International HR Day 2025: ಸಂಸ್ಥೆಗಳ ಏಳಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಅಪಾರ; HR ದಿನ ಇತಿಹಾಸ ತಿಳಿಯಿರಿ
ಯಾವುದೇ ಕಂಪೆನಿಯಾಗಿರಬಹುದು ಅಥವಾ ಸಂಸ್ಥೆಯಾಗಿರಬಹುದು ಅದರ ಬೆಳವಣಿಗೆ ಏಳಿಗೆಯಲ್ಲಿ ಅಲ್ಲಿನ ಮಾನವ ಸಂಪನ್ಮೂಲ ವಿಭಾಗ ಬಹು ಮುಖ್ಯ ಪಾತ್ರ ವಹಿಸುತ್ತದೆ. ಸಂಸ್ಥೆಗಳ ಹೆಚ್.ಆರ್ ವಿಭಾಗಗಳ ಪಾತ್ರ, ಮಾನವ ಸಂಪನ್ಮೂಲ ವೃತ್ತಿಪರರ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಲು ಪ್ರತಿ ವರ್ಷ ಮೇ 20 ರಂದು ಅಂತಾರಾಷ್ಟ್ರೀಯ ಮಾನವ ಸಂಪನ್ಮೂಲ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.

ಚಿಕ್ಕದಾಗಿರಲಿ ಅಥವಾ ಬಹು ದೊಡ್ಡ ಕಂಪನಿ (Company) ಆಗಿರಲಿ, ಪ್ರತಿಯೊಂದು ಸಂಸ್ಥೆಯಲ್ಲೂ ಮಾನವ ಸಂಪನ್ಮೂಲ (Human Resources) ವಿಭಾಗ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತವೆ. ಕಂಪೆನಿಗೆ ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದರಿಂದ ಹಿಡಿದು ವೇತನ, ಸಂಘರ್ಷ ಪರಿಹಾರ, ಉದ್ಯೋಗಿಗಳಿಗೆ ತರಬೇತಿ, ಕಾನೂನು ಸಮಸ್ಯೆಗಳನ್ನು ನಿರ್ವಹಿಸುವುದು, ಉದ್ಯೋಗಿಗಳನ್ನು ಒಗ್ಗೂಡಿಸುವುದು ಸೇರಿದಂತೆ ಒಂದು ಕಂಪೆನಿಯಲ್ಲಿ ಅಲ್ಲಿನ ಮಾನವ ಸಂಪನ್ಮೂಲ ವೃತ್ತಿಪರರು ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತಾರೆ. ಒಟ್ಟಿನಲ್ಲಿ ಮಾನವ ಸಂಪನ್ಮೂಲ ಯಾವುದೇ ಸಂಸ್ಥೆಯ ಬೆನ್ನೆಲುಬು ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ವಿಭಾಗಗಳ ಮಹತ್ವ, ಅವುಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 20 ರಂದು ಅಂತಾರಾಷ್ಟ್ರೀಯ ಮಾನವ ಸಂಪನ್ಮೂಲ (International HR Day) ದಿನವನ್ನು ಆಚರಿಸಲಾಗುತ್ತದೆ.
ಅಂತಾರಾಷ್ಟ್ರೀಯ ಮಾನವ ಸಂಪನ್ಮೂಲ ದಿನ ಆಚರಣೆ ಹೇಗೆ ಹುಟ್ಟಿಕೊಂಡಿತು?
2019 ರಲ್ಲಿ, ಯುರೋಪಿಯನ್ ಅಸೋಸಿಯೇಷನ್ ಫಾರ್ ಪೀಪಲ್ ಮ್ಯಾನೇಜ್‌ಮೆಂಟ್ (EAPM) ಅಂತಾರಾಷ್ಟ್ರೀಯ ಮಾನವ ಸಂಪನ್ಮೂಲ ದಿನವನ್ನು ಸ್ಥಾಪಿಸಿತು. ಮಾನವ ಸಂಪನ್ಮೂಲ ವೃತ್ತಿಪರರು ಮತ್ತು ಮಾನವ ಸಂಪನ್ಮೂಲ ವಿಭಾಗಗಳು ಸಂಸ್ಥೆಗೆ ನೀಡುವ ಅಪಾರ ಕೊಡುಗೆಗಳ ಬಗ್ಗೆ ಹೇಳಲು, ಮಾನವ ಸಂಪನ್ಮೂಲ ವೃತ್ತಿಪರರನ್ನು ಗೌರವಿಸಲು, ಸಂಸ್ಥೆಯ ಏಳಿಗೆಯಲ್ಲಿ ಹೆಚ್.ಆರ್ ವಹಿಸುವ ಬಹು ಮುಖ್ಯ ಪಾತ್ರಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನದ ಆಚರಣೆಯನ್ನು ಜಾರಿಗೆ ತಂದಿತು. ಅಂದಿನಿಂದ ಪ್ರತಿವರ್ಷ ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ವೈದ್ಯರು ಬಿಳಿ, ವಕೀಲರು ಕಪ್ಪು ಕೋಟು ಧರಿಸೋದೇಕೆ ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
ಅಂತಾರಾಷ್ಟ್ರೀಯ ಮಾನವ ಸಂಪನ್ಮೂಲ ದಿನದ ಮಹತ್ವ:
ಮಾನವ ಸಂಪನ್ಮೂಲ ವೃತ್ತಿಪರರು ಮತ್ತು ವಿಭಾಗಗಳು ಸಂಸ್ಥೆಗೆ ನೀಡುವ ಮಹತ್ವದ ಕೊಡುಗೆಗಳ ಬಗ್ಗೆ ಒತ್ತಿಹೇಳಲು ಮತ್ತು ಇಂದಿನ ಕ್ರಿಯಾತ್ಮಕ ಕೆಲಸದ ಜಗತ್ತಿನಲ್ಲಿ ಮಾನವ ಸಂಪನ್ಮೂಲ ವೃತ್ತಿಪರರ ನಿರ್ಣಾಯಕ ಪಾತ್ರ ಮತ್ತು ಸಂಸ್ಥೆಯ ಯಶಸ್ಸಿನಲ್ಲಿ ಅವರ ಪ್ರಮುಖ ಪಾತ್ರದ ಬಗ್ಗೆ ಜಾಗೃತಿ ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.
ಈ ದಿನದಂದು, ಉದ್ಯೋಗಿಗಳು, ಆಡಳಿತ ಮಂಡಳಿ ಮತ್ತು ಇತರ ವೃತ್ತಿಪರರು ಒಟ್ಟಾಗಿ ಕಂಪನಿಯ ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗೆ ನೀಡಿದ ಅಮೂಲ್ಯ ಕೊಡುಗೆಗಳಿಗಾಗಿ HR ಗಳನ್ನು ಗೌರವಿಸುತ್ತಾರೆ. ಅಲ್ಲದೆ ಈ ದಿನ ಅನೇಕ ಅಂತಾರಾಷ್ಟ್ರೀಯ ಮಾನವ ಸಂಪನ್ಮೂಲ ಗುಂಪುಗಳು ಮತ್ತು ಸಂಘಗಳು ಒಟ್ಟಾಗಿ ಸೇರಿ ವೆಬಿನಾರ್‌ಗಳು, ಸೆಮಿನಾರ್‌ಗಳು, ಕಾರ್ಯಾಗಾರಗಳು ಮತ್ತು ಸಮ್ಮೇಳನಗಳು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








