AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣವೂ ಅಲ್ಲ ಖ್ಯಾತಿಯೂ ಅಲ್ಲ; ಸುಖ ಜೀವನಕ್ಕೆ ಕೀಲಿಕೈ ಇದೊಂದೆಯಂತೆ; ಅಧ್ಯಯನ

ಹೆಚ್ಚಿನವರು ಹಣವಿದ್ರೆ ಜೀವನದಲ್ಲಿ ಸಂತೋಷವಾಗಿರಬಹುದು, ಹೆಸರು ಮಾಡಿದ್ರೆ ಜೀವನದಲ್ಲಿ ಸಂತೋಷ ತನ್ನಿಂದ ತಾನೇ ಬರುತ್ತದೆ ಎಂದು ಹಲವರು ಭಾವಿಸುತ್ತಾರೆ. ಹಣ, ಸಂಪಾದನೆ, ಖ್ಯಾತಿ ಇದ್ಯಾವುದರಿಂದ ಕೂಡಾ ಮನುಷ್ಯನಿಗೆ ನಿಜವಾದ ಸಂತೋಷ ಲಭಿಸುವುದಿಲ್ಲವಂತೆ. ಜೀವನದಲ್ಲಿ ನಿಜವಾದ ಆರೋಗ್ಯ, ಸಂತೋಷ ಲಭಿಸೋದು ಇದೊಂದೆ ಕಾರಣದಿಂದ ಎಂದು ಸತತ 75 ವರ್ಷಗಳಿಂದ ನಡೆದ ಹಾರ್ವಡ್‌ ವಿಶ್ವವಿದ್ಯಾನಿಲಯದ ಸಂಶೋಧನೆಯಲ್ಲಿ ತಿಳಿದು ಬಂದಿದೆ. ಹಾಗಿದ್ರೆ ಸಂತೋಷ ಸುಖ ಜೀವನದ ಕೀಲಿಕೈ ಯಾವುದು ಎಂಬುದನ್ನು ನೋಡೋಣ.

ಹಣವೂ ಅಲ್ಲ ಖ್ಯಾತಿಯೂ ಅಲ್ಲ; ಸುಖ  ಜೀವನಕ್ಕೆ ಕೀಲಿಕೈ ಇದೊಂದೆಯಂತೆ; ಅಧ್ಯಯನ
ಡಾ. ರಾಬರ್ಟ್‌ ವಾಲ್ಡಿಂಗರ್‌ Image Credit source: Getty Images
ಮಾಲಾಶ್ರೀ ಅಂಚನ್​
|

Updated on: May 22, 2025 | 8:00 PM

Share

ಹಣವೊಂದಿದ್ದರೆ ಜೀವನದಲ್ಲಿ ಹ್ಯಾಪಿ ಆಗಿರ್ಬೋದು, ಹಣದಿಂದಲೇ ಎಲ್ಲಾ… ಅದಕ್ಕಾಗಿ ಎಷ್ಟೇ ಕಷ್ಟಪಟ್ಟಾದ್ರೂ ದುಡ್ಡು ಮಾಡ್ಬೇಕು ಎಂದು ಹಲವರು ಹೆಣಗಾಡುತ್ತಿರುತ್ತಾರೆ. ಇನ್ನೂ ಕೆಲವರು ಜೀವನದ ಸಂತೋಷ ಅನ್ನೋದು ಖ್ಯಾತಿಯಲ್ಲಿ ಅಡಗಿದೆ ಎಂದು ಪ್ರಖ್ಯಾತಿ ಗಳಿಸಲು ಹಲವಾರು ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ. ಆದ್ರೆ ಜೀವನದಲ್ಲಿ ನಿಜವಾದ ಸುಖ, ಸಂತೋಷ ಲಭಿಸುವುದು ಖಂಡಿತವಾಗಿಯೂ ಹಣ ಮತ್ತು ಖ್ಯಾತಿಯಿಂದ ಅಲ್ಲ ಎಂದು ಸಂಶೋಧನೆಯೊಂದು ಹೇಳಿದೆ. ಹೌದು 75 ವರ್ಷಗಳಿಂದ ನಡೆದ ಹಾರ್ವರ್ಡ್‌ ವಿಶ್ವವಿದ್ಯಾನಿಲಯದ (Harvard Study) ಈ ದೀರ್ಘಕಾಲದ ಸಂಶೋಧನೆಯಲ್ಲಿ ಹಣ, ಖ್ಯಾತಿಯಿಂದ ಜೀವನದಲ್ಲಿ ನಿಜವಾದ ಸಂತೋಷ (Happiness in life) ಲಭಿಸುವುದಿಲ್ಲ, ಸಂತೋಷದ ಕೀಲಿ ಕೈ ಬೇರೆಯೇ ಇದೆ ಎಂಬುದು ತಿಳಿದು ಬಂದಿದೆ. ಹಾಗಿದ್ರೆ ಜೀವನದಲ್ಲಿ ನಿಜವಾದ ಸಂತೋಷ ಲಭಿಸುವುದು ಯಾವ ವಿಚಾರದಿಂದ ಎಂಬುದನ್ನು ನೋಡೋಣ ಬನ್ನಿ.

ಸುಖ ಜೀವನಕ್ಕೆ ಕೀಲಿಕೈ ಇದೊಂದೆಯಂತೆ; ಅಧ್ಯಯನ:

ಸತತ 75 ವರ್ಷಗಳಿಂದ ನಡೆದ ಹಾರ್ವರ್ಡ್‌ ಸ್ಟಡಿ ಆಫ್‌ ಅಡಲ್ಟ್‌ ಡೆವಲಮ್‌ಮೆಂಟ್‌ ಎಂಬ ಹಾರ್ವರ್ಡ್‌ ವಿಶ್ವವಿದ್ಯಾನಿಲಯದ ಈ ಸಂಶೋಧನೆಯಲ್ಲಿ ಹಣ ಮತ್ತು ಖ್ಯಾತಿಯಿಂದ ಜೀವನದಲ್ಲಿ ನಿಜವಾದ ಸಂತೋಷ ಲಭಿಸುವುದಿಲ್ಲ ಎಂಬುದು ತಿಳಿದು ಬಂದಿದೆ. ಹಾರ್ವರ್ಡ್‌ ಸ್ಟಡಿ ಆಫ್‌ ಅಡಲ್ಟ್‌ ಡೆವಲಪ್‌ಮೆಂಟ್‌ ಅಧ್ಯಯನ ನಿರ್ದೇಶಕ ಡಾ. ರಾಬರ್ಟ್‌ ವಾಲ್ಡಿಂಗರ್‌ “ಉತ್ತಮವಾದ ಸಂಬಂಧಗಳೇ ಸಂತೋಷ ಮತ್ತು ಸುಖಿ ಜೀವನದ ನಿಜವಾದ ಕೀಲಿಕೈ, ಒಂಟಿತನವೆಂಬುದು ಸಾಂಕ್ರಾಮಿಕ ರೋಗವಿದ್ದಂತೆ” ಎಂದು ಹೇಳಿದ್ದಾರೆ. ಅವರು ಹೇಳುತ್ತಾರೆ, ಒಂದು ಉತ್ತಮವಾದ ಸಂಬಂಧ ಪರಿಧಮನಿಯ ಕಾಯಿಲೆ, ಸಂಧಿವಾತವನ್ನು ಕಡಿಮೆ ಮಾಡುತ್ತದೆ ಎಂದು. ಒಟ್ಟಾರೆಯಾಗಿ ಉತ್ತಮ ಸಂಬಂಧದಿಂದ ಜೀವನದಲ್ಲಿ ಆರೋಗ್ಯ ಮತ್ತು ಸಂತೋಷ ಲಭಿಸುತ್ತದೆ.

ಡಾ. ರಾಬರ್ಟ್‌ ವಾಲ್ಡಿಂಗರ್‌  “ಇತ್ತೀಚಿಗೆ ಮಿಲೇನಿಯನ್ಸ್‌ನ ಸಮೀಕ್ಷೆಯೊಂದು ನಡೆದಿದ್ದು, ಆ ಸಮೀಕ್ಷೆಯಲ್ಲಿ ಆರೋಗ್ಯ ಮತ್ತು ಸಂತೋಷದ ಜೀವನಕ್ಕೆ ಕಾರಣವೇನು? ಜೀವನದ ಗುರಿಗಳೇನು ಎಂಬುದನ್ನು ಕೇಳಲಾಯಿತು. ಅದರಲ್ಲಿ  ಶೇಕಡಾ 80 ಕ್ಕಿಂತ ಹೆಚ್ಚು ಜನರು ಶ್ರೀಮಂತರಾಗುವುದು ಅವರ ಜೀವನದ ಪ್ರಮುಖ ಗುರಿ ಎಂದು ಹೇಳಿದರು. ಮತ್ತು 50% ದಷ್ಟು ವಯಸ್ಕರರು ಖ್ಯಾತಿ ಗಳಿಸುವುದು ಜೀವನದ ಗುರಿ ಎಂದು ಹೇಳಿದರು” ಆದರೆ ಇದ್ಯಾವುದು ಅಲ್ಲ, ಸಂಬಂಧಗಳಿಂದ ಜೀವನದಲ್ಲಿ ಸಂತೋಷ ಲಭಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
ಹಸಿದಾಗ ಮನುಷ್ಯನಿಗೆ ಏನಕ್ಕೆ ಕೋಪ ಬರುತ್ತೆ ಗೊತ್ತಾ?
Image
ಪ್ರತಿದಿನ ಈ 6 ಆಹಾರ ಸೇವನೆ ಮಾಡಿ, ಹೃದಯಕ್ಕೆ ರಕ್ಷಣೆಯಾಗಿ ನಿಲ್ಲುತ್ತದೆ
Image
ಮದುವೆ ಆಗೋಕೆ ಪರ್ಫೆಕ್ಟ್‌ ಏಜ್‌ ಯಾವುದು?
Image
ಪತಂಜಲಿಯ ಈ ಔಷಧಿಯ ಸೇವನೆಯಿಂದ ಕೊಲೆಸ್ಟ್ರಾಲ್‌ನಿಂದ ಮುಕ್ತಿಪಡೆಯಬಹುದಂತೆ

ಹಾರ್ವರ್ಡ್‌ ಸ್ಟಡಿ ಆಫ್‌ ಅಡಲ್ಟ್‌ ಡೆವಲಮ್‌ಮೆಂಟ್‌ ಅಧ್ಯಯನದಲ್ಲಿ 75 ವರ್ಷಗಳಿಂದ, ನಾವು 724 ಪುರುಷರ ಜೀವನವನ್ನು ವರ್ಷದಿಂದ ವರ್ಷಕ್ಕೆ ಟ್ರ್ಯಾಕ್ ಮಾಡಿದ್ದೇವೆ, ಅವರ ಕೆಲಸ, ಅವರ ಮನೆ ಜೀವನ, ಅವರ ಆರೋಗ್ಯ ಮತ್ತು ಸಹಜವಾಗಿಯೇ ಅವರ ಜೀವನ ಕಥೆಗಳು ಎಲ್ಲವನ್ನು ಅಧ್ಯಯನ ಮಾಡಿದ್ದೇವೆ. ಈ ಒಟ್ಟಾರೆ ಅಧ್ಯಯನದಲ್ಲಿ  ʼಉತ್ತಮ ಸಂಬಂಧಗಳು ನಮ್ಮನ್ನು ಸಂತೋಷದಿಂದ ಮತ್ತು ಆರೋಗ್ಯವಾಗಿರಿಸುತ್ತವೆʼ ಎಂಬುದು ತಿಳಿದು ಬಂದಿದೆ ಎಂದು ಡಾ. ರಾಬರ್ಟ್‌ ಹೇಳಿದ್ದಾರೆ.

ಸಾಮಾಜಿಕ ಸಂಪರ್ಕಗಳು ನಮಗೆ ನಿಜವಾಗಿಯೂ ಒಳ್ಳೆಯದು ಮತ್ತು ಅದು ಒಂಟಿತನವು ಕೊಲ್ಲುತ್ತದೆ. ಕುಟುಂಬ, ಸ್ನೇಹಿತರು, ಸಮುದಾಯದೊಂದಿಗೆ ಹೆಚ್ಚು ಸಾಮಾಜಿಕವಾಗಿ ಸಂಪರ್ಕ ಹೊಂದಿರುವ ಜನರು ಸಂತೋಷವಾಗಿರುತ್ತಾರೆ, ಅವರು ದೈಹಿಕವಾಗಿ ಆರೋಗ್ಯವಾಗಿರುತ್ತಾರೆ ಮತ್ತು ಕಡಿಮೆ ಸಾಮಾಜಿಕ ಸಂಪರ್ಕ ಹೊಂದಿರುವ ಜನರಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂದು ಈ ಅಧ್ಯಯನದಿಂದ ತಿಳಿದುಬಂದಿದೆ. ಒಟ್ಟಾರೆಯಾಗಿ ಸಂಬಂಧಗಳೇ ಸುಖ ಜೀವನದ ಕೀಲಿ ಕೈ.

ಇದನ್ನೂ ಓದಿ: ಪತಂಜಲಿಯ ಈ ಔಷಧಿಯನ್ನು ತೆಗೆದುಕೊಂಡರೆ, ಕೊಲೆಸ್ಟ್ರಾಲ್‌ನಿಂದ ಮುಕ್ತಿ ಪಡೆಯಬಹುದು; ಸಂಶೋಧನೆ

ಉತ್ತಮ ಜೀವನವು ಒಳ್ಳೆಯ ಸಂಬಂಧಗಳಿಂದ ನಿರ್ಮಾಣವಾಗುತ್ತದೆ:

ಸಂಬಂಧಗಳು ನಮ್ಮ ಮೇಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ  ಪರಿಣಾಮ ಬೀರುತ್ತವೆ. ಒಳ್ಳೆಯ ಸಂಭಾಷಣೆಯ ಸಮಯದಲ್ಲಿ ಯಾರಾದರೂ ನಿಮ್ಮನ್ನು ನಿಜವಾಗಿಯೂ ಅರ್ಥಮಾಡಿಕೊಂಡಿದ್ದಾರೆ ಎಂದು ನೀವು ಭಾವಿಸಿದಾಗ ನೀವು ಅನುಭವಿಸುವ ಹೊಸ ಚೈತನ್ಯವನ್ನು ಎಂದಾದರೂ ಗಮನಿಸಿದ್ದೀರಾ? ಅಥವಾ  ನಿಮ್ಮವರ ಜೊತೆ ಕೋಪ, ಜಗಳ ಮಾಡಿಕೊಂಡು ಸಮಯದಲ್ಲಿ ನಿದ್ರೆ ಬಾರದಿರುವ ಅನುಭವ ನಿಮಗೂ ಆಗಿದ್ಯಾ? ಈ ರೀತಿಯಲ್ಲಿ ಸಂಬಂಧ ಎನ್ನುವಂತಹದ್ದು ಒಬ್ಬ ವ್ಯಕ್ತಿಯ ಮೇಲೆ ಪರಿಣಾಮವನ್ನು ಬೀರುತ್ತದೆ.

ಸಂಬಂಧದಲ್ಲಿ ಜಗಳಗಳು ನಡೆದರೆ, ಮಾನಸಿಕ ನೆಮ್ಮದಿಯೇ ಇಲ್ಲದಂತಾಗುತ್ತದೆ, ಅದೇ ಒಂದು ಒಂದು ಉತ್ತಮ ಸಂಬಂಧದಲ್ಲಿ ಪ್ರತಿದಿನವೂ ಹೊಸತರದಂತಿರುತ್ತದೆ. ಬದುಕು ಸುಂದರವಾಗಿದೆಯೆಂದು ಭಾಸವಾಗುತ್ತದೆ. ಆದ್ದರಿಂದ ಒಳ್ಳೆಯ, ನಿಕಟ ಸಂಬಂಧಗಳು ನಮ್ಮ ಆರೋಗ್ಯ ಮತ್ತು ಯೋಗಕ್ಷೇಮ ಎರಡಕ್ಕೂ ಒಳ್ಳೆಯದು.

ಇನ್ನೊಂದು ವಿಚಾರ ಏನಂದ್ರೆ ನೀವು ಹೆಚ್ಚು ಸಾಮಾಜಿಕವಾಗಿ ಸಂಪರ್ಕ ಹೊಂದಿದಷ್ಟೂ, ನೀವು ಹೆಚ್ಚು ಕಾಲ ಬದುಕುವ ಮತ್ತು ಉತ್ತಮವಾಗಿ ಬದುಕುವ ಸಾಧ್ಯತೆ ಹೆಚ್ಚು. ಒಂಟಿ ಬದುಕು ಅಷ್ಟು ಒಳ್ಳೆಯದಲ್ಲ. ಒಂಟಿತನವು ಧೂಮಪಾನದಷ್ಟೇ ಆರೋಗ್ಯಕ್ಕೆ ಹಾನಿಕಾರಕವೆಂದು ಈ ಅಧ್ಯಯನದಲ್ಲಿ ಪರಿಗಣಿಸಲಾಗಿದೆ. ವಾಲ್ಡಿಂಗರ್ ಹೇಳುತ್ತಾರೆ. “ಒತ್ತಡವು ಜೀವನದ ಒಂದು ಭಾಗ ನಿಜ. ಆದರೆ ಉತ್ತಮ  ಸಂಬಂಧಗಳು ನಮ್ಮ ದೇಹವು ಒತ್ತಡವನ್ನು ನಿರ್ವಹಿಸಲು ಮತ್ತು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.” ಆದ್ದರಿಂದ ಆರೋಗ್ಯಕರ, ಸಂತೋಷದ ಜೀವನ ಸಾಗಿಸಲು, ದೀರ್ಘಕಾಲ ಸುಖಮಯ ಜೀವನ ನಡೆಸಲು ಜನರೊಂದಿಗೆ, ನಿಮ್ಮವರೊಂದಿಗೆ ನೀವು ಉತ್ತಮ ಸಂಬಂಧವನ್ನು ಬೆಸೆಯುವುದು, ಸಾಮಾಜಿಕವಾಗಿ ಬೆರೆಯುವುದು ತುಂಬಾನೇ ಮುಖ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಪಲ್ಟಿ, ಓರ್ವ ಸಾವು
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ಬಸನಗೌಡ ಯತ್ನಾಳ್ ಹೇಳಿದಕ್ಕೆಲ್ಲ ನಾನು ಪ್ರತಿಕ್ರಿಯಿಸಲ್ಲ: ಎಂಬಿ ಪಾಟೀಲ್
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ವಿಜಯ್ ದೇವರಕೊಂಡ ‘ಕಿಂಗ್ಡಮ್’ ಸಿನಿಮಾ ಟ್ರೈಲರ್ ಬಿಡುಗಡೆ: LIVE
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಅಭಿಮಾನಿಗಳನ್ನು ಶಾಂತಗೊಳಿಸಲು ಶಿವಲಿಂಗೇಗೌಡರಿಂದ ಹರಸಾಹಸ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್​ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?