Personality Test: ನಿಮ್ಮ ಗುಪ್ತ ಗುಣ ಸ್ವಭಾವ ತಿಳಿಬೇಕಾ? ಹಾಗಿದ್ರೆ ಈ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು ಹೇಳಿ
ವಾಸ್ತವಕ್ಕಿಂತ ಭಿನ್ನವಾಗಿರುವ, ಕಣ್ಣಿಗೆ ಭ್ರಮೆಯನ್ನುಂಟುಮಾಡುವ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಮೆದುಳಿಗೆ ವ್ಯಾಯಾಮ ನೀಡುವುದು ಮಾತ್ರವಲ್ಲದೆ ನಮ್ಮ ರಹಸ್ಯ ಗುಣ ಸ್ವಭಾವವನ್ನು ಕೂಡ ತಿಳಿಸುತ್ತವೆ. ಇಂತಹ ಪರ್ಸನಾಲಿಟಿ ಟೆಸ್ಟ್ ಫೋಟೋಗಳು ಸಾಕಷ್ಟು ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೊಂದು ಚಿತ್ರ ಹರಿದಾಡುತ್ತಿದ್ದು, ಆ ಚಿತ್ರದಲ್ಲಿ ನಿಮಗೆ ಮೊದಲು ಯಾವ ಪ್ರಾಣಿ ಕಾಣಿಸಿತು ಎಂಬ ಆಧಾರದ ಮೇಲೆ ನಿಮ್ಮ ರಹಸ್ಯ ಗುಣ ಸ್ವಭಾವ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ.

ಇತರರರು ನಮ್ಮ ವ್ಯಕ್ತಿತ್ವವನ್ನು ಹೇಗೆ ಅಳೆಯುತ್ತಾರೋ ಅದೇ ರೀತಿ ನಮಗೆಯೇ ಅರಿವಿಲ್ಲದ ನಮ್ಮಲ್ಲಿ ರಹಸ್ಯವಾಗಿ ಅಡಗಿರುವ ಗುಣ ಸ್ವಭಾವ ಹಾಗೂ ವ್ಯಕ್ತಿತ್ವವನ್ನು (Personality) ನಾವೇ ತಿಳಿದುಕೊಳ್ಳಬಹುದು. ಹೌದು ದೇಹದ ಅಂಗಗಳಾದ ಮೂಗಿನ ಆಕಾರ, ಕಿವಿಯ ಗಾತ್ರ, ಹುಬ್ಬಿನ ಆಕಾರ, ಪಾದದ ಆಕಾರ ಜೊತೆಗೆ ಆಪ್ಟಿಕಲ್ ಇಲ್ಯೂಷನ್ (optical illusion) ಚಿತ್ರಗಳ ಮೂಲಕವೂ ನಮ್ಮಲ್ಲಿ ಅಡಗಿರುವ ಗುಪ್ತ ಸ್ವಭಾವವನ್ನು ನಾವೇ ತಿಳಿದುಕೊಳ್ಳಬಹುದು. ಪರ್ಸನಾಲಿಟಿ ಟೆಸ್ಟ್‌ಗೆ ಸಂಬಂಧಿಸಿದ ಚಿತ್ರಗಳ ಮೂಲಕ ನೀವು ಕೂಡ ನಿಮ್ಮ ವ್ಯಕ್ತಿತ್ವವನ್ನು ಪರೀಕ್ಷಿಸಿರಬಹುದಲ್ವಾ. ಅದೇ ರೀತಿ ಇಂದಿನ ಪರ್ಸನಾಲಿಟಿ ಟೆಸ್ಟ್ ಫೋಟೋದಲ್ಲಿ ನಿಮಗೆ ಯಾವ ಪ್ರಾಣಿ ಮೊದಲು ಕಾಣಿಸಿತು ಎಂಬ ನಿಮ್ಮ ಕರ್ತವ್ಯ ಪ್ರಜ್ಞೆ, ನೀವು ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಶೈಲಿ ಹೇಗಿದೆ ಎಂದುದನ್ನು ಪರೀಕ್ಷಿಸಿ.
ಈ ಚಿತ್ರದಲ್ಲಿ ನಿಮಗೆ ಮೊದಲು ಯಾವ ಪ್ರಾಣಿ ಕಾಣಿಸಿತು?
okdiario.com ಪೇಜಲ್ಲಿ ಶೇರ್ ಮಾಡಲಾದ ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನಿಮಗೆ ಯಾವ ಪ್ರಾಣಿ ಮೊದಲಿಗೆ ಕಾಣಿಸಿತು ಎಂಬ ಆಧಾರದ ಮೇಲೆ ನೀವು ನಿಮ್ಮ ಕರ್ತವ್ಯ ಪ್ರಜ್ಞೆ, ನೀವು ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಶೈಲಿ ಹೇಗಿದೆ ಎಂಬುದನ್ನು ಪರೀಕ್ಷಿಸಬಹುದು. ಈ ಚಿತ್ರದಲ್ಲಿ ಕೆಲವರಿಗೆ ಕುದುರೆ ಕಾಣಿಸಿದರೆ, ಇನ್ನೂ ಕೆಲವರಿಗೆ ಸಮುದ್ರ ಜೀವಿ ಸೀಲ್ ಕಾಣಿಸಬಹುದು, ಇನ್ನೂ ಕೆಲವರಿಗೆ ಮೀನು, ಮತ್ಸ್ಯ ಕನ್ಯೆ, ಕತ್ತೆ ಕಾಣಿಸಬಹುದು. ಹೀಗೆ ನಿಮಗೆ ಮೊದಲು ಕಾಣಿಸಿದ ಪ್ರಾಣಿಯ ಮುಖಾಂತರ ನಿಮ್ಮ ಗುಣ ಸ್ವಭಾವ ಹೇಗಿದೆ ಪರೀಕ್ಷಿಸಿ.
ಮೊದಲು ಕುದುರೆ ಕಾಣಿಸಿದರೆ: ಕುದುರೆ ಸ್ವಾತಂತ್ರ್ಯ, ದೃಢ ನಿಶ್ಚಯ ಮತ್ತು ಸಾಹಸ ಮನೋಭಾವದ ಸಂಕೇತವಾಗಿದೆ. ನೀವೇನಾದರೂ ಈ ಚಿತ್ರದಲ್ಲಿ ಮೊದಲು ಕುದುರೆಯನ್ನು ನೋಡಿದರೆ, ನೀವು ಸವಾಲುಗಳನ್ನು ಎದುರಿಸುವಲ್ಲಿ ಚೈತನ್ಯಶೀಲ ಮತ್ತು ದೃಢನಿಶ್ಚಯವನ್ನು ಹೊಂದಿದ್ದೀರಿ ಎಂದು ಅರ್ಥ. ಮಹತ್ವಾಕಾಂಕ್ಷೆಗಳಿಗೆ ಆಧ್ಯತೆ ನೀಡುವ ನೀವು ಯಾವಾಗಲೂ ನಿಮ್ಮ ವೈಯಕ್ತಿಕ ಗುರಿಗಳ ಮೇಲೆ ಗಮನವನ್ನು ಕೇಂದ್ರೀಕರಿಸಿರುತ್ತೀರಿ. ಜೊತೆಗೆ ನೀವು ನಿಮ್ಮ ದೃಷ್ಟಿ ಮತ್ತು ಮೌಲ್ಯಗಳಿಗೆ ಹೊಂದಿಕೆಯಾದಾಗ ಮಾತ್ರ ಜವಾಬ್ದಾರಿಗಳನ್ನು ಸ್ವೀಕರಿಸುತ್ತೀರಿ.
ಸೀಲ್: ಈ ಚಿತ್ರದಲ್ಲಿ ನಿಮಗೆ ಮೊದಲು ಸಮದ್ರ ಜೀವಿ ಸೀಲ್ ಕಾಣಿಸಿದರೆ ನೀವು ಹೊಂದಿಕೊಳ್ಳುವ, ಭಾವನಾತ್ಮಕ ಸಮತೋಲನವನ್ನು ಹೊಂದಿದ್ದೀರಿ ಎಂಬುದನ್ನು ಸೂಚಿಸುತ್ತದೆ. ಸೃಜನಶೀಲ ಮತ್ತು ಶಾಂತ ಸ್ವಭಾವದವರಾದ ನೀವು ಕಟ್ಟುನಿಟ್ಟಿನ ಗಡಿಯನ್ನು ಕಾಪಾಡಿಕೊಳ್ಳುವ ಬದಲು ಎಲ್ಲರೊಂದಿಗೂ ಹೊಂದಿಕೊಳ್ಳಲು ಇಷ್ಟಪಡುತ್ತೀರಿ. ನಿಮ್ಮ ಕರ್ತವ್ಯ ಪ್ರಜ್ಞೆ ಸಹಯೋಗದ, ಒತ್ತಡವಿರದ ಸನ್ನಿವೇಶಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಹೊರಹೊಮ್ಮುತ್ತದೆ.
ಇದನ್ನೂ ಓದಿ: ಹುಲಿ, ಮರ ಇದರಲ್ಲಿ ನಿಮಗೆ ಮೊದಲು ಕಂಡಿದ್ದೇನು? ಚಿತ್ರ ನೋಡಿ ವ್ಯಕ್ತಿತ್ವ ಪರೀಕ್ಷಿಸಿ
ಮೀನು: ಈ ಚಿತ್ರದಲ್ಲಿ ನಿಮಗೆ ಮೊದಲು ಮೀನು ಕಾಣಿಸಿದರೆ ನೀವು ಚಿಂತನಶೀಲರು, ಶಾಂತತೆ ಮತ್ತು ಭಾವನಾತ್ಮಕ ಸಮತೋಲನವನ್ನು ಹೊಂದಿರುವವರು ಎಂಬುದನ್ನು ಸೂಚಿಸುತ್ತದೆ. ನೀವು ವೈಯಕ್ತಿಕ ಸಂಬಂಧಗಳಲ್ಲಿ ಜವಾಬ್ದಾರಿಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳುತ್ತೀರಿ. ಜೊತೆಗೆ ನೀವು ನಿಮ್ಮ ಅಗತ್ಯಗಳಿಗಿಂತ ಇತರರ ಅಗತ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೀರಿ. ಕೆಲವೊಮ್ಮೆ ಒತ್ತಡದ ಸಂದರ್ಭಗಳಲ್ಲಿ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ನೀವು ಹಿಂಜರಿಯುತ್ತೀರಿ.
ಮತ್ಸ್ಯಕನ್ಯೆ: ಮತ್ಸ್ಯಕನ್ಯೆ ದೃಢತೆ, ಸ್ವಾತಂತ್ರ್ಯ ಮತ್ತು ಸೃಜನಶೀಲ ಸ್ವ-ಾಭಿವ್ಯಕ್ತಿಯ ಸಂಕೇತವಾಗಿದೆ. ಈ ಚಿತ್ರದಲ್ಲಿ ನೀವು ಮೊದಲು ಮತ್ಸ್ಯಕನ್ಯೆಯನ್ನು ಗಮನಿಸಿದರೆ ನೀವು ನಿಮಗೆ ನಿಜವೆಂದು ಕಾಣಿಸುವ ಅಂಶವನ್ನು ಆಳವಾಗಿ ಗೌರವಿಸುತ್ತೀರಿ ಮತ್ತು ನಿಮ್ಮ ಬದ್ಧತೆಯು ಜನರ ಮಾತಿಗಿಂತ ಆಂತರಿಕ ನಂಬಿಕೆಗಳೊಂದಿಗೆ ಇರುತ್ತದೆ. ನೀವು ಯಾವಾಗಲೂ ನಿಮ್ಮ ಮೂಲ ಮೌಲ್ಯದೊಂದಿಗೆ ಪ್ರತಿಧ್ವನಿಸುವ ಜವಾಬ್ದಾರಿಗಳನ್ನು ಮಾತ್ರ ಸ್ವೀಕರಿಸುವವರಾಗಿರುತ್ತೀರಿ.
ಕತ್ತೆ: ಇದು ಸಹಿಷ್ಣುತೆ, ದೃಢ ಶ್ರದ್ಧೆ ಮತ್ತು ಅಚಲ ನಿಷ್ಠೆಯ ಸಂಕೇತವಾಗಿದೆ. ನೀವು ಮೊದಲು ಈ ಚಿತ್ರದಲ್ಲಿ ಕತ್ತೆಯನ್ನು ಗಮನಿಸಿದರೆ ನೀವು ಆಳವಾದ ಕರ್ತವ್ಯ ಪ್ರಜ್ಞೆಯನ್ನು ಹೊಂದಿರುವವರೆಂದು ಅರ್ಥ. ಅಡೆತಡೆಗಳನ್ನು ಲೆಕ್ಕಿಸದೆ ಬದ್ಧತೆಗಳನ್ನು ಪೂರ್ಣಗೊಳಿಸಲು ಸಂಪೂರ್ಣ ಮನಸ್ಸಿನಿಂದ ಶ್ರಮ ವಹಿಸುತ್ತೀರಿ. ನಿಮ್ಮ ನಂಬಿಕೆಗಳ ಮೇಲೆ ದೃಢವಾಗಿ ನಿಲ್ಲುವ ಈ ನಿಮ್ಮ ಗುಣವನ್ನು ಜನ ಮೊಂಡುತನವೆಂದು ಕೆಲವೊಮ್ಮೆ ತಪ್ಪಾಗಿ ಅರ್ಥೈಸುವ ಸಾಧ್ಯತೆ ಇರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:31 pm, Thu, 22 May 25