Personality Test: ಹಕ್ಕಿ, ಮೊಸಳೆ; ಈ ಆಪ್ಟಿಕಲ್ ಇಲ್ಯೂಷನ್ ಚಿತ್ರ ನೋಡಿ ನಿಮ್ಮ ರಹಸ್ಯ ವ್ಯಕ್ತಿತ್ವ ತಿಳಿಯಿರಿ
ಈಗಂತೂ ನಮ್ಮಲ್ಲಿ ಅಡಗಿರುವಂತಹ ರಹಸ್ಯ ವ್ಯಕ್ತಿತ್ವವನ್ನು ನಾವೇ ತಿಳಿದುಕೊಳ್ಳಬಹುದಾದ ಹಲವು ವಿಧಾನಗಳಿವೆ. ಅವುಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಕೂಡಾ ಒಂದು. ಕಣ್ಣಿಗೆ ಭ್ರಮೆಯನ್ನುಂಟುಮಾಡುವ ಈ ಚಿತ್ರಗಳು ಮೆದುಳಿಗೆ ವ್ಯಾಯಾಮ ನೀಡುವುದು ಮಾತ್ರವಲ್ಲದೆ ನಮ್ಮ ರಹಸ್ಯ ವ್ಯಕ್ತಿತ್ವವನ್ನು ಕೂಡಾ ತಿಳಿಸುತ್ತದೆ. ಇಂತಹ ಸಾಕಷ್ಟು ಫೋಟೋಗಳು ಹರಿದಾಡುತ್ತಿರುತ್ತವೆ. ಅಂತಹದ್ದೊಂದು ಫೋಟೋ ವೈರಲ್ ಆಗಿದ್ದು, ಮೊಸಳೆ ಅಥವಾ ಹಕ್ಕಿ ಆ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಬಹುದು.

ನಮ್ಮ ವರ್ತನೆ, ನಮ್ಮ ನಡವಳಿಕೆಯ ಆಧಾರದ ಮೇಲೆ ಜನ ನಮ್ಮ ವ್ಯಕ್ತಿತ್ವವನ್ನು ಅಳೆಯುತ್ತಾರೆ. ಜನ ಯಾವ ರೀತಿಯಲ್ಲೂ ನಮ್ಮ ವ್ಯಕ್ತಿತ್ವವನ್ನು (Personality) ಅಳೆದರೂ, ನಮ್ಮ ನಿಜವಾದ ಗುಣ ಸ್ವಭಾವ ಹೇಗಿದೆಯೆಂದು ನಮಗೆ ಮಾತ್ರ ಗೊತ್ತಿರುತ್ತದೆ. ಇದಲ್ಲದೆ ನಮ್ಮಲ್ಲಿ ಅಡಗಿರುವ ನಿಗೂಢ ವ್ಯಕ್ತಿತ್ವವನ್ನು ದೇಹಕಾರ ಮತ್ತು ಆಪ್ಟಿಕಲ್ ಇಲ್ಯೂಷನ್ (optical illusion) ಚಿತ್ರಗಳ ಮೂಲಕವೂ ತಿಳಿದುಕೊಳ್ಳಬಹುದಾಗಿದೆ. ಪರ್ಸನಾಲಿಟಿ ಟೆಸ್ಟ್‌ಗಳಿಗೆ (Personality Test) ಸಂಬಂಧಿಸಿದ ಇಂತಹ ಸಾಕಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಅಂತಹದ್ದೇ ಫೋಟೋವೊಂದು ಇದೀಗ ವೈರಲ್ ಆಗಿದ್ದು, ಆ ಚಿತ್ರದಲ್ಲಿ ಮೊಸಳೆ ಅಥವಾ ಪಕ್ಷಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬುದರ ಮೇಲೆ ನೀವು ಜೀವನದಲ್ಲಿ ಗುರಿಯನ್ನು ಹೊಂದಿರುವವರೇ, ಅಥವಾ ನಾಯಕತ್ವದ ಗುಣ ಹೊಂದಿರುವವರೇ ಎಂಬುದನ್ನು ತಿಳಿಯಿರಿ.
ನಿಮ್ಮ ವ್ಯಕ್ತಿತ್ವ ತಿಳಿಸುತ್ತೆ ಈ ಚಿತ್ರ:
ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು marina__neuralean ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವ ಈ ಚಿತ್ರದಲ್ಲಿ ಕೆಲವರಿಗೆ ಮೊದಲ ನೋಟದಲ್ಲಿ ಮೊಸಳೆ ಕಾಣಿಸಿದರೆ, ಇನ್ನೂ ಕೆಲವರಿ ಪಕ್ಷಿ ಕಾಣಿಸಬಹುದು. ಹೀಗೆ ನಿಮಗೆ ಮೊದಲು ಕಂಡಿದ್ದೇನು ಎಂಬ ಆಧಾರದ ಮೇಲೆ ನೀವು ಗುರಿ ಆಧಾರಿತ ವ್ಯಕ್ತಿಯೇ ಅಥವಾ ನಾಯಕತ್ವದ ಗುಣ ಹೊಂದಿರುವವರೇ ಎಂಬುದನ್ನು ತಿಳಿಯಿರಿ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಮೊದಲಿಗೆ ಮೊಸಳೆ ಕಾಣಿಸಿದರೆ: ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನಿಮಗೇನಾದರೂ ಮೊದಲು ಪರಸ್ಪರ ಎದುರು ಬದುರಾಗಿರುವ ಮೊಸಳೆ ಕಂಡರೆ, ನೀವು ನಾಯಕತ್ವದ ಗುಣವನ್ನು ಹೊಂದಿರುವವರು ಎಂದರ್ಥ. ಯಾರಿಂದಲೂ ನಿಯಂತ್ರಣಕ್ಕೊಳಗಾಗಲು ಇಷ್ಟಪಡದ ನೀವು ನಿಮ್ಮ ಜೀವನದ ಎಲ್ಲಾ ಪ್ರಮುಖ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳಲು ಇಷ್ಟಪಡುವವರಾಗಿರುತ್ತೀರಿ. ನಾಯಕತ್ವ ಗುಣವನ್ನು ಹೊಂದಿರುವ ನೀವು ಇತರರ ಆದೇಶಗಳನ್ನು ಪಾಲಿಸಲು ಇಷ್ಟಪಡುವುದಿಲ್ಲ.
ಇದನ್ನೂ ಓದಿ: ಈ ಚಿತ್ರದಲ್ಲಿ ನೀವು ಮೊದಲು ಗುರುತಿಸುವ ಪ್ರಾಣಿ ತಿಳಿಸುತ್ತಂತೆ ನಿಮ್ಮ ರಹಸ್ಯ ಗುಣ ಸ್ವಭಾವ
ಮೊದಲು ಪಕ್ಷಿ ಕಾಣಿಸಿದರೆ: ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನಿಮಗೇನಾದರೂ ಮೊದಲು ಪಕ್ಷಿ ಕಾಣಿಸಿದರೆ ನೀವು ಜೀವನದಲ್ಲಿ ದೊಡ್ಡ ಗುರಿಗಳನ್ನು ಹೊಂದಿರುವವರಾಗಿರುತ್ತೀರಿ. ಇತರರ ನಿರ್ದೇಶನಗಳನ್ನು ತೆಗೆದುಕೊಳ್ಳಲು, ನಿಮಗೆ ವಹಿಸಿದ ಕೆಲಸವನ್ನು ಸರಳವಾಗಿ ಮಾಡಲು ಇಷ್ಟಪಡುವ ನೀವು ಕೆಲವೊಂದು ಬಾರಿ ಒಂಟಿತನವನ್ನು ಅನುಭವಿಸುತ್ತೀರಿ. ಏನೇ ನಡೆದರೂ ಅದು ನಮ್ಮ ಒಳ್ಳೆಯದಕ್ಕಾಗಿಯೇ ಎಂಬ ಮನಸ್ಥಿತಿ ಹೊಂದಿರುವ ನೀವು ನಕಾರಾತ್ಮಕ ವಿಷಯಗಳಿಂದ ಆದಷ್ಟು ದೂರವಿರಲು ಬಯಸುವವರಾಗಿರುತ್ತೀರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:28 pm, Tue, 20 May 25








