಕಾರಣಗಳು:
ಒಂದು ಆಸ್ಪತ್ರೆಗೆ ತಡವಾಗಿ ಬರುವುದು, ಮತ್ತೊಂದು ಅಸಮರ್ಪಕ ಡೋಸೇಜ್ ಅಥವಾ ಕಳಪೆ ಗುಣಮಟ್ಟ ಡೋಸೇಜ್ಗಳಿಂದ ಸಾವು ಸಂಭವಿಸುವುದು ಕಾರಣವಾಗಬಹುದು. ತ್ವರಿತ ಚಿಕಿತ್ಸೆ ನೀಡಿದ್ರೆ ಅವರ ಜೀವವನ್ನು ಉಳಿಸಬಹುದು. ಹಾಗೂ ಹಾವು ಕಡಿತದ ನಂತರ ಸರಿಯಾದ ಪ್ರಥಮ ಚಿಕಿತ್ಸೆ ಮಾಡಬೇಕು. ಹಾವು ಕಚ್ಚಿದ ಪ್ರದೇಶ ಕಚ್ಚಿದ ಹಾವು ಅಲ್ಲಿದ್ದರೆ ಅದರಿಂದ ಕಚ್ಚಿಸಿಕೊಂಡಿರುವ ವ್ಯಕ್ತಿಯನ್ನು ದೂರ ತರಬೇಕು. ನಂತರ ಆ ವ್ಯಕ್ತಿಗೆ ಗಾಬರಿಯಾಗದ ರೀತಿಯಲ್ಲಿ ಎಚ್ಚರಿಕೆ ಇರುವಂತೆ ನೋಡಿಕೊಳ್ಳಬೇಕು. ಕಚ್ಚಿದ ಭಾಗಕ್ಕೆ ಬಟ್ಟೆಯನ್ನು ಬಿಗಿಯಾಗಿ ಕಟ್ಟಿ, ವಿಷ ಹೃದಯಕ್ಕೆ ತಲುಪದಂತೆ ನೋಡಿಕೊಳ್ಳಬೇಕು. ಇಷ್ಟು ಮಾಡಿದ ನಂತರ ಯಾವುದೇ ಕಾರಣಕ್ಕೂ ಆ ವ್ಯಕ್ತಿಯನ್ನು ನಡೆಯಲು ಬಿಡಬೇಡಿ. ಒಂದು ನಡೆದಾಡಿದರೆ ವಿಷ ಹರಡುವ ಸಾಧ್ಯ ಇದೆ. ನಂತರ ಆ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ತಕ್ಷಣ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ